8 ವಿವಿಧ ತರಹದ Avalakki ತಿಂಡಿಗಳು
1. ಸಿಹಿ ಅವಲಕ್ಕಿ- Sweet avalakki
Sweet avalakki ಬೇಕಾಗುವ ಪದಾರ್ಥಗಳು
- ಕಾಲು ಕೆ.ಜಿ ಅವಲಕ್ಕಿ
- ಅರ್ಧ ಅಚ್ಚು ಬೆಲ್ಲ
- ಒಂದು ಹೋಳು ತೆಂಗಿನಕಾಯಿ
- ನಾಲ್ಕು ಏಲಕ್ಕಿ ಕಾಯಿ.
ತಯಾರಿಸುವ ವಿಧಾನ
ಶುದ್ಧಗೊಳಿಸಿದ ಗಟ್ಟಿ ಅವಲಕ್ಕಿಯನ್ನು ನೀರಿನಲ್ಲಿ ನೆನೆ ಹಾಕಿಡಿ.ತೆಂಗಿನಕಾಯಿ ತುರಿದು ಇಟ್ಟುಕೊಳ್ಳಬೇಕು,ಬೆಲ್ಲವನ್ನು ಜಜ್ಜಿ ಇಟ್ಟುಕೊಳ್ಳಬೇಕು,ಏಲಕ್ಕಿ ಕಾಯಿ ಅರೆದು ಪುಡಿ ಮಾಡಿಇಟ್ಟು ಕೊಳ್ಳಬೇಕು.ಅವಲಕ್ಕಿಯನ್ನು ಬಸಿದು ಬೆಲ್ಲ ತೆಂಗಿನಕಾಯಿ ಮತ್ತು ಏಲಕ್ಕಿ ಪುಡಿಯನ್ನು ಅದಕ್ಕೆ ಬೆರೆಸಿ ಚೆನ್ನಾಗಿ ಕಾಯಿಯಡಿಸಿ ಕಲಸಿ.ಖಾರದ ತಿಂಡಿಯೊಂದಿಗೆ ಸಿಹಿ ಅವಲಕ್ಕಿ ತುಂಬಾ ರುಚಿ ನೀಡತ್ತದೆ.
2.ಅವಲಕ್ಕಿ ಬಾತ್ – Avalakki bath recipe
ಬೇಕಾಗುವ ಪದಾರ್ಥಗಳು
- ಕಾಲು ಕೆ .ಜಿ, ಗಟ್ಟಿ ಅವಲಕ್ಕಿ
- 100 ಗ್ರಾಂ ಆಲೂಗಡ್ಡೆ
- 100 ಗ್ರಾಂ ಕ್ಯಾರೆಟ್
- ನಾಲ್ಕು ಚಿಕ್ಕ ಟೊಮೇಟೊ
- ಕೊತಂಬರಿ ಸೊಪ್ಪು
- ಕರಿಬೇವು ಎಸಳು ಎರಡು
- ಒಂದು ಚಿಟಿಕೆ ಅರಿಶಿನ ಪುಡಿ
- ಒಂದು ಟೀ ಚಮಚ ಕಡಲೆ ಬೆಳೆ
- ಒಂದು ಟೀ ಚಮಚ ಉದ್ದಿನ ಬೇಳೆ
- ಸಾಸಿವೆ ಎಣ್ಣೆ,
- ಒಂದು ಹೋಳು ತೆಂಗಿನಕಾಯಿ
- 25 ಗ್ರಾಂ ಗೊಡಂಬಿ
- ನಾಲ್ಕೈಯ್ದು ಹಸಿ ಮೆಣಸಿನಕಾಯಿ.
