Money is the most important thing in this world. You need to work hard and smart to achieve your goals. So to motivate you we have listed 100+ money quotes in Kannada. These money quotes meaning in Kannada motivate you to work hard.
1.ಯಾವಾಗ ನಿಮ್ಮ ಬ್ಯಾಂಕ್ ಬ್ಯಾಲನ್ಸ ನಿಮ್ಮ ಮೊಬೈಲ ನಂಬರಗಿಂತ ದೊಡ್ಡದಾಗುತ್ತೋ ಅವತ್ತು ನೀವು ಸಕ್ಸೆಸಫುಲ ಆಗಿದ್ದೀರಿ ಎಂದರ್ಥ. ಅವತ್ತು ಶೋಪ ಅಪ್ ಮಾಡಿ. ಯಾವುದೋ ಜಾಬ ಹಿಡಿದು ಐದಾರು ಡಿಜಿಟ ಸ್ಯಾಲರಿಲಿ ಹಾರಾಡೋದು ಸಕ್ಸೆಸಲ್ಲ. ನಿಜವಾದ ರಾಯಲ ಲೈಫ ಏನಂತಾ ಬಿಲೆನಿಯರ ಬಿಜನೆಸಮ್ಯಾನಗಳ ಲೈಫ ನೋಡಿ ತಿಳ್ಕೊಳಿ, ಆಮೇಲೆ ನಿಮ್ಮ ಅಸಲಿ ಯೋಗ್ಯತೆ ಗೊತ್ತಾಗುತ್ತೆ…
2.ಬಡತನ ಸಿರಿತನ ಕಡೇತನಕ ಉಳಿಯುವುದಿಲ್ಲ
ಆದರೆ ಗೆಳೆತನ ಮಾತ್ರ ಕೊನೆತನಕ ಉಳಿಯುತ್ತದೆ
3.ನೋಡ ದೋಸ್ತ್,
ಈ ಪ್ರಪಂಚದಾಗ ರೊಕ್ಕ ಇದ್ರನ ಎಲ್ಲಾ,
ರೊಕ್ಕ ಇಲ್ಲಂದ್ರ ಏನೂ ಇಲ್ಲಾ..
4.ಮನಸ್ಸು ಮಾಡಿದ್ರೆ ಯಾರು ಬೇಕಾದರೂ ಬೇಕಾದಷ್ಟು ಹಣ ಗಳಿಸಿ ಶ್ರೀಮಂತರಾಗಬಹುದು. ಆದ್ರೆ ಬಹಳಷ್ಟು ಜನರಿಗೆ ಹಣ ಗಳಿಸುವ ಮನಸ್ಸಿಲ್ಲ…
5.ಈ ಜಗತ್ತಿನಲ್ಲಿ ದುಡ್ಡಿದ್ದವನ ಬಗ್ಗೆ
ಜನ ದೂಸ್ರಾ ಮಾತ ಮಾತಾಡಲ್ಲ…
ಯಾಕಂದ್ರೆ ಅವನ ದುಡ್ಡೆ ಅವನ ಬಗ್ಗೆ ಮಾತಾಡುತ್ತೆ..
6.ಮನುಷ್ಯನಿಂದ ತಯಾರಾದ ಹಣ ಕೊನೆಗೆ ಮನುಷ್ಯನನ್ನೇ ತನ್ನ ಗುಲಾಮನನ್ನಾಗಿ ಮಾಡಿಕೊಳ್ಳುತ್ತದೆ…
7.ನೀನ ಹೋಗೂ ದಾರೀಲಿ ಪ್ರೀತಿ ಮತ್ತೆ ದುಡ್ಡು ಬಿದ್ದಿದ್ರೆ, ಜನ ದುಡ್ಡನ್ನೇ ಎತ್ಕೊಳೋದು ಪ್ರೀತಿನಾ ಅಲ್ಲಾ..
ಯಾಕಂದ್ರೆ ದುಡ್ಡಿದ್ರೇನೆ ಈ ಪ್ರೀತಿ ಪ್ರೇಮ ಎಲ್ಲಾ, ಇಲ್ಲದಿದ್ದರೆ ಏನೂ ಇಲ್ಲ..
8.ಈಗ ಜನ ಮನಸ್ಸಿಗಿಂತ, ಮನುಷ್ಯನಿಗಿಂತ ಹೆಚ್ಚಾಗಿ ಮನಿಗೆ ಬೆಲೆ ಕೊಡ್ತಾರೆ. ನಿಮ್ಮತ್ರ ಹಣ ಇರದಿದ್ದರೆ ಯಾರು ನಿಮಗೆ ಬೆಲೆ ಕೊಡಲ್ಲ. ಹಣ ಇದ್ರೇನೆ ಜನ...
9.ದುಡ್ಡಿದ್ರೆ ದಡ್ಡನನ್ನು ತಲೆ ಮೇಲೆ ಹೊತ್ತು ಮೆರೆಸೂ ಸಮಾಜ ಇದು,
ಇಲ್ಲಿ ದುಡ್ಡುದ್ರೆನೇ ಬೆಲೆ ಇಲ್ಲದಿದ್ದರೆ,
ನೀನು ಎಂತಹ ಮಹಾನ ಜಾಣ ಆಗಿದ್ರು ಮೂಲೆಗುಂಪು ಮಾಡ್ತಾರೆ..
