ಬೇಸಿಗೆಕಾಲ ಅನ್ನುವುದು ಒಂದು ದೊಡ್ಡ ಬಿಸಿಲಿನ ತಾಪಮಾನ ಕಾಲವಾಗಿದೆ. ಬೇಸಿಗೆಕಾಲದಲ್ಲಿ ಹೊರಗಡೆ ಹೋಗಬೇಕೆನಂದರೆ ಭಯ. ಹೊರಗಡೆ ಹೋದರೆ ಎಲ್ಲಿ ಮುಖದ ಹೊಳಪು ಕಳೆದು ಹೋಗುತ್ತದೆಂದು ಅನುಮಾನಿಸುತ್ತೇವೆ.
ಇದರ ಭಯದಿಂದ ಪಾರಾಗಲು ಈ ವಿಧಾನಗಳನ್ನು ಪಾಲಿಸಿದರೆ ಸಾಕು ನಿಮ್ಮ ಮುಖದ ಹೊಳಪನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು.
1| ಮುಖ ತೊಳೆಯಿರಿ
ಬೇಸಿಗೆ ಕಾಲದಲ್ಲಿ ಮನುಷ್ಯರಿಗೇ ಬೇವರು ಬರುವುದು ಸಹಜ. ಆದರೆ ಕೆಲವು ಒಂದಿಷ್ಟು ಮನುಷ್ಯರಿಗೆ ವಿಪರೀತ ಬೇವರು ಬರುತ್ತದೆ. ಕಾರಣ ಅವರು ಎಣ್ಣೆಯ ಚರ್ಮವನ್ನು ಹೊಂದಿರುತ್ತಾರೆ. ಅದರಿಂದ ಪಾರಾಗಲು ಅವರು ಅವಾಗ ಅವಾಗ ಮುಖ ತೊಳೆಯುತ್ತಾ ಇರಬೇಕು. ಎಣ್ಣೆಯ ಚರ್ಮ ಇರುವವರಿಗೆ ಮುಖದಲ್ಲಿ ಗುಳ್ಳೆಗಳು ಜಾಸ್ತಿ. ಧೂಳುಗಳಿಂದ ಮುಖದಲ್ಲಿ ಗುಳ್ಳೆಗಳು ಜಾಸ್ತೀ ಆಗುತ್ತವೆ.
2| ಸ್ಕ್ರಾಫ್ ಧರಿಸಿ
ಬೇಸಿಗೆಕಾಲದಲ್ಲಿ ಮುಖದ ಹೊಳಪನ್ನು ಕಾಪಾಡಿಕೊಳ್ಳಲು ಮಾಸ್ಕ್ ಅಥವಾ ಸ್ಕ್ರಾಫ್ ಅನ್ನು ಧರಿಸಬೇಕು. ಇವುಗಳನ್ನು ಧರಿಸುವುದರಿಂದ ಮುಖದ ಹೊಳಪುನ್ನು ಸುರಕ್ಷಿತವಾಗಿಡಬಹುದು. ಬೇಸಿಗೆ ಕಾಲದಲ್ಲಿ ಕಪ್ಪು ಬಟ್ಟೆ ತೊಡುವುದು ಒಳ್ಳೆಯದಲ್ಲ. ಆದಷ್ಟು ಬೇರೆ ಬಟ್ಟೆ ಉಪಯೋಗಿಸುವುದು ಉತ್ತಮ.
3| ನೀರು ಕುಡಿಯಬೇಕು
ಬೇಸಿಗೆ ಕಾಲದಲ್ಲಿ ಮುಖದ ಹೊಳಪುನ್ನು ಹೆಚ್ಚಿಸಲು ನೀರನ್ನು ಆದಷ್ಟು ಬಹಳಷ್ಟು ಹೆಚ್ಚಾಗಿ ಕುಡಿಯಬೇಕು. ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ದೇಹವು ಅರೋಗ್ಯವಾಗಿರುತ್ತದೆ. ನೀರು ಮನುಷ್ಯರಿಗೆ ಒಂದು ಒಳ್ಳೆಯ ವರದಾನ ವಾಗಿದೆ. ನೀರಿನಿಂದ ಅನೇಕ ದೇಹದ ಕಾಯಿಲೆಯನ್ನು ಅರೋಗ್ಯವಾಗಿಡಬಹುದು.
