10 ರುಚಿಯಾದ ಸಂಡಿಗೆ ರೆಸಿಪಿಗಳು | ಅವಲಕ್ಕಿ ಸಂಡಿಗೆ | ಅರಳು ಸಂಡಿಗೆ

sandige recipe in kannada
Sandige recipe in Kannada

1. ಅವಲಕ್ಕಿ ಸಂಡಿಗೆ

ಅವಲಕ್ಕಿ ಸಂಡಿಗೆ ಬೇಕಾಗುವ ಪದಾರ್ಥಗಳು

 • ಒಂದು ಕೆ.ಜಿ. ಗಟ್ಟಿ ಅವಲಕ್ಕಿ
 • ಎರಡು ಕಂತೆ ಕೊತ್ತಂಬರಿ ಸೊಪ್ಪು
 • ನೂರು ಗ್ರಾಂ ಹಸಿಮೆಣಸಿನಕಾಯಿ
 • ಈರುಳ್ಳಿ ಕಾಲು ಕೆ.ಜಿ
 • ಉಪ್ಪು
 • ಇಂಗು

ಅವಲಕ್ಕಿ ಸಂಡಿಗೆ ಮಾಡುವ ವಿಧಾನ

ಅವಲಕ್ಕಿಯನ್ನು ಚೆನ್ನಾಗಿ ತೊಳೆದು ಶುದ್ಧಗೊಳಿಸಿ ನೀರಿನಲ್ಲಿ ನೆನೆಹಾಕಿ ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ ಇಟ್ಟುಕೊಳ್ಳಿ, ನೆನೆದ ಅವಲಕ್ಕಿ, ಇಂಗು, ಪುಡಿ ಉಪ್ಪು, ಹೆಚ್ಚಿನ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಕೈಯಾಡಿಸಿ ಕಲಸಿ. ಮೊರ ಅಥವಾ ಒಂದು ಚಾಪೆಯ ಮೇಲೆ ಅವಲಕ್ಕಿಯನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಸ್ವಲ್ಪ ದೂರ ದೂರ ಇಟ್ಟು ಬಿಸಿಲಿನಲ್ಲಿ ಒಣಗಿಸಿದ ಮೇಲೆ ಡಬ್ಬದಲ್ಲಿ ಹಾಕಿ ತುಂಬಿಡಿ.ಬೇಕಾದಾಗ ಎಣ್ಣೆಯಲ್ಲಿ ಕರಿದು ಊಟದ ಜೊತೆಗೆ ತಿನ್ನಬಹುದು.

2. ಅರಳು ಸಂಡಿಗೆ

ಬೇಕಾಗುವ ಪದಾರ್ಥಗಳು

 • 5 ಕೆ.ಜಿ ಬತ್ತದ ಅರಳು
 • ಕೊತ್ತಂಬರಿ ಸೊಪ್ಪು ಎರಡೂ ಕಟ್ಟು
 • ಇಂಗು ಚೂರು
 • ಪುಡಿ ಉಪ್ಪು
 • ಹಸಿಮೆಣಸಿನಕಾಯಿ 100 ಗ್ರಾಂ
 • ಒಂದು ಬೂದುಗುಂಬಳಕಾಯಿ ( ಚಿಕ್ಕದು )

ಅರಳು ಸಂಡಿಗೆ ಮಾಡುವ ವಿಧಾನ

ಕೊತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಹಾಗೂ ಬೂದುಗುಂಬಳಕಾಯಿ ಇವುಗಳನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಅರಳನ್ನು ತಕಷ್ಟು ನೀರಿನಲ್ಲಿ ನೆನೆಹಾಕಿ. ತಕ್ಷಣವೇ ಅರಳಿಗೆ ಹೆಚ್ಚಿಟ್ಟುಕೊಂಡ ಸಾಮಗ್ರಿಗಳನ್ನು ಉಪ್ಪು ಮತ್ತು ಇಂಗಿನ ಜತೆ ಹಾಕಿ ಚೆನ್ನಾಗಿ ಕಲಸಿ ಉಂಡೆಗಳನ್ನಾಗಿ ಮಾಡಿ ಮೊರ ಅಥವಾ ಚಾಪೆ ಮೇಲೆ ಒಣಹಾಕಿ. ಒಣಗಿದ ಮೇಲೆ ಡಬ್ಬಗಳಲ್ಲಿ ತುಂಬಿಡಿ.

