7 ವಿವಿಧ ಪಾಯಸ ರೆಸಿಪಿಗಳು | Different types of payasa recipe in kannada

Shavige payasa recipe in kannada
Image credit – Sudha’s kitchen

1. ಶಾವಿಗೆ ಪಾಯಸ | Shavige Payasa

ಶಾವಿಗೆ ಪಾಯಸ ಮಾಡಲು ಬೇಕಾಗುವ ಪದಾರ್ಥಗಳು

  • ಒಂದು ಪ್ಯಾಕೆಟ್ ಶಾವಿಗೆ
  • ಹಾಲು
  • ಸಕ್ಕರೆ
  • ದ್ರಾಕ್ಷಿ
  • ಗೊಡಂಬಿ
  • ಏಲಕ್ಕಿ
  • ಒಂದು ಚಮಚ ತುಪ್ಪ
  • ಕೇಸರಿದಳ

ಶಾವಿಗೆ ಪಾಯಸ ಮಾಡುವ ವಿಧಾನ

ಶಾವಿಗೆಯನ್ನು ಬಾಣಲೆಯಲ್ಲಿ ತುಪ್ಪ ಹಾಕಿ ಹುರಿದುಕೊಳ್ಳುವುದು.ಒಲೆಯ ಮೇಲೆ ಪಾತ್ರೆಯಲ್ಲಿ ನೀರಿಡಿ.ನೀರು ಕುದಿದ ಮೇಲೆ ಅಳತೆಗೆ ತಕ್ಕಷ್ಟು ಸಕ್ಕರೆಯನ್ನು ಹಾಕಿ.ಸಕ್ಕರೆ ಕರಗಿದ ಮೇಲೆ ಕೆಳಗಿಳಿಸಿ.ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೊಡಂಬಿಯನ್ನು ಶಾವಿಗೆಗೆ ಹಾಕಿ ಏಲಕ್ಕಿ ಪುಡಿ ಮತ್ತು ಕೇಸರಿದಳವನ್ನು ಹಾಕಿ ಕಾದು ಆರಿದ ಹಾಲನ್ನು ಹಾಕಿ ಸೌಟಿನಿಂದ ಆಡಿಸಿ ಮುಚ್ಚಿಡಿ.ಬೇಕಾದಾಗ ಮಾಡಿ ಬಡಿಸಿಕೊಳ್ಳಬಹುದು.

2. ಗಸಗಸೆ ಪಾಯಸ | Gasagase Payasa

ಗಸಗಸೆ ಪಾಯಸ ಮಾಡಲು ಬೇಕಾಗುವ ಪದಾರ್ಥಗಳು

  • ಗಸಗಸೆ
  • ಬೆಲ್ಲ
  • ತೆಂಗಿನಕಾಯಿ ಒಂದು ಹೋಳು
  • ದ್ರಾಕ್ಷಿ
  • ಗೊಡಂಬಿ
  • ಹಾಲು

ಗಸಗಸೆ ಪಾಯಸ ಮಾಡುವ ವಿಧಾನ

ಶುದ್ಧಗೊಳಿಸಿದ ಗಸೆಗಸೆ ಮತ್ತು ತೆಂಗಿನತುರಿಯನ್ನು ಒರಳಿನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಲೆಯ ಮೇಲೆ ಪಾತ್ರೆಯಲ್ಲಿ ಹಾಕಿ ಇಡಿ.ಬೆಲ್ಲ ಹೆರೆದು ಗಸೆಗಸೆ, ತೆಂಗಿನತುರಿ ರುಬ್ಬಿದ ಮಿಶ್ರಣಕ್ಕೆ ಹಾಕಿ.ಏಲಕ್ಕಿ, ಗೊಡಂಬಿ, ದ್ರಾಕ್ಷಿಯನ್ನು ಬೆರೆಸಿ,ಸ್ವಲ್ಪ ಹಾಲು ಹಾಕಿ ಕುದಿಸಿ.ಬೆಕ್ಕಿದರೆ ಬಾದಾಮಿಯನ್ನು ಹಾಕಬಹುದು.ಸ್ವಲ್ಪ ನೀರು ಹಾಕಿ ಪಾಯಸವನ್ನು ತೆಳುವಾಗಿಯೂ ಮಾಡಬಹುದು.

