9 Different Types of Rice Recipes in Kannada

rice recipes in kannada
Rice recipes in kannada

Try these 9 Rice recipes in kannada from your left out white rice

ಮನೆಯಲಿ ಅನ್ನ ಉಳಿಯೋದು ತುಂಬ ಸಾಮಾನ್ಯ ಆದರೆ ಅದನ್ ಯಾರಿತಿ ರುಚಿಕರ ವಾಗಿರೋ ರೆಸಿಪಿ ಗೆ ಪರಿವರ್ತನೆ ಮಾಡ್ಬೇಕ್ ಅಂತ ಇ ಕೇಳ್ಗೆ ನಿಡಲಾಗಿದೆ, ಉಳಿದ ಅನ್ನ ದಿಂದ ನಿವು ಈ ಕೆಲಗೆ ನಿಡುವ 9 ತರಹ ಅನ್ನದ್ ರೆಸಿಪಿಗಳನ್ ಟ್ರೈ ಮಾಡಿ.

1. ಹುಳಿ ಅನ್ನ| Hulianna

 Hulianna
Hulianna

ಬೇಕಾಗುವ ಪದಾರ್ಥಗಳು | Hulianna recipe

  • ಅರ್ಧ ಕೆ .ಜಿ ಅಕ್ಕಿ
  • ನೂರು ಗ್ರಾಂ ಹುಣಸೆ ಹಣ್ಣು
  • ಎರಡು ಉಂಡೆ ಬೆಲ್ಲ
  • ಉಪ್ಪು
  • ಮೂರು ಚಮಚ ಎಳ್ಳು
  • ಕಡಲೆಬೇಳೆ
  • ಹಸಿಕಡಲೆಕಾಯಿ ಬೀಜ 50 ಗ್ರಾಂ
  • ಒನಮೆಣಸಿನಕಾಯಿ ನಾಲ್ಕೈಯ್ದು
  • ಒಂದು ಕಂತೆ ಕರಿಬೇವು
  • ಎಣ್ಣೆ ಒಂದು ಬಟ್ಟಲು
  • ತೆಂಗಿನಕಾಯಿ ಒಂದು ಹೋಳು
  • ಸಾಸಿವೆ
  • ಎರಡು ಚಮಚ ಮೆಣಸಿನಪುಡಿ

ಹುಳಿ ಅನ್ನ ತಯಾರಿಸುವ ವಿಧಾನ | Huli anna maduva vidhana

        ಶುದ್ಧಗೊಳಿಸಿದ ಅಕ್ಕಿ ಚೆನ್ನಾಗಿ ತೊಳೆದು ಅನ್ನವನ್ನು ಉದುರು ಉದುರಾಗಿ ಮಾಡಿಕೊಂಡು ದೊಡ್ಡ ತಟ್ಟೆಯಲ್ಲಿ ಹರವಬೇಕು.ಹುಣಸೆ ಹಣ್ಣನ್ನು ನೀರಿನಲ್ಲಿ ಹಾಕಿ ನೆನಸಿಡಿ.ತೆಂಗಿನಕಾಯಿ ತುರಿ,ಸಾಸಿವೆ, ಮೆಣಸಿನಕಾಯಿ ಇವನ್ನು ಹಾಕಿ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ, ರುಬ್ಬಿರುವ ಮಸಾಲೆಯನ್ನು ಎಣ್ಣೆಯಲ್ಲಿ ಹಾಕಿ ಹುಣಸೆಹಣ್ಣು ಕಿವಿಚಿ ಬಾಣಲೆಗೆ ಬಿಡಿ. ಎರಡು ಚಮಚ ಮೆಣಸಿನಪುಡಿ, ಉಪ್ಪು ಮತ್ತು ಉಂಡೆಬೆಲ್ಲ ಹಾಕಿ.ಮಿಶ್ರಣವನ್ನು ಚೆನ್ನಾಗಿ ಕೆದಕಿ ಕುದಿಯಲು ಬಿಡಿ. ಬಾಣಲೆ ತಳ ಹತ್ತಬಾರದು, ಚೆನ್ನಾಗಿ ಕೆದಕಿ ಕುದಿದ ನಂತರ ಬಾಣಲೆಯನ್ನು ಕೆಳಗಿಳಿಸಿ ಮಿಶ್ರಣ ಸ್ವಲ್ಪ ಆರಿದ ಮೇಲೆ ಅನ್ನಕ್ಕೆ ಹಾಕಿ ಚೆನ್ನಾಗಿ ಕಲಸಿ ಕುಟ್ಟಿಟ್ಟು ಕೊಂಡು ಎಳ್ಳು ಪುಡಿಯನ್ನು ಬೇರೆಸುವುದು. ಅನಂತರ ಒಗ್ಗರಣೆ ಮಾಡಿ ಹಾಕಿ, ಬೆಳಗ್ಗೆ ತಯಾರಿಸಿಟ್ಟ ಅನ್ನ ಸಂಜೆಯವರೆಗೂ ಕೆಡುವುದಿಲ್ಲ.ರುಚಿಯು ಹೆಚ್ಚುತ್ತದೆ.

