ಕ್ಯಾರೆಟ್ ಉಪಯೋಗಗಳು | 9 Benefits of carrot in Kannada

ಕ್ಯಾರೆಟ್ ಬಗ್ಗೆ ಮಾಹಿತಿ | Carrot in Kannada

ಕ್ಯಾರೆಟ್ ಶತಮಾನ ವರ್ಷಗಳ ಕಾಲದಿಂದಲೂ ಸೇವಿಸುವ ತರಕಾರಿ ಆಗಿದೆ . ಕ್ಯಾರೆಟ್ ಗಡ್ಡೆ ರೂಪದಲ್ಲಿ ಬೆಳೆಯುವ ತರಕಾರಿ . ಕ್ಯಾರೆಟ್ ನೋಡಲು ಕೇಸರಿ ಮಾತ್ರವಲ್ಲದೆ ಹಳದಿ,ಬಿಳಿ, ಕೆಂಪು ಮತ್ತು ನೇರಳೆ ಬಣ್ಣಗಳಳಿ ಇರುತ್ತವೆ. ಕ್ಯಾರೆಟ್ ಗಳಲ್ಲಿ ಎರಡು ತರಹ ಒಂದು ಸಿಹಿ ಬರಿತ ಮತ್ತೊಂದು ಸಿಹಿ ರಹಿತ . ಕ್ಯಾರೆಟ್ ನೋಡಲು ಚಿಕ್ಕದಾದರೂ ಅದನ್ನು ತಿನ್ನುವುದರಿಂದ ಬಹಳ ದೊಡ್ಡ ಮಹತ್ವವಿದೆ.

ಕ್ಯಾರೆಟ್ ಉಪಯೋಗಗಳು | Benefits of carrot in Kannada

ಕ್ಯಾರೆಟ್ ತಿನ್ನುವುದರಿಂದ ಮತ್ತು ಅದರ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕ್ಯಾರೆಟ್ ಸಾಮಾನ್ಯವಾಗಿ ಎಲ್ಲರೂ ತಿನ್ನುವ ಮತ್ತು ಇಷ್ಟಪಡುವ ತರಕಾರಿ, ಕ್ಯಾರೆಟ್ ಅನ್ನು ಬರೆಬಾಯಿಂದ ತಿನ್ನಲು ತುಂಬಾ ರುಚಿಕರ ಆಗಿರುತ್ತದೆ.

ಕ್ಯಾರೆಟ್ ನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಬೀಟಾ ಕೇರೋಟಿನ್ ಮತ್ತು ಆಂಟಿ ಒಕ್ಸಿಡಂಟ್ಸ್ ಗಳು ಒಳಗೊಂಡಿವೆ. ಆದರಿಂದ ಯಾವುದೇ ವಿಟಮಿನ್ ಎ,ಸಿ ಮಾತ್ರೆಗಳು ತೆಗೆದುಕೊಳ್ಳಲು ಅವಶ್ಯಕತೆ ಇಲ್ಲ. ಕ್ಯಾರೆಟ್ ಅನ್ನು ವಿವಿಧ ರೀತಿಯಲ್ಲಿ ಅಂದರೆ ಕ್ಯಾರೆಟ್ ಸಲಾಡ್, ಕ್ಯಾರಟ್ ಜ್ಯೂಸು ಮತ್ತು ಕ್ಯಾರಟ್ ಪಲ್ಯ ಹೀಗೆ ಮಾಡಿ ಸೇವಿಸುವುದರಿಂದ ದೇಹಕ್ಕೆ ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನವಿದೆ.

