ಯೋಗದ ಉಪಯೋಗಗಳು | Yoga Asanas in Kannada |ಯೋಗ ಮುದ್ರೆಗಳ ಉಪಯೋಗಗಳು- 2023

ಯೋಗ ಎಂದರೇನು? | Yogasana Kannada

ಯೋಗ ಎಂಬ ಎರಡಕ್ಷರಕ್ಕೆ ಅನೇಕ ಅರ್ಥಗಳಿವೆ. ಯೋಗದ ಪಿತಾಮಹಾ ಪಂತಂಜಲಿ ಮಹರ್ಷಿ ಆಗಿದ್ದಾರೆ. ಇಲ್ಲಿ ಸಂಕ್ಷಿಪ್ತವಾಗಿ ಹೇಳುವುದೇನೆಂದರೆ ಮನಸ್ಸು, ಬುದ್ದಿ ಮತ್ತು ಅಹಂಕಾರ, ಇವುಗಳನ್ನು ನಮ್ಮ ಹತೋಟಿಗೆ ತರುವುದೇ ಯೋಗ ಆಗಿದೆ.

ಶತಮಾನ ಕಾಲಗಳಿಂದ ಮಾಡುತ್ತಾ ಬಂದಿರುವ ಯೋಗದಿಂದ ಬಹಳ ಲಾಭವಿದೆ. ‘ ಯೋಗ ‘ ವೆಂದರೆ ಜೋಡಿಸು ಅಥವಾ ಕೂಡಿಸು ಎಂದರ್ಥ. ಅಂದರೆ ನಮ್ಮ ದೇಹದ ಕೈ, ಕಾಲುಗಳನ್ನು ಜೋಡಿಸಿ ಮಾಡುವುದರಿಂದ ಮತ್ತು ಅದರ ಜೊತೆಗೆ ಮನಸ್ಸು,ಬುದ್ದಿ,ಭಾವನೆ ಮತ್ತು ಆಲೋಚನೆಗಳನ್ನು ಕೂಡಿಸುವುದಕ್ಕೆ ಯೋಗ ಎಂದು ಕರೆಯುತ್ತಾರೆ.

ಯೋಗವು ಒಂದು ದಿನ ಮಾಡುವುದು ಕೆಲಸವಲ್ಲ. ಪ್ರತಿನಿತ್ಯ ಬೆಳಗಿನ ಜಾವ ಎದ್ದು ಸೂರ್ಯನು ಉದಿಯಿಸುವ ದಿಕ್ಕಿನಲ್ಲಿ ಕುಳಿತುಕೊಂಡು ಯೋಗ ಮಾಡುವುದು ಉತ್ತಮ. ಹೀಗೆ ಪ್ರತಿನಿತ್ಯ ಯೋಗ ಮಾಡುವುದರಿಂದ ನಮ್ಮ ಬುದ್ದಿ, ದೇಹ ಮತ್ತು ಮನಸ್ಸು ಶಾಂತಿಯಿಂದ ಕೂಡಿರುವುದಲ್ಲದೆ ಆರೋಗ್ಯದಿಂದ ಚೆನ್ನಾಗಿ ಕೂಡಿರುತ್ತದೆ.

ವಿಶ್ವ ಯೋಗ ದಿನಾಚರಣೆ | Yoga Dinacharane

ವಿಶ್ವದ್ಯಂತ ಪ್ರತಿವರ್ಷ ಜೂನ್ 21 ರಂದು ಅಂತ ರಾಷ್ಟ್ರೀಯ ಯೋಗ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಯೋಗವು ಮಾಡುವುದು ಶತಮಾನ ವರ್ಷಗಳಿಂದ ಬಂದ ಕಾಯಕವಾಗಿದೆ. ಮನುಷ್ಯರಿಗೆ ಯೋಗವು ಒಂದು ಕೊಡುಗೆ. ಯೋಗ ಮಾಡುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ. ಯೋಗ ಮಾಡುವುದರಿಂದ ಮನಸ್ಸು ಮತ್ತು ಬುದ್ದಿ ನಮ್ಮ ಹತೋಟಿಗೆ ಬರುತ್ತವೆ.

