ತಲೆ ಹೊಟ್ಟು ಎಂಬುದು ಎಲ್ಲಾರಲ್ಲಿ ಕಾಡುವ ಪ್ರಶ್ನೆಯಾಗಿದೆ. ತಲೆ ಹೊಟ್ಟು ಆಗುವುದರಿಂದ ತಲೆಯಲ್ಲಿನ ಕೂದಲಗಳು ಉದುರಿ ಹೋಗುತ್ತೀವೆ. ಕೂದಲು ಉದರಲ್ಲೂ ಅನೇಕ ಕಾರಣಗಳಿವೆ. ಆ ಕಾರಣಗಳಲ್ಲಿ ತಲೆ ಹೊಟ್ಟು ಎಂಬುದು ಒಂದಾಗಿದೆ. ತಲೆ ಹೊಟ್ಟಿನಿಂದ ಮುಖದಲ್ಲಿ ಗುಳ್ಳೆಗಳು ಆಗುತ್ತವೆ. ಆ ಹೊಟ್ಟಿನಿಂದ ಪರಾಗಲು ಕೆಳಗಡೆ ಕೆಲವು ಸಲಹೆಗಳನ್ನು ನೀಡಲಾಗಿದೆ.
1. ನಿಂಬೆಹಣ್ಣಿನ ರಸ – Lemon Juice
ವಾರದಲ್ಲಿ ಎರಡು ಮೂರು ಬಾರಿ ತಲೆಯ ನೆತ್ತಿಗೆ ನಿಂಬೆಹಣ್ಣಿನ ರಸವನ್ನು ಹಚ್ಚ ಬೇಕು ನಂತರ ಎರಡು ಮೂರು ಗಂಟೆಗಳನ್ನು ಬಿಟ್ಟು ತಲೆಯನ್ನು ತೊಳೆದುಕೊಳ್ಳಬೇಕು. ಹಚ್ಚಿದ ದಿನ ತಲೆಯನ್ನು ಶಂಪೋವಿನಿಂದ ತೊಳೆದುಕೊಳ್ಳಬಾರದು. ಮರುದಿನ ಶಂಪೋವಿನಿಂದ ತೊಳೆದುಕೊಳ್ಳಬಹುದು. ಹೀಗೆ ಮಾಡುವುದರಿಂದ ತಲೆಯಲ್ಲಿನ ಹೊಟ್ಟು ನಿವಾರಿಸಬಹುದು.
2. ಬೇವಿನ ಎಲೆ – Neem Leaves
ತಲೆ ಹೊಟ್ಟನ್ನು ಬೇವಿನ ಎಲೆಗಳಿಂದ ಕೂಡಾ ನಿವಾರಿಸಬಹುದು. ಬೇವಿನ ಎಲೆಯನ್ನು ಬಿಸಿ ನೀರಿನಲ್ಲಿ ಕುದಿಸಿರಿ. ಕುದಿಸಿದ ನಂತರ ಅದನ್ನು ಒಂದು ಬಾಣಲೆಗೆ ಸೊಸಿರಿ ಆಮೇಲೆ ಸೋಸಿದ ಮೇಲೆ ಬಂದ ನೀರನ್ನು ತೆಗೆದುಕೊಂಡು ತಲೆಯನ್ನು ತೊಳೆದುಕೊಳ್ಳಿರಿ. ಕಾರಣ ಬೇವಿನ ಎಲೆಯಲ್ಲಿ ಇರುವ ಕಹಿ ಅಂಶವು ಹೊಟ್ಟನ್ನು ಹೊರಹಾಕುತ್ತದೆ.