10.ನಿಮ್ಮತ್ರ ಜಾಸ್ತಿ ಹಣ ಇದ್ರೆ ನಿಮಗೆ ಹೊರಗಿನಿಂದ ಶತ್ರುಗಳು ಹುಟ್ಟಿಕೊಳ್ತಾರೆ. ಆದ್ರೆ ನಿಮ್ಮತ್ರ ಹಣಯಿರದಿದ್ರೆ ನಿಮ್ಮವರೇ ನಿಮಗೆ ಶತ್ರುಗಳಾಗುತ್ತಾರೆ…
11.ನಿನ್ನ ಹತ್ರ ದುಡ್ಡ ಇದ್ರೆ,
ನಿನ್ನ ಹಿಂದೆ ಜನಕ್ಕೆ ಬರ ಇರಲ್ಲ..
ದುಡ್ಡಿಲ್ಲ ಅಂದ್ರೆ ನಿನ್ನ
ನಾಯಿನು ಮೂಸಲ್ಲ..
12.ಸಿನಿಮಾಗಳಲ್ಲಿ ತೋರಿಸುವ ಸ್ನೇಹ ಪ್ರೀತಿಗಳು ಶುದ್ಧ ಸುಳ್ಳುಗಳು. ಅವುಗಳನ್ನು ನಂಬಿ ಮೋಸ ಹೋಗಬೇಡಿ. ನಿಜ ಜೀವನದಲ್ಲಿ ದುಡ್ಡಿದ್ರೇನೆ ದುನಿಯಾ. ದುಡ್ಡಿರದಿದ್ರೆ ಯಾವ ಸ್ನೇಹಿತನೂ ಇರಲ್ಲ, ಪ್ರೇಯಸಿಯೂ ಬರಲ್ಲ…
13.ನಿನ್ನ ಜೀವಕ್ಕೆ ಒಂದು ಬೆಲೆ ಅಂತ ಇದ್ರೆ ಅದು ನಿನ್ನ ಹತ್ರ ಇರೋ ದುಡ್ಡಿಂದ
ಇರುತ್ತೆ ಹೊರತು..
ನೀನ ಮಾಡಿರೂ ಪಾಪಾ ಪುಣ್ಯದ ಕೆಲಸಗಳಿಂದಲ್ಲ..
14.ದುಡ್ಡಿಯಿಂದ ಖುಷಿಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂಬುದು ನೂರಕ್ಕೆ ನೂರರಷ್ಟು ನಿಜ. ಆದರೆ ದುಡ್ಡಿನಿಂದ ನಮಗೆ ಬೇಕಾಗಿರುವುದನ್ನೆಲ್ಲ ಖರೀದಿಸಿ ಖುಷಿಯಾಗಿರಬಹುದಲ್ಲ? ನಿಮ್ಮ ಯೋಚನೆ ಬದಲಿಸಿ, ಬದುಕು ತಾನಾಗಿಯೇ ಬದಲಾಗುತ್ತದೆ…
15.ಎಲ್ಲಿ ಹಣವಿರುತ್ತದೋ ಅಲ್ಲಿ ಬಾಂಧವರು,
ಎಲ್ಲಿ ಹಣವಿರುತ್ತದೋ ಅಲ್ಲಿ ಯಶಸ್ಸು,
ಹಣವಿದ್ದವನು ಎಲ್ಲರನ್ನೂ ಆಕರ್ಷಿಸುತ್ತಾನೆ ..
ಹಣವಿದ್ದವನು ಮಾತ್ರ ಈ ಪ್ರಪಂಚದಲ್ಲಿ ಜೀವಿಸುತ್ತಾನೆ …
16.ಹಣದಿಂದ ಬರುವ ಸ್ನೇಹ ಪ್ರೀತಿಗಳು ಹಣಯಿರುವ ತನಕ ಇರುತ್ತವೆ. ಗುಣದಿಂದ ಬರುವ ಸ್ನೇಹ ಪ್ರೀತಿಗಳು ಗುಣಯಿರುವ ತನಕ ಇರುತ್ತವೆ. ಯಾವುದು ಶಾಶ್ವತವಲ್ಲ ಬದುಕಲ್ಲಿ. ಬಂದಂತೆ ಬದುಕು…
17.ನಮ್ಮಲ್ಲಿ ಹಣ, ಅಧಿಕಾರ ಇಲ್ಲದಿದ್ದಾಗಲೇ
ನಿಜವಾದ ನೆಂಟರು ಆಪ್ತರ ಅರಿವಾಗುವುದು …
18.ಎಲ್ಲರೂ ದುಡ್ಡಿರುವವರನ್ನ ಬಹಿರಂಗವಾಗಿ ದ್ವೇಷಿಸುತ್ತಾರೆ. ಆದರೆ ದುಡ್ಡನ್ನು ಗುಟ್ಟಾಗಿ
ಪ್ರೀತಿಸುತ್ತಾರೆ…
19.ಹಣಕ್ಕೆ ಇರೋ ತಾಕತ್ತು ಪ್ರಪಂಚದಲ್ಲಿರುವ
ಯಾವ ಸ್ನೇಹ, ಪ್ರೀತಿ, ಸಂಬಂಧಕ್ಕೂ ಇಲ್ಲ..