ಕ್ಯಾರೆಟ್ ಉಪಯೋಗಗಳು | Benefits of carrot in Kannada

ವಾರದಲ್ಲಿ 2-3 ಬಾರಿ ಕ್ಯಾರೆಟ್ ಸೇವಿಸುವುದರಿಂದ ಮತ್ತು ಕ್ಯಾರೆಟ್ ಜ್ಯೂಸು ಕುಡಿಯುವುದರಿಂದ ಆಗುವ ಉಪಯೋಗಗಳು ಏನು ಅಂತ ತಿಳಿದುಕೊಳ್ಳೋಣ

1. ಕಣ್ಣಿನ ದೃಷ್ಟಿಗೆ ಒಳ್ಳೆಯದು

ಕ್ಯಾರೆಟ್ ನಲ್ಲಿ ಹೆಚ್ಚಾಗಿ ವಿಟಮಿನ್ ಎ ಇರುವುದರಿಂದ ಕಣ್ಣಿನ ದೃಷ್ಟಿಗೆ ತುಂಬಾ ಚೆನ್ನಾಗಿ ಒಳ್ಳೆಯದು. ಅಧ್ಯಯನ ಪ್ರಕಾರ ವಿಟಮಿನ್ ಎ ದೇಹದಲ್ಲಿ ಕಡಿಮೆ ಆಗುತ್ತಾ ಬಂದರೆ ರಾತ್ರಿ ಕುರುಡುತನ ಹೆಚ್ಚಾಗುತ್ತದೆ.ಆದರಿಂದ ಕ್ಯಾರೆಟ್ ತಿನ್ನುವುದರಿಂದ ಕಣ್ಣಿನ ದೃಷ್ಟಿ ಚೆನ್ನಾಗಿ ಇಟ್ಟುಕೊಳ್ಳಬಹುದು,ಅಲ್ಲದೆ ಕಣ್ಣಿನ ಪರಿ ಮತ್ತು ಕಣ್ಣಿನ ಸುತ್ತ ಕಪ್ಪು ಕಲೆ ಆಗುವುದನ್ನು ತಡೆಗಟ್ಟಬಹುದು.

2. ಕ್ಯಾನ್ಸರ್ ತಡೆಗಟ್ಟುವಿಕೆ

ಕ್ಯಾರೆಟ್ ನಲ್ಲಿ ಇರುವ ಕ್ಯಾರೆಟಿ ನೋಯಿಡ್ಸ್ ಅಂಶವು ದೇಹಕ್ಕೆ ಕಾಡುವ ವಿವಿಧ ರೀತಿಯ ಕ್ಯಾನ್ಸರ್ ಗಳ ವಿರುದ್ಧ ಹೋರಾಡುತ್ತದೆ. ಹೀಗೆ ಕ್ಯಾರೆಟ್ ತಿನ್ನುವುದುದರಿಂದ ಅನೇಕ ರೀತಿಯ ಕಾಡುವ ಕ್ಯಾನ್ಸರ್ ಸಮಸ್ಯೆಗಳನ್ನು ಎದುರಿಸಬಹುದು.

3. ರಕ್ತವನ್ನು ಶುದ್ದಿಕರಿಸುವುದು

ಕ್ಯಾರೆಟ್ ನಲ್ಲಿ ,ವಿಟಮಿನ್ಸ್,ಪ್ರೊಟೀನ್ಸ್ ಮತ್ತು ಆಂಟಿ ಒಕ್ಸಿಡಂಟ್ಸ್ ಒಳಗೊಂಡಿರುವವು ಆದರಿಂದ ಕ್ಯಾರಟ್ ಸೇವಿಸುವುದರಿಂದ ದೇಹದಲ್ಲಿ ಇರುವ ಕೆಟ್ಟ ಕೊಲೆಸಟ್ರೋಲ್,ಕೊಬ್ಬನ್ನು ಹೊರಗೆ ತೆಗೆದು ಹಾಕುವುದರಿಂದ ಸರಿಯಾಗಿ ರಕ್ತ ಪರಿಚಲನೆ ಮತ್ತು ರಕ್ತ ಶುದ್ದಿಕರಣ ಆಗುತ್ತದೆ.