2. ಬಿಸಿಬೇಳೆ ಬಾತ್ | Bisi Bele Bath

Bisi Bele Bath
Bisi Bele Bath

ಬಿಸಿಬೇಳೆ ಬಾತ್ ಮಾಡಲು ಬೇಕಾಗುವ ಪದಾರ್ಥಗಳು | Bisi Bele Bath in Kannada Recipe Ingredients

  • ಅರ್ಧ ಕೆ ಜಿ.ಅಕ್ಕಿ
  • ಅರ್ಧ ಕೆ .ಜಿ ತೊಗರಿಬೇಳೆ
  • ಕಾಲು ಕೆ.ಜಿ ತುಪ್ಪ
  • ಒಣಮೆಣಸಿನಕಾಯಿ ಹತ್ತು
  • ಇಂಗು
  • ಮೆಂತ್ಯ ಹುಣಸೆಹಣ್ಣು
  • ಒಂದು ಗಿಟುಕು ಒಣಕೊಬ್ಬರಿ
  • ಅರಿಸಿನಪುಡಿ
  • ದಾಲಚ್ಚಿನ್ನಿ ಚಕ್ಕೆ ಎರಡು ಚೂರು
  • ಲವಂಗ
  • ಕಡಲೆಬೇಳೆ
  • ಒಂದು ಚಮಚ ಸಾಸಿವೆ
  • ಕರಿಬೇವು
  • ಒಂದು ಚಮಚ ಉಪ್ಪು
  • ಕೊತಂಬರಿ ಬೀಜ
  • ಜೀರಿಗೆ
  • ಮೆಣಸು
  • ಗಸಗಸೆ

ಬಿಸಿಬೇಳೆ ಬಾತ್ ಮಾಡುವ ವಿಧಾನ | How to prepare Bisibelebath in kannada language

             ಒಂದು ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ ಒಲೆಯ ಮೇಲಿಡಿ.ನೀರು ಕುಡಿಯತೊಡಗಿದ mele ಶುದ್ಧಗೊಳಿಸಿದ ತೊಗರಿಬೇಳೆಯನ್ನ ಹಾಕಿ ಅದಕ್ಕೆ ಅರಿಸಿನ, ಸ್ವಲ್ಪ ತುಪ್ಪ ಹಾಕಿ ತಟ್ಟೆ ಮುಚ್ಚಿ.ತೊಗರಿಬೇಳೆ ಅರ್ಧ ಬೆಂದ ಮೇಲೆ ಅಕ್ಕಿಯನ್ನು ತೊಳೆದು ಹಾಕಿ ತಟ್ಟೆ ಮುಚ್ಚಿ.