3. ಕಡಲೆಬೇಳೆ ಪಾಯಸ | Kadle Bele Payasa

ಕಡಲೆಬೇಳೆ ಪಾಯಸ ಮಾಡಲು ಬೇಕಾಗುವ ಪದಾರ್ಥಗಳು

  • ಕಡಲೆಬೇಳೆ ಕಾಲು ಕೆ.ಜಿ
  • ಬೆಲ್ಲ
  • ಏಲಕ್ಕಿ
  • ದ್ರಾಕ್ಷಿ
  • ಗೊಡಂಬಿ
  • ಒಂದು ಸಣ್ಣ ಬಟ್ಟಲು ಹಾಲು
  • ಒಂದು ಹೋಳು ತೆಂಗಿನಕಾಯಿ

ಕಡಲೆಬೇಳೆ ಪಾಯಸ ಮಾಡುವ ವಿಧಾನ

ಕಡಲೆಬೇಳೆಯನ್ನು ನೀರಿನಲ್ಲಿ ಬೇಯಿಸಿ. ಬೆಲ್ಲ ಹಾಕಿ. ತೆಂಗಿನತುರಿಯನ್ನು ಬೆರೆಸಿ, ( ಬೇಕಿದ್ದರೆ ಅರ್ಧ ಚಟಾಕು ರವೆ ಅಥವಾ ರವೆ ಅಥವಾ ಅಕ್ಕಿ ತರಿ ಹುರಿದು ಬೆಂದ ಕಡಲೆಬೇಳೆಗೆ ಬೆರಸಬಹುದು.) ಏಲಕ್ಕಿ, ದ್ರಾಕ್ಷಿ, ಗೊಡಂಬಿ ಇವುಗಳನ್ನು ಪಾಯಸಕ್ಕೆ ಬೆರೆಸಿ ಹಾಲು ಕುದಿಸಿ.
ಇದೇ ಮಾದರಿಯಲ್ಲಿ ಹೆಸರುಬೇಳೆ ಪಾಯಸವನ್ನು ಮಾಡಬಹುದು. ( ಹೆಸರುಬೇಳೆಯನ್ನು ಹುರಿದು ಬೇಯಿಸಬೇಕು).

Also Read – 10 ರುಚಿಯಾದ ಸಂಡಿಗೆ ರೆಸಿಪಿಗಳು | ಅವಲಕ್ಕಿ ಸಂಡಿಗೆ | ಅರಳು ಸಂಡಿಗೆ

4. ಸಬ್ಬಕ್ಕಿ ಪಾಯಸ | Sabbakki Payasa

ಸಬ್ಬಕ್ಕಿ ಪಾಯಸ ಮಾಡಲು ಬೇಕಾಗುವ ಪದಾರ್ಥಗಳು

  • ಸಬ್ಬಕ್ಕಿ ಕಾಲು ಕೆ.ಜಿ
  • ಹಾಲು
  • ಸಕ್ಕರೆ
  • ಗೊಡಂಬಿ
  • ದ್ರಾಕ್ಷಿ
  • ಕೇಸರಿದಳ

ಸಬ್ಬಕ್ಕಿ ಪಾಯಸ ಮಾಡುವ ವಿಧಾನ

ಸಬ್ಬಕ್ಕಿಯನ್ನು ಹುರಿದು ನೀರಿನಲ್ಲಿ ಬೇಯಿಸಿ.ಸಕ್ಕರೆ ಸೇರಿಸಿ, ಗೊಡಂಬಿ, ದ್ರಾಕ್ಷಿಗಳನ್ನು ತುಪ್ಪದಲ್ಲಿ ಹುರಿದು ಕೇಸರಿ ದಳ ಹಾಗೂ ಏಲಕ್ಕಿ ಪುಡಿಯೊಂದಿಗೆ ಪಾಯಸಕ್ಕೆ ಬೆರೆಸಿ ಪಾತ್ರೆ ಕೆಳಗಿಡಿ. ಕಾದು ಆರಿದ ಹಾಲನ್ನು ಪಾಯಸಕ್ಕೆ ಬೆರೆಸಿ.

