1. ಬೇಳೆ ಸಾಂಬಾರ
ಬೇಳೆ ಸಾರು ಮಾಡಲು ಬೇಕಾಗುವ ಪದಾರ್ಥಗಳು
- ಒಂದು ಪಾವು ತೊಗರಿ ಬೇಳೆ
- ಹುಣಸೆಹಣ್ಣು
- ಮೆಣಸಿನಕಾಯಿ ಪುಡಿ ಎರಡು ಚಮಚ
- ರುಚಿಗೆ ತಕ್ಕಷ್ಟು ಉಪ್ಪು
- ಒಗ್ಗರಣೆಗೆ ತುಪ್ಪ
- ಸಾಸಿವೆ
- ಒಂದು ಚೂರು ಬೆಲ್ಲ
- ತೆಂಗಿನಕಾಯಿ ಹಾಲು
- ಒಂದು ಕಂತೆ ಕೊತಂಬರಿ ಸೊಪ್ಪು
- ಇಂಗು
- ಒಂದು ಚಿಟಿಗೆ ಅರಿಶಿನ
ಬೇಳೆ ಸಾಂಬಾರ ಮಾಡುವ ವಿಧಾನ
ಬೇಳೆಯನ್ನು ಒಂದು ಪಾತ್ರೆಯಲ್ಲಿ ನೀರಿಟ್ಟು ಚೆನ್ನಾಗಿ ಬೇಯಿಸಿ ( ಕುಕ್ಕರನಲ್ಲಿ ಬೇಯಿಸಬಹುದು). ಬೇಳೆ ಬೆಂದ ಮೇಲೆ ಎರಡು ಚಮಚ ಮೆಣಸಿನಪುಡಿ ಹಾಕಿ ಚೆನ್ನಾಗಿ ಕುದಿಸಿ. ಸ್ವಲ್ಪ ಹುಣಿಸೆಹಣ್ಣು ಕಿವಿಚಿ ಹಿಂಡಿ ಬೆಲ್ಲ ಮತ್ತು ಉಪ್ಪು ಹಾಕಿ. ಕೊತ್ತಂಬರಿ, ಕರಿಬೇವು ಸೊಪ್ಪನ್ನು ಹಾಕಿ. ಎರಡು ಟೊಮೇಟೊ ಹಣ್ಣುಗಳನ್ನು ಸಣ್ಣಗೆ ಹೆಚ್ಚಿ ಸಾರಿಗೆ ತುರಿದು ಹಾಲನ್ನು ಸಾರಿಗೆ ಸೇರಿಸಿ.ಸಾರು ಚೆನ್ನಾಗಿ ಮರಳಿದ ನಂತರ ಕೆಳಗಿಳಿಸಿ ಇಂಗು, ಸಾಸಿವೆ ಒಗ್ಗರಣೆ ಹಾಕಿ.
2. ಮೆಣಸಿನ ಸಾರು
ಮೆಣಸಿನ ಸಾರು ಮಾಡಲು ಬೇಕಾಗುವ ಪದಾರ್ಥಗಳು
- ಹತ್ತು ಕಾಳು ಮೆಣಸು
- ಎರಡು ಚಮಚ ಜೀರಿಗೆ
- ತುಪ್ಪ
- ಕರಿಬೇವು ಹಾಗೂ ಕೊತಂಬರಿ ಸೊಪ್ಪು
- ಉಪ್ಪು ಮತ್ತು ಸಾಸಿವೆ
ಮೆಣಸಿನ ಸಾರು ಮಾಡುವ ವಿಧಾನ
ಮೆಣಸು ಮತ್ತು ಜೀರಿಗೆ ಚೆನ್ನಾಗಿ ಕುಟ್ಟಿಕೊಳ್ಳಿ.ಬಾಣಲೆಯಲ್ಲಿ ತುಪ್ಪದಲ್ಲಿ ಸಾಸಿವೆ ಒಗ್ಗರಣೆ ಹಾಕಿ.ಕುಟ್ಟಿಟ್ಟುಕೊಂಡ ಮೆಣಸು ಮತ್ತು ಜೀರಿಗೆ ಪುಡಿ ಹಾಕಿ ನೀರು ಬೆರೆಸಿ,ನೀರು ಕುದಿದ ಬಳಿಕ ಉಪ್ಪು, ಕರಿಬೇವು ಹಾಗೂ ಕೊತ್ತಂಬರಿ ಸೊಪ್ಪು ಹಾಕಿ.