4| ಸನ್ಸ್ಕ್ರೀನ್
ಬೇಸಿಗೆಕಾಲದಲ್ಲಿ ಅತಿಯಾಗಿ ಮೇಕಪ್ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಅತಿಯಾಗಿ ಮೇಕಪ್ ಮಾಡುವುದರಿಂದ ದೇಹದ ಉಷಣತೆ ಹೆಚ್ಚಾಗುತ್ತದೆ. ಮೇಕಪ್ ಮಾಡಿಕೊಳ್ಳುವ ಬದಲು ಅಂಗಡಿಯಲ್ಲಿ ಸಿಗುವ ಮೊಯ್ಸ್ಚರ್ ಕ್ರೀಮ್ ಅಥವಾ ಮೊಯ್ಸ್ಚರ್ ಲೋಷನ್ ಉಪಯೋಗಿಸುವುದು ಉತ್ತಮ.
5। ಹಣ್ಣು ಸೇವಿಸಿ
ಬೇಸಿಗೆಕಾಲದಲ್ಲಿ ಅತೀಯಾಗಿ ಹಣ್ಣು ಸೇವಿಸುವುದು ಒಳ್ಳೆಯದು. ಅಂದರೆ ಯಾವ ಹಣ್ಣುಗಳು ಹೆಚ್ಚಿನ ನೀರೀನಾಶಾ ಹೊಂದಿರುತಾವವು ಅವುಗಳನ್ನು ಸೇವಿಸುವುದು ಒಳ್ಳೆಯದು. ಕಲ್ಲಗಂಡಿ, ಎಳೆ ನೀರು ಮತ್ತು ತಾಜ ಪಾನೀಯಗಳನ್ನು ಕುಡಿಯುವುದರಿಂದ ದೇಹವು ತಣ್ಣನೆಯಾಗಿರುತ್ತದೆ.
6| ತರಕಾರಿ
ಬೇಸಿಗೆಕಾಲದಲ್ಲಿ ಹಣ್ಣು ಸೇವಿಸುವುದರ ಜೊತೆಗೆ ತರಕಾರಿಗಳನ್ನು ತಿನ್ನಬೇಕು. ಅವಾಗ ನಮ್ಮ ದೇಹವು ಇನ್ನಷ್ಟು ಅರೋಗ್ಯಕರವಾಗಿರುತ್ತದೆ. ತರಕಾರಿ ಹಾಗೆ ತಿನ್ನವುದರ ಜೊತೆಗೆ ಅದರ ಜ್ಯೂಸು ಮಾಡಿಕೊಂಡು ಕುಡಿಯುವುದು ಇನ್ನೂ ಒಳ್ಳೆಯದು.ತರಕಾರಿ ತಿನ್ನುವುದರಿಂದ ಮುಖದ ಹೊಳಪು ಹೆಚ್ಚಾಗುತ್ತದೆ. ಕಾರಣ ಅದರಲ್ಲಿ ಕ್ಯಾಲ್ಸಿಯಂ, ಮಗ್ನೆಸಿಯಂ ಮತ್ತು ಕಬ್ಬಿಣ ಅಂಶವು ಒಳಗೊಂಡಿರುತ್ತದೆ.
7| ಎರಡು ಬಾರಿ ಸ್ನಾನ
ಬೇಸಿಗೆಕಾಲದಲ್ಲಿ ದಿನ್ನಕ್ಕೆ ಎರಡು ಬಾರಿ ಸಾನ್ನ ಮಾಡುವುದು ತುಂಬಾ ಒಳ್ಳೆಯದು. ತಣ್ಣೀರಿನಿಂದ ಸಾನ್ನ ಮಾಡುವುದು ದೇಹಕ್ಕೆ ತುಂಬಾ ಒಳ್ಳೆಯದು ಅಲ್ಲದೆ ದೇಹವು ಅರೋಗ್ಯವಾಗಿರುತ್ತದೆ. ದಿನ್ನಕ್ಕೆ ಎರಡು ಬಾರಿ ಸಾನ್ನ ಮಾಡುವುದರಿಂದ ದೇಹದಲ್ಲಿರುವ ಕೊಳಕು ಅಲ್ಲದೆ ಧೂಳವು ಹೊರಹೋ ಡಿ ಸಬಹುದು.