ಪ್ರಪ್ರಥಮವಾಗಿ ಯೋಗ ದಿನಾಚರಣೆಯನ್ನು 2015 ಜೂನ್ 21 ರಂದು ರಾಜಪಥದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಅಂತರಾಷ್ಟ್ರಿಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿವಿಧ ರಾಷ್ಟ್ರಗಳ ಗಣ್ಯರು ಭಾಗಿಯಾಗಿದ್ದರು. ಭಾಗಿಆಗುವುದಲ್ಲದೆ 21 ಯೋಗ ಸನಗಳನ್ನು ಮಾಡಿದರು.

ರಾಜಪಥದಲ್ಲಿ ನಡೆದ ಅಂತ ರಾಷ್ಟ್ರೀಯ ಯೋಗ ದಿನಾಚರಣೆ ದಿನದಂದು ಸರಿಸುಮಾರು 35,990 ಮಂದಿ ಭಾಗವಹಿಸಿದ್ದರು. ಈ ದಿನದಂದು ನರೇಂದ್ರ ಮೋದಿ ಯೋಗದ ಬಗ್ಗೆ ಭಾಷಣ ಮಾಡಿದರು. ಯೋಗ ಮಾಡುವುದು ಒಂದು ದಿನದ ಅಭ್ಯಾಸವಲ್ಲ.
ಪ್ರತಿನಿತ್ಯ ಬೆಳಿಗ್ಗೆ ಬೇಗನೆ ಎದ್ದು ಯೋಗ ಮಾಡುವುದರಿಂದ ಮನಸ್ಸು,ದೇಹ ಮತ್ತು ಆತ್ಮ ಅಂಶಗಳನ್ನು ಶುದ್ದಿಕರಿಸಲು ಸಹಾಯಕವಾಗುತ್ತದೆ.

ಯೋಗ ಮಾಡುವುದರಿಂದ ಅನೇಕ ರೋಗ ಖಾಯಿಲೆಗಳನ್ನು ನೀವಾರಿಸಬಹುದು. ಕೋವಿಡ್ ನಂತ ರೋಗಕ್ಕೆ ಯೋಗ ಮಾಡುವುದರಿಂದ ಪಾರಾಗಬಹುದು. ಮತ್ತು ಇತ್ತೀಚಿನ ದಿನಮಾನ ಗಳಲ್ಲಿ ಎಲ್ಲರಿಗೂ ಬರುವ ಹೊಟ್ಟೆಯ ಬೊಜ್ಜನ್ನು ಯೋಗ ಮಾಡುವುದರಿಂದ ಕರಗಿಸಬಹುದು.ಯೋಗದಲ್ಲಿ ಒಂದೇ ತರಹದ ಯೋಗವಿರುವುದಿಲ್ಲ. ಯೋಗದಲ್ಲಿ ಸರಿಸುಮಾರು 50 ಕ್ಕೂ ಹೆಚ್ಚು ಯೋಗಾಸನಗಳಿವೆ ಮತ್ತು 100 ಕ್ಕೂ ಹೆಚ್ಚು ಯೋಗ ಮುದ್ರೆಗಳಿವೆ.

ಒಂದೊಂದು ಯೋಗ ಆಸನವು ಮತ್ತು ಮುದ್ರೆಗಳು ಅದರದೇ ಆದ ಆರೋಗ್ಯದ ಮಹತ್ವವನ್ನು ಹೊಂದಿವೆ. ಉದಾ :-ಹೊಟ್ಟೆಯ ಬೊಜ್ಜನು ಕರಗಿಸಲು ವಜ್ರಸನಾ ಯೋಗವು ತುಂಬಾ ಪ್ರಯೋಜನವಿದೆ. ಹೀಗೆ ಯೋಗದ ಆಸನಗಳು ಮತ್ತು ಮುದ್ರೆಗಳು ಮಾಡುವುದರಿಂದ ಸಾಕಷ್ಟು ಆರೋಗ್ಯಕ್ಕೆ ಲಾಭಗಳಿವೆ. ಅವುಗಳ ಲಾಭಗಳು ಏನೆಂದು ಕೆಳಗಡೆ ತಿಳಿದುಕೊಳ್ಳೋಣ