ತಯಾರಿಸುವ ವಿಧಾನ
ಶುದ್ಧಗೊಳಿಸಿದ ಗಟ್ಟಿ ಅವಲಕ್ಕಿಯನ್ನು ತೊಳೆದು ಐದು ನಿಮಿಷಗಳ ಕಾಲ ನೆನೆ ಹಾಕಿ ಆಲೂಗಡ್ಡೆ ಮತ್ತು ಟೊಮ್ಯಾಟೋಗಳನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ,ಕ್ಯಾರೆಟ್ ಅನ್ನು ತುರಿದಿಡಿ.ಹಸಿಮೆಣಸಿನಕಾಯಿಯನ್ನು ಹೆಚ್ಚಿಟ್ಟುಕೊಳ್ಳಬೇಕು.ಒಲೆಯ ಮೇಲೆ ಬಾಣಲೆಯನಿಟ್ಟು ನಾಲ್ಕು ಚಮಚ ಎಣ್ಣೆಯನ್ನು ಹಾಕಿ .ಎಣ್ಣೆ ಕಾದ ನಂತರ ಸಾಸಿವೆ ಸಿಡಿದ ನಂತರ ಹೆಚ್ಚಿದ ಮೆಣಸಿನಕಾಯಿ,ಕಡಲೆಬೇಳೆ,ಉದ್ದಿನ ಬೇಳೆ,ಗೊಡಂಬಿ ಚುರುಗಳನ್ನು ಹಾಕಿ ಅವು ಕೆಂಪಾಗೂವರೆಗೂ ಬಿಡಿ.ಕೊಂತಂಬರಿ ಮತ್ತು ಕರಿಬೇವು ಸೊಪ್ಪಿನ ಎಲೆಗಳನ್ನು ಹಾಕಿ ,ಒಂದು ಚಿಟಿಕೆ ಅರಿಶಿನ ಪುಡಿಯನ್ನು ಉದುರಿಸಿ,ಈಗ ಆಲೂಗಡ್ಡೆ ಚುರುಗಳನ್ನು ಹಾಕಿ ಹುರಿಯಿರಿ.ಸ್ವಲ ಮೆತ್ತಾಗದ ನಂತರ ಕ್ಯಾರೆಟ್ ತುರಿಯನ್ನು ಹಾಕಿ ಕೆದಕಿ,ಟೊಮೇಟೊ ಚುರುಗಳನ್ನು ಹಾಕಿ ಉಪ್ಪು ಸೇರಿಸಿ,ಬಸಿದ ಅವಲಕ್ಕಿಯನ್ನು ಬಾಣಲೆಗೆ ಹಾಕಿ ಚೆನ್ನಾಗಿ ಕೆದಕಿ ಅವಲಕ್ಕಿ ತುಸು ಬೆಂದ ಮೇಲೆ ಬಾಣಲೆಯನ್ನು ಕೆಳಗಿಳಿಸಿ ಅವಲಕ್ಕಿಗೆ ಕಾಯಿತುರಿ ಹಾಕಿ ಕಲಸಿ ಅವಲಕ್ಕಿ ಬಾತ್ ತಿನ್ನಲು ಬಹಳ ರುಚಿಯಾಗಿರುತ್ತದೆ.
3.ಮೊಸರವಲಕ್ಕಿ- Mosaru avalakki
ಬೇಕಾಗುವ ಪದಾರ್ಥಗಳು
- ಕಾಲು ಕೆ.ಜಿ ಗಟ್ಟಿ ಅವಲಕ್ಕಿ
- ಮೂರು ಸಾಧಾರಣ ಲೋಟ ಮೊಸರು
- ಉಪ್ಪು
ತಯಾರಿಸುವ ವಿಧಾನ – Preparation method of Mosaru avalakki
ನೀರಿನಲ್ಲಿ ನೆನೆ ಹಾಕಿದ ಅವಲಕ್ಕಿಯನ್ನು ಬಸಿದು ಮೊಸರು ಮತ್ತು ಉಪ್ಪು ಹಾಕಿ ಚೆನ್ನಾಗಿ ಕಳಸಿಡಿ.ಬೇಕೇನಿಸಿದಲ್ಲಿ ಒಗ್ಗರಣೆ ಸಾಮಾನುಗಳನ್ನು ಬಳಸಿ ಒಗ್ಗರಣೆ ಹಾಕಬಹುದು.
