ಹೊಟ್ಟೆಯ ಬೊಜ್ಜು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಈಗಿನ ಕಾಲದಲ್ಲಿ ಮನುಷ್ಯರಿಗೆ ಬೊಜ್ಜು ಬರುವುದು ಸಾಮಾನ್ಯ ವಿಷಯವಾಗಿದೆ. ಮನುಷ್ಯರಲ್ಲಿ ಬೊಜ್ಜು ಬರುವುದರಿಂದ ಅನೇಕ ದೇಹದ ಕಾಯಿಲೆಗಳು ಹೆಚ್ಚುತ್ತಿವೆ. ಬೊಜ್ಜು ಬರುವುದರಿಂದ ಮನುಷ್ಯರ ಸ್ವರೂಪ ಕೂಡ ಹಾಳಾಗುತ್ತಿದೆ. ಮನುಷ್ಯರಿಗೆ ಬೊಜ್ಜು ಕರಗಿಸುವುದು ಒಂದು ದೊಡ್ಡ ಕಷ್ಟಕರ ಸಂಗತಿಯಾಗಿದೆ. ಆದರಿಂದ ಮನುಷ್ಯರಿಗೆ ಬೊಜ್ಜು ಎಂಬುದು ಬೇಸರದ ವಿಷಯವಾಗಿದೆ. ಆದರಿಂದ ಮನುಷ್ಯ ರಿಗೆ ಅನುಕೂಲವಾಗುವಂತೆ ಕೆಳಗಡೆ ಸಲಹೆಗಳನ್ನು ನೀಡಲಾಗಿದೆ.
1. ನಿಂಬೆಹಣ್ಣು
ಪ್ರತಿದಿನ ಬೆಳಗ್ಗೆ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಹಿಂಡಿಕೊಂಡು ಕುಡಿಯಬೇಕು. ಅಂದ್ರೆ ಒಂದು ಲೀಟರ್ ಬೆಚ್ಚಗಿನ ನೀರಿನಲ್ಲಿ ಅರ್ಧ ಹೊಳು ನಿಂಬೆ ರಸವನ್ನು ಹಿಂಡಿಕೊಂಡು ಕುಡಿಯಬೇಕು. ಹೀಗೆ ಪ್ರತಿ ದಿನ ಕುಡಿಯುವುದರಿಂದ ದೇಹದಲ್ಲಿರುವ ಸಕ್ಕರೆ ಅಂಶವು ಕಳೆದುಹೋಗುತ್ತದೆ. ಅಲ್ಲದೆ ಹೊಟ್ಟೆಯ ಬೊಜ್ಜು ಕರಗಿ ಹೋಗುತ್ತದೆ.
2. ಜೇನುತುಪ್ಪ
ಇದು ಕೂಡ ಮೇಲೆ ಮಾಡಿರುವ ವಿಧಾನದ ಹಾಗೇ. ಅಂದರೆ ಒಂದು ಲೀಟರ್ ಬೆಚ್ಚಗಿನ ನೀರಿಗೆ ಎರಡು ಸ್ಪೂನ್ ಜೇನು ತುಪ್ಪವನ್ನು ಹಾಕಿಕೊಂಡು ಪ್ರತಿ ನಿತ್ಯ ಕುಡಿಯಬೇಕು. ಜೇನುತುಪ್ಪವು ಒಂದು ಆಂಟಿಒಕ್ಸಿಡಾಂಟ್ ಔಷಧಿಯಾಗಿ ಒಳಗೊಂಡಿರುತ್ತದೆ. ಜೇನುತುಪ್ಪ ತಿನ್ನುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಜೇನುತುಪ್ಪವು ಒಂದು ಕೆಡಲಾರದ ಆಹಾರ ಪದಾರ್ಥವಾಗಿದೆ. ಇದನ್ನು ಪ್ರತಿನಿತ್ಯ ಕುಡಿವುವುದರಿಂದ ಹೊಟ್ಟೆಯ ಬೊಜ್ಜನು ಕರಗಿಸಬಹುದು.