20.ಶ್ರೀಮಂತರ ಕಾಯಿಲೆಗಳು ಬಡವರಿಗೆ ಬರುವಾಗ ಬಡವರೇಕೆ ಶ್ರೀಮಂತರಾಗಬಾರದು? ಎಲ್ಲರಿಗೂ ಶ್ರೀಮಂತರಾಗಲು ಸಮಾನ ಹಕ್ಕು ಹಾಗೂ ಅವಕಾಶಗಳಿವೆ…
21.ಹಣ ಎಂದರೆ ಉಪ್ಪು ಇದ್ದಂತೆ,
ಅದನ್ನು ತುಸುವೇ ನಾಲಿಗೆಯ ಮೇಲೆ
ಇರಿಸಿಕೊಂಡರೆ ರುಚಿ, ಹೆಚ್ಚಾಗಿ ತಿಂದರೆ ದಾಹ..
22.ಹಣ ಎಲ್ಲ ಸಮಸ್ಯೆಗಳ ಮೂಲವಲ್ಲ. ನಿಮ್ಮತ್ರ ಹಣವಿಲ್ಲದಿರುವುದು ಎಲ್ಲ ಸಮಸ್ಯೆಗಳ ಮೂಲವಾಗಿದೆ. ಹಣ ಕೆಟ್ಟದಲ್ಲ, ಹಣವಿಲ್ಲದಿರುವುದು ಅತಿ ಕೆಟ್ಟದಾಗಿದೆ…
23.ದೌಲತ್ತಿನ ದುನಿಯಾದಲ್ಲಿ ಬೇಕಾಗಿರುವುದು ,
ದುಡ್ಡೇ ಹೊರತು ಧರ್ಮರಾಯನ ಸತ್ಯ ಧರ್ಮವಲ್ಲ …
24.ಹಣಕ್ಕೆ ನಿಮ್ಮ 99% ಸಮಸ್ಯೆಗಳನ್ನು ಸಾಲ್ವ ಮಾಡುವ ಶಕ್ತಿಯಿದೆ. ಅದಕ್ಕೆ ಅವಶ್ಯಕತೆಗಿಂತ ಅಧಿಕವಾಗಿ ಹಣ ಸಂಪಾದಿಸಿ…
25.ಈ ಪ್ರಪಂಚದಲ್ಲಿ ಹಣ, ಆಸ್ತಿ, ಅಂತಸ್ತುಗಳಿಗಿರೋ ಬೆಲೆ,
ಮನುಷ್ಯನ ನಂಬಿಕೆ ನಿಯತ್ತಿಗಿಲ್ಲ …
26.ದುಡ್ಡಿಗಾಗಿ ದುಡಿಬೇಡಿ, ದುಡ್ಡನ್ನು ದುಡಿಸಿ. ನೀವು ದುಡ್ಡನ್ನು ದುಡಿಸಿದಾಗಲೇ
ಶ್ರೀಮಂತರಾಗುತ್ತೀರಿ…
27.ದುಡ್ಡಿದ್ರೆನೇ ದುನಿಯಾ ಅಲ್ಲ,
ದುಡ್ಡು ಇಲ್ಲದಿದ್ದಾಗಲೇ ನಿಜವಾದ
ದುನಿಯಾ ಕಾಣೋದು..
28.ಮನಸ್ಸಿಲ್ಲದವರ ಹಿಂದೆ ಪ್ರೀತಿ ಪ್ರೇಮ ಸ್ನೇಹ ಅಂತಾ ಅಲೆಯೋ ಬದಲು ನಿಮ್ಮ ಕೆಲಸವನ್ನು ಸರಿಯಾಗಿ ಮಾಡಿ ಶ್ರೀಮಂತರಾಗಿ. ನಿಮ್ಮತ್ರ ಬಿಲಿಯನಗಟ್ಟಲೇ ದುಡ್ಡಿದ್ರೆ ನೀವು ಮಿಸ ವಲ್ಡ ಜೊತೆಗೂ ಡೇಟಿಂಗಗೆ ಹೋಗಬಹುದು…
29.ಜೀವನದಲ್ಲಿ ದುಡ್ಡೆ ದೊಡ್ಡದಲ್ಲ,
ನಂಬಿಕೆ ಮತ್ತು ವಿಶ್ವಾಸ ದುಡ್ಡಿಂದ
ಖರೀದಿಸಲು ಸಾಧ್ಯವಿಲ್ಲ.
30.ಹಣ ಇಲ್ಲದವರನ್ನ ಯಾರು ಇಷ್ಟಪಡಲ್ಲ. ಹಣವಿಲ್ಲದವನ ಬಾಳು ಬರೀ ಗೋಳು…
31.ದುಡ್ಡು ದಡ್ಡನಾಗಿ ಮಾಡುತ್ತೆ ಎಷ್ಟೋ ಸಾರಿ,
ಅದ್ಕೆ ಮನಸ್ಸಿಂದ ಯೋಚಿಸು ಕೆಲವು ಬಾರಿ
32.ಈಗ ಕಾಲ ಬದಲಾಗಿದೆ, ಜನ ಬದಲಾಗಿದ್ದಾರೆ. ನೀವು ಸಹ ಬದಲಾಗಿ. ಈಗ ಗುಣ ಯಾರಿಗೂ ಬೇಕಿಲ್ಲ, ಮನ ಯಾರಿಗೂ ಕಾಣಿಸುವುದಿಲ್ಲ. ಎಲ್ಲರಿಗೂ ಹಣ ಮಾತ್ರ ಕಾಣಿಸುತ್ತದೆ. ಎಲ್ಲರೂ ನಿಮ್ಮ ಬಳಿ ಬರಬೇಕೆಂದರೆ ಹಣವನ್ನು ನಿಮ್ಮ ಬಳಿ ಭದ್ರವಾಗಿಟ್ಟುಕೊಳ್ಳಿ…
33.ನಿನ್ನ ಹೆಸರು ನೂರ್ಕಾಲ ಇರಬೇಕಂದ್ರೆ ಬರೀ ದುಡ್ಡಿದ್ರೆ ಸಾಲದು,
ನಿನ್ನ ಜೊತೆ ಪ್ರೀತಿ, ವಿಶ್ವಾಸ, ಮಾನವೀಯ ಗುಣಗಳು ಇರಬೇಕು.
