7 Health Tips to Keep You Healthy in Kannada

ನಿಮ್ಮ ದೇಹವನ್ನು ಆರೋಗ್ಯವಾಗಿಡಲು ಸುಲಭವಾದ ಆರೋಗ್ಯ ಸಲಹೆಗಳು    


home Health tips in kannada

1.ಬಾಳೆಹಣ್ಣಿನಲ್ಲಿ ಜೀವಸತ್ವಗಳು, ಕಬ್ಬಿಣ ಮತ್ತು ನಾರಿನ ಅಂಶ ಇದೆ. ಹಾಗಾಗಿ ಬಾಳೆಹಣ್ಣು ತಿನ್ನುವ ಜನರು ಹೆಚ್ಚು ಶಕ್ತಿಯುತವಾಗಿರುತ್ತಾರೆ.

2.ಮೀನಿನ ಎಣ್ಣೆ ನಿಮ್ಮ ದೃಷ್ಟಿ ಹೆಚ್ಚಿಸುತ್ತದೆ, ತೂಕ ನಿಯಂತ್ರಣಕ್ಕೂ ಸಹಾಯ ಮಾಡುತ್ತದೆ. ಮೀನು ತಿನ್ನುವ ಜನರು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

3.ಪ್ರತಿದಿನ ಒಣದ್ರಾಕ್ಷಿ ನೆನೆಸಿದ ನೀರನ್ನು ಕುದಿಸಿ ಕುಡಿಯುವುದರಿಂದ ಮಲಬದ್ಧತೆ, ಅಸಿಡಿಟಿ ಹಾಗೂ ಆಯಾಸ ಸಮಸ್ಯೆ ದೂರವಾಗುತ್ತದೆ. ಈ ನೀರು ಕೊಲೆಸ್ಟ್ರಾಲ್ ಮಟ್ಟವನ್ನು ಸರಿಯಾಗಿಡುತ್ತದೆ. ಮುಖದ ಈ ಮೇಲಿನ ಸುಬ್ಬನ್ನು ಕಡಿಮೆ ಮಾಡಿ ಸೌಂಧರ್ಯ ವೃದ್ಧಿಸುವ ಕೆಲಸ ಮಾಡುತ್ತದೆ.

4.ಪ್ರತಿದಿನ ದಾಳಿಂಬೆ ರಸವನ್ನು ಕುಡಿಯುವುದರಿಂದ ಹೃದಯಕ್ಕೆ ಒಳ್ಳೆಯದು ಮತ್ತು ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವ  ಜನರಿಗೆ ತುಂಬಾ ಉಪಯುಕ್ತವಾಗಿದೆ.

5.ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುವುದರಿಂದ ಉತ್ತಮ ನಿದ್ರೆ ಬರುತ್ತದೆ ಹಾಗು ಜೀರ್ಣಕ್ರಿಯೆ ಹೆಚ್ಚಾಗುತ್ತದೆ.

6.ನಮ್ಮ ಆಹಾರದಲ್ಲಿ ಕರಿಬೇವಿನ ಬಳಕೆಯಿಂದ ಶ್ವಾಸಕೋಶದ ಅರೋಗ್ಯ ಹೆಚ್ಚುತ್ತದೆ. ಇದರಿಂದ ಕೆಮ್ಮು, ನೆಗಡಿ, ಆಸ್ತಮಾದಂತಹ ಕಾಯಿಲೆಗಳು ಕಡಿಮೆಯಾಗುತ್ತವೆ.ಹಾಗೂ ಕರಿಬೇವಿನ ಬಳಕೆಯಿಂದ ನಮ್ಮ ಚರ್ಮದ ಕಾಂತಿಯು ಕೂಡ ಹೆಚ್ಚಾಗುತ್ತದೆ .

7.ಕ್ಯಾರೆಟ್‌ನಲ್ಲಿ ಹೆಚ್ಚಿನ ಮಟ್ಟದ ವಿಟಮಿನ್ ಎ, ಬೀಟಾ ಕ್ಯಾರೋಟಿನ್ ಮತ್ತು ಆಂಟಿಆಕ್ಸಿಡೆಂಟ್‌ಗಳಿವೆ. ಇವು ನಿಮ್ಮ ಚರ್ಮವನ್ನು ಸೂರ್ಯನಿಂದಾಗುವ ಹಾನಿಯಿಂದ ರಕ್ಷಿಸುತ್ತವೆ ಮತ್ತು ಅಕಾಲಿಕ ವಯಸ್ಸಾಗಿರುವಂತೆ ಕಾಣುವುದನ್ನು ತಡೆಯುತ್ತವೆ.

Leave a Reply