ಬೇಕಾಗುವ ಪದಾರ್ಥಗಳು
- ಅರ್ಧ ಕೆ. ಜಿ. ಅಕ್ಕಿ
- ಅರ್ಧ ಕೆ. ಜಿ ತೊಗರಿಬೇಳೆ
- ಕಾಲು ಕೆ.ಜಿ ತುಪ್ಪ
- ಒಣಮೆಣಶಿನಕಾಯಿ ಹತ್ತು
- ಇಂಗು
- ಮೆಂತ್ಯ (ಸಣ್ಣ ಚಮಚ)
- ಹುಣಸೆಹಣ್ಣು, ಒಂದು ಗಿಟುಕು ಒಣ ಕೊಬ್ಬರಿ
- ಅರಿಶಿಣಪುಡಿ
- ದಾಲಚ್ಚಿನಿ, ಚಕ್ಕೆ ಎರಡು ಚೂರು
- ಲವಂಗ
- ಕಡಲೆಬೇಳೆ
- ಒಂದು ಚಮಚ ಸಾಸಿವೆ, ಉಪ್ಪು
- ಕರಿಬೇವು, ಕೊತಂಬರಿಸೊಪ್ಪು
- ಜೀರಿಗೆ, ಮೆಣಸು ಮತ್ತು ಗಸಗಸೆ.
ಮಾಡುವ ವಿಧಾನ
ಒಂದು ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ ಒಲೆಯ ಮೇಲಿಡಿ. ನೀರು ಕುಡಿಯತೊಡಗಿದ ಮೇಲೆ ಶುದ್ಧಗೊಳಿಸಿದ ತೊಗರಿಬೇಳೆಯನ್ನು ಹಾಕಿ ಅದಕ್ಕೆ ಅರಿಶಿನ, ಸ್ವಲ್ಪ ತುಪ್ಪ ಹಾಕಿ ತಟ್ಟೆ ಮುಚ್ಚಿ.
ತೊಗರಿಬೇಳೆ ಅರ್ಧ ಬೆಂದ ಮೇಲೆ ಅಕ್ಕಿಯನ್ನು ತೊಳೆದು ಹಾಕಿ ತಟ್ಟೆ ಮುಚ್ಚಿ.
Step3:
ನಿಂಬೆಕಾಯಿ ಗಾತ್ರದ ಹುಣಸೆಹಣ್ಣನ್ನು ನೀರಿನಲ್ಲಿ ನೆನೆಹಾಕಿ ಬಾಣಲೆಯನ್ನು ಇನೊಂದು ಒಲೆಯ ಮೇಲಿಟ್ಟು ಒಂದು ತೊಟ್ಟು ಎಣ್ಣೆ ಅಥವಾ ತುಪ್ಪ ಬಿಡಿ. ಒನಮೆಣಸಿನಕಾಯಿ, ಕೊತಂಬರಿಬೀಜ, ಡಾಲಚಿನ್ನಿ, ಚಕ್ಕೆ, ಜೀರಿಗೆ, ಮೆಣಸು, ಇಂಗು, ಗಸಗಸೆ, ಸಾಸಿವೆ, ಮೆಂತ್ಯ ಇವೆಲಾವನ್ನು ಬಾಣಲೆಯಲ್ಲಿ ಹಾಕಿ ಹುರಿದುಕೊಳ್ಳಿ.
Step4:
ಅನಂತರ ಈ ಪುಡಿಯೇ ಬಿಸಿಬೇಳೆಬಾತ್ ತಯಾರಿಕೆಗೆ ಒದಗುತ್ತದೆ. ಬೆಯುತ್ತಿರುವ ಅಕ್ಕಿ ಬೇಳೆಗೆ ಬಿಸಿಬೇಳೆಬಾತಿನ ಪುಡಿ, ಉಪ್ಪು, ಹುಣಿಸೆಹಣ್ಣಿನ ತಿಳಿ, ಸ್ವಲ್ಪ ಹಾಕಿ ತಟ್ಟೆ ಮುಚ್ಚಿ ಅಕ್ಕಿ ಬೆಂದು ಅನ್ನವಾಗುತ್ತದೆ.
Step5:
ಅನ್ನಕ್ಕೆ ಕರಿಬೇವು, ಸಾಸಿವೆ, ಒನಮೆನಸಿನಕಾಯಿ, ಇಂಗು ಇವುಗಳ ಒಗ್ಗರಣೆ ಹಾಕಿ ಕೆದಕಿ. ಇದೀಗ ಬಿಸಿಬೇಳೆಬಾತ್ ಸಿದ್ದ. ಇದರೊಂದಿಗೆ ಆಲೂಗಡ್ಡೆ ಚಿಪ್ಸ್ ತಿಂದರೆ ಹೆಚ್ಚು ರುಚಿಕರವಾಗಿರುತ್ತದೆ.
Also read: 7 Health Tips to Keep You Healthy in Kannada