8 Different variety of dosa recipe in kannada

Variety of Dosa Recipes

8 ವಿವಿಧ ತರಹದ ದೋಸೆ ತಿಂಡಿಗಳು in Kannada


1. ಮೆಂತ್ಯದ ದೋಸೆ – Menthe Dosa Recipe In Kannada

Menthe Dosa
Menthe Dosa

ಬೇಕಾಗುವ ಪದಾರ್ಥಗಳು

  • ಅರ್ಧ ಕೆ.ಜಿ ಅಕ್ಕಿ
  • ಒಂದು ಹಿಡಿ ಮೆಂತ್ಯ
  • ಮುಕ್ಕಾಲು ಪಾವು ಉದ್ದಿನ ಬೇಳೆ
  • ಉಪ್ಪು
  • ಎಣ್ಣೆ

ತಯಾರಿಸುವ ವಿಧಾನ – Menthe Dosa Recipe

ಅಕ್ಕಿ, ಮೆಂತ್ಯ, ಉದ್ದಿನ ಬೇಳೆ ಇವುಗಳನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ನೀರಿನಲ್ಲಿ ನೆನೆಯಲು ಬಿಡಿ.ಸುಮಾರು ನಾಲ್ಕೈಯ್ದು ಗಂಟೆಗಳು ಈ ಪದಾರ್ಥಗಳು ಚೆನ್ನಾಗಿ ನೆನೆಯಬೇಕು.ಅನಂತರ ನೀರನ್ನು ಚೆಲ್ಲಿ ನೆನೆಸಿಟ್ಟ ಸಾಮಗ್ರಿಯನ್ನು ಒರಳಿನಲ್ಲಿ ಇಲ್ಲವೇ ಮಿಕ್ಸರ್ನಲ್ಲಿ ಹಾಕಿಕೊಂಡು ರುಬ್ಬಿ.ರುಬ್ಬುವಾಗ ಸ್ವಲ್ಪ ನೀರು ಹಾಕಿಕೊಳ್ಳಬಹುದು.ನಯವಾಗಿ ರು ಬ್ಬಬೇಕು. ರುಬ್ಬಿದ ಹಿಟ್ಟನ್ನು ಪಾತ್ರೆಯಲ್ಲಿ ಹಾಕಿಡಿ. ಸ್ವಲ್ಪ ಉಪ್ಪು ಬೆರೆಸಿ.ರುಬ್ಬುವ ಕೆಲಸ ದೋಸೆ ಮಾಡಬೇಕಾದ ಹಿಂದಿನ ದಿನದಂದು ಮಾಡಬೇಕು.ಮಾರನೇಯ ದಿನ ಒಲೆಯ ಮೇಲೆ ಕಾವಲಿ ಇಟ್ಟು ಚೆನ್ನಾಗಿ ಬೇಯಿಸಿ.ಮೊಗಚುವ ಕೈಯಿಂದ ದೋಸೆ ತೆಗೆಯಿರಿ. ಬಿಸಿಬಿಸಿಯಾಗಿದ್ದಾಗ ದೋಸೆ ತಿನ್ನಲು ಚೆನ್ನ. ಗರಿಗರಿಯಾಗಿದ್ದಾರೆ ರುಚಿ ಹೆಚ್ಚು. ತುಪ್ಪ ಇಲ್ಲವೇ ಬೆಣ್ಣೆ ತಿನ್ನಬಹುದು.ಜೊತೆಗೆ ಚಟ್ನಿ ಇರಬೇಕು.