4.ಒಗ್ಗರಣೆ ಅವಲಕ್ಕಿ- Oragarne avalakki
ಬೇಕಾಗುವ ಪದಾರ್ಥಗಳು
- ಕಾಲು ಕೆ .ಜಿ ಅವಲಕ್ಕಿ
- ಎರಡು ದೊಡ್ಡ ಈರುಳ್ಳಿ
- ಮೆಣಸಿನಕಾಯಿ ಐದು
- ಕೊತಂಬರಿ ಸೊಪ್ಪು
- ಕರಿಬೇವು ಎಸಳು ಎರಡು
- ಒಂದು ಸಣ್ಣ ಚಮಚ ಉದ್ದಿನ ಬೇಳೆ
- ಸಾಸಿವೆ,ಎಣ್ಣೆ
- ಒಂದು ನಿಂಬೆಹಣ್ಣು
- ಒಂದು ಹೋಳು ತೆಂಗಿನಕಾಯಿ
ತಯಾರಿಸುವ ವಿಧಾನ
ಶುದ್ಧಗೊಳಿಸಿದ ಗಟ್ಟಿ ಅವಲಕ್ಕಿಯನ್ನು ತೊಳೆದು ಐದು ನಿಮಿಷಗಳ ಕಾಲ ನೆನೆ ಹಾಕಿ ,ಒಲೆಯ ಮೇಲೆ ಬಾಣಲೆ ಪಾತ್ರೆಯನಿಟ್ಟು ಮೂರು ಅಥವಾ ನಾಲ್ಕು ಚಮಚ ಎಣ್ಣೆ ಹಾಕಿ.ಎಣ್ಣೆ ಕಾದ ನಂತರ ಹೆಚ್ಚಿದ ಹಸಿಮೆಣಸಿನಕಾಯಿ,ಕರಿಬೇವು ಎಲೆಗಳು,ಕೊತಂಬರಿ ಸೊಪ್ಪು,ಉದ್ದಿನಬೇಳೆ,ಕಡಲೆಬೇಳೆಗಳನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಿ, ಒಂದು ಚಿಟಿಕೆ ಅರಿಸಿನಪುಡಿ ಮತ್ತು ಉಪ್ಪು ಹಾಕಿ,ಚೂರು ಚೂರು ಮಾಡಿದ ಈರುಳ್ಳಿಯನ್ನು ಬಾಣಲೆಗೆ ಹಾಕಿ ಹುರಿಯಿರಿ.ಈರುಳ್ಳಿ ಬೆಂದ ಮೇಲೆ ನೀರು ಹಾಕಬಾರದು.ಬಸಿದುಕೊಂಡು ಅವಲಕ್ಕಿಯನ್ನು ಬಾಣಲೆಗೆ ಹಾಕಿ ಚಮಚದಿಂದ ಕೆದಕಿ ಬಾಣಲೆಯನ್ನು ಒಲೆಯ ಮೇಲಿಂದ ಕೆಳಗಿಳಿಸಿ,ಅವಲಕ್ಕಿಗೆ ಕಾಯಿ ತುರಿ ಹಾಕಿ ನಿಂಬೆಹಣ್ಣಿನ ರಸ ಹಿಂಡಬೇಕು.
5.ಹಾಲವಲಕ್ಕಿ- Hal avalakki
ಬೇಕಾಗುವ ಪದಾರ್ಥಗಳು
- ಕೆನೆಹಾಲು ಕಾಲು ಕೆ.ಜಿ
- ಅವಲಕ್ಕಿ
- ಸಕ್ಕರೆ ಅಥವಾ ಬೆಲ್ಲ
- ಏಲಕ್ಕಿ
- ಒಂದು ಹೋಳು ತೆಂಗಿನಕಾಯಿ
ತಯಾರಿಸುವ ವಿಧಾನ
ಅವಲಕ್ಕಿಯನ್ನು ಶುದ್ಧ ಮಾಡಿಟ್ಟುಕೊಳ್ಳಬೇಕು. ಸಾಧಾರಣ ಬಿಸಿ ಇರುವ ಹಾಲಿಗೆ ಸಿಹಿ ಎಷ್ಟು ಬೇಕು ಅಷ್ಟು ಸಕ್ಕರೆ ಇಲ್ಲವೇ ಬೆಲ್ಲ ಮತ್ತು ಏಲಕ್ಕಿ ಪುಡಿಯನ್ನು ಹಾಕಿಟ್ಟುಕೊಳ್ಳಿ.ಹಾಲನ್ನು ಚೆನ್ನಾಗಿ ಕಲಸಿ ಕಾಯಿತುರಿ ಮತ್ತು ಸುಮಾರವಾಗಿ ನೆನೆ ಹಾಕಿ ಬಸಿದ ಅವಲಕ್ಕಿಯನ್ನು ಹಾಲಿನಲ್ಲಿ ಹಾಕಿ ಒಲೆಯ ಮೇಲಿಡಿ.ಸ್ವಲ್ಪ ಹೊತ್ತು ಚೆನ್ನಾಗಿ ಕೆದಕಿ ತುಸು ಗಟ್ಟಿಯಾದ ನಂತರ ಕೆಳಗಿಳಿಸಿ.ಹಾಲವಲಕ್ಕಿ ತಿನ್ನಲ್ಲೂ ಬಲು ರುಚಿಯಾಗಿರುತ್ತದೆ.
