ಗೋಬಿ ಮಂಚೂರಿ | Gobi Manchurian Recipe in Kannada

ಗೋಬಿ ಮಂಚೂರಿ

ಗೋಬಿ ಮಂಚೂರಿ ಎಲ್ಲರಿಗೂ ತುಂಬಾ ಇಷ್ಟವಾದ ಸ್ನಾಕ್ಸ್ ತಿಂಡಿಯಾಗಿದೆ. ಚಿಕ್ಕವರಿಂದ – ದೊಡ್ಡವರಿಗೂ ಇಷ್ಟವಾದ ಸ್ನಾಕ್ಸ್ ಆಗಿದೆ. ಹೆಚ್ಚಾಗಿ ಮನೆಯಲ್ಲಿ ಮಾಡಿರುವ ತಿಂಡಿಗಳು ಕಡಿಮೆ ರುಚಿ ನೀಡುತ್ತವೆ. ಆದರೆ ಅಂಗಡಿಯಲ್ಲಿ ಮಾಡಿರುವ ತಿಂಡಿಗಳು ಹೆಚ್ಚಾಗಿ ರುಚಿ ನೀಡುತ್ತವೆ. ಪ್ರತಿನಿತ್ಯ ಅಂಗಡಿಯಲ್ಲಿ ತಿನ್ನುವುದರಿಂದ ಹಣ ಖರ್ಚ್ ಆಗುತ್ತದೆ. ಪ್ರತಿದಿನ ಒಂದೇ ಸ್ನಾಕ್ಸ್ ತಿನ್ನುವುದರಿಂದ ಬೇಸರವಾಗುತ್ತದೆ ಅಲ್ಲದೆ ನಾಲಗೆ ಗೆ ರುಚಿ ಕಡಿಮೆಯಾಗುತ್ತದೆ.
ಆದರಿಂದ ವಾರದಲ್ಲಿ ಒಂದು ಬಾರಿ ಮನೆಯಲ್ಲಿ ಮಾಡಿಕೊಳ್ಳುವುದರಿಂದ ಚೆನ್ನಾಗಿ ಇರುತ್ತದೆ. ಮನೆಯಲ್ಲಿಯೇ ಗೋಬಿ ಮಂಚೂರಿ ಮಾಡಲು ಬೇಕಾಗುವ ಪದಾರ್ಥಗಳು ಅಂಗಡಿಯಿಂದ ತೆಗೆದುಕೊಂಡು ಬಂದು ರುಚಿಯಾಗಿ ಅಥವಾ ಸ್ವಾದವಾಗಿ ಮಾಡಿಕೊಂಡು ತಿನ್ನಬಹುದು.

Gobi Manchurian Recipe in Kannada
Gobi Manchurian Recipe in Kannada | Image Source – Wikimedia Commons

ಗೋಬಿ ಮಂಚೂರಿ ಮಾಡಲು ಬೇಕಾಗುವ ಪದಾರ್ಥಗಳು

 • ಹುಕೋಸು – 1/2 k.g
 • ಮೈದಾ ಹಿಟ್ಟು – 100 gm
 • ಕಾರ್ನ್ ಹಿಟ್ಟು ( corn flour ) – 50 gm
 • ಶುಂಠಿ – ಬೆಳ್ಳುಳ್ಳಿ ಪೇಸ್ಟ್
 • ಟೊಮೇಟೊ ಸಾಸ್
 • ಕರೀಮೆಣಸಿನ ಪುಡಿ
 • ರೆಡ್ ಚಿಲ್ಲಿ ಸಾಸ್
 • ವೀಣೆಗಾರ್
 • ಕರಿಬೇವು – ಕೊತ್ತಂಬರಿ
 • ಈರುಳ್ಳಿ
 • ಉಪ್ಪು, ಕೆಂಪು ಖಾರದ ಪುಡಿ
 • ಹಸಿಮೆಣಸಿನಕಾಯಿ
 • ಸೋಯಾ ಸಾಸ್

Also Read – 9 Different Types of Rice Recipes in Kannada

ಗೋಬಿ ಮಂಚೂರಿ ಮಾಡುವ ವಿಧಾನ | Gobi Manchurian Recipe in Kannada

ಒಂದು ಬಾಣಲೆಯಲ್ಲಿ ನೀರು ಹಾಕಿ ಚೆನ್ನಾಗಿ ಕುದಿಸಬೇಕು ಆ ಕುದಿಯುವ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಬೇಕು.ನಂತರ ಸ್ವಚ್ಛ ಮಾಡಿರುವ ಅಥವಾ ಹೆಚ್ಚಿರುವ ( ಪೀಸ್ ) ಹುಕೋಸಗಳನ್ನು ಆ ಕುದಿಯುವ ನೀರಿಗೆ ಹಾಕಿ ಚೆನ್ನಾಗಿ ಮೆತ್ತಗೆ ಆಗುವರೆಗೂ ಕುದಿಸಬೇಕು. ಆ ಬಿಸಿ ನೀರಿನಲ್ಲಿ ಕುದಿಸುವ ಕಾರಣವೇನೆಂದರೆ ಹುಕೋಸನಲ್ಲಿಧೂಳು ಅಲ್ಲದೆ ಸೂಕ್ಷ್ಮಜೀವಿ ಹುಳುಗಳು ಇರುತ್ತವೆ. ಅದಕ್ಕೆ ಅವುಗಳನ್ನು ಬಿಸಿ ನೀರಿನಲ್ಲಿ ಕುದಿಸಬೇಕು.

ನಂತರ ಕುದಿಸಿದ ಹುಕೋಸಗಳನ್ನು ಒಂದು ಪಾತ್ರೆಯಲ್ಲಿ ಹಾಕಬೇಕು.ಹಾಕಿದ ಹುಕೋಸಗಳು ಸ್ವಲ್ಪ ಡ್ರೈಯಾಗಿರಬೇಕು. ನಂತರ ಹುಕೋಸಗಳಿಗೆ ಸ್ವಲ್ಪ ಕೆಂಪು ಖಾರ, ಉಪ್ಪು, 100 ಗ್ರಾಂ ಕಾರ್ನ್ ಫ್ಲೋರ್, 50 ಗ್ರಾಂ ಮೈದಾ ಹಿಟ್ಟು ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಎಲ್ಲವನ್ನೂ ಚೆನ್ನಾಗಿ ಗಟ್ಟಿಯಾಗಿ ಕಲಿಸಬೇಕು.

ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ, ಎಣ್ಣೆ ಕಾದ ಬಳಿಕ ಗಟ್ಟಿಯಾಗಿ ಕಲಿಸಿದ ಹುಕೋಸಗಳನ್ನು ಎಣ್ಣೆಯಲ್ಲಿ ಸಣ್ಣನೆ ಉರಿಯಲ್ಲಿ ಇಟ್ಟುಕೊಂಡು ಕೆಂಪಾಗುವರೆಗೂ ಕರಿಯಬೇಕು ಒಂದೇ ಬಾರಿ ಕರಿಯುದಕ್