2. ಕಾಯಿ ದೋಸೆ – Kayi Dosa

Kayi Dosa / Coconut Dosa
Kayi Dosa / Coconut Dosa

ಬೇಕಾಗುವ ಪದಾರ್ಥಗಳು

  • ಅರ್ಧ ಕೆ.ಜಿ ಅಕ್ಕಿ
  • ಒಂದು ತೆಂಗಿನಕಾಯಿ
  • ಒಂದು ಚಮಚ ಉಪ್ಪು
  • ಎಣ್ಣೆ

ತಯಾರಿಸುವ ವಿಧಾನ – Kayi Dosa

ಅಕ್ಕಿಯನ್ನು ಶುದ್ಧಗೊಳಿಸಿ ನೀರಿನಲ್ಲಿ ನೆನೆಹಾಕಿ. ತೆಂಗಿನಕಾಯಿ ತುರಿದಿಟ್ಟುಕೊಳ್ಳಿ. ನೆನೆದ ಅಕ್ಕಿ ಜೊತೆಗೆ ಕಾಯಿತುರಿಯನ್ನು ಸ್ವಲ್ಪ ಸ್ವಲ್ಪ ಹಾಕಿಕೊಂಡು ಒರಳಿನಲ್ಲಿ ರುಬ್ಬಿ, ಮಿಕ್ಸರಲ್ಲಿ ಹಾಕಿಕೊಂಡು ರಬ್ಬಬಹುದು.ಚೆನ್ನಾಗಿ ನುಣ್ಣಗೆ ರಬ್ಬಬೇಕು.ರುಬ್ಬಿದ ಒಂದು ಪಾತ್ರೆಯಲ್ಲಿ ಸ್ವಲ್ಪ ಉಪ್ಪು ಹಾಕಿ ಸೌಟಿ ನಿಂದ ತೊಳಿಸಿ.ಒಂದೆರಡು ಗಂಟೆ ಕಾಲ ಹಾಗೆಯೇ ಬಿಡಿ.ನಂತರ ಒಲೆಯ ಮೇಲೆ ಕಾವಲಿ ಇಟ್ಟು ಎಣ್ಣೆ ಸವರಿ ದೋಸೆ ಹುಯ್ಯಬೇಕು.ಒಂದು ತೊಟ್ಟು ದೋಸೆಯನ್ನು ಎರಡು ಕಡೆ ಸವರಿ ಚೆನ್ನಾಗಿ ಬೇಯಿಸಿ.ಕಾಯಿ ದೋಸೆ ದಪ್ಪ ಆಗುತ್ತದೆ.ಆದುದರಿಂದ ಮೋಸರು ಜೊತೆ ತಿನ್ನಲು ಚೆನ್ನಾಗಿರುತ್ತದೆ.

3. ಅಡೆ ದೋಸೆ – Adai Dosa Recipe In Kannada

Adai Dosa
Adai Dosa

ಬೇಕಾಗುವ ಪದಾರ್ಥಗಳು

  • ಅರ್ಧ ಕೆ.ಜಿ.ಅಕ್ಕಿ
  • ಅರ್ಧ ಪಾವು ತೊಗರಿಬೇಳೆ
  • ಅರ್ಧ ಪಾವು ಕಡಲೆಬೇಳೆ
  • ಒಂದು ಸಣ್ಣ ಚಮಚ ಮೆಂತ್ಯ
  • ಉಪ್ಪು
  • ಎಣ್ಣೆ.