3. ಸಬ್ಬಕ್ಕಿ ಸಂಡಿಗೆ

ಬೇಕಾಗುವ ಪದಾರ್ಥಗಳು

 • ಅರ್ಧ ಕೆ.ಜಿ.ಸಬ್ಬಕ್ಕಿ,
 • ಹಸಿಮೆಣಸಿನಕಾಯಿ 100 ಗ್ರಾಂ,
 • ಕೊತಂಬರಿ ಎರಡು ಕಟ್ಟು,
 • ಉಪ್ಪು,
 • ಜೀರಿಗೆ 50 ಗ್ರಾಂ
 • ಇಂಗು

ಸಬ್ಬಕ್ಕಿ ಸಂಡಿಗೆ ಮಾಡುವ ವಿಧಾನ

ಸಬ್ಬಕ್ಕಿಯನ್ನು ಎರಡು ಸೇರು ನೀರಿನಲ್ಲಿ ಹಾಕಿ ಬೇಯಿಸಲು ಇಡಿ. ಬೆಯುತ್ತಿರುವ ಸಬ್ಬಕ್ಕಿಗೆ ಉಪ್ಪು, ಇಂಗು, ಹಸಿಮೆಣಸಿನಕಾಯಿ ಚೂರು, ಕೊತ್ತಂಬರಿ ಸೊಪ್ಪು, ಜೀರಿಗೆ ಇವುಗಳನ್ನು ಹಾಕಿ ಬಿಸಿಲಿನಲ್ಲಿ ಎರಡೂ ದಿನ ಕಾಲ ಒಣಗಿಸಿ. ಚೆನ್ನಾಗಿ ಒಣಗಿದ ಮೇಲೆ ಸಂಡಿಗೆ ತಾನೆ ಬಿಟ್ಟುಕೊಳ್ಳುವುದು. ಸಂಡಿಗೆಯನ್ನು ಡಬ್ಬದಲ್ಲಿ ಹಾಕಿಡಿ.

4. ಫೇಣಿ ಸಂಡಿಗೆ

ಬೇಕಾಗುವ ಪದಾರ್ಥಗಳು

 • ಅಕ್ಕಿ ಒಂದು ಅಥವಾ ಎರಡು ಕೆ.ಜಿ
 • ನೂರು ಗ್ರಾಂ ಸಬ್ಬಕ್ಕಿ
 • 100 ಗ್ರಾಂ ಹಸಿಮೆಣಸಿನಕಾಯಿ
 • ಇಂಗು ಚೂರು
 • ಕೊತ್ತಂಬರಿ ಸೊಪ್ಪು
 • ಉಪ್ಪು