3. ಮೊಸರು – Curd
ಮೊಸರು ಕೂಡಾ ಒಂದು ಹೊಟ್ಟು ನಿವಾರಣೆ ಮಾಡುವುದರಲ್ಲಿ ಪಾತ್ರ ಹೊಂದಿದೆ. ತಲೆಯ ನೆತ್ತಿಗೆ ತಾಜಾ ಅಥವಾ ಹಸುವಿನ ಮೊಸರು ಹಚ್ಚುವುದು ಒಳ್ಳೆಯದು. ಮೊಸರನ್ನು ತಲೆ ನೆತ್ತಿಗೆ ಹಚ್ಚಿಕೊಂಡು ಒಂದೆರಡು ಗಂಟೆಗಳ ಕಾಲ ಬಿಟ್ಟು ತೊಳೆಡಿಕೊಳ್ಳಬೇಕು. ಹೀಗೆ ವಾರದಲ್ಲಿ ಎರಡು ಮೂರು ಬಾರಿ ಮಾಡುವುದರಿಂದ ತಲೆಯಲ್ಲಿನ ಹೊಟ್ಟು ನಿವಾರಿಸಬಹುದು ಅಲ್ಲದೆ ಕೂದಲು ಕೂಡಾ ಮೃದುವಾಗಿ ಬರುತ್ತವೆ.
4. ಮೆಂತ್ಯಕಾಳು – Fenugreek
ಮೆಂತ್ಯಕಾಳು ಉಪಯೋಗಿಸುವುದರಿಂದ ಹೊಟ್ಟನ್ನು ನಿವಾರಿಸಬಹುದು. ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಬಟ್ಟಲಿನಲ್ಲಿ ಒಂದು ಮುಟ್ಟಿಗೆಯಷ್ಟು ಮೆಂತ್ಯಕಾಳನ್ನು ನೀರಿನಲ್ಲಿ ಹಾಕಿ ನೆನಸುವುದಕ್ಕಾಗಿ ಇಡಬೇಕು. ರಾತ್ರಿಯಿಡಿ ನೆನದ ಮೇಲೆ ಬೆಳಗ್ಗೆ ಎದ್ದು ಆ ನೀರಿನಿಂದ ತಲೆಯನ್ನು ತೊಳೆದುಕೊಳ್ಳಬೇಕು. ಮೆಂತ್ಯಕಾಳು ಬಳಸುವುದರಿನಿಂದ ಕೂದಲಿಗೆ ಮತ್ತು ತಲೆಯ ಹೊಟ್ಟಿಗೆ ಬಹಳ ಉಪಯುಕ್ತವಾಗಿದೆ.
5. ಸೀಗೆಕಾಯಿ – Chickpea
ತಲೆ ಹೊಟ್ಟು ಕಡಿಮೆ ಆಗಬೇಕೆಂದರೆ ಆದಷ್ಟು ಧೂಳಿನಿಂದ ದೊರವಿರಬೇಕು. ಧೂಳಿನಿಂದ ಹೊಟ್ಟು ಬರುತ್ತದೆ. ಅಂದರೆ ತಲೆಗೆ ಎಣ್ಣೆ ಹಚ್ಚಿದಾಗ ಧೂಳು ನಿಮ್ಮ ತಲೆಯ ಮೇಲೆ ಬಂದು ಕುಡುತ್ತದೆ. ಆಗ ತಲೆ ಹೊಟ್ಟು ಹೆಚ್ಚಾಗಿ ಕಾಣುತ್ತದೆ. ಇದರಿಂದ ಪರಾಗಲು ಅಂಗಡಿಯಲ್ಲಿ ಸಿಗುವ ಸೀಗೆಕಾಯಿ ಅಥವಾ ಸೀಗೆಕಾಯಿ ಪುಡಿಯನ್ನು ತೆಗೆದುಕೊಂಡು ಬಂದು ಅದನ್ನು ರಾತ್ರಿಯಿಡಿ ನೆನೆಟ್ಟು ಬೆಳಗ್ಗೆ ತಲೆ ತೊಳೆದುಕೊಳ್ಳುವುದರಿಂದ ತಲೆ ಹೊಟ್ಟು ಮಾಯವಾಗಿಹೋಗುತ್ತದೆ.
Also Read – Weight loss tips in kannada|ಬೊಜ್ಜು ಕರಗಿಸಲು ಸಲಹೆಗಳು