ತಯಾರಿಸುವ ವಿಧಾನ – Adai Dosa Recipe

ದೋಸೆ ಮಾಡಬೇಕಾದ ಹಿಂದಿನ ದಿನ ಒಂದು ಪಾತ್ರೆಯಲ್ಲಿ ಶುದ್ಧಗೊಳಿಸಿದ ಅಕ್ಕಿ ಹಾಗೂ ಇತರ ಬೆಳೆಗಳು ಮತ್ತು ಮೆಂತ್ಯ ಇವುಗಳನ್ನು ನೀರಿನಲ್ಲಿ ನೆನೆಹಾಕಿ ಒಂದೆರಡು ಗಂಟೆಗಳು ನೆನೆದ ನಂತರ ಒರಳಿನಲ್ಲಿ ಹಾಕಿಕೊಂಡು ನುಣ್ಣಗೆ ರುಬ್ಬಿ.ರುಬ್ಬಿದ ಹಿಟ್ಟನ್ನು ಪಾತ್ರೆಯಲ್ಲಿ ಹಾಕಿಡಿ.ಸ್ವಲ್ಪ ಉಪ್ಪು ಬೆರೆಸಿ. ಮಾರನೆಯ ದಿನ ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಒಲೆಯ ಮೇಲಿಡಿ. ದೋಸೆ ಹಿಟ್ಟನ್ನು ಬಾಣಲೆಯಲ್ಲಿ ಬಿಡಿ. ದೋಸೆ ದಪ್ಪಗೆ ಆಗುವುದರಿಂದ ಚೆನ್ನಾಗಿ ಬೆಯಲು ಬಿಡಿ. ಕೆಲಕಾಲದ ನಂತರ ಮೊಗಚಿ ಹಾಕಿ.ಚೆನ್ನಾಗಿ ಬೆಂದ ಬಳಿಕ ಮೊಗಚುವ ಕೈಯಿಂದ ತಟ್ಟೆಗೆ ಹಾಕಿಕೊಳ್ಳಿ.ಚಟ್ನಿಯೊಡನೆ ತಿನ್ನಲು ಚೆಂದ.

4. ಈರುಳ್ಳಿ ದೋಸೆ – Onion Dosa Recipe In Kannada

Onion Dosa
Onion Dosa recipe in kannada

ಬೇಕಾಗುವ ಪದಾರ್ಥಗಳು

  • ಮೆಂತ್ಯದ ದೋಸೆಗೆ ಬೇಕಾದ ಪದಾರ್ಥಗಳು(Refer No 1)
  • ಈರುಳ್ಳಿ ಕಾಲು ಕೆ .ಜಿ
  • ಹಸಿಮೆಣಸಿನಕಾಯಿ ಮೂರು
  • ಕೊಂತಬರಿ ಸೊಪ್ಪು

ತಯಾರಿಸುವ ವಿಧಾನ – Onion Dosa Recipe

ದೋಸೆ ಹಿಟ್ಟು ತಯಾರಿಸಿಟ್ಟುಕೊಳ್ಳಿ, ದೋಸೆ ಹಿಟ್ಟಿಗೆ ಉಪ್ಪು, ಸಣ್ಣ ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿಯನ್ನು, ಹಸಿಮೆಣಸಿನಕಾಯಿ ಚುರುಗಳನ್ನು ಹಾಗೂ ಕೊತಂಬರಿ ಸೊಪ್ಪು ಹಾಕಿ ತೊಳಸಿ,ದೋಸೆ ಹುಯ್ಯಿರಿ.ಈರುಳ್ಳಿ ದೋಸೆ ಮೆಂತ್ಯದ ದೋಸೆಯನ್ನು ತೆಳ್ಳಗೀರದೆ ತುಸು ದಪ್ಪಗಿರುತ್ತದೆ.ಈರುಳ್ಳಿ ದೋಸೆ ಹಾಗೆಯೇ ತಿನ್ನಲು ರುಚಿ.

5. ಮಸಾಲೆ ದೋಸೆ – Masala Dosa Recipes In Kannada

Masala Dosa Recipe in kannada
Masala Dosa Recipe in kannada

ಬೇಕಾಗುವ ಪದಾರ್ಥಗಳು

  • ಮೆಂತ್ಯದ ದೋಸೆಗೆ ಬೇಕಾದ ಸಾಮಾನುಗಳು (Refer No 1)
  • ಈರುಳ್ಳಿ ಕಾಲು ಕೆ.ಜಿ
  • ಆಲೂಗಡ್ಡೆ
  • ಹಸಿಮೆಣಸಿನಕಾಯಿ
  • ಕೊತಂಬರಿ ಸೊಪ್ಪು
  • ಒಗ್ಗರಣೆ ಸಾಮಾನು
  • ಕಡಲೆಬೇಳೆ
  • ಉದ್ದಿನ ಬೇಳೆ
  • ಸಾಸಿವ
  • ಎಣ್ಣೆ