6.ಗೊಜ್ಜುವಲಕ್ಕಿ- Gojju avalakki recipe
ಬೇಕಾಗುವ ಪದಾರ್ಥಗಳು
- ಅರ್ಧ ಕೆ .ಜಿ ಅವಲಕ್ಕಿ
- ನಾಲ್ಕು ಚಮಚ ಮೆಣಸಿನ ಪುಡಿ
- ಮೂರು ಗ್ರಾಂ ಹುಣಸೆಹಣ್ಣು
- ಅರ್ಧ ಹೋಳು ಕೊಬ್ಬರಿ
- ಒಂದು ಚಟಾಕು ಕಡಲೆಕಾಯಿ ಬೀಜ
- ಒಂದು ಕಂತೆ ಕರಿಬೇವು
- ಒಗ್ಗರಣೆ ಸಾಮಾನು
- ಒಂದು ಚಿಕ್ಕ ಬಟ್ಟಲು ಎಣ್ಣೆ
- ಒಂದು ಸಣ್ಣ ಚಮಚ ಅರಿಸಿನ ಪುಡಿ
- ಉಪ್ಪು
- ಎರಡು ಉಂಡೆ ಕಾಫಿ ಬೆಲ್ಲ
ತಯಾರಿಸುವ ವಿಧಾನ- Gojju avalakki recipe method
ಗೊಜ್ಜುವಲಕ್ಕಿಯನ್ನು ಮಾಡುವ ಮೊದಲು ಹುಣಸೆ ಗೊಜ್ಜುನ್ನು ಮಾಡಿಟ್ಟುಕೊಳ್ಬೇಕು.ಹುಣಸೆ ಗೊಜ್ಜನ್ನು ತಯಾರಿಸಲು ಈ ಕೆಳಗಿನ ವಿಧಾನವನ್ನು ಅನುಸರಿಸಿ.ಒಲೆಯ ಮೇಲೆ ಬಾಣಲೆಯನ್ನು ಇಟ್ಟು ಅರ್ಧ ಬಟ್ಟಲು ಎಣ್ಣೆ ಹಾಕಿ, ಎಣ್ಣೆ ಹಾಕಿದ ನಂತರ ಸಾಸಿವೆ ಹಾಕಿ ಸಿಡಿಸಿ, ಕಿವಿಚಿಟ್ಟುಕೊಂಡ ನಂತರ ಹುಣಸೆ ಹಣ್ಣಿನ ರಸವನ್ನು ಬಾಣಲೆಯಲ್ಲಿ ಹಾಕಿ, ಕುದಿಯುತ್ತಿರುವ ರಸಕ್ಕೆ, ನಾಲ್ಕು ಚಮಚ ಮೆಣಸಿನಪುಡಿನ್ನು ಹಾಕಿ ರುಚಿge ತಕ್ಕಷ್ಟು ಉಪ್ಪು ಸೇರಿಸಿ ಎರಡು ಉಂಡೆ ಕಾಫಿ ಬೆಲ್ಲವನ್ನು ಹಾಕಿ ಚೆನ್ನಾಗಿ ಕೆದಕಿ ಸ್ವಲ್ಪ ವೇಳೆಯಲ್ಲಿ ಗೊಜ್ಜು ದ್ರವವಾಗುತ್ತದೆ.ಬಾಣಲೆಯನ್ನು ಕೆಳಗಿಳಿಸಿ,ಗೊಜ್ಜು ಸಿದ್ದವಾದಂತೆ.