ಫೇಣಿ ಸಂಡಿಗೆ ಮಾಡುವ ವಿಧಾನ

ಅಕ್ಕಿ ತೊಳೆದು ಒಣಗಿಸಿ. ಸಬ್ಬಕ್ಕಿ ಅಕ್ಕಿ ಸೇರಿಸಿ ಮಿಷನಲ್ಲಿ ಬಿಸಿ ಹಿಟ್ಟು ಮಾಡಿಕೊಳ್ಳಿ. ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಚೂರುಗಳು, ಇಂಗು,ಉಪ್ಪು, ಇವುಗಳನ್ನು ಒರಳಿನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.ದೊಡ್ಡ ಪಾತ್ರೆಯಲ್ಲಿ ನೀರು ತೆಗೆದುಕೊಂಡು ಒಲೆಯ ಮೇಲಿಡಿ. ನೀರು ಕುದಿದ ಮೇಲೆ ಹಿಟ್ಟನ್ನು ಹಾಕುತ್ತಾ ಬನ್ನಿ. ಹಿಟ್ಟು ಗಂಟಾಗದಂತೆ ಚೆನ್ನಾಗಿ ತಿರುವಿ.ರುಬ್ಬಿಕೊಂಡ ಮಸಾಲೆಯನ್ನು ಬೆರೆಸಿ ಚೆನ್ನಾಗಿ ಸೌ ಟಿನಿಂದ ಆಡಿಸಿ ಪಾತ್ರೆ ತಳ ಹತ್ತಬಾರದು. ಹಿಟ್ಟು ಗಟ್ಟಿಯಾದ ಮೇಲೆ ಪಾತ್ರೆ ಕೆಳಗಿಳಿಸಿ ಚಕ್ಕುಲಿ ಒರಳಿನಲ್ಲಿ ಹಾಕಿಕೊಂಡು ಪ್ಲಾಸ್ಟಿಕ್ ಹಾಳೆಯ ಮೇಲೆ ಒತ್ತಿ. ಬಿಸಿ ಇರುವಾಗಲೇ ಹಿಟ್ಟನ್ನು ಒತ್ತಬೇಕು. ಬಿಸಿಲಲ್ಲಿ ಒಣಗಿಸಿ. ಒಣಗಿದ ಮೇಲೆ ಡಬ್ಬದಲ್ಲಿ ತುಂಬಿಡಿ.

Also read – 9 Different Types of Rice Recipes in Kannada

5. ಗೋರಿಕಾಯಿ ಬಾಳಕ

ಬೇಕಾಗುವ ಪದಾರ್ಥಗಳು

 • ಒಂದು ಕೆ.ಜಿ ಗೋರಿಕಾಯಿ
 •  ಉಪ್ಪು
 • ಇಂಗು
 • ಮೊಸರು

ಗೋರಿಕಾಯಿ ಬಾಳಕ  ಮಾಡುವ ವಿಧಾನ

ಒಂದು ಶುಭ್ರವಾದ ಪಾತ್ರೆಯಲ್ಲಿ ಮೊಸರು ಹಾಕಿ. ಅದಕ್ಕೆ ಉಪ್ಪು, ಇಂಗಿನಪುಡಿ ಬೆರೆಸಿ. ಗೊರಿಕಾಯಿಗಳನ್ನು ಚೆನ್ನಾಗಿ ನೆನೆಯಲು ಬಿಡಿ. ದಿನಾ ಕಲಕುತ್ತೀರಿ. ಎರಡು ಇಂಗುವವರೆಗೂ ಒಣಗಿ ಹಾಕಿ ಕಾಯಿಗಳನ್ನು ಮಿಕ್ಕ ಮೊಸರಿನಲ್ಲಿ ಕಲಸಿಡುತ್ತೀರಿ.ಮೊಸರು ಇಂಗಿನ ಬಳಿಕ ಬಿಸಿಲಿನಲ್ಲಿ ಒಣಗಿಸಿ ಡಬ್ಬದಲ್ಲಿ ತುಂಬಿಡಿ. ಬೇಕೇನಿಸಿದಾಗ ಎಣ್ಣೆಯಲ್ಲಿ ಕರಿದು ತಿನ್ನಬಹುದು.

