ಮಹಾಶಿವರಾತ್ರಿ ಮಹತ್ವ 2022| Maha Shivratri Importance in Kannada

ಮಹಾಶಿವರಾತ್ರಿ | Maha shivratri

ಮಹಾಶಿವರಾತ್ರಿಯ ದಿನವು ಶಿವನನ್ನು ಪೂಜಿಸುವ ದಿನವಾಗಿದೆ. ಈ ದಿನದಂದು ಶಿವನ ಮೂರ್ತಿ ಮತ್ತು ಶಿವನ ಲಿಂಗವನ್ನು ಪೂಜಿಸುವುದು. ಹಿಂದೂ ಧರ್ಮದವರಿಗೆ ಶಿವರಾತ್ರಿ ಹಬ್ಬವು ತುಂಬಾ ಮಹತ್ವವಾದ ಹಬ್ಬವಾಗಿದೆ. ಹಿಂದೂಗಳಿಗೆ ಶಿವನು ಒಬ್ಬ ಆರಾಧ್ಯಡೈವನಾಗಿದ್ದಾನೆ.

ಮಹಾಶಿವರಾತ್ರಿ ಮಹತ್ವ 2022| Maha Shivratri Importance in Kannada
ಮಹಾಶಿವರಾತ್ರಿ ಮಹತ್ವ 2022| Maha Shivratri Importance in Kannada

ಈ ವರ್ಷ ಮಹಾಶಿವರಾತ್ರಿ ದಿನವೂ 01 ಮಾರ್ಚ್ 2022 ರಂದು ಆಚರಿಸಲಾಗುತ್ತದೆ. ಹಿಂದೂ ಧರ್ಮದವರಿಗೆ ಮಹಾಶಿವರಾತ್ರಿ ಹಬ್ಬವು ಬಹಳ ಪ್ರಸಿದ್ಧವಾದ ಹಬ್ಬವಾಗಿದೆ. ಮಹಾಶಿವರಾತ್ರಿ ಈ ಪವಿತ್ರ ಹಬ್ಬವನ್ನು ಪಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುದರ್ಶಿ ದಿನಾಂಕದಂದು ಆಚರಿಸಲಾಗುತ್ತದೆ. ಶಿವನನ್ನು ಪೂಜಿಸಲು,ಜಪಿಸಲು ಪ್ರತಿವರ್ಷ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ.

ಶಿವನು ರಾತ್ರಿ ಸಮಯದಲ್ಲಿ ತಾಂಡವ ನೃತ್ಯವನ್ನು ಪ್ರದರ್ಶಿಸಿವುದರಿಂದ ಮಹಾಶಿವರಾತ್ರಿ ಎಂದು ಹೇಳಲಾಗುತ್ತಿದೆ. ಶಿವನು ಶಿವ ಲಿಂಗ ಎಂಬ ಹೆಸರಿನಿಂದ ಪ್ರಸಿದ್ಧನಗಿದ್ದಾನೆ. ಶಿವನನ್ನು ಲಿಂಗದ ಸಂಕೇತದಲ್ಲಿ ಪೂಜಿಸಲಾಗುತ್ತದೆ. ಇಲ್ಲಿ ಶಿವ ಎಂದರೆ ‘ಕಲ್ಯಾಣ’ ಮತ್ತು ಲಿಂಗ ಎಂದರೆ ‘ಸೃಷ್ಟಿ ‘ ಎಂದರ್ಥ.

ಮಹಾಶಿವರಾತ್ರಿ ಶುಭ ಮೂಹರ್ತ |

ದಿನಾಂಕ :- 1 ಮಾರ್ಚ್ 2022

ವಾರ :- ಮಂಗಳವಾರ

ಪೂಜೆ ಪ್ರಾರಂಭದ ಸಮಯ :- ಮಾರ್ಚ್ 01 ಮಂಗಳವಾರ ಬೆಳಿಗ್ಗೆ 3:16 ರಿಂದ

ಪೂಜೆ ಮುಕ್ತಾಯದ ಸಮಯ :- ಮಾರ್ಚ್ 02 ಬುಧುವಾರ 1:00 ರವರೆಗೆ

ಮಹಾಶಿವರಾತ್ರಿ ಮಹತ್ವ | Maha shivratri Importance

ಮಹಾಶಿವರಾತ್ರಿಯ ವಿಶೇಷವೆಂದರೆ ಹಿಂದೂ ಗ್ರಂಥಗಳ ಪ್ರಕಾರ ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿದೆ.