4. ಚರ್ಮದ ಸಮಸ್ಯೆ

ಕ್ಯಾರೆಟ್ ನಲ್ಲಿ ಹೆಚ್ಚಾಗಿ ವಿಟಮಿನ್ c ಅಂಶವು ಇರುವುದರಿಂದ ಕೊಲಾಜನ್ ಅಂಶವು ಹೆಚ್ಚಾಗಿ ಉತ್ಪತಿಯಾಗುತ್ತದೆ. ಕೊಲಾಜನ್ ಒಂದು ರೀತಿಯ ಪ್ರೊಟೀನ್. ಆದರಿಂದ ನಮ್ಮ ಚರ್ಮದ ಕಾಂತಿ ಹೊಳಪಾಗಿರುತ್ತದೆ.ಕ್ಯಾರಟ್ ಅಷ್ಟೇ ತಿನ್ನುವುದಲ್ಲದೆ ಕ್ಯಾರೆಟ್ ಜ್ಯೂಸು ಕುಡಿಯುವುದರಿಂದ ಮುಖದ ಸೌಂದರ್ಯವನ್ನು ಹೆಚ್ಚಿಸಬಹುದು.ಮತ್ತು ಅದರ ಸಿಪ್ಪೆಯನ್ನು ಗಾಯದ ಮೇಲೆ ಹಚ್ಚುವುದರಿಂದ ಮುಖದ ಮೇಲೆ ಮತ್ತು ದೇಹದ ಮೇಲೆ ಇರುವ ಗಾಯದ ಕಲೆ, ಮತ್ತು ಗುಳ್ಳೆಗಳನ್ನು ಮಾಯವಾಗಿಸಬಹುದು.

5. ಕೂದಲು ಉದುರುವಿಕೆ

ಕ್ಯಾರೆಟ್ ಸೇವಿಸುವುದರಿಂದ ಕೂದಲು ಸೊಂಪಾಗಿ,ಮೃದುವಾಗಿ ಮತ್ತು ದಟ್ಟ ವಾಗಿ ಬೆಳೆಯುವೆವು ಇದೇ ಅಷ್ಟೇ ಅಲ್ಲದೆ ಕೂದಲು ಉದುರುವಿಕೆಯನ್ನು ತಡೆಗೆಟ್ಟುತ್ತದೆ.

6. ಮೂಳೆ ಎಲುಬು ಗಟ್ಟಿಯಾಗುವವು

ಕ್ಯಾರೆಟ್ ನಲ್ಲಿ ಕ್ಯಾಲ್ಸಿಯಂ,ಫೈಬರ್,ಪೊಟ್ಟಸಿಯಂ ಮತ್ತು ಮ್ಯಾನಗನೆಸ್ ಅಂಶವು ಇರುವುದರಿಂದ ದೇಹದ ಮೂಳೆ ಎಲುಬುಗಳು ಗಟ್ಟಿಯಾಗಿರುತ್ತವೆ.ಹೀಗೆ ಪ್ರತಿನಿತ್ಯ ಕ್ಯಾರೆಟ್ ಸೇವಿಸುವುದರಿಂದ ಈ ಎಲ್ಲಾ ಖನಿಜಗಳನ್ನು ನಮ್ಮ ದೇಹದಲ್ಲಿ ಸಂಗ್ರಹವಾಗುತ್ತವೆ.

7. ರೋಗ ನಿರೋಧಕ ಹೆಚ್ಚುವುದು

ಕ್ಯಾರೆಟ್ ನಲ್ಲಿ ವಿಟಮಿನ್ c,ಫೈಬರ್ ಮತ್ತು ಕಬ್ಬಿಣ ಅಂಶ ಇರುವುದರಿಂದ ದೇಹದಲ್ಲಿ ಹಮೋಗ್ಲೋಬಿನ್ ಹೆಚ್ಚುತ್ತದೆ ಮತ್ತು ರಕ್ತ ಹೆಪ್ಪು ಗಟ್ಟುವಿಕೆಯನ್ನು ನಿಯಂತ್ರಿಸುತ್ತದೆ.

8. ಹಲ್ಲುಗಳ ಗಟ್ಟಿತನಕೆ

ಪ್ರತಿದಿನ ಒಂದು – ಎರಡು ಕ್ಯಾರೆಟ್ ತಿನ್ನುವುದರಿಂದ ಹಲ್ಲುಗಳು ಗಟ್ಟಿಯಾಗಿರುತ್ತವೆ ಹಾಗೂ ಸ್ವಚ್ಛತೆಯಿಂದ ಕಾಣುತ್ತವೆ ಮತ್ತು ಬಾಯಿಯು ದುರ್ವಾಸನೆಯಿಂದ ದೂರವಿರುತ್ತದೆ.