5. ನವಿಲುಕೋಸು ಪಾಯಸ | Navilukosu Payasa

ನವಿಲುಕೋಸು ಪಾಯಸ ಮಾಡಲು ಬೇಕಾಗುವ ಪದಾರ್ಥಗಳು

  • 1 ಕಪ್ ಕಡಲೆಬೇಳೆ
  • 1 ಮೀಡಿಯಂ ಸೈಜ್ ನವಿಲುಕೋಸು ಗಡ್ಡೆ
  • ಗಸಗಸೆ
  • 3 ಏಲಕ್ಕಿ
  • ಒನದ್ರಾಕ್ಷಿ
  • ಒನಕೊಬ್ಬರಿ
  • 3 ಕಪ್ ಬೆಲ್ಲ

ನವಿಲುಕೋಸು ಪಾಯಸ ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ಕಡಲೆಬೇಳೆ ಕುದಿಯಲು ಹಾಕಬೇಕು. ನವಿಲುಕೋಸಿನ ಸಿಪ್ಪೆ ತೆಗೆದು ಹಾಕಬೇಕು. ಆ ಹೆರಕಲನ್ನು ನೀರಿನಲ್ಲಿ ಹಾಕಿ ತೊಳೆದು, ನೀರನ್ನೆಲ್ಲ ಹಿಂಡಿ ತೆಗೆಯಬೇಕು.ಬಾಣಲೆಯಲ್ಲಿ ಒಂದು ಸೌಟು ತುಪ್ಪ ಹಾಕಿ, ಹೆಚ್ಚಿಟ್ಟುಕೊಂಡ ನವಿಲುಕೋಸನ್ನು ಬಂಗಾರ ಬಣ್ಣ ಬರುವವರೆಗೆ ಹುರಿಯಬೇಕು.ಕಡಲೆಬೇಳೆ ಅರ್ಧ ಬೆಂದದೊಡನೆ ಹುರಿದ ನವಿಲುಕೋಸನ್ನು ಅದಕ್ಕೆ ಹಾಕಬೇಕು. ಎರಡು ಚೆನ್ನಾಗಿ ಬೆಂದಮೇಲೆ, ನೀರು ಹೆಚ್ಚಾಗಿದ್ದಾರೆ ಬಸಿದು ಚೆಲ್ಲಬೇಕು. ಕಡಗೋಲಿನಿಂದ ಬೆಳೆಯನ್ನು ಕಡೆಯಬೇಕು.ನಂತರ ಬೆಲ್ಲ ಹಾಕಿ ಚೆನ್ನಾಗಿ ಕುದಿಸಬೇಕು.
ಅದಕ್ಕೆ ಹುರಿದ ಗಸೆಗಸೆ, ಏಲಕ್ಕಿ ಕುಟ್ಟಿ ಹಾಕಬೇಕು. ಕೊಬ್ಬರಿ ತುರಿ, ಒಣ ದ್ರಾಕ್ಷಿ ಹಾಕಿ, ಸ್ವಲ್ಪ ಕುದಿಸಿ ಕೆಳಗೆ ಇಳಿಸಿರಿ.

6. ಕುಂಬಳಕಾಯಿ ಪಾಯಸ |Kumbalakai Payasa

ಕುಂಬಳಕಾಯಿ ಪಾಯಸ ಮಾಡಲು ಬೇಕಾಗುವ ಪದಾರ್ಥಗಳು

  • 2 ಕಪ್ ಕಡಲೆಬೇಳೆ
  • 8 ಕಪ್ ತುರಿದುಕೊಂಡ ಕುಂಬಳಕಾಯಿತುರಿ
  • ಒಂದು ಬಟ್ಟಲು ಹಸಿಕೊಬ್ಬರಿ
  • 4 ಏಲಕ್ಕಿ
  • ಕಾಲು ಜಾಜಿಕಾಯಿ
  • ಗಸಗಸೆ
  • ಒಂದು ಸೌಟು ಪುಟಾಣಿಹಿಟ್ಟು
  • 5 ಕಪ್ ಬೆಲ್ಲ