           ನಿಂಬೆಕಾಯಿ ಗಾತ್ರದ ಹುಣಸೆಹಣ್ಣನ್ನು ನೀರಿನಲ್ಲಿ ನೆನೆಹಾಕಿ ಬಾಣಲೆಯನ್ನು ಇನ್ನೊಂದು ಒಲೆಯ ಮೇಲಿಟ್ಟು ಒಂದು ತೊಟ್ಟು ಎಣ್ಣೆ ಅಥವಾ ತುಪ್ಪ ಬಿಡಿ. ಒಣ ಮೆಣಸಿನಕಾಯಿ, ಕೊತಂಬರಿ ಬೀಜ, ಸ್ವಲ್ಪ ದಾಲ್ಚಾಚಿನ್ನಿ, ಚಕ್ಕೆ, ಜೀರಿಗೆ, ಮೆಣಸು, ಇಂಗು, ಗಸಗಸೆ, ಸಾಸಿವೆ, ಮೆಂತ್ಯ ಇವೆಲ್ಲವನ್ನು ಬಾಣಲೆಯಲ್ಲಿ ಹಾಕಿ ಹುರಿದುಕೊಳ್ಳಿ.ಅನಂತರ ಈ ಪುಡಿಯೇ ಬಿಸಿಬೇಳೆ ಬಾತ್ ತಯಾರಿಕೆಗೆ ಓದಗುತ್ತದೆ.ಬೆಯುತ್ತಿರುವ ಅಕ್ಕಿ ಬೇಳೆಗೆ ಬಿಸಿಬೇಳೆಬಾತಿನ ಪುಡಿ, ಉಪ್ಪು, ಹುಣಸೆಹಣ್ಣಿನ ತಿಳಿ, ಸ್ವಲ್ಪ ಹಾಕಿ ತಟ್ಟೆ ಮುಚ್ಚಿ ಅಕ್ಕಿ ಬೆಂದು ಅನ್ನವಾಗುತ್ತದೆ.ಅನ್ನಕೆ ಕರಿಬೇವು, ಸಾಸಿವೆ, ಒಣ ಮೆಣಸಿನಕಾಯಿ, ಇಂಗು ಇವುಗಳ ಒಗ್ಗರಣೆ ಹಾಕಿ ಕೆದಕಿ. ಇದೀಗ ಬಿಸಿಬೇಳೆ ಬಾತ್ ಸಿದ್ದ. ಬಿಸಿಬೇಳೆ ಬಾತ್ ರೊಂದಿಗೆ ಆಲೂಗಡ್ಡೆ ಚಿಪ್ಸ್ ತಿಂದರೆ ಹೆಚ್ಚು ರುಚಿಯಾಗಿರುತ್ತದೆ.

3. ಉದ್ದಿನಬೇಳೆ ಚಿತ್ರಾನ್ನ | Uddina Bele Chitranna Recipe

Uddina Bele Chitranna Recipe
Uddina Bele Chitranna Recipe

ಉದ್ದಿನಬೇಳೆ ಚಿತ್ರಾನ್ನ ಮಾಡಲು ಬೇಕಾಗುವ ಪದಾರ್ಥಗಳು | Uddina Bele Chitranna Recipe Ingredients

  • ಅಕ್ಕಿ ಅರ್ಧ ಸೇರು
  • ಒಂದು ಸಣ್ಣ ಬಟ್ಟಲು ಎಣ್ಣೆ
  • ತುಪ್ಪ 100 ಗ್ರಾಂ
  • ಉದ್ದಿನಬೇಳೆ ಕಾಲು ಕೆ.ಜಿ
  • ಕರಿಬೇವು ಸೊಪ್ಪು
  • ಒಣಮೆಣಸಿನಕಾಯಿ ಎರಡು
  • ಒಂದು ಚಿಟಿಕೆ ಉಪ್ಪು
  • ಇಂಗು
  • ಅರ್ಧ ಗಿಟುಕು ಕೊಬ್ಬರಿ
  • ಗೊಡಂಬಿ 50 ಗ್ರಾಂ
  • ಉಪ್ಪು ಒಂದು ಸಣ್ಣ ಚಮಚ