3.ಹುರುಳಿ ಸಾರು
ಹುರುಳಿ ಸಾರು ಮಾಡಲು ಬೇಕಾಗುವ ಪದಾರ್ಥಗಳು
- ಅರ್ಧ ಕೆ.ಜಿ ಹುರುಳಿ
- ಐದಾರು ಒಣಮೆಣಸಿನಕಾಯಿ
- ಒಂದು ಹೋಳು ತೆಂಗಿನಕಾಯಿ
- ಕೊತಂಬರಿ ಬೀಜ ಕಾಲು ಚಟಾಕು
- ಜೀರಿಗೆ
- ಸ್ವಲ್ಪ ಹುಣಿಸೆ ಹಣ್ಣು
- ರುಚಿಗೆ ತಕ್ಕಷ್ಟು ಉಪ್ಪು
- ಒಗ್ಗರಣೆಗೆ ಸಾಸಿವೆ ತುಪ್ಪ
ಹುರುಳಿ ಸಾರು ಮಾಡುವ ವಿಧಾನ
ಆರಿಸಿದ ಹುರುಳಿಯನ್ನು ಕಾದ ನೀರಿನಲ್ಲಿ ಚೆನ್ನಾಗಿ ಬೇಯಿಸಿ ಮೆಣಸಿನಕಾಯಿ, ಕೊತಂಬರಿ ಬೀಜ, ಜೀರಿಗೆ, ತೆಂಗಿನ ತುರಿ ಎಲ್ಲವನ್ನೂ ಒರಳಿನಲ್ಲಿ ಹಾಕಿ ರುಬ್ಬಿಟ್ಟುಕೊಳ್ಳಿ. ಚೆನ್ನಾಗಿ ಮೃದುವಾಗಿ ಬೆಂದ ಹುರುಳಿಯನ್ನು ಸ್ವಲ್ಪ ತೆಗೆದು ರುಬ್ಬುವಾಗ ಸೇರಿಸಿರಬೇಕು.ಇದರಿಂದ ರುಬ್ಬಿದ ಮಸಾಲೆಯನ್ನು ಬೆಂದ ಹುರುಳಿಗೆ ಸೇರಿಸಿ ಸೌಟಿನಲ್ಲಿ ಕಲಕಿ. ಹುಣಸೆಹಣ್ಣು ಹಿಂಡಿ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕುದಿಸಿ.ಕುದಿದ ಸಾರಿಗೆ ಒಗ್ಗರಣೆ ಹಾಕಿ. ಬೆಕ್ಕಿದರೆ ಬೇಯಿಸಿದ ಹುರುಳಿಯನ್ನು ಪುರಾ ತೆಗೆದಿಟ್ಟುಕೊಂಡು ಉಸಲಿಯಂತೆ ತಿನ್ನಬಹುದು.( ಹೆಸರುಕಾಳು ಉಸಲಿಯಂತೆ ತಯಾರಿಸಬಹುದು ) ಹುರುಳಿ ತೆಗೆದು ಕಟ್ಟಿಗೆ ಮಸಾಲೆಯನ್ನು ಹಾಕಿ. ಒಗ್ಗರಣೆ ಹಾಕಬೇಕು. ಹುರುಳಿ ರುಚಿಯು ಇರುತ್ತದೆ.