9. ಹೊಟ್ಟೆಯ ಜೀರ್ಣಕ್ರಿಯೆ

ಕ್ಯಾರೆಟ್ ನಲ್ಲಿ ಫೈಬರ್ ಅಂಶವು ಇರವುದರಿಂದ ಮತ್ತು ಕ್ಯಾರೆಟ್ ಜ್ಯೂಸು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ.ಹಾಗೂ ಮಲಬದ್ಧತೆ ಮತ್ತು ಇತರ ಹೊಟ್ಟೆಗೆ ಸಂಬಂದಿಸಿದ ಕಾಯಿಲೆಗಳಿಂದ ಪಾರಾಗಬಹುದು.

ಹೀಗೆ ಈ ಎಲ್ಲಾ ಕ್ಯಾರೆಟ್ ತರಕಾರಿಯ ಉಪಯೋಗಗಳನ್ನು ಪ್ರತಿನಿತ್ಯ ಅಳವಡಿಸಿಕೊಳ್ಳುತ್ತಾ ಹೋದರೆ ನಮ್ಮ ಆರೋಗ್ಯವನ್ನು ಅಚ್ಚು ಕಟ್ಟಾಗಿ ಮತ್ತು ಬಲಿಷ್ಠವಾಗಿ ಕಾಪಾಡಿಕೊಳ್ಳುತ್ತೇವೆ.


ಕ್ಯಾರೆಟ್ ಜ್ಯೂಸು

ಕ್ಯಾರೆಟ್ ಜ್ಯೂಸು ಮಾಡಲು ಬೇಕಾದ ಸಾಮಗ್ರಿಗಳು

  • 4-5 ತೆಳನೆಯ,ಉದ್ದವಾದ ಕ್ಯಾರೆಟ್
  • 2 ಸ್ಪೂನ್ ಬ್ಲ್ಯಾಕ್ ಸಾಲ್ಟ್
  • ಅರ್ಧ ಹೋಳು ಹಸಿ ಶುಂಠಿ
  • 2ಸ್ಪೂನ್ ಪೆಪ್ಪರ್ ಪೌಡರ್
  • ಕಾಲ ಭಾಗ ನಿಂಬೆ ಹೋಳು, ಸ್ವಲ್ಪ ಪುದಿನ ಎಲೆಗಳು

ಕ್ಯಾರೆಟ್ ಜ್ಯೂಸು ಮಾಡುವ ವಿಧಾನ

ಕ್ಯಾರೆಟ್ ಜ್ಯೂಸು ಮಾಡುವ ಮೊದಲು ಕ್ಯಾರೆಟ್ ನ್ನು ಚೆನ್ನಾಗಿ ನೀರಲ್ಲಿ ತೊಳೆಯಬೇಕು. ನಂತರ ಅದನ್ನು ಚೆನ್ನಾಗಿ ಸಣ್ಣ ಸಣ್ಣದಾಗಿ ತುಂಡುಗಳನ್ನು ಮಾಡಿ ಮಿಕ್ಸರ್ ಗ್ರೈಂಡರ್ ಹಾಕಿಕೊಂಡು ಸ್ವಲ್ಪ ಹಸಿ ಶುಂಠಿ,ನಿಂಬೆ ರಸ, ಮತ್ತು ಪುದಿನ ಎಲೆಗಳ್ಳನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಆ ರಸವನ್ನು ಒಂದು ಗ್ಲಾಸ್ ಗೆ ಸೋಸಿಕೊಂಡು ಅದಕ್ಕೆ ಒಂದು ಚಿಟಿಕೆ ಪೆಪ್ಪರ್ ಪೌಡರ್ ಮತ್ತು ಬ್ಲ್ಯಾಕ್ ಸಾಲ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಬೇಕು.

Also Read – ಅಗಸೆ ಬೀಜದ ಉಪಯೋಗಗಳು | Flax Seeds in Kannada Uses

FAQ’s On Carrot in Kannada

1. What is Carrot meaning in Kannada?

Ans – Carrot in Kannada is known as ಗಜ್ಜರಿ which is pronounced as Gajari. It is a root vegetable with more nutritious contents that provide wider health and beauty benefits.

Leave a Reply