3. ಬಿಸಿನೀರು
ಪ್ರತಿ ನಿತ್ಯ ಬೆಳಗ್ಗೆ ಹಾಳು ಹೊಟ್ಟೆಯಲ್ಲಿ ಬಿಸಿನೀರು ಕುಡಿಯುವುದು ಒಳ್ಳೆಯದು ಎಂದೂ ಅಧ್ಯಯನ ಪ್ರಕಾರ ಹೇಳಿದ್ದಾರೆ. ಮನುಷ್ಯರ ದೇಹದಲ್ಲಿ ನೀರು ಎಂಬುದು ಒಂದು ದೊಡ್ಡ ಪಾತ್ರವಾಗಿದೆ. ಅದರಲ್ಲಿ ಬಿಸಿನೀರು ಎಂಬುದು ಇನ್ನೂ ದೊಡ್ಡ ಪಾತ್ರವಾಗಿದೆ. ಪ್ರತಿ ನಿತ್ಯ ಬಿಸಿ ನೀರು ಕುಡಿಯುದರಿಂದ ದೇಹದ ಅನೇಕ ಕಾಯಿಲೆಗಳನ್ನು ತಡೆಗಟ್ಟಬಹುದು. ಬಿಸಿ ನೀರು ಕುಡಿಯುವುದರಿಂದ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು. ಬಿಸಿ ನೀರು ಅನೇಕ ಕಾಯಿಲೆಗಳಿಗೆ ಒಂದು ಒಳ್ಳೆಯ ಮನೆಮದ್ದು ಔಷಧಿಯಾಗಿದೆ.
4. ವ್ಯಾಯಾಮ ಮಾಡುವುದು
ಮನುಷ್ಯರಿಗೆ ಬೊಜ್ಜು ಬರುವುದರಿಂದ ಅವರು ಅನೇಕ ವ್ಯಾಯಾಮವನ್ನು ಮಾಡುತ್ತಾರೆ. ವ್ಯಾಯಾಮ ಮಾಡುವುದರಿಂದ ಹೊಟ್ಟೆಯ ಬೊಜ್ಜನು ಕರಗಿಸಬಹುದು. ವ್ಯಾಯಾಮ ಮಾಡುವುದು ಒಳ್ಳೆಯದು ಆದ್ರೆ ವ್ಯಾಯಾಮ ಮಾಡಿಕೊಂಡು ಬಂದ ಮೇಲೆ ಸಿಕ್ಕ ಸಿಕ್ಕ ಆಹಾರ ಪದಾರ್ಥಗಳು ತಿನ್ನುವುದು ಒಳ್ಳೆಯದಲ್ಲ. ತಿಂದರೆ ವ್ಯಾಯಾಮ ಮಾಡಿದ್ದಕ್ಕೆ ಒಳ್ಳೆಯ ಫಲಿತಾಂಶ ಸಿಗುವುದಿಲ್ಲ. ಯಾವುದೇ ಕೆಲಸ ಮಾಡಿದರು ಅದು ಒಳ್ಳೆಯದಕ್ಕೆ ಆಗಬೇಕು. ಅದರಿಂದ ಒಳ್ಳೆಯ ರೀತಿಯಲ್ಲಿ ಹೊಂದಿರುವ ಪ್ರೊಟೀನ್ಸ್ ಪದಾರ್ಥಗಳನ್ನು ಸೇವಿಸಬೇಕು.
5. ನೀರು ಮತ್ತು ಜೀರಿಗೆ
ಪ್ರತಿ ನಿತ್ಯ ಒಂದು ಲೀಟರ್ ನೀರಲ್ಲಿ ಜೀರಿಗೆ ಹಾಕಿಕೊಂಡು ಕುಡಿಯಬೇಕು. ಈ ರೀತಿ ಕುಡಿವುದರಿಂದ ಹೊಟ್ಟೆ ಉಬ್ಬರ, ಮಲಬದ್ಧತೆ, ಪಿತ್ತ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಅದಕ್ಕಾಗಿ ಜೀರಿಗೆಯನ್ನು ಎಲ್ಲಾ ರೀತಿಯ ಅಡುಗೆಗಳಲ್ಲಿ ಉಪಯೋಗಿಸುತ್ತಾರೆ. ಅಲ್ಲದೆ ಹೆಚ್ಚಾಗಿ ಜೀರಿಗೆಯನ್ನು ನೀರಲ್ಲಿ ಬೆರಸಿ ಕುಡಿಯುವುದರಿಂದ ಹೊಟ್ಟೆಯ ಬೊಜ್ಜನ್ನು ಕರಗಿಸಲು ಸಾಧ್ಯವಾಗುತ್ತದೆ.
Also Read – Black Grapes Health tips in kannada | ಕಪ್ಪು ದ್ರಾಕ್ಷಿ ಆರೋಗ್ಯ ಪ್ರಯೋಜನಗಳು