34. ಶ್ರೀಮಂತಿಕೆ ಇರೋದು ಹಣ ಇರೋ ತನಕ,
ದೀಪ ಉರಿಯುವುದು ಎಣ್ಣೆ ಇರೋತನಕ,
ಪ್ರೀತಿ ಇರೋದು ಇಬ್ಬರಲ್ಲಿ ಒಬ್ಬರು ಕೈಕೊಡುವ ತನಕ, ಸ್ನೇಹ ಇರೋದು ಕೊನೆ ಉಸಿರಿರೋ ತನಕ.
35.ದುಡ್ಡು ದಡ್ಡನಿಗೆ ಧಿಮಾಕು ತರಿಸುತ್ತೆ,
ಬುದ್ಧಿವಂತನಿಗೆ ಬಲ ತುಂಬುತ್ತೆ..
36.ಹೆಚ್ಚೆಚ್ಚು ಹಣ ಉಳಿಸುವುದರಿಂದ ನೀವು ಶ್ರೀಮಂತರಾಗಲ್ಲ, ಹೆಚ್ಚಿಗೆ ಹಣ ಗಳಿಸುವುದರಿಂದ ನೀವು ಶ್ರೀಮಂತರಾಗುತ್ತೀರಿ…
37.ಮನುಷ್ಯತ್ವ ಹಣ ನೋಡಿ ಬರಲ್ಲ,
ಮನುಷ್ಯನ ಮನಸ್ಸು ನೋಡಿ ಬರುತ್ತೆ..
38.ಯಾವತ್ತೂ ನೀವು ಮೆಂಟಲಿ ರೀಚ್ ಆಗುತ್ತೀರೋ ಅವತ್ತಿನಿಂದ ನೀವು ಫೈನಾನ್ಸಿಯಲಿ ಕೂಡ ರೀಚ್ ಆಗಲು ಶುರು ಮಾಡುತ್ತೀರಿ…
39.ದುಡ್ಡಿನಿಂದ ದುನಿಯಾ ಆಳ್ತಿಯಾ ಅಂದ್ರೆ ಒಪ್ತೀನಿ,
ಆದ್ರೆ ದುಡ್ಡಿಂದ ಜೀವನ ಪೂರ್ತಿ ಸುಖವಾಗಿರ್ತಿನಿ
ಅಂದ್ರೆ ಅದು ಒಪ್ಪಲಾರದ ಮಾತಾಗುತ್ತೆ..
40.ನಿಮ್ಮ ಖಾಲಿ ಪಾಕೆಟನಿಂದ ನೀವು ಪಾಠ ಕಲಿತು ಸರಿಯಾಗಿ ಕೆಲಸ ಮಾಡಿ ಸಾಕಷ್ಟು ಹಣ ಗಳಿಸಿ ನಿಮ್ಮ ಪಾಕೆಟನ್ನು ಪ್ರೆಗ್ನೆಂಟ ಮಾಡದಿದ್ದರೆ ಮುಂದೆ ನಿಮ್ಮ ಹೆಂಡತಿ ಮಕ್ಕಳು ನಿಮ್ಮನ್ನು ಪ್ರತಿಕ್ಷಣ ಪ್ರತಿದಿನ ಶಪಿಸುತ್ತಾರೆ…
41.ನಿಮ್ಮ ಮಕ್ಕಳು ಕೇಳಿದನ್ನು ಕೊಡಿಸುವ ಯೋಗ್ಯತೆ ನಿಮಗಿರದಿದ್ದರೆ ಮಕ್ಕಳನ್ನು ಹೆರಬೇಡಿ. ಹೆಂಡತಿಯ ಪ್ರತಿ ಆಸೆಯನ್ನು ಈಡೇರಿಸುವ ಯೋಗ್ಯತೆ ಇರದಿದ್ದರೆ ಮದುವೆಯಾಗಬೇಡಿ. ನಿಮ್ಮ ದಾರಿದ್ರ್ಯದಿಂದ ಬೇರೆಯವರ ಬದುಕನ್ನು ಹಾಳು ಮಾಡಬೇಡಿ. ಸಾಕಾಗುವಷ್ಟು ಹಣದವಿಲ್ಲದೆ ಮದುವೆ ಮಕ್ಕಳು ಮಾಡಿಕೊಳ್ಳಬೇಡಿ…
42.ನೀನು ದುಡ್ಡಿನಿಂದ ಎಲ್ಲಾನೂ ಪಡ್ಕೊಬಹುದು
ಆದ್ರೆ ನಿನ್ನ ಹೆತ್ತವರನಲ್ಲ…
43.ಬರೀ ಗುಣದಿಂದ ಬದುಕಲು ಸಾಧ್ಯವಿಲ್ಲ. ಸಾಕಾಗುವಷ್ಟು ಹಣವಿದ್ದರೆ ಮಾತ್ರ ಸಂತೋಷದಿಂದ ಬದುಕಲು ಸಾಧ್ಯ. ಗುಣದಿಂದ ಹೊಟ್ಟೆ ತುಂಬಲ್ಲ, ಹಣದಿಂದ ಹೊಟ್ಟೆ ತುಂಬುತ್ತೆ ಎಂಬುದು ನೆನಪಿದ್ದರೆ ಸಾಕು…