Also Read – 8 Different variety of dosa recipe in kannada
4. ಟೊಮೆಟೊ ಸಾರು
ಟೊಮೆಟೊ ಸಾರು ಮಾಡಲು ಬೇಕಾಗುವ ಪದಾರ್ಥಗಳು
- ಅರ್ಧ ಕೆ.ಜಿ. ಟೊಮೇಟೊ
- ತೆಂಗಿನತುರಿ ರಸ
- ಮೆಣಸಿನಪುಡಿ ( ಸಾರಿನ )
- ಕೊತಂಬರಿ ಸೊಪ್ಪು
- ಜೀರಿಗೆ
- ಸಾಸಿವೆ
- ಉಪ್ಪು
ಟೊಮೆಟೊ ಸಾರು ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ನೀರಿಟ್ಟು ನೀರು ಕುದಿದ ಮೇಲೆ ಚೆನ್ನಾಗಿ ತೊಳೆದ ಟೊಮೇಟೊ ಹಣ್ಣುಗಳನ್ನು ಹೆಚ್ಚಿ ಹಾಕಿ. ಅದು ಕುದಿದ ಬಳಿಕ ಮೆಣಸಿನಪುಡಿ ಒಂದು ಚಮಚ ಹಾಕಿ.ತೆಂಗಿನತುರಿ ರಸ, ಕೊತಂಬರಿ ಸೊಪ್ಪು ಹಾಕಿ ಕುದಿಯಲು ಬಿಡಿ. ಜೊತೆಗೆ ಉಪ್ಪನ್ನು ಹಾಕಿ ಚೆನ್ನಾಗಿ ಕುದಿದ ಬಳಿಕ ಕೆಳಗಿಳಿಸಿ. ಸಾಸಿವೆ, ಜೀರಿಗೆ ಇವುಗಳ ಒಗ್ಗರಣೆ, ತುಪ್ಪ ಬಳಸಿ.
5. ಗೊಡ್ಡು ಸಾರು
ಗೊಡ್ಡು ಸಾರು ಮಾಡಲು ಬೇಕಾಗುವ ಪದಾರ್ಥಗಳು
- ಒಂದು ನಿಂಬೆಕಾಯಿ ಗಾತ್ರ ಹುಣಿಸೆ ಹಣ್ಣು
- ಮೆಣಸಿನ ಪುಡಿ ಒಂದು ಚಮಚ
- ಒಂದು ಉಂಡೆ ಕಾಫಿ ಬೆಲ್ಲ
- ಸ್ವಲ್ಪ ಇಂಗು
- ಸಾಸಿವೆ
- ತುಪ್ಪ
- ಒಂದು ಚಿಟಿಕೆ ಅರಿಶಿನ ಪುಡಿ
- ಒಣಮೆಣಸಿನಕಾಯಿ
- ಕೊತಂಬರಿ ಸೊಪ್ಪು
- ಅರ್ಧ ಚಮಚ ಜೀರಿಗೆ
ಗೊಡ್ಡು ಸಾರು ಮಾಡುವ ವಿಧಾನ
ಆಲೂಮಿನಿಯಂ ಪಾತ್ರೆಯನ್ನು ಒಲೆಯ ಮೇಲಿಟ್ಟು ಒಂದು ಚಮಚ ತುಪ್ಪ ಹಾಕಿ. ಸಾಸಿವೆ ಮತ್ತು ಜೀರಿಗೆ ಹಾಕಿ ಸಿಡಿಸಿ ಬಿಡಿಸಿಟ್ಟು ಮೆಣಸಿನಕಾಯಿಯನ್ನು ಸುರಿದು, ಕೊತ್ತಂಬರಿ ಸೊಪ್ಪು, ಕರಿಬೇವು, ಇಂಗು, ಅರಿಶಿನ ಪುಡಿ ಸೇರಿಸಿ. ನೀರು ಬೆರೆಸಿ ಒಂದು ಚಮಚ ಮೆಣಸಿನಪುಡಿ ಸೇರಿಸಿ. ನೀರು ಕುದಿದ ಮೇಲೆ ಹುಣಸೆಹಣ್ಣನ್ನು ಕಿವಿಚಿ ತೆಗೆದ ಚರಟವನ್ನು ನೀರಿಗೆ ಹಿಂಡಿ ಬೆಲ್ಲ ಮತ್ತು ಉಪ್ಪು ಸುರಿದು ನೀರು ಕುದಿಸಿ. ಈ ಸಾರಿಗೆ ಹುಣಸೆಹಣ್ಣಿನ ರುಚಿ, ಅನ್ನದೊಡನೆ ಕಲಸಿ ತಿನ್ನಲು ರುಚಿಯಾಗಿರುತ್ತದೆ.