ತಯಾರಿಸುವ ವಿಧಾನ – Masala Dosa Recipe

ಮೊದಲು ಮೆಂತ್ಯದ ದೋಸೆಹಿಟ್ಟು ತಯಾರಿಸಿಕೊಳ್ಳಿ.ಬೇಕಾದರೆ ಸ್ವಲ್ಪ ನೆನೆಸಿಟ್ಟ ಅವಲಕ್ಕಿಯನ್ನು ಸೇರಿಸಿ ರುಬ್ಬಿಕೊಳ್ಳಬಹುದು.ದೋಸೆ ಹಾಕಬೇಕಾದ ದಿನ ಆಲೂಗಡ್ಡೆ ಈರುಳ್ಳಿ ಪಲ್ಯವನ್ನು ತಯಾರಿಸಿ. ಪಲ್ಯಕೆ ಒಗ್ಗರಣೆ ಹಾಕಿ.ದೋಸೆ ಹುಯ್ಯಿರಿ.ದೋಸೆಯ ಗರಿಗರಿ ಯಾಗಿ ಬೆಂದ ಮೇಲೆ ತಯಾರಿಸಿಟ್ಟುಕೊಂಡ ಪಲ್ಯವನ್ನು ದೋಸೆಯ ಮೇಲೆ ಇಟ್ಟು ಅರ್ಧಕ್ಕೆ ಮಡಿಸಿ.ಬೇಕಿದ್ದರೆ ಸ್ವಲ್ಪ ಈರುಳ್ಳಿ ಚಟ್ನಿಯನ್ನು ದೋಸೆಗೆ ಸವರಿ,ಅದರ ಮೇಲೆ ಪಲ್ಯವ ನಿಟ್ಟು ದೋಸೆಯನ್ನು ತಟ್ಟೆಗೆ ಹಾಕಿಡಿ.

6. ರಾಗಿ ದೋಸೆ – Ragi Dosa Recipe In Kannada

Ragi Dosa Recipe In Kannada
Ragi Dosa Recipe In Kannada

ಬೇಕಾಗುವ ಪದಾರ್ಥಗಳು

  • ಅರ್ಧ ಕೆ.ಜಿ ರಾಗಿ ಹಿಟ್ಟು
  • ಒಂದು ಪಾವು ಉದ್ದಿನಬೇಳೆ
  • ಉಪ್ಪು
  • ಎಣ್ಣೆ

ತಯಾರಿಸುವ ವಿಧಾನ – Ragi Dosa Recipe

ಶುದ್ಧಗೊಳಿಸಿದ ಉದ್ದಿನಬೇಳೆಯನ್ನು ನೀರಿನಲ್ಲಿ ನೆನೆಹಾಕಿ. ಚೆನ್ನಾಗಿ ನೆನೆದ ಮೇಲೆ ಒರಳಿನಲ್ಲಿ ಹಾಕಿ ರುಬ್ಬಿ.ಹಿಟ್ಟನ್ನು ಸ್ಟಿಲ್ ಪಾತ್ರೆಯಲ್ಲಿ ಹಾಕಿಕೊಳ್ಳಿ. ರಾಗಿಹಿಟ್ಟು ಮತ್ತು ಉಪ್ಪನ್ನು ಸೇರಿಸಿ ನೀರು ಹಾಕಿ ಕಲಸಿ,ಉದ್ದಿನಬೇಳೆ ಹಿಟ್ಟಿಗೆ ಕಳಿಸಿಟ್ಟ ರಾಗಿಹಿಟ್ಟು ಮತ್ತು ನೆನೆಯಬಿಡಿ.