44.ಹಣ ಇದ್ರೆ ವೈರಿಗಳು ಹೆಚ್ಚಾಗುತ್ತಾರೆ …
ಹಣ ಇಲ್ಲದಿದ್ದರೆ ನಮ್ಮವರೇ ವೈರಿಗಳಾಗುತ್ತಾರೆ …
45.ಹಣವಿಲ್ಲ ಅಂತಾ ಕೊರಗಬೇಡಿ. ತಲೆ ಉಪಯೊಗಿಸಿ ಬಿಜನೆಸ್ ಸ್ಟಾರ್ಟ ಮಾಡಿ. ನಿಮ್ಮ ಗೆಳೆಯರು ಬೈಕ ಮೇಲೆ ಹಾರಾಡುವಾಗ ನೀವು ಕಾರಲ್ಲಿ ಮೆರವಣಿಗೆ ಸಾಗಿ. ಬಿಜನೆಸ ಕರೋ, ಸಬಕಾ ಬಾಪ್ ಬನೋ…
46.ಹಣದ ಗಂಟಿದ್ದರೆ ಊರೆಲ್ಲ ಸಂಬಂಧಿಕರು,
ಹಣದ ಗಂಟಿಲ್ಲದಿದ್ದರೆ ಸಂಬಂಧಿಕರು ಸಹ ದೂರದ ಊರಿನವರು …
47.ಬಡವನ ಮನೆಗೆ ಲಕ್ಷ್ಮೀ ದೇವಿ ಬರಲು ಹಿಂದೇಟು ಹಾಕುತ್ತಾಳೆ ಅಂದ್ಮೇಲೆ ನೀವು ಯಾವ ಧೈರ್ಯದ ಮೇಲೆ ಸೀಟಿ ಸುಂದರಿ ನಿಮ್ಮ ಮನೆ ಸೊಸೆಯಾಗುತ್ತಾಳೆ ಅಂತಾ ಕನಸು ಕಾಣುತ್ತೀರಿ?. ಕುರುಡು ಕನಸು ಬಿಟ್ಟು ಕೆಲಸ ಮಾಡಿ…
48.ಎಷ್ಟು ಕೋಟಿ ಹಣವಿದ್ದರೇನು ದೇವರು ಕೊಟ್ಟಿರೋ
ಆಯುಷ್ಯ ಮೀರಿ ಒಂದು ಕ್ಷಣ ಹೆಚ್ಚಿಗೆ ಬದುಕೋಕಾಗಲ್ಲ …
49.ಹಣ ಮಾಡದವರಲ್ಲಿ ಮೂರ್ಖರು ಹೆಚ್ಚು
ಮಾಡಿದವರಲ್ಲಿ ನೀಚರು ಹೆಚ್ಚು …
50.ಹುಡುಗರು ಸೌಂದರ್ಯವನ್ನು ಹುಡುಕಿದರೆ ಹುಡುಗಿಯರು ಸಂಪತ್ತನ್ನು ಹುಡುಕುತ್ತಾರೆ. ಸೌಂದರ್ಯ ಸಂಪತ್ತಿನ ಕಣ್ಣಾಮುಚ್ಚಾಲೆ ಆಟದಲ್ಲಿ ನೀವು ಬಡವರಾಗಿ ಉಳಿಯಬೇಡಿ. ಹಣ ಗಳಿಸಿ, ಎಲ್ಲವೂ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ…
51.ಗಳಿಸುವ ಹಣ ಮತ್ತು ಸಂಬಂಧಗಳು
ಉಳಿಸಿಕೊಂಡಷ್ಟು ನಮ್ಮ ಜೊತೆಯಲ್ಲಿರುತ್ತವೆ,
ಬಳಸಿಕೊಂಡಷ್ಟು ನಮ್ಮನ್ನು ಬಿಟ್ಟು ಹೋಗುತ್ತವೆ …
52.ನಿಮಗೆ ಹಣ ಗಳಿಸುವ ಆಸೆಯಿಲ್ಲದಿದ್ದರೂ ಹಣಗಳಿಸಿ. ಸಿಕ್ಕಾಪಟ್ಟೆ ಹಣ ಗಳಿಸಿ
ದುರ್ಬಲರಿಗೆ ಅನಾಥರಿಗೆ ದಾನ ಮಾಡಿ…
53.ಜೀವನ ಸಾಗಿಸೋಕೇ ಬಹಳ ದುಡ್ಡು ಬೇಕಾಗಿಲ್ಲ, ಆದರೆ
ಇನ್ನೊಬ್ಬರನ್ನು ನೋಡಿ ಜೀವನ ಸಾಗಿಸಲು
ಎಷ್ಟು ದುಡ್ಡಿದ್ದರೂ ಸಾಕಾಗುವುದಿಲ್ಲ ….