ಶುದ್ಧಗೊಳಿಸಿದ ಅವಲಕ್ಕಿಯನ್ನು ಒರಳಿನಲ್ಲಿ ಕುಟ್ಟಿ ಅಥವಾ ಮಿಕ್ಸಿನಲ್ಲಿ ಹಾಕಿ ತ ರಿ ಮಾಡಿಕೊಳ್ಳಿ.ಅವಲಕ್ಕಿ ತರಿಯ ಮೇಲೆ ನೀರು ಹಾಕಿ ಕಲಸಿಡಿ.ಅವಲಕ್ಕಿ ನೆನೆದು ಮೆತ್ತಗಾಗುವಷ್ಟರಲ್ಲಿ ಕಡಲೆಬೇಳೆ, ಸಾಸಿವೆ, ಉದ್ದಿನ ಬೇಳೆ, ಕರಿಬೇವು, ಕಡಲೆಕಾಯಿಬೀಜ, ಅರಿಸಿನಪುಡಿ ಹಾಗೂ ಎಣ್ಣೆ ಇವುಗಳನ್ನು ಒಗ್ಗರಣೆ ಮಾಡಿ ಕೊಳ್ಳಿ, ನೆನೆದ ಅವಲಕ್ಕಿ ಪುಡಿಗೆ ತಯಾರಿಸಿಟ್ಟುಕೊಂಡಿರುವ ಗೊಜ್ಜನ್ನು ಸರಿಯಾದ ಪ್ರಮಾಣದಲ್ಲಿ ಹಾಗೂ ಕೊಬ್ಬರಿ ತುರಿ ಮತ್ತು ಒಗ್ಗರಣೆಯನ್ನು ಜೊತೆಗೆ ಹಾಕಿ ಚೆನ್ನಾಗಿ ಕೈಯಾಡಿಸಿ ಕಲಸಬೇಕು.ಉಪ್ಪು ಸಾಲದೆ ಬಂದಲ್ಲಿ ಪುಡಿ ಉಪ್ಪು ಹಾಕಿ.
7.ಖಾರದ ಅವಲಕ್ಕಿ- Khara avalakki recipe
ಬೇಕಾಗುವ ಪದಾರ್ಥಗಳು
- ಕಾಲು ಕೆ.ಜಿ ತೆಳು ಅವಲಕ್ಕಿ
- ಎಣ್ಣೆ 200 ಗ್ರಾಂ
- ಹುರಿಗಡಲೆ 200 ಗ್ರಾಂ
- ಕಡಲೆಕಾಯಿ ಬೀಜ
- ಒಂದು ಗಿಟುಕು ಕೊಬ್ಬರಿ
- ಒಂದು ಕಂತೆ ಕೊತಂಬರಿ ಸೊಪ್ಪು
- ಗೊಡಂಬಿ
- ಒಗ್ಗರಣೆಗೆ ಸಾಸಿವೆ
- ಅರಿಸಿನ ಹಾಗೂ
- ಐದಾರು ಹಸಿ ಮೆಣಸು
- ಉಪ್ಪು
ತಯಾರಿಸುವ ವಿಧಾನ– Khara avalakki recipe method
ದೊಡ್ಡ ಬಾಣಲೆಯನ್ನು ಒಲೆಯ ಮೇಲೇರಿಸಿ ಆರೇಳು ಚಮಚ ಎಣ್ಣೆಯನ್ನು ಹಾಕಿ, ಎಣ್ಣೆ ಕಾದ ನಂತರ ಸಾಸಿವೆ ಸಿಡಿಸಿ,ಹಸಿ ಮೆಣಸಿನಕಾಯಿ ತುಂಡುಗಳು ಕರಿಬೇವು ಎಲೆಗಳು, ಗೊಡಂಬಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು,ಕಡಲೆಕಾಯಿ ಬೀಜ, ಅರಿಸಿನ ಮತ್ತು ಉಪ್ಪು ಇವುಗಳನ್ನು ಎಣ್ಣೆಯಲ್ಲಿ ಹಾಕಿ ಕೆದಕಿ.ಶುದ್ಧಗೊಳಿಸಿದ ತೆಳು ಅವಲಕ್ಕಿಯನ್ನು ಬಾಣಲೆಗೆ ಸುರಿಯಿರಿ, ಕೊತ್ತಂಬರಿ ಹಾಗೂ ಹುರಿಗಡಲೆ ಬೆರೆಸಿ ಚೆನ್ನಾಗಿ ಕೆದಕಿ.ಮೂರರಿಂದ ಐದು ನಿಮಿಷ ಒಲೆಯ ಮೇಲೆ ಬಾಣಲೆ ಇರಲಿ. ನಂತರ ಕೆಳಗಿಳಿಸಿ ಸ್ವಲ್ಪ ಹೊತ್ತಿನಲ್ಲೇ ಅವಲಕ್ಕಿ ಮಿಶ್ರಣ ಆಗುತ್ತದೆ.ತಿನ್ನಲು ಹದವಾಗುತ್ತದೆ.