6. ಹಸಿಮೆಣಸಿನಕಾಯಿ ಬಾಳಕ

ಬೇಕಾಗುವ ಪದಾರ್ಥಗಳು

 • ಒಂದು ಕೆ.ಜಿ ಹಸಿಮೆಣಸಿನಕಾಯಿ
 • ಮೆಂತ್ಯ
 • ಉಪ್ಪು
 • ಮೊಸರು

ಹಸಿಮೆಣಸಿನಕಾಯಿ ಬಾಳಕ  ಮಾಡುವ ವಿಧಾನ

ಶುಭ್ರವಾದ ಪಾತ್ರೆಯಲ್ಲಿ ಮೊಸರು ತೆಗೆದುಕೊಳ್ಳಿ. ಹಸಿಮೆಣಸಿಕಾಯಿಗಳನ್ನು ಚೆನ್ನಾಗಿ ತೊಳೆದು ಚಾಕುವಿನಿಂದ ಅವುಗಳ ಮಧ್ಯದಲ್ಲಿ ಸೀಳಿ ಎಲ್ಲವನ್ನು ಮೊಸರಿನಲ್ಲಿ ಹಾಕಿಡಿ. ಒಂದು ದಿನಾ ನೆನೆ ಹಾಕಬೇಕು.ಮರುದಿನ ಮೆಣಸಿನಕಾಯಿಗಳನ್ನು ತೆಗೆದು ಹುರಿದು ಮೆಂತ್ಯದ ಪುಡಿ ಮತ್ತು ಉಪ್ಪು ಬೆರೆಸಿ ಅವನ್ನು ಮೆಣಸಿನಕಾಯಿಗಳಲ್ಲಿ ತುಂಬಿ ಮೆಣಸಿನಕಾಯಿ ಮುಚ್ಚಿ ಮೊರಗಳಲ್ಲಿ ಹರಡಿ ಒಣ ಹಾಕಬೇಕು.ಚೆನ್ನಾಗಿ ಒಣಗಿದ ಮೇಲೆ ಡಬ್ಬಗಳಲ್ಲಿ ತುಂಬಿಡಿ. ಬೇಕೇನಿಸಿದಾಗ ಊಟದ ಜೊತೆಯಲ್ಲಿ ತಿನ್ನಲು ಎಣ್ಣೆಯಲ್ಲಿ ಕರಿದು ತಿನ್ನಿ.

7. ಹುರುಳಿ ಹಪ್ಪಳ

ಬೇಕಾಗುವ ಪದಾರ್ಥಗಳು

 • ಒಂದು ಕೆ.ಜಿ ಹುರುಳಿ
 • ಉದ್ದಿನಬೇಳೆ
 • ಒಂದು ಕೆ.ಜಿ ಮೆಣಸಿನಕಾಯಿ
 • ಹಪ್ಪಳದ ಖಾರ
 • ಇಂಗು
 • ಎಣ್ಣೆ ಒಂದು ಬಟ್ಟಲು
 • ಸ್ವಲ್ಪ ಅಕ್ಕಿ ಹಿಟ್ಟು