ಉದ್ದಿನಬೇಳೆ ಚಿತ್ರಾನ್ನ ಮಾಡುವ ವಿಧಾನ ಕನ್ನಡ | Uddina Bele Chitranna Recipe in kannada

         ಅನ್ನ ಮಾಡಿಟ್ಟುಕೊಳ್ಳಿ.ಒಲೆಯ  ಮೇಲೆ ಬಾಣಲೆ ಇಡಿ.ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಉದ್ದಿನಬೇಳೆ ಮತ್ತು ಇಂಗನ್ನು ಹುರಿದುಕೊಳ್ಳಿ. ಹುರಿದ ನಂತರ ಅದನ್ನು ಕುಟ್ಟಿ ಪುಡಿ ಮಾಡಿ. ಒಲೆಯ ಮೇಲೆ ದೊಡ್ಡ ಪಾತ್ರೆ ಇಡಿ. ಎಣ್ಣೆ, ತುಪ್ಪ ಎರಡನ್ನೂ ಬೆರಸಿ ಪಾತ್ರೆಯಲ್ಲಿ ಹಾಕಿ. ಅದಕ್ಕೆ ಸಾಸಿವೆ ಮತ್ತು ಒಣಮೆಣಸಿನಕಾಯಿ ಚೂರುಗಳನ್ನು ಹಾಕಿ ಸಾಸಿವೆ ಸಿಡಿದ ನಂತರ ಗೊಡಂಬಿ ಚೂರುಗಳು, ಕರಿಬೇವಿನ ಎಲೆಗಳನ್ನು ಹಾಕಿ ಕೆದಕಿ, ಅದರ ಮೇಲೆ ಅನ್ನ ಹಾಕಿ. ಉಪ್ಪಿನ ಪುಡಿ ಹಾಗೂ ಉದ್ದಿನ ಬೆಳೆಪುಡಿಯನ್ನು ಅನ್ನಕ್ಕೆ ಹಾಕಿ.ಜೊತೆಗೆ ಕಲಸಿ ಉದ್ದಿನಬೇಳೆ ಚಿತ್ರಾನ್ನ ಈಗ ಸಿದ್ದ.

4.ಮೊಸರನ್ನ | Mosaranna

Mosaranna recipe in Kannada
Mosaranna recipe in Kannada

ಮೊಸರನ್ನ ಮಾಡಲು ಬೇಕಾಗುವ ಪದಾರ್ಥಗಳು | Mosaranna recipe in Kannada Ingredients

  • ಅರ್ಧ ಕೆ.ಜಿ ಅಕ್ಕಿ
  • ಒಂದು ಸೇರು ಗಟ್ಟಿ ಮೊಸರು
  • ಉಪ್ಪು
  • ಒಂದು ಹೋಳು ತೆಂಗಿನಕಾಯಿ
  • ಸಾಸಿವೆ
  • ಅರ್ಧ ಚಮಚ ಮೆಂತ್ಯ
  • ಹಸಿಮೆಣಸಿನಕಾಯಿ ಎಲೆಂಟು
  • ಒಂದು ಬಟ್ಟಲು ಹಾಲು
  • ಕೊತಂಬರಿ ಸೊಪ್ಪು ಎರಡು ಕಟ್ಟು
  • ಹಸಿಶುಂಠಿ ಒಂದೆರಡು ಚೂರು
  • ಒಗ್ಗರಣೆ ತುಪ್ಪ