8. ಕರಿದ ಅವಲಕ್ಕಿ- Fried avalakki recipe
ಬೇಕಾಗುವ ಪದಾರ್ಥಗಳು
- ಕಾಲು ಕೆ.ಜಿ.ಗಟ್ಟಿ ಅವಲಕ್ಕಿ
- ಕಾಲು ಕೆ.ಜಿ.ಕಡಲೆಕಾಯಿ ಎಣ್ಣೆ
- 100 ಗ್ರಾಂ ಕಡಲೆಕಾಯಿ ಬೀಜ
- ಹಸಿ ಖಾರದ ಪುಡಿ
- ಕರಿಬೇವಿನ ಸೊಪ್ಪು ಒಂದು ಕಂತೆ
- ಅರ್ಧ ಗಿಟುಕು ಕೊಬ್ಬರಿ
- ಉಪ್ಪು
ತಯಾರಿಸುವ ವಿಧಾನ
ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆಯನ್ನು ಹಾಕಿ ಚೆನ್ನಾಗಿ ಕಾದ ನಂತರ ಸ್ವಲ್ಪ ಸ್ವಲ್ಪವಾಗಿ ಅವಲಕ್ಕಿಯನ್ನು ಬಾಣಲೆಯಲ್ಲಿ ಹಾಕುತ್ತ ಹೋಗಿ. ಆಗ ಅವಲಕ್ಕಿ ಪುಡಿಯ ಹಾಗೆ ಅರಳುತ್ತದೆ.ಜಾಲರಿಯಿಂದ ಎಣ್ಣೆ ಸೋಸಿ ಅರಳಿದ ಅವಲಕ್ಕಿಯನ್ನು ದೊಡ್ಡ ತಟ್ಟೆಯಲ್ಲಿ ಹಾಕುತ್ತಿರಬೇಕು.ಎಲ್ಲಾ ಅವಲಕ್ಕಿಯನ್ನು ತಟ್ಟೆಗೆ ಹಾಕಿಕೊಂಡ ಬಳಿಕ,ಕೊಬ್ಬರಿ ತುರಿಯನ್ನು ಹಾಗೂ ಹುರಿಗಡಲೆಯನ್ನು ಅದಕ್ಕೆ ಬೆರಸಿ, ಈಗ ಕಡಲೆಕಾಯಿ ಬೀಜ, ಗೊಡಂಬಿ,ಅರಿಸಿನ, ಉಪ್ಪು, ಕರಿಬೇವು, ಖಾರದ ಪುಡಿ, ಸಾಸಿವೆ ಇವುಗಳ ಒಗ್ಗರಣೆಯನ್ನು ಮಾಡಿಕೊಂಡು ಅವಲಕ್ಕಿಯೊಡನೆ ಚೆನ್ನಾಗಿ ಬೆರಸಿ.
Also Read – Bisibelebath Recipe in Kannada |ಬಿಸಿಬೇಳೆ ಬಾತ್