54.ಮೊದಲು ನಿಮ್ಮ ಮನಸ್ಥಿತಿಯನ್ನು ಬದಲಿಸಿ, ಪರಿಸ್ಥಿತಿ ತಾನಾಗಿಯೇ ಬದಲಾಗುತ್ತದೆ. ಆಸೆ ಪಡುವ ತನಕ ಅಂತಸ್ತು ಸಿಗಲ್ಲ. ಆಸೆ ಪಡಿ, ಕೆಲಸ ಮಾಡಿ, ಕಷ್ಟಪಟ್ಟು ನಿಮಗೆ ಬೇಕಾಗಿರುವುದನ್ನೆಲ್ಲ ಪಡೆದುಕೊಳ್ಳಿ…
55.ಹಣ ಮನುಷ್ಯನನ್ನು ಬದಲಿಸುವುದಿಲ್ಲ ,
ಮನುಷ್ಯನ ನಿಜ ಸ್ವರೂಪವನ್ನು ಹೊರಗೆ ಹಾಕುತ್ತದೆ.
56.ಕಷ್ಟ ಅಂತಾ ಇಷ್ಟ ಪಟ್ಟಿದ್ದನ್ನು ಬಿಡಬೇಡಿ. ಇಷ್ಟಪಟ್ಟಿದ್ದು ಸಿಗಲಿಲ್ಲ ಅಂತಾ ಜೀವನಪೂರ್ತಿ ಕೊರಗೋದಕ್ಕಿಂತ ಕಷ್ಟಪಟ್ಟು ಇಷ್ಟಪಟ್ಟಿದ್ದನ್ನು ಪಡೆದುಕೊಳ್ಳಿ. ನಿಮ್ಮ ಜೀವನವನ್ನು ಸಿಹಿ ನೆನಪುಗಳಿಂದ ಶೃಂಗರಿಸಿ, ಕೊರಗುವ ಕನಸುಗಳಿಂದಲ್ಲ…
56.ಎಷ್ಟೇ ಕೋಟಿ ಹಣ ಇದ್ದರೂ ಸಹ ನೆಮ್ಮದಿ ಇಲ್ಲದ
ಜೀವನ ಕೋಟಿ ಕಸಕ್ಕೆ ಸಮಾನ ..
57.ಪ್ರೈಜ ಟ್ಯಾಗ ನೋಡದೆ ಕಣ್ಣಿಗೆ ಕಾಣಿಸಿದನ್ನೆಲ್ಲ ಖರೀದಿಸುವಷ್ಟರ ಮಟ್ಟಿಗೆ ಹಣ ಗಳಿಸಿ. ನಂಬಿಕೆಯಿಟ್ಟು ಕೆಲಸ ಮಾಡಿ. ನೀವು ಕನಸ್ಸಲ್ಲಿ ಕಂಡ ವಸ್ತುಗಳನ್ನೆಲ್ಲ ಖರೀದಿಸುವ ತಾಕತ್ತು ನಿಮಗಿದೆ…
58.ಹಣ ಮಾಡಲು ಆರೋಗ್ಯ ಕಳಕೊಳ್ಳುತ್ತೇವೆ,
ಆರೋಗ್ಯ ಪಡೆಯಲು ಹಣ ಕಳಕೊಳ್ಳುತ್ತೇವೆ,
ಸಾವೇ ಇಲ್ಲವೇನೋ ಎಂದು ಬದುಕುತ್ತೇವೆ ,
ಸಾಯುವಾಗ ನಾವು ಬದುಕಿ ಇಲ್ಲವೇನೋ ಎನ್ನುವಂತೆ ಸಾಯುತ್ತೇವೆ …
59.ಹಣವನ್ನು ಖರ್ಚು ಮಾಡುವುದಕ್ಕಿಂತ ಮುಂಚೆ ಗಳಿಸಿ. ಬೇರೆಯವರ ದುಡ್ಡಲ್ಲಿ ಶೋಕಿ ಮಾಡಬೇಡಿ, ನಿಮ್ಮ ಬೆವರು ಸುರಿಸಿ ಸಂಪಾದಿಸಿದ ಹಣದಿಂದ ಜಾತ್ರೆ ಮಾಡಿ, ಬೇಡ ಎಂದವರಾರು?