ಯೋಗ ಆಸನಗಳು ಮತ್ತು ಯೋಗಾಸನ ಉಪಯೋಗಗಳು

1. ವೃಕ್ಷಸನಾ | Vrikshasana

ವೃಕ್ಷಸನಾ | Vrikshasana
ವೃಕ್ಷಸನಾ | Vrikshasana

ಈ ಆಸನವು ಮಾಡುವುದರಿಂದ ಶರೀರವು ಎತ್ತರವಾಗಿ ಬೆಳೆಯಲು ಪೂರಕ. ಕಾಲು ಮತ್ತು ತೊಡೆಗಳ ಸ್ನಾಯುಗಳು ಬಲಗೋಳ್ಳುವುದು. ಮನಸ್ಸಿನ ಶಾಂತಂತೆಯನ್ನು ರೂಡಿಸುವುದು. ದೇಹವನ್ನು ಸಮತೋಲನದಲ್ಲಿ ಇಡಬಹುದು. ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

2. ವಜ್ರಸನಾ | Vajrasana

ವಜ್ರಸನಾ | Vajrasana
ವಜ್ರಸನಾ | Vajrasana

ಈ ಆಸನವನ್ನು ಮಾಡುವುದರಿಂದ ಹೊಟ್ಟೆಯ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ರಕ್ತಸಂಚಲನೆ ಹೆಚ್ಚಾಗುವುದು. ಹೊಟ್ಟೆಯ ಬೊಜ್ಜನ್ನು ಕರಿಸುವುದರಲ್ಲಿ ತುಂಬಾ ಸಹಾಯಕವಾಗಿದೆ. ಬೆನ್ನಲುಬು ಗಳನ್ನು ಬಲಿಶಾಲಿಗೊಳಿಸಬಹುದು. ಮೆದುಳನ್ನು ಶಾಂತತೆ ಮತ್ತು ಧ್ಯಾನದಿಂದ ಇಟ್ಟುಕೊಳ್ಳಬಹುದು.

3. ಪದ್ಮಸಾನ | Padmasana

ಪದ್ಮಸಾನ | Padmasana
ಪದ್ಮಸಾನ | Padmasana

ಪದ್ಮಸಾನವು ಒಂದು ಸುಲಭವಾದ ಆ ಸನವಾಗಿದೆ. ಈ ಅಸನವು ಧ್ಯಾನ ಮಾಡುವುದ್ದಕ್ಕೆ ಉತ್ತಮ.
ಈ ಆಸನವು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚುತ್ತದೆ. ಪದ್ಮಸಾನವು ಮಾಡುವುದರಿಂದ ಬೆನ್ನು,ಕೀಲು ಮತ್ತು ಸೊಂಟ ನೋವು ಬೇಗ ನಿವಾರಣೆಯಾಗುತ್ತದೆ. ಈ ಆಸನವನ್ನು ಮಾಡುವುದರಿಂದ ಮುಟ್ಟಿನ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಗರ್ಭಿಣಿಯರು ಈ ಆಸನವನ್ನು ಮಾಡುವುದರಿಂದ ತುಂಬಾ ಅನುಕೂಲವಿದೆ.

4. ತದಾಸನ | Tadasana

ತದಾಸನ | Tadasana
ತದಾಸನ | Tadasana

ಈ ಆಸನವು ಬೆನ್ನಲುಬಿಗೆ ಮತ್ತು ಹೃದಯಕ್ಕೆ ಬಲ ಪಡಿಸುವ ಶಕ್ತಿಯನ್ನು ನೀಡುತ್ತದೆ.
ಜೀರ್ಣಕ್ರಿಯೆಗೆ ಮತ್ತು ಉಸಿರಾಟ ಸಮಸ್ಯೆಗೆ ಈ ಆಸನವು ಬಹಳ ಉಪಯೋಗಕಾರಿ. ಸಮತೋಲಿನ ಶಕ್ತಿ ಕಾಪಾಡಲು ನೆರವು ಧಿರ್ಘವಾಗಿ ಉಸಿರಾಡಲು ಸಹಕಾರಿ. ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮನಸ್ಸಿಗೆ ಶಾಂತಿ ಸಿಗುವುದು.