ಕುಂಬಳಕಾಯಿ ಪಾಯಸ ಮಾಡುವ ವಿಧಾನ

ಕಡಲೆಬೇಳೆಯನ್ನು ಕುದಿಯಲು ಹಾಕಬೇಕು.ಕೇಸರಿಬಣ್ಣದ ಬಲಿತ ಕುಂಬಳಕಾಯಿ ಹೊಳನ್ನು ಹೆರೆಯಬೇಕು.ಅದನ್ನು ಸ್ವಲ್ಪ ತುಪ್ಪ ಹಚ್ಚಿ ಹುರಿಯಬೇಕು. ಕುದಿಯುವ ಬೇಳೆಗೆ ಹೆರಚಿದ ಕುಂಬಳಕಾಯಿ ಹಾಕಬೇಕು. ಕೊಬ್ಬರಿತುರಿಯನ್ನು ಹಾಕಬೇಕು. ಬೇಳೆ, ಕುಂಬಳಕಾಯಿ ಮೃದುವಾಗಿ ಕುದಿದ ನಂತರ ಕಡೆಗೋಲಿನಿಂದ ಅದನ್ನು ಕೆಡೆಯಬೇಕು.ಬೆಲ್ಲ ಕೂಡಿಸಿ ಕುದಿಸಬೇಕು. ಮೇಲೆ ಹೇಳಿದ ಸಾಮಗ್ರಿಗಳನೆಲ್ಲ ಹಾಕಿ, ಗಟ್ಟಿಯಾಗುವರೆಗು ಕುದಿಸಿರಿ.ಈ ಪಾಯಸವನ್ನು ಚಪಾತಿಯ ಜೊತೆಗೂ ತಿನ್ನಬಹುದು. ಹಾಲು,ತುಪ್ಪ ಹಾಕಿ ಹಾಗೆಯೇ ಊಟ ಮಾಡಬಹುದು.

7. ಪಡವಲಕಾಯಿ ಪಾಯಸ | Padavalakayi Payasa

ಪಡವಲಕಾಯಿ ಪಾಯಸ ಮಾಡಲು ಬೇಕಾಗುವ ಪದಾರ್ಥಗಳು

  • 2 ಕಪ್ ಹೆಸರುಬೇಳೆ
  • 1 ಪಡವಲಕಾಯಿ
  • 2 ಕಪ್ ಬೆಲ್ಲ
  • ಏಲಕ್ಕಿ
  • ಗಸಗಸೆ
  • ಒಣಕೊಬ್ಬರಿ ತುರಿ

ಪಡವಲಕಾಯಿ ಪಾಯಸ ಮಾಡುವ ವಿಧಾನ

ಪಡವಲಕಾಯಿ ಬೀಜ ತೆಗೆದು, ಹೆಚ್ಚಿ ಸಣ್ಣ ಹೋಳುಗಳನ್ನು ಮಾಡಿ ನೀರಲ್ಲಿ ಹಾಕಬೇಕು
ಸ್ವಲ್ಪ ತುಪ್ಪ ಹಾಕಿ ಹೆಸರುಬೇಳೆಯನ್ನು ಕೆಂಪು ವಾಸನೆ ಬರುವವರೆಗೂ ಹುರಿಯಬೇಕು.ಬೇಳೆ ಕುದಿಯಲು ಹಾಕಬೇಕು.ಬೇಳೆ ಅರ್ಧ ಬೆಂದೊಡನೆ ಪಡವಲಕಾಯಿ ಹೋಳು ಹಾಕಿ ಕುದಿಸಲಬೇಕು.ಎರಡು ಬಾರಿ ಕುದಿದು ಮೃದುವಾದ ಮೇಲೆ, ಬೆಲ್ಲ ಹಾಕಬೇಕು.

ತಳ ಹೊತ್ತದಂತೆ ಸೌಟಿನಿಂದ ತಿರುವುತ್ತಿರಬೇಕು.ಬೆಲ್ಲ ಸಹಿತವಾಗಿ ಚೆನ್ನಾಗಿ ಬೆಂದ ಮೇಲೆ,ಮೇಲೆ ಹೇಳಿದ ಎಲ್ಲ ಸಾಮಾನು ಹಾಕಿ ಸ್ವಲ್ಪ ಕುದಿಸಬೇಕು.

Also Read – 8 Different variety of dosa recipe in Kannada

Leave a Reply