Potato Peel Health Benefits in Kannada | ಆಲೂಗಡ್ಡೆ ಸಿಪ್ಪೆಯ ಆರೋಗ್ಯ ಲಾಭಗಳು

ಆಲೂಗಡ್ಡೆ ಸಾಮಾನ್ಯವಾಗಿ ಪ್ರತಿಯೊಬರಿಗೆ  ಇಷ್ಟವಾಗುವ ತರಕಾರಿ. ಜೊತೆಗೆ ಪೋಷಕಾಂಶಗಳು ಅಷ್ಟೇ ಸಮೃದ್ಧವಾಗಿವೆ. ಆದರೆ ನಾವು ತೆಗೆದು ಬಿಸಾಡುವ ಆಲೂಗಡ್ಡೆ ಸಿಪ್ಪೆಯಲ್ಲಿ ಎಷ್ಟೆಲ್ಲಾ ಪೋಷಕಾಂಶಗಳಿವೆ ಎಂದು ನಿಮಗೆ ತಿಳಿದಿದೆಯಾ?. ಹೌದು ಈ ಲೇಖನದಲ್ಲಿ ಆಲೂಗಡ್ಡೆ ಸಿಪ್ಪೆಯಲ್ಲಿ ಇರುವ ನಾನಾ ಆರೋಗ್ಯ ಪ್ರಯೋಜನಗಳನ್ನು ವಿವರಿಸಿದ್ದೇವೆ. ಇದನ್ನು ಓದಿ ಇನ್ನು ಮುಂದೆ ನೀವು ಆಲೂಗಡ್ಡೆಯ ಸಿಪ್ಪೆಯನ್ನು ತೆಗೆಯಲು ಹೋಗಬೇಡಿ



ಆಲೂಗಡ್ಡೆ ಸಿಪ್ಪೆಯಲ್ಲಿರುವ ಆರೋಗ್ಯ ಲಾಭಗಳನ್ನು।Potato Peel Health Benefits  

1.ರಕ್ತದೊತ್ತಡ ನಿಯಂತ್ರಣ: 

ಆಲೂಗಡ್ಡೆಗಳಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಕಂಡುಬರುತ್ತದೆ. ಇದು ರಕ್ತದೊತ್ತಡ ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಿದೆ.ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಇನ್ನು ಮುಂದೆ ಆಲೂಗಡ್ಡೆ ಪಲ್ಯ ತಯಾರಿಸುವಾಗ ಅದರ ಸಿಪ್ಪೆ ತೆಗೆಯಬೇಡಿ. ಸಿಪ್ಪೆ ಸಮೇತ ಆಹಾರಗಳನ್ನು ತಯಾರಿಸಿ.

2.ರಕ್ತಹೀನತೆ ನಿಯಂತ್ರಣ:

ರಕ್ತಹೀನತೆಯಿಂದ ರಕ್ಷಣೆ- ಯಾವುದೇ ವ್ಯಕ್ತಿಯು ರಕ್ತಹೀನತೆಯಿಂದ  ಬಳಲುತ್ತಿದ್ದರೆ, ಅವನು ಆಲೂಗೆಡ್ಡೆ ಸಿಪ್ಪೆಯನ್ನು ಇತರ ಹಸಿರು ತರಕಾರಿಗಳೊಂದಿಗೆ ಸೇವಿಸಬೇಕು. ಆಲೂಗಡ್ಡೆ ಸಿಪ್ಪೆಯಲ್ಲಿ ಕಬ್ಬಿಣದ ಅಂಶವಿದೆ, ಇದು ಕೆಂಪು ರಕ್ತ ಕಣಗಳ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ..

3.ದೇಹವನ್ನು ಬಲಗೊಳಿಸುವುದು:

ಆಲೂಗೆಡ್ಡೆ ಸಿಪ್ಪೆಗಳಲ್ಲಿ ವಿಟಮಿನ್ ಬಿ 3 ಹೇರಳವಾಗಿ ಕಂಡುಬರುತ್ತದೆ. ಈ ವಿಟಮಿನ್ ಬಿ 3 ದೇಹಕ್ಕೆ ಶಕ್ತಿ ನೀಡುವ ಕೆಲಸ ಮಾಡುತ್ತದೆ. ಇದಲ್ಲದೆ, ಇದರಲ್ಲಿರುವ ನಾಸಿನ್ ಕಾರ್ಬ್ಸ್ ಅನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಆದ್ದರಿಂದ ಆಲೂಗಡ್ಡೆಯನ್ನು ಸಿಪ್ಪೆ ಸಮೇತ ತಿನ್ನುವುದು ಉತ್ತಮ. ಇದು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುವುದು.

4.ಜೀರ್ಣ ಕ್ರಿಯೆ ಸುಧಾರಣೆ:

ಫೈಬರ್ ಸಮೃದ್ಧವಾಗಿರುವ ಆಹಾರ ಸೇವನೆಯಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುವುದು. ಒಂದೆಡೆ, ಆಲೂಗಡ್ಡೆ ಫೈಬರ್ನಲ್ಲಿ ಸಮೃದ್ಧವಾಗಿದ್ದರೆ, ಅದರ ಸಿಪ್ಪೆಯಲ್ಲಿ ಸಹ ಉತ್ತಮ ಪ್ರಮಾಣದ ಫೈಬರ್ ಇರುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುವುದು.

5.ಮೂಳೆ ಬಲಕ್ಕಾಗಿ:

ಆಲೂಗೆಡ್ಡೆ ಸಿಪ್ಪೆಯಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಸಂಕೀರ್ಣವಿದೆ. ಇದು ಮೂಳೆಗಳನ್ನು ಬಲಪಡಿಸುವುದಲ್ಲದೇ, ದೇಹವು ವಿಟಮಿನ್ ಬಿ ಯಿಂದ ಶಕ್ತಿಯನ್ನು ಪಡೆಯುತ್ತದೆ. ಆದ್ದರಿಂದ ಆಲೂಗಡ್ಡೆ ಭಕ್ಷ್ಯ ತಯಾರಿಸಿದಾಗಲೆಲ್ಲಾ ಸಿಪ್ಪೆಯೊಂದಿಗೆತಯಾರಿಸಲು ಪ್ರಯತ್ನಿಸಿ. ಅಥವಾ ಇದನ್ನು ಲಘು ಆಹಾರವಾಗಿ ಬಳಸಬಹುದು.

6.ಕೂದಲು ಬೆಳ್ಳಗಾಗುವುದನ್ನ ತಡೆಯುವುದು:

ನಿಮ್ಮ ಕೂದಲು ಬಿಳಿಯಾಗುತ್ತಿದ್ದರೆ , ನೀವು ಆಲೂಗೆಡ್ಡೆ ಸಿಪ್ಪೆಯನ್ನು ಅರ್ಧ ಲೀಟರ್ ನೀರಿನಲ್ಲಿ ಕುದಿಸಿ. ನೀರು ಒಂದರಿಂದ ಎರಡು ಚಮಚಗಳಾಗಿ ಉಳಿದ ನಂತರ ಅದನ್ನು ನಿಮ್ಮ ಕೂದಲಿಗೆ ಹಚ್ಚಿ. ಇದನ್ನು ಪದೇ ಪದೇ ಮಾಡುವುದರಿಂದ, ನಿಮ್ಮ ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ಇದನ್ನು ಒದಿ : ಗುಳ್ಳೆಗಳನ್ನು ತಡೆಯಲು ಮನೆಮದ್ದುಗಳು|Get rid of pimples with home remedies

Leave a Comment