ಮೊಸರನ್ನ ಮಾಡುವ ವಿಧಾನ | Mosaranna recipe in kannada

           ಚೆನ್ನಾಗಿ ತೊಳೆದು ಅಕ್ಕಿಯಿಂದ ಉದುರುದುವಾಗಿ ಅನ್ನ ಮಾಡಿಕೊಂಡು ಅರಲು ಬಿಡಿ.ಬಾಣಲೆಯನ್ನು ಒಲೆಯ ಮೇಲಿಟ್ಟು ಬಾಣಲೆಗೆ ತುಪ್ಪ ಹಾಕಿ ಸಾಸಿವೆ ಸಿಡಿಸಿ, ಮೆಂತ್ಯ, ಹೆಚ್ಚಿಟ್ಟ ಹಸಿಮೆಣಸಿನಕಾಯಿ,ಕೊತಂಬರಿಸೊಪ್ಪು ಹಾಕಿ ಚೆನ್ನಾಗಿ ಕೆದಕಿ ಒಗ್ಗರಣೆ ಮಾಡಿಕೊಳ್ಳಿ.ಅನ್ನವನ್ನು ಒಂದು ತಟ್ಟೆಯಲ್ಲಿ ಹಾಕಿಕೊಂಡು ಉಪ್ಪು, ಕಾಯಿತುರಿ ಹಾಕಿ. ಮೊಸರು ಮತ್ತು ಹಾಲು ಇವೆರಡನ್ನು ಅನ್ನಕ್ಕೆ ಹಾಕಿ ಕಲಸಿ.ಹಸಿ ಶುಂಠಿ ಸಣ್ಣಗೆ ಹೆಚ್ಚಿ ಅಥವಾ ಜಜ್ಜಿ ಹಾಕಿ. ಮಾಡಿಟ್ಟುಕೊಂಡ ಒಗ್ಗರಣೆಯನ್ನು ಹಾಕಿ ಇನ್ನೊಮೆ ಚೆನ್ನಾಗಿ ಕಲಸಿ. ಬೇಕಾದರೆ ಒಗ್ಗರಣೆಗೆ ಕಡಲೆಬೇಳೆಯನ್ನು ಹಾಕಬಹುದು.

Also Read – 8 ವಿವಿಧ ತರಹದ ದೋಸೆ ತಿಂಡಿಗಳು in Kannada

5.ಹೇರಳೆಕಾಯಿ ಅನ್ನ | Heralekai Rice Recipe

Heralekai Chitranna
Heralekai Chitranna

ಹೇರಳೆಕಾಯಿ ಅನ್ನ ಮಾಡಲು ಬೇಕಾಗುವ ಪದಾರ್ಥಗಳು | Heralekai Recipe Ingredients

  • ಎರಡು ದೊಡ್ಡ ರಸವತ್ತಾದ ಹೆರೆಳೆಕಾಯಿ(Heralekai)
  • ಅರ್ಧ ಕೆ.ಜಿ ಅಕ್ಕಿ
  • ಸಾಸಿವೆ
  • ಹತ್ತು ಕಾಳು ಮೆಣಸು
  • ನಾಲ್ಕು ಚಮಚ ಜೀರಿಗೆ
  • ಕಡಲೆಬೇಳೆ
  • ಉದ್ದಿನಬೇಳೆ
  • ತುಪ್ಪ
  • ಹಸಿಮೆಣಸಿನಕಾಯಿ
  • ಕರಿಬೇವು