ಹುರುಳಿ ಹಪ್ಪಳ  ಮಾಡುವ ವಿಧಾನ

ಹುರುಳಿಯನ್ನು ನೀರಿನಲ್ಲಿ ನೆನೆಹಾಕಿ ನೀರನ್ನು ಬಸಿದು ಬಟ್ಟೆಯಲ್ಲಿ ಹಾಕಿ ಕಟ್ಟಿ ಒಂದು ಭಾರವಾದ ವಸ್ತುವಿನ ಅಡಿಯಲ್ಲಿಡಿ. ಮರುದಿನದ ವೇಳೆಗೆ ಹುರುಳಿಗೆ ಮೊಳಕೆ ಬಂದಿರುತ್ತವೆ.ಮೊಳಕೆ ಬಂದ ಹುರುಳಿಯನ್ನು ಬಿಸಿಲಿನಲ್ಲಿ ಒಣಹಾಕಿ. ಬೀಸುವ ಕಲ್ಲಿನ ಸಹಾಯದಿಂದ ಹುರುಳಿ ಬೆಳೆಯನ್ನು ಮಾಡಿಕೊಳ್ಳಿ. ಬೆಳೆಯನ್ನು ಹೊರ ತೆಗೆದು ಅದಕ್ಕೆ ಉದ್ದಿನ ಬೆಳೆಯನ್ನು ಬೆರೆಸಿ ಮೆಣಸಿನಕಾಯಿ, ಇಂಗು, ಹಪ್ಪಳದ ಖಾರ ಸೇರಿಸಿ ಹಿಟ್ಟು ಮಾಡಿಸಿ ಇಡಿ.
ನೀರು ಹಾಕಿ ಹಿಟ್ಟು ಕಲಸಿ ಸ್ವಲ್ಪ ಎಣ್ಣೆ ಸವರಿ ಒರಳಿನಲ್ಲಿ ಕುಟ್ಟಿ ಹಿಟ್ಟು ಇನ್ನಷ್ಟು ಮೆದುವಾಗುತ್ತದೆ. ಹಿಟ್ಟಿನ ಉಂಡೆಗಳನ್ನು ತಯಾರಿಸಿಕೊಂಡು ಅಕ್ಕಿಹಿಟ್ಟು ಅಥವಾ ಹುರುಳಿ ಹಪ್ಪಳ ಲಟ್ಟಿಸಿ ಬಿಸಿಲಿನಲ್ಲಿ ಸುಟ್ಟು ತಿನ್ನಿ. ಹುರುಳಿ ಹಪ್ಪಳಗಳನ್ನು ಕರಿಯಬೇಕಿಲ್ಲ. ಹುರುಳಿ ಹಪ್ಪಳ ಪೌಷ್ಟಿಕ ಆಹಾರವು ಹೌದು. ಪ್ರೊಟೀನ್ ತುಂಬಿರುತ್ತವೆ.

8. ಉದ್ದಿನ ಹಪ್ಪಳ

ಬೇಕಾಗುವ ಪದಾರ್ಥಗಳು

 • ಒಂದು ಕೆ.ಜಿ
 • ಉದ್ದಿನಬೇಳೆ
 • ಉಪ್ಪು
 • ಇಂಗು
 • ಒಂದು ಬಟ್ಟಲು ಅಕ್ಕಿಹಿಟ್ಟು
 • ಒನಮೆಣಸಿನಕಾಯಿ

ಉದ್ದಿನ ಹಪ್ಪಳ  ಮಾಡುವ ವಿಧಾನ

ಉದ್ದಿನ ಬೆಳೆಯನ್ನು ಶುಚಿಗೊಳಿಸಿ ಹಿಟ್ಟು ಮಾಡಿಕೊಳ್ಳಿ. ಒನಮೆಣಸಿನಕಾಯಿ, ಇಂಗು ಹಾಗೂ ಉಪ್ಪು ಬೆರೆಸಿ ನೀರಿನಲ್ಲಿ ಕಲಸಿ ಸಣ್ಣ ಸಣ್ಣ ಬಿಲ್ಲೆಗಳನ್ನಾಗಿ ಮಾಡಿ ಚಪಾತಿಯ ಮಣೆಯ ಮೇಲೆ ಅಕ್ಕಿಹಿಟ್ಟು ಹಾಕಿಕೊಂಡು ಹಪ್ಪಳ ಲಟ್ಟಿಸಿ. ಬಿಸಿಲಿನಲ್ಲಿ ಒಣಹಾಕಿ. ಒಣಗಿದ ಮೇಲೆ ಡಬ್ಬದಲ್ಲಿ ತುಂಬಿಡಿ. ಬೇಕಾದಾಗ ಎಣ್ಣೆಯಲ್ಲಿ ಕರಿದು ಊಟದ ಜೊತೆಯಲ್ಲಿ ತಿನ್ನಿ.