ದೇವತೆಗಳು ಹಾಗೂ ದೇವಾಸುರರು ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭುವವಾದಗ, ಅದನ್ನು ಶಿವ ಕುಡಿದನು ಆದರಿಂದ ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ. ಪಾರ್ವತಿ ದೇವಿ ಶಿವರಾತ್ರಿಯ ಸಮಯದಲ್ಲಿ ಶಿವನನ್ನು ಪ್ರಾರ್ಥಿಸಿ ಜಪ ಮಾಡಿ ಶಿವನನ್ನು ವಲಿಸಿಕೊಂಡು ವಿವಾಹವಾದಳು.

ಮಹಾಶಿವರಾತ್ರಿಯ ಮಧ್ಯರಾತ್ರಿಯಂದು ಶಿವನು ಮತ್ತು ಪಾರ್ವತಿ ಭೂಲೋಕಕ್ಕೆ ಇಳಿದು, ಭೂಮಿಯನ್ನು ಸಂಚಾರಿಸುತ್ತ ಎಲ್ಲಾ ಜಂಗಮ ಲಿಂಗಗಳಲ್ಲಿ ಸಂಕ್ರಮಗೊಳ್ಳುತ್ತಾನರೆ .

ಆ ಸಮಯದಲ್ಲಿ ತನ್ನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ. ಎಂದು ಸ್ವತಃ ಶಿವನೇ ತಿಳಿಸಿದ್ದಾನೆ. ಮಹಾಶಿವರಾತ್ರಿ ದಿನದಂದು ಮಹಾದೇವನು ಲಿಂಗ ಸ್ವರೂಪವನ್ನು ಧರಿಸುತ್ತಾನೆ. ಶಿವ- ಪಾರ್ವತಿಯನ್ನು ಪೂಜಿಸುವುದರಿಂದ ಬದುಕಿನ ಎಲ್ಲಾ ಸಮಸ್ಯೆಗಳು ದೂರವಾಗುವವು.

ಮಹಾಶಿವರಾತ್ರಿ ಆಚರಣೆ | Maha shivratri Celebration

ವರ್ಷದಲ್ಲಿ ಬರುವ 12 ಶಿವರಾತ್ರಿಗಳಲ್ಲಿ, ಮಹಾಶಿವರಾತ್ರಿಯು ಒಂದು ಬಹಳ ಅಧ್ಯಾತ್ಮಿಕ ಮಹತ್ವವನ್ನು ಹೊಂದಿದೆ.

ಮಹಾಶಿವರಾತ್ರಿ ಹಬ್ಬವು ಮಹಿಳೆಯರು ಮತ್ತು ಪುರುಷರು ಆಚರಿಸುವ ಹಬ್ಬವಾಗಿದೆ. ಈ ದಿನದಂದು ಪ್ರತಿಯೊಬ್ಬ ಶಿವನ ಭಕ್ತರು ಉಪವಾಸ ಮತ್ತು ಜಾಗರಣೆ ಮಾಡುತ್ತಾ ಶಿವನನ್ನು ಸ್ಮರಣೆ ಮಾಡುತ್ತಾರೆ . ಈ ದಿನ ಶಿವನ ದೇವಾಲಯಗಳಲ್ಲಿ ವಿಶೇಷವಾದ ಪೂಜೆಯನ್ನು ಅರ್ಪಿಸುತ್ತಾರೆ. ಕೈಲಾಸ ವಾಸ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ಒಂದು ದಿನ.

ಮಹಾಶಿವರಾತ್ರಿಯಂದು ಬೆಳಿಗ್ಗೆ ಬೇಗನೆ ಏಳುವ ಭಕ್ತರು, ಸ್ನಾನ ಮಾಡಿ ಶುಚಿಭೂರ್ತರಾಗಿ ಶಿವನ ದೇವಾಲಯಕ್ಕೆ ಹೋಗುತ್ತಾರೆ. ಈ ದಿನದಂದು ಪ್ರತಿಯೊಬ್ಬರು ಬೆಳ್ಳಿಗೆಯಿಂದ ಸಾಯಂಕಾಲದವರೆಗೂ ಉಪವಾಸ ವ್ರತ ಮಾಡಿ ಮತ್ತು ಇಡೀ ರಾತ್ರಿ ಜಾಗರಣೆಯನ್ನು ಮಾಡುತ್ತಾರೆ.