ಹೇರಳೆಕಾಯಿ ಅನ್ನ ಮಾಡುವ ವಿಧಾನ | Heralekai Chitranna Recipe Method

           ಅಕ್ಕಿಯಿಂದ ಅನ್ನ ಮಾಡಿಟ್ಟುಕೊಳ್ಳಿ. ಹೆರಳೆಕಾಯಿಯನ್ನು ಅರ್ಧಕ್ಕೆ ಹೆಚ್ಚಿ ರಸವನ್ನು ತೆಗೆದು ಒಂದು ಬಟ್ಟಲಿನಲ್ಲಿ ಹಾಕಿಟ್ಟುಕೊಳ್ಳಿ. ಜೀರಿಗೆ ಹಾಗೂ ಮೆಣಸು ಇವೆರಡನ್ನೂ ಸ್ವಲ್ಪ ಹುರಿದು ಒರಳಿನಲ್ಲಿ ಹಾಕಿ ಕುಟ್ಟಿಟ್ಟುಕೊಳ್ಳಿ. ಬಾಣಲೆಯನ್ನು ಓಲೆ ಮೇಲಿಟ್ಟು ಬಾಣಲೆಗೆ ತುಪ್ಪ ಹಾಕಿ ಸಾಸಿವೆ ಸಿಡಿಸಿ ಕಡಲೆಬೇಳೆ, ಉದ್ದಿನಬೇಳೆ, ಹಸಿಮೆಣಸಿನಕಾಯಿ, ಕರಿಬೇವು ಇವುಗಳನ್ನು ಹಾಕಿ ಒಗ್ಗರಣೆ ಮಾಡಿಟ್ಟುಕೊಳ್ಳಿ.ಈ ಒಗ್ಗರಣೆಯನ್ನು ಅನ್ನಕ್ಕೆ ಹಾಕಿ.ಬೀಜರಹಿತ ಹೆರಳೆಕಾಯಿ ರಸವನ್ನು ಅನ್ನಕ್ಕೆ ಬೆರಸಿ. ಮೆಣಸು ಜೀರಿಗೆ ಪುಡಿಯನ್ನು ಅನ್ನದೊಡನೆ ಸೇರಿಸಿ ಚೆನ್ನಾಗಿ ಕಲಸಿ.ಅನ್ನ ಬಿಸಿಯಾಗಿದ್ದಾಗ ತಿನ್ನಲು ಚೆನ್ನ.

6. ನಿಂಬೆಕಾಯಿ ಗೊಜ್ಜಿನ ಅನ್ನ | Lemon Rice

Lemon rice in kannada
Lemon rice in kannada

ನಿಂಬೆಕಾಯಿ ಗೊಜ್ಜಿನ ಅನ್ನ ಮಾಡಲು ಬೇಕಾಗುವ ಪದಾರ್ಥಗಳು | Lemon rice ingredients in kannada

  • ಅರ್ಧ ಕೆ .ಜಿ ಅಕ್ಕಿ
  • ನಾಲ್ಕು ನಿಂಬೆಹಣ್ಣು
  • ನಾಲ್ಕೈಯ್ದು ಒಣಮೆಣಸಿನಕಾಯಿ
  • ಒಂದು ಹೋಳು ತೆಂಗಿನಕಾಯಿ
  • ಒಂದು ಚಮಚ ಸಾಸಿವೆ
  • ಕಡಲೆಬೇಳೆ
  • ಉದ್ದಿನ ಬೇಳೆ
  • ಒಂದು ಚಿಟಿಕೆ ಅರಿಸಿನ
  • ಉಪ್ಪು
  • ಗೊಡಂಬಿ 25 ಗ್ರಾಂ
  • ಕರಿಬೇವು
  • ಎಣ್ಣೆ
  • ಹಸಿ ಕಡಲೆಕಾಯಿ ಬೀಜ

ನಿಂಬೆಕಾಯಿ ಗೊಜ್ಜಿನ ಅನ್ನ ತಯಾರಿಸುವ ವಿಧಾನ | Lemon Rice Recipe in Kannada

           ಕಾಯಿತುರಿ, ಮೆಣಸಿನಕಾಯಿ, ಸಾಸಿವೆ, ಅರಿಶಿನ ಮತ್ತು ಉಪ್ಪು ಇವೆಲ್ಲವನ್ನು ಒರಳಿನಲ್ಲಿ ಅಥವಾ ಮಿಕ್ಸಿನಲ್ಲಿ ಹಾಕಿ ರುಬಿಟ್ಟುಕೊಳ್ಳಿ. ಅನ್ನ ಮಾಡಿರಬೇಕು, ಒಲೆಯ ಮೇಲಿಟ್ಟ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ,ರುಬ್ಬಿಟ್ಟುಕೊಂಡ ಮಸಾಲೆಯನ್ನು ಬಾಣಲೆಗೆ ಹಾಕಿ,ನಿಂಬೆಕಾಯಿ ರಸವನ್ನು ಮಸಾಲೆಗೆ ಬೆರೆಸಿ ಗೊಟಾಯಿಸಿ ಬಾಣಲೆ ಕೆಳಗಿಳಿಸಿ.ಅನ್ನ ಆರಿದ ಮೇಲೆ ನಿಂಬೆಕಾಯಿ ಗೊಜ್ಜನ್ನು ಅನ್ನದೊಡನೆ ಸೇರಿಸಿ ಕಲಸಿ.ಅನ್ನಕ್ಕೆ ಒಗ್ಗರಣೆ ತಯಾರಿಸಿ ಹಾಕಿ.ಒಗ್ಗರಣೆಗೆ ಕಡಲೆಕಾಯಿ ಬೀಜ,ಗೊಡಂಬಿಯನ್ನು ಸೇರಿಸಿ.ಈ ಅನ್ನವನ್ನು ಆರಿದ ಮೇಲೆ ತಿಂದರೆ ರುಚಿ ಇನ್ನು ಹೆಚ್ಚು.