7. ಗೋಧಿ ಹಿಟ್ಟಿನ ದೋಸೆ – Wheat Dosa (Godi Hittu Dosa)

Wheat Dosa Recipe in Kannada
Wheat Dosa Recipe in Kannada

ಬೇಕಾಗುವ ಪದಾರ್ಥಗಳು

  • ಒಂದು ಪಾವು ಗೋಧಿ ಹಿಟ್ಟು
  • ಸಣ್ಣ ರವೆ ಅರ್ಧ ಪಾವು
  • ಮೈದಾ ಹಿಟ್ಟು
  • ಎಣ್ಣೆ
  • ಈರುಳ್ಳಿ
  • ತೆಂಗಿನಕಾಯಿ ಚೂರು
  • ಹಸಿಮೆಣಸಿನಕಾಯಿ
  • ಕೊತಂಬರಿ ಸೊಪ್ಪು
  • ಮೊಸರು ಒಂದು ಬಟ್ಟಲು
  • ಉಪ್ಪು

ತಯಾರಿಸುವ ವಿಧಾನ – Wheat Dosa Recipe

ಗೋಧಿಹಿಟ್ಟು, ಮೈದಾ ಮತ್ತು ರವೆಯನ್ನು ನೀರಿನಲ್ಲಿ ಕಲಸಿ ಸ್ವಲ್ಪ ಮೊಸರು ಹಾಕಿ ದೋಸೆ ಹಿಟ್ಟನ್ನು ಹದಮಾಡಿಕೊಳ್ಳಿ. ಈರುಳ್ಳಿ ಚುರುಗಳು, ಕಾಯಿಚೂರು,ಹಸಿಮೆಣಸಿನಕಾಯಿ ಚೂರುಗಳು,ಕೊತಂಬರಿ ಸೊಪ್ಪು, ಎಲೆಗಳು ಹಾಗೂ ಉಪ್ಪು ಇವನ್ನು ಹಿಟ್ಟಿಗೆ ಸೇರಿಸಿ. ಒಂದು ಅರ್ಧಗಂಟೆ ನೆನೆಯಲು ಬಿಡಿ.ಅನಂತರ ಒಲೆಯ ಮೇಲೆ ಕಾವಲಿ ಇಟ್ಟು ಎಣ್ಣೆಗೆ ಸವರಿ ದೋಸೆ ಹುಯ್ಯಬೇಕು. ದೋಸೆ ಹಿಟ್ಟು ತಯಾರಿಸಿಕೊಂಡ ದಿನವೇ ದೋಸೆ ಹುಯ್ಯಬೇಕು.ದೋಸೆ ಹಿಟ್ಟು ತಯಾರಿಸಿಕೊಂಡ ದಿನವೇ ದೋಸೆ ಹುಯ್ಯಬೇಕು.ಇದು ದಿಢಿರ ದೋಸೆಯೂ ಹೌದು.ಮೈದಾಹಿಟ್ಟು ಹಾಕುವುದರಿಂದ ದೋಸೆ ನುಣ್ಣಗೆ ಮೆದುವಾಗಿ ಆಗುತ್ತದೆ.ರುಚಿಯು ಹೆಚ್ಚು.

8. ರವಾ ದೋಸೆ – Rava Dosa Recipe in Kannada

Rava Dosa Recipe In Kannada
Rava Dosa Recipe In Kannada

ಬೇಕಾಗುವ ಪದಾರ್ಥಗಳು

  • ಒಂದು ಪಾವು ಉದ್ದಿನಬೇಳೆ
  • ಅರ್ಧ ಕೆ.ಜಿ ಸಣ್ಣ ರವೆ
  • ಉಪ್ಪು
  • ಎಣ್ಣೆ

ತಯಾರಿಸುವ ವಿಧಾನ – Rava Dosa Recipe in kannada

ದೋಸೆ ಮಾಡಬೇಕಾದ ಹಿಂದಿನ ದಿನ ಉದ್ದಿನಬೇಳೆ ನೆನೆಹಾಕಿಡಿ. ನೆನೆದ ಬೆಳೆಯನ್ನು ಚೆನ್ನಾಗಿ ರುಬ್ಬಿ. ಹಿಟ್ಟಿಗೆ ರವೆ ಬೆರಸೀಡಿ,ಉಪ್ಪು ಸೇರಿಸಿ.ಮರುದಿನ ಒಲೆಯ ಮೇಲೆ ಕಾವಲಿ ಇಟ್ಟು ದೋಸೆ ಹುಯ್ಯಬೇಕು.

Also Read – 8 Types of Avalakki Recipes in Kannada

Leave a Reply