ಈ ದಿನ ಕೆಲವರು ಹಾಲು, ಹಣ್ಣು ಸೇವಿಸಿ ಲಘು ಉಪಹಾರ ಸೇವಿಸದರೆ,ಇನ್ನು ಕೆಲವು ಭಕ್ತರು ಏನೇನು ತಿನ್ನದೇ ಮತ್ತು ನೀರು ಕುಡಿಯದೆ ಉಪವಾಸ ಮಾಡುತ್ತಾರೆ. ಈ ದಿನದಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ ಬಿಲ್ವ ಪತ್ರೆಗಳನ್ನು ಅರ್ಪಿಸುವುದರಿಂದ ಕಷ್ಟಕರ ಪರಿಹಾರಗಳು ಪ್ರಾಪ್ತವಾಗುತ್ತವೆ.

ಶಿವನನ್ನು ಪೂಜಿಸುವ ವಿಧಾನ

ಬೆಳಿಗ್ಗೆ ಬೇಗ ಎದ್ದು ತಲೆ ಸ್ನಾನ ಮಾಡಿ, ಶಿವನ ದೇವಾಲಯಕ್ಕೆ ಹೋಗಿ ಪೂಜಿಸುವುದು ಮತ್ತು ಮನೆಯಲ್ಲಿ ಇರುವ ಶಿವನಿಗೆ ಪೂಜಿಸುವುದು. ನಂತರ ಪೂಜೆ ಸಲ್ಲಿಸಿದ ಬಳಿಕ ಉಪವಾಸ ವ್ರತ ಮಾಡಬೇಕು.

ಹೀಗೆ ಈ ಉಪವಾಸ ವ್ರತವನ್ನು ಬೆಳಿಗ್ಗೆಯಿಂದ ಸಂಜೆವರೆಗೂ ಕೈಗೊಳ್ಳಬೇಕು. ಆಮೇಲೆ ಸಂಜೆ ವೇಳೆಯಲ್ಲಿ ಇನ್ನೊಮ್ಮೆ ಸ್ನಾನ ಮಾಡಿ, ದೇವರಿಗೆ ಮಡಿಯಿಂದ ಪೂಜೆ ಮತ್ತು ಪ್ರಸಾದವನ್ನು ಮಾಡಬೇಕು.ನಂತರ ಶಿವನಿಗೆ ಪೂಜೆ ಮಾಡಲು ಏನೇನೂ ಬೇಕೋ ಅವುಗಳನ್ನು ತೆಗೆದುಕೊಂಡು ದೇವಾಲಯಕ್ಕೆ ಹೋಗಬೇಕು.

ಮತ್ತು ದೇವಾಲಯಕ್ಕೆ ಹೋಗದೆ ಇರುವರು,ಮನೆಯಲ್ಲಿಯೇ ಶಿವನ ಮೂರ್ತಿಗೆ ವಿಶೇಷವಾಗಿ ಹಾಲಿನ ಅಭಿಷೇಕ,ತುಪ್ಪದ ಅಭಿಷೇಕ ಮತ್ತು ಹಣ್ಣಿನ ಅಭಿಷೇಕ ಹೀಗೆ ಮುಂತಾದ ಅಭಿಷೇಕವನ್ನು ಮಾಡಬೇಕು. ಶಿವನಿಗೆ ಬಿಲ್ವಪತ್ರೆ ತುಂಬಾ ಶ್ರೇಷ್ಠವಾದದ್ದು. ಆದರಿಂದ ಶಿವನಿಗೆ ಎಲ್ಲಾ ಹೂವುಗಳಿಂತ ಬಿಲ್ವಪತ್ರೆ ಅರ್ಪಿಸುವುದು ಮಹತ್ವವಾಗಿದೆ.

ಶಿವನಿಗೆ ವಿವಿಧ ತರಹದ ಪ್ರಸಾದವನ್ನು ಹಿಡಿಯುವುದು. ಮೊದಲನೆದಾಗಿ ಶಿವನಿಗೆ ಚುರುಮುರಿ ಒಗ್ಗರಣೆ ತುಂಬಾ ಶ್ರೇಷ್ಠ ಮತ್ತು ಹಣ್ಣು, ಉಂಡೆಗಳು ಮತ್ತು ಕಾಳು ಪಲ್ಯ ತಿನಿಸುಗಳನ್ನನು ಪ್ರಸಾದ ಹಿಡಿಯುವುದು. ಇದಾದ ನಂತರ ಶಿವನಿಗೆ ಆರತಿ ಬೆಳಗಿ, ತಮ್ಮ ಕಷ್ಟ ಸುಖಗಳನ್ನು ಸ್ಮರಿಸುತ್ತಾ ಶಿವನನ್ನು ಜಪಿಸುತ್ತಾರೆ.

Also Read – ಸಂಕಷ್ಟಿ ಚತುರ್ಥಿ ಮಹತ್ವ| Sankashti Chaturthi 2022 in Kannada

Leave a Reply