7. ಮಾವಿನಕಾಯಿ ಚಿತ್ರಾನ್ನ | Mavinakayi Chitranna

Mavinakayi chitranna
Mavinakayi chitranna

ಮಾವಿನಕಾಯಿ ಚಿತ್ರಾನ್ನ ಮಾಡಲು ಬೇಕಾಗುವ ಪದಾರ್ಥಗಳು | Mavinakayi chitranna recipe in kannada Ingredients

  • ಅರ್ಧ ಕೆ.ಜಿ ದಪ್ಪವಾದ ಒಂದು ಮಾವಿನಕಾಯಿ
  • ಇತರ ಒಗ್ಗರಣೆ ಸಾಮಾನುಗಳು

ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ | Mavinakayi chitranna recipe in kannada

            ಅನ್ನ ಮಾಡಿಟ್ಟುಕೊಳ್ಳಿ.ಮಾವಿನಕಾಯಿ ತೊಳೆದು ಕೊಬ್ಬರಿ ತುರಿಯುವಂತೆ ತುರಿದಿಟ್ಟು ಕೊಳ್ಳಿ.ಅನ್ನಕ್ಕೆ ಒಗ್ಗರಣೆ ಹಾಕಿ.ಮಾವಿನ ಕಾಯಿತುರಿ ಹಾಕಿ ಕಲಸಿ.ಬೇಕಾದರೆ ಅರ್ಧ ಗಿಟುಕು ಕೊಬ್ಬರಿ ತುರಿಯನ್ನು ಹಾಕಬಹುದು.

8. ಪೊಂಗಲ್ | Pongal

Pongal recipe in kannada
Pongal recipe in kannada

ಪೊಂಗಲ್ ಮಾಡಲು ಬೇಕಾಗುವ ಪದಾರ್ಥಗಳು | Pongal recipe Ingredients in kannada

  • ಒಂದು ಕೆ.ಜಿ ಅಕ್ಕಿ
  • ಕಾಲು ಕೆ.ಜಿ ಹೆಸರುಬೇಳೆ
  • ಉಪ್ಪು ಒಂದು ಚಮಚ
  • ಕಾಲು ಕೆ.ಜಿ ಬೆಣ್ಣೆ ಕಾಯಿಸಿದ ತುಪ್ಪ
  • ಅರಿಶಿನ ಒಂದು ಚಿಟಿಗೆ
  • ಒಂದು ಚಮಚ ಮೆಣಸು
  • ಒಂದು ಚಮಚ ಜೀರಿಗೆ
  • ಲವಂಗ
  • ಒಂದು ಗಿಟುಕು ಕೊಬ್ಬರಿ
  • ಗೊಡಂಬಿ

ಪೊಂಗಲ್ ಮಾಡುವ ವಿಧಾನ | Pongal Recipe in Kannada

           ಹೆಸರು ಬೆಳೆಯನ್ನು ಸ್ವಲ್ಪ ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಸಿ,ಕುದಿಯುತ್ತಿರುವ ನೀರಿಗೆ ಅಕ್ಕಿ ತೊಳೆದು ಹಾಕಿ ಅಕ್ಕಿ ಮುಕ್ಕಾಲು ಭಾಗ ಬಂದಾಗ ಹುರಿದಿಟ್ಟ ಹೆಸರುಬೇಳೆ ಹಾಕಿ ಜೊತೆಗೆ ಅರಿಶಿನಪುಡಿ ಹಾಕಿ ತಟ್ಟೆ ಮುಚ್ಚಿಡಿ. ಅನ್ನ, ಹೆಸರುಬೇಳೆ ಬೆಂದ ಮೇಲೆ ಪಾತ್ರೆ ಕೆಳಗಿಡಿ.