5. ಚಕ್ರಸಾನ | Chakarasana

 ಚಕ್ರಸಾನ | Chakarasana
ಚಕ್ರಸಾನ | Chakarasana

ಈ ಅಸನವು ಲಿವರ್, ಪಾಂಕ್ರೀಯಾಸ್ ಮತ್ತು ಕಿಡ್ನಿ ಸ್ನಾಯುಗಳನ್ನು ಬಲಿಷ್ಠಗೊಳಿಸುತ್ತದೆ. ಈ ಆಸನವನ್ನು ಮಾಡುವುದರಿಂದ ಅಸ್ತಮಾ ಖಾಯಿಲೆಯನ್ನು ದೂರವಿಡಬಹುದು. ಹೊಟ್ಟೆಯ ಬೊಜ್ಜು ಮತ್ತು ತೋಳುಗಳಲ್ಲಿರುವ ಬೊಜ್ಜು ಕಡಿಮೆ ಆಗುತ್ತದೆ. ಕುತ್ತಿಗೆ ಮತ್ತು ಬುಜ ಭಾಗಗಳಲ್ಲಿ ಕಾಣಿಸುವಂತಹ ನೋವು ಕಡಿಮೆ ಆಗುತ್ತದೆ. ರಕ್ತದೊತ್ತಡ ವನ್ನು ನಿಯಂತ್ರಿಸುತ್ತದೆ.

6. ಧನುರಾಸನ | Dhanurasana

ಧನುರಾಸನ | Dhanurasana
ಧನುರಾಸನ | Dhanurasana

ಧನುರಾಸನ ಮಾಡುವುದರಿಂದ ದೇಹದ ತೂಕ ಇಳಿಕೆ ಮಾಡಬಹುದು. ಸಕ್ಕರೆ ಖಾಯಿಲೆ ವಿರುದ್ಧ ಹೋರಾಡಬಹುದು. ಹೊಟ್ಟೆಗೆ ಸಂಬಂದಿಸಿದ ಅಸ್ವಸ್ಥೆತೆಗಳನ್ನು ಕ್ರಮೇಣ ಗುಣಪಡಿಸುತ್ತದೆ. ಮುಟ್ಟಿನ ಸೆಳೆತವನ್ನು ಸರಾಗಗೊಳಿಸುತ್ತದೆ. ಸಂತಾನೋತ್ಪತಿ ವ್ಯವಸ್ಥೆಯ ಕಾರ್ಯವನ್ನು ಸುಧಾರಿಸುತ್ತದೆ.

ಯೋಗ ಮುದ್ರೆಗಳ ಉಪಯೋಗಗಳು | Mudra Yoga in Kannada

1. ಪ್ರಾಣಮುದ್ರೆ | Prana Mudra

ಪ್ರಾಣಮುದ್ರೆ | Prana Mudra
ಪ್ರಾಣಮುದ್ರೆ | Prana Mudra

ಪ್ರಾಣಮುದ್ರೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು. ದೇಹವನ್ನು ಧೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢಗೊಳಿಸುತ್ತದೆ. ನರ ದೌರ್ಬಲ್ಯ, ಆಯಾಸವನ್ನು ಪರಿಹರಿಸಿ ಶರೀರದಲ್ಲಿ ಲವಲವಿಕೆ ತುಂಬುತ್ತದೆ. ಕಣ್ಣಿನ ದೃಷ್ಟಿ ಹೆಚ್ಚಿಸುತ್ತದೆ.. ಶರೀರದ ತೂಕವನ್ನು ಹೆಚ್ಚಿಸುತ್ತದೆ.

2. ವಾಯು ಮುದ್ರೆ | Vayu Mudra

ವಾಯು ಮುದ್ರೆ | Vayu Mudra
ವಾಯು ಮುದ್ರೆ | Vayu Mudra

ವಾಯುಮುದ್ರೆ ಮಾಡುವುದರಿಂದ ಹೊಟ್ಟೆಯಲ್ಲಿ ಆಗಿರುವ ಗಂಟು ನೋವನ್ನು ನೀವಾರಿಸುತ್ತದೆ. ಮಾನಸಿಕ ಒತ್ತಡ ಕಡಿಮೆಗೊಳಿಸಬಹುದು. ನಿದ್ರಾಹೀನತೆಯಿಂದ ಬಳಲುವವರಿಗೆ ಇದು ತುಂಬಾ ಪ್ರಯೋಜನಕಾರಿ. ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬಹುದು. ಗ್ಯಾಸ್ಟ್ರಿಕ್ ಸಮಸ್ಯೆಗೆ,ಸೊಂಟ ಮತ್ತು ಮಂಡಿ ನೋವಿಗೆ ವಾಯು ಮುದ್ರೆ ತುಂಬಾ ಪ್ರಯೋಜನಕಾರಿ.