60.ಎಲ್ಲಾ ಸಮಯ ಒಂದೇ ತರ ಇರಲ್ಲ ಅನ್ನೋದಕ್ಕೆ ಉದಾಹರಣೆ,
ಯಾವತ್ತೂ ಕಸದ ಬುಟ್ಟಿಗೆ ನೋಡದೆ ಇರುವ ಹಣ ಇಂದೂ ನೋಡಿಬಿಟ್ಟಿದೆ …
61.ದುಡ್ಡಿರುವವನಿಗೆ ಕಡಿಮೆ ಜನ ಶತ್ರುಗಳಿರುತ್ತಾರೆ. ಏಕೆಂದರೆ ಮೂರ್ಖರಿಗೂ ದುಡ್ಡೇ ದೊಡ್ಡಪ್ಪ
ಎಂಬುದು ಗೊತ್ತಿದೆ…
62.ಗುಣ ಇರೋರು ಹೆಣ್ಣಿಗೆ ಬೆಲೆ ಕೊಡ್ತಾರೆ ,
ಹಣ ಇರೋರು ಹೆಣ್ಣಿಗೆ ಬೆಲೆ ಕೇಳ್ತಾರೆ …
63.ಎಲ್ಲಿ ತನಕ ನಿಮ್ಮ ತಲೆ ಖಾಲಿಯಿರುತ್ತೋ ಅಲ್ಲಿ ತನಕ ನಿಮ್ಮ ಪರ್ಸ ಕೂಡ
ಖಾಲಿಯಿರುತ್ತೆ…
64.ನಮ್ಮ ಜನ ಹೇಗಂದ್ರೆ, ಹಣ ಕೊಟ್ಟರೆ ಜೈಕಾರ
ಕೊಟ್ಟ ಹಣ ಕೇಳಿದರೆ ನಿಯಾರ ?
65.ದುಡ್ಡಿಗೆ ಗುಲಾಮರಾಗಬೇಡಿ, ದುಡ್ಡನ್ನು ನಿಮ್ಮ ಗುಲಾಮನನ್ನಾಗಿ ಮಾಡಿಕೊಳ್ಳಿ. ಅದು ಹೇಗಂತ ತಿಳಿದುಕೊಳ್ಳಲು ರಿಚ್ ಡ್ಯಾಡ್ ಪೂರ್ ಡ್ಯಾಡಗಳಂಥ ಮನಿ ಮೇಕಿಂಗ್ & ಮನಿ ಮ್ಯಾನೇಜಮೆಂಟ ಬುಕಗಳನ್ನು ಓದಿ…
66.ಹಣ ಇದ್ದರೆ ಶತ್ರು ಸಹ ಸ್ನೇಹಿತನಾಗುತ್ತಾನೆ,
ಕೊಟ್ಟ ಸಾಲ ಕೇಳಿದರೆ ಸ್ನೇಹಿತ ಸಹ ಶತ್ರು ಆಗುತ್ತಾನೆ …
67.ಎಲ್ಲರೂ ಶ್ರೀಮಂತರಾಗಲು ಆಸೆ ಪಡುತ್ತಾರೆ. ಆದರೆ ರಿಸ್ಕ ತೆಗೆದುಕೊಳ್ಳಲು ಹಿಂದುಮುಂದು ನೋಡುತ್ತಾರೆ. ಇದೊಂಥರ ಎಲ್ಲರೂ ಸ್ವರ್ಗವನ್ನು ಇಷ್ಟಪಡುತ್ತಾರೆ, ಆದರೆ ಸಾಯಲು ಬೇಡ ಎನ್ನುತ್ತಾರೆ ಎಂಬಂತಿದೆ. ಹೇಗೆ ಸಾಯದೆ ಸ್ವರ್ಗ ಸಿಗಲ್ಲವೋ ಅದೇ ರೀತಿ ರಿಸ್ಕ ತೆಗೆದುಕೊಳ್ಳದೆ ಸಂಪತ್ತುಗಲ್ಲ…
68.ಹೇಗೆ ಸಕ್ಕರೆ ಇರೋ ಕಡೆ ಇರುವೆ ಬರುತ್ತದೋ ,
ಹಾಗೆ ಹಣ ಇರೋ ಕಡೆನೇ ಜನರು ಬರುವುದು …
69.ಬಡವ ದುಡ್ಡಿಗಾಗಿ ಕತ್ತೆಯಂತೆ ದುಡಿಯುತ್ತಾನೆ. ಶ್ರೀಮಂತ ದುಡ್ಡನ್ನು ಕತ್ತೆಗಿಂತಲೂ ಕಡೆಯಾಗಿ ದುಡಿಸಿಕೊಳ್ಳುತ್ತಾನೆ. ಅದಕ್ಕಾಗಿ ಶ್ರೀಮಂತ ಮತ್ತಷ್ಟು ಶ್ರೀಮಂತನಾಗುತ್ತಾನೆ, ಬಡವ ಬಡವನಾಗೆ ಉಳಿಯುತ್ತಾನೆ…
70.ಹಣ ಇದ್ರೆ ವೈರಿಗಳು ಹೆಚ್ಚಾಗುತ್ತಾರೆ …
ಹಣ ಇಲ್ಲದಿದ್ದರೆ ನಮ್ಮವರೇ ವೈರಿಗಳಾಗುತ್ತಾರೆ …
71.ನಿಮ್ಮತ್ರ ಹಣವಿದೆ ಎಂಬುದಕ್ಕೆ ನೀವು ಖುಷಿ ಪಡಿ, ಹೆಮ್ಮೆ ಪಡಿ. ಆದರೆ ಅಹಂಕಾರ ಪಡಬೇಡಿ…
72.ಎಷ್ಟು ಹಣ ಕೂಡಿಟ್ಟರೇನು? ಕೊನೆಗೆ ಹೋಗುವ
ಸಮಯದಲ್ಲಿ ನಮ್ಮ ಬಟ್ಟೆಗೆ ಜೇಬು ಇರುವುದಿಲ್ಲ,
ಸ್ಮಶಾನದಲ್ಲಿ ತಿಜೋರಿ ಇರುವುದಿಲ್ಲ,
ದೇವದೂತರು ಲಂಚ ಮುಟ್ಟುವುದಿಲ್ಲ ….