ಬಾಣಲೆಯನ್ನು ಓಲೆ ಮೇಲೇರಿಸಿ ತುಪ್ಪ ಹಾಕಿ ಜೀರಿಗೆ, ಮೆಣಸು, ಲವಂಗದ ಚೂರು, ಗೊಡಂಬಿ ಇವುಗಳನ್ನು ಹಾಕಿ ಒಗ್ಗರಣೆ ತಯಾರಿಸಿ. ಒಗ್ಗರಣೆಯನ್ನು ಹೆಸರುಬೇಳೆ ಅನ್ನಕ್ಕೆ ಹಾಕಿ ಅನ್ನದ ಕೈಯಿಂದ ಗೊಟಾಯಿಸಿ.ಜೊತೆಗೆ ಕೊಬ್ಬರಿ ತುರಿ ಹಾಕಿ ಕೆದಕಿ. ಇದೀಗ ಪೊಂಗಲ್ ಸಿದ್ದ.

9. ಸಿಹಿ ಪೊಂಗಲ್ | Sweet Pongal

Sweet pongal recipe
Sweet pongal recipe

ಸಿಹಿ ಪೊಂಗಲ್ ಮಾಡಲು ಬೇಕಾಗುವ ಪದಾರ್ಥಗಳು | Sweet pongal recipe ingredients in kannada

  • ಒಂದು ಕೆ .ಜಿ ಅಕ್ಕಿ
  • ಸಕ್ಕರೆ
  • ಕೊಬ್ಬರಿ ಒಂದು ಗಿಟುಕು
  • ಗೊಡಂಬಿ ದ್ರಾಕ್ಷಿ ಐವತ್ತು ಗ್ರಾಂ
  • ಏಲಕ್ಕಿ ಕಾಯಿ ಐದಾರು
  • ಕಾಲು ಕೆ.ಜಿ ತುಪ್ಪ

ಸಿಹಿ ಪೊಂಗಲ್ ಮಾಡುವ ವಿಧಾನ | Sweet pongal recipe in kannada

        ಅಕ್ಕಿಯಿಂದ ಅನ್ನ ಮಾಡಿ, ಅನ್ನ ಒಲೆಯ ಮೇಲಿರುವಾಗಲೇ ಸಕ್ಕರೆ ಹಾಕಿ ಜೊತೆಗೆ ತುಪ್ಪವನ್ನು ಹಾಕಿ ಅನ್ನ ಗಟ್ಟಿಯಾಗುವರೆಗೂ ಗೊಟಾಯಿಸಿ. ಅನಂತರ ದ್ರಾಕ್ಷಿ, ಗೊಡಂಬಿಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಂಡು ಅನ್ನಕ್ಕೆ ಹಾಕಿ,ಜೊತೆಗೆ ಏಲಕ್ಕಿ ಪುಡಿ ಸೇರಿಸಿ, ಪಾತ್ರೆ ಕೆಳಗಿಟ್ಟು ಕೊಬ್ಬರಿ ತುರಿ ಹಾಕಿ.ಅತಿಥಿಗಳು ಬಂದಾಗ ಬೇಗ ತಯಾರಿಸಲು ಇದೊಂದು ಒಳ್ಳೆಯ ಸಿಹಿ ತಿಂಡಿಯು ಹೌದು.

Also Read – 8 ವಿವಿಧ ತರಹದ Avalakki ತಿಂಡಿಗಳು 

Leave a Reply