9. ಅಕ್ಕಿ ಹಪ್ಪಳ

ಬೇಕಾಗುವ ಪದಾರ್ಥಗಳು

 • ಒಂದು ಕೆ.ಜಿ ಅಕ್ಕಿ ( ಸಣ್ಣಕ್ಕಿ ),
 • ಉಪ್ಪಿನ ಪುಡಿ
 • ಇಂಗು

ಅಕ್ಕಿ ಹಪ್ಪಳ  ಮಾಡುವ ವಿಧಾನ

ಅಕ್ಕಿಯನ್ನು ನೆನೆಸಿ ಒಣಹಾಕಿದ ಮೇಲೆ ಹಿಟ್ಟು ಮಾಡಿಟ್ಟುಕೊಳ್ಳಿ. ಇಂಗು, ಉಪ್ಪುಗಳನ್ನು ನೀರಿನಲ್ಲಿ ಕರಗಿಸಿ ಹಿಟ್ಟಿನ ಮೇಲೆ ಸುರಿಯಿರಿ.ಬಿಸಿ ನೀರಿನಲ್ಲಿ ಹಿಟ್ಟು ಕಲಸಿ, ಕಲಿಸಿದ ಬಳಿಕ ಒರಳಿನಲ್ಲಿ ಹಿಟ್ಟು ನಯವಾಗುವರೆಗೂ ಕುಟ್ಟಿ, ಅನಂತರ ಹಿಟ್ಟಿನ ಉಂಡೆಗಳನ್ನು ಮಾಡಿಕೊಂಡು ಪೂರಿ ಲಟ್ಟಿಸುವ ಮಾದರಿಯಲ್ಲಿ ಲಟ್ಟಿಸಿ. ಬಿಸಿಲಲ್ಲಿ ಹಪ್ಪಳಗಳನ್ನು ಒಣಗಿಸಿ ಬಳಿಕ ಡಬ್ಬದಲ್ಲಿ ಹಾಕಿ ತುಂಬಿಡಿ.ಹಲಸಿನ ಹಪ್ಪಳಗನ್ನು ಸುಟ್ಟ ಇಲ್ಲವೇ ಎಣ್ಣೆಯಲ್ಲಿ ಕರಿದು ತಿನ್ನಬಹುದು.

10. ಹಲಸಿನ ಹಪ್ಪಳ

ಬೇಕಾಗುವ ಪದಾರ್ಥಗಳು

 • ಒಂದು ದಪ್ಪ ಹಲಸಿನಕಾಯಿ
 • ಖಾರದ ಪುಡಿ
 • ಎರಡು ಚಮಚ ಉಪ್ಪು

ಹಲಸಿನ ಹಪ್ಪಳ  ಮಾಡುವ ವಿಧಾನ

ಸುಮಾರವಾಗಿ ಹಣ್ಣಾದ ಹಲಸಿಕಾಯಿಯನ್ನು ಕೊಯ್ದು ತೊಳೆ ಬಿಡಿಸಿಕೊಂಡು ನೀರಿರುವ ಪಾತ್ರೆಯಲ್ಲಿ ಹಾಕಿ. ಖಾರದ ಪುಡಿ, ಉಪ್ಪು ಹಾಕಿ ಬೇಯಿಸಿ. ನಂತರ ಒರಳಿನಲ್ಲಿ ರುಬ್ಬಿ. ರುಬ್ಬಿದ ಹಿಟ್ಟನ್ನು ಉಜ್ಜಿ ಸಣ್ಣ ಸಣ್ಣ ಹಪ್ಪಳದ ಮಾದರಿಯಲ್ಲಿ ಬಿಸಿಲಿನಲ್ಲಿ ಬಾಳೆ ಎಲೆಗಳ ಮೇಲೆ ಒಣಗಿದ ಮೇಲೆ ಡಬ್ಬದಲ್ಲಿ ಹಾಕಿ ತುಂಬಿಡಿ. ಹಲಸಿನ ಹಪ್ಪಳಗಳನ್ನು ಸುಟ್ಟು ಇಲ್ಲವೇ ಎಣ್ಣೆಯಲ್ಲಿ ಕರಿದು ತಿನ್ನಬಹುದು.

Also read – 8 Different variety of dosa recipe in Kannada

Leave a Reply