6. ಅವರೇಕಾಳು ಸಾರು
ಅವರೇಕಾಳು ಸಾರು ಮಾಡಲು ಬೇಕಾಗುವ ಪದಾರ್ಥಗಳು
- ಅರ್ಧ ಕೆ.ಜಿ ಅವರೇಕಾಳು
- ಸಾರಿನ ಪುಡಿ 2 ಚಮಚ
- ಕೊತಂಬರಿ ಸೊಪ್ಪು
- ಇಂಗು
- ಉಪ್ಪು
- ತೊಗರಿಬೇಳೆ ಕಾಲು ಕೆ.ಜಿ.
- ಕರಿಬೇವು
- ಹುಣಿಸೆಹಣ್ಣು
- ಸಾಸಿವೆ
- ತುಪ್ಪ
ಅವರೇಕಾಳು ಸಾರು ಮಾಡುವ ವಿಧಾನ
ತೊಗರಿಬೇಳೆ ಮತ್ತು ಅವರೇಕಾಳುಗಳನ್ನು ಕುಕ್ಕರ್ನಲಿಟ್ಟು ಬೇಯಿಸಿ. ಬೆಂದ ಮಿಶ್ರಣವನ್ನು ಪಾತ್ರೆಯೊಂದಕ್ಕೆ ಸುರಿದು ಸಾರಿನಪುಡಿಯನ್ನು ಹಾಕಿ ಒಲೆಯ ಮೇಲಿಟ್ಟು ಕುದಿಸಿ.ಕೊತಂಬರಿ ಹಾಗೂ ಕರಿಬೇವು ಸೊಪ್ಪು ಬಿಡಿಸಿ ಹಾಕಿ. ಹುಣಸೆಹಣ್ಣನ್ನು ಹಿಂಡಿ ಉಪ್ಪು ಹಾಕಿ.ಚೆನ್ನಾಗಿ ಕುದಿದ ಬಳಿಕ ಕೆಳಗಿಳಿಸಿ.ಒಂದು ಬಾಣಲೆಯಲ್ಲಿ ತುಪ್ಪ ಹಾಕಿ.ಕಾದ ಮೇಲೆ ಸಾಸಿವೆ ಹಾಕಿ ಸಿಡಿಸಿ. ಇಂಗು ಸೇರಿಸಿ ಒಗ್ಗರಣೆಯನ್ನು ಸಾರಿಗೆ ಹಾಕಿ ಸೌಟಿನಲ್ಲಿ ಕಲಕಿ.
7. ಮೆಂತ್ಯದ ಸಾರು
ಮೆಂತ್ಯದ ಸಾರು ಮಾಡಲು ಬೇಕಾಗುವ ಪದಾರ್ಥಗಳು
- ಕಾಲು ಕೆ.ಜಿ. ತೊಗರಿಬೇಳೆ
- ಕಾಲು ಚಟಾಕು ಮೆಂತ್ಯ
- ಹುಣಸೆಹಣ್ಣು
- ಕೊತ್ತಂಬರಿ ಸೊಪ್ಪು
- ಸಾರಿನ ಪುಡಿ
- ಇಂಗು
- ಉಪ್ಪು
- ಕರಿಬೇವು
- ಸಾಸಿವೆ
- ತುಪ್ಪ
ಮೆಂತ್ಯದ ಸಾರು ಮಾಡುವ ವಿಧಾನ
ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ತೊಗರಿಬೇಳೆ ಮತ್ತು ಮೆಂತ್ಯ ಇವೆರಡನ್ನೂ ಹಾಕಿ ಒಲೆಯ ಮೇಲಿಟ್ಟು ಬೇಯಿಸಿ. ಬೆಂದ ಮೇಲೆ ಸಾರಿನ ಪುಡಿ ಹಾಕಿ.ತಕ್ಕಷ್ಟು ನೀರು ಬೆರೆಸಿ.ಕೊತ್ತಂಬರಿ ಸೊಪ್ಪು,ಉಪ್ಪು,ಹುಣಸೆಹಣ್ಣಿನ ಚರಟ ಹಾಕಿ ಚೆನ್ನಾಗಿ ಕುದಿಸಿ ತುಪ್ಪದಲ್ಲಿ ಇಂಗು, ಸಾಸಿವೆಯ ಒಗ್ಗರಣೆ ಮಾಡಿ ಸಾರಿಗೆ ಹಾಕಿ.
Also Read – 9 Different Types of Rice Recipes in Kannada