73.ನಿಮ್ಮತ್ರ ಹಣವಿಲ್ಲದಿದ್ದರೆ ಸ್ವಲ್ಪ ದಿನ ಸುಮ್ಮನಿರಿ. ಸಾಲ ಮಾಡಿ ಶೋಕಿ ಮಾಡಬೇಡಿ. ಏಕೆಂದರೆ ಸಾಲಕ್ಕಿಂತ ಕೆಟ್ಟ ಶತ್ರು ಬೇರೆ ಯಾವುದಿಲ್ಲ…
74.ಅಧಿಕಾರ ಮತ್ತು ಹಣ ನಿಮ್ಮಲ್ಲಿ ಅಹಂಕಾರ ತಂದಿದೆ
ಎಂದರೇ, ಕಾಲ ನಿಮ್ಮ ಅಹಂಕಾರಕ್ಕೆ ಉತ್ತರ
ಕೊಡುವ ಸಮಯ ಹತ್ತಿರದಲ್ಲೇ ಇದೆ ಎಂದರ್ಥ …
75.ಹಣ ನಿನಗೆ ಏನು ಬೇಕಾದರೂ ಕೊಡುತ್ತದೆ …
ಆದರೆ ನಿನ್ನ ಮನಶಾಂತಿ ಕೊಡಲು ಸಾಧ್ಯವಿಲ್ಲ
ತಿಳಿದು ಬಾಳು ತುಳಿದು ಬಾಳಬೇಡ …
76.ನಿಮ್ಮ ಸ್ಕೀಲ ಮೇಲೆ ಹಾಗೂ ನಾಲೇಡ್ಜ ಮೇಲೆ ನಿಮ್ಮ ಟೈಮನ್ನು ಇನವೇಸ್ಟ ಮಾಡಿ. ಹಣ ತಾನಾಗಿಯೇ ನಿಮ್ಮನ್ನು ಹಿಂಬಾಲಿಸುತ್ತದೆ…
77.ನೀ ಧನವನ್ನು ಎಷ್ಟೇ ಸಂಪಾದಿಸಿದರೂ, ನಿಧನವಾಗುವುದರಿಂದ ತಪ್ಪಿಸಿಕೊಳ್ಳಲು
ಸಾಧ್ಯವೇ ಇಲ್ಲ …
78.ಒಂದು ರೂಪಾಯಿ ಉಳಿಸಿದರೆ ಒಂದು ರೂಪಾಯಿ ಗಳಿಸಿದಂತೆ. ಹಣವನ್ನು ಯೋಚನೆ ಮಾಡಿ ಖರ್ಚು ಮಾಡಿ. ಇಲ್ಲವಾದರೆ ರಾತ್ರೋರಾತ್ರಿ ಬಂಗಲೆಯಿಂದ ಬೀದಿಗೆ ಬರುತ್ತೀರಿ…
79.ಹಣ ಹಣ ಎನ್ನುವ ವ್ಯಕ್ತಿಯು ಹೆಣವಾಗಿ ಹೋದರೆ,
ಹಣ ಪರರ ಪಾಲು, ಹೆಣ್ಣು ಭೂಮಿ ಪಾಲು ನೆನಪಿರಲಿ …
80.”ನಾನು ಹಣಕ್ಕಾಗಿ ಕೆಲಸ ಮಾಡಲ್ಲ, ನಾನು ಹಣವನ್ನು ಇಷ್ಟಪಡಲ್ಲ” ಎಂದು ಬಡಾಯಿ ಕೊಚ್ಚಿಕೊಳ್ಳುವ ದುರಂಹಕಾರಿಗಳೇ ದಿನಕ್ಕೆ ಎಂಟು ಗಂಟೆ ಜಾಬ ಮಾಡುತ್ತಾರೆ…
81.ಹಣ ಇಲ್ಲದವನು ಬಡವನಲ್ಲ, ಹಣ ಇದ್ದು
ಗುಣ ಇಲ್ಲದವನು ನಿಜವಾದ ಬಡವನು …
82.ಮೊದಲು ಹಣ ಗಳಿಸಿ ಸಾಕು. ಆಮೇಲೆ ಸ್ನೇಹ, ಪ್ರೀತಿ, ಗೌರವ, ನೇಮ, ಫೇಮ್, ಪವರ, ಪ್ರಾಪರ್ಟಿ ಎಲ್ಲವೂ ತಾನಾಗಿಯೇ ನಿಮ್ಮ ಹಿಂದೆ ಬರುತ್ತವೆ…..
83.ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ನಿಂತಿರುವುದು
ಒಂದು ಹಣದಿಂದ ಮತ್ತೊಂದು ಅವರವರ ಅವಶ್ಯಕತೆಗಾಗಿ …
84.ದುಡಿತದ ಮೇಲೆ ನಂಬಿಕೆ ಇಡು,
ದುಡ್ಡು ಇಂದು ಬರುತ್ತೆ ನಾಳೆ ಹೋಗುತ್ತೆ..
85.ಸಂಪತ್ತು ಜಾಣನ ಗುಲಾಮನಾದರೆ ಮೂರ್ಖನ ಮಾಲೀಕನಾಗಿದೆ…
Also Read – 50+ Relationship sad quotes in Kannada | Love Failure Images