3. ಪೃತ್ವಿ ಮುದ್ರೆ | Prithvi Mudra

ಈ ಮುದ್ರೆ ಮಾಡುವುದರಿಂದ ಚರ್ಮ, ಕೂದಲು, ಉಗುರುಗಳ ಸ್ನಾಯುಗಳುಗಳನ್ನು ಆರೋಗ್ಯದಿಂದ ಕಾಪಾಡಿಕೊಳ್ಳಬಹುದು. ಈ ಮುದ್ರೆ ನಮ್ಮ ದೇಹವನ್ನು ಸಕ್ರಿಯಗೊಳಿಸುತ್ತದೆ ಮತ್ತು ಡೈಹಿಕ ದೌರ್ಬಲ್ಯಗಳನ್ನು ಕಡಿಮೆ ಮಾಡುತ್ತದೆ. ಚರ್ಮದ ಕಾಂತಿಯನ್ನು ಪಡೆಯಬಹುದು. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಿಸುತ್ತದೆ. ಸ್ನಾಯು ಮತ್ತು ಮಾಂಸಖಂಡಗಳ ಬೆಳವಣಿಗೆಗೆ ಸಹಕಾರಿ.

4. ಜ್ಞಾನ ಮುದ್ರೆ | Dyana Mudra

ಜ್ಞಾನ ಮುದ್ರೆ | Dyana Mudra

ಜ್ಞಾನ ಮುದ್ರೆ ಮಾಡುವುದರಿಂದ ಮೆದುಳು ಮತ್ತು ಸ್ನಾಯುಗಳಿಗೆ ಚೈತನ್ಯ. ಮಾನಸಿಕ ಒತ್ತಡ ನಿವಾರಣೆ ಹುಚ್ಚು, ಉನ್ಮಾದ ಮತ್ತು ಕೋಪ ನಿವಾರಣೆ ಜ್ಞಾಪಕ ಶಕ್ತಿ ಹೆಚ್ಚುವುದು. ನಿದ್ರಾಹೀನತೆ ನಿವಾರಣೆ.

5. ಶಕ್ತಿ ಮುದ್ರೆ | Shakti mudra

ಶಕ್ತಿ ಮುದ್ರೆ | Shakti mudra
ಶಕ್ತಿ ಮುದ್ರೆ | Shakti mudra

ಶ್ವ್ಶಾಸಕೋಶದ ಕಾರ್ಯಕ್ಷಮತೆಯನ್ನು ಈ ಮುದ್ರೆ ಹೆಚ್ಚಿಸುತ್ತದೆ. ಉಸಿರಾಟದ ತೊಂದರೆಗೆ ಇದು ಉತ್ತಮವಾದ ಮುದ್ರೆ. ಸ್ತ್ರೀಯರ ಮುಟ್ಟಿನ ತೊಂದರೆಗಳನ್ನು ನಿವಾರಿಸುತ್ತದೆ. ಮನಸ್ಸಿನಲ್ಲಿ ಪ್ರಶಾಂತತೆಯನ್ನು ನೆಲೆಸುವಂತೆ ಮಾಡುತ್ತದೆ. ಈ ಮುದ್ರೆ ದೇಹದ ಶಕ್ತಿ ಹೆಚ್ಚಿಸಿಕೊಳ್ಳುವುದರಲ್ಲಿ ಉತ್ತಮವಾಗಿದೆ.

Also Read – ಮೂಲವ್ಯಾಧಿ ರೋಗದ ಲಕ್ಷಣಗಳು ಮತ್ತು ಮನೆಮದ್ದು | Piles Symptoms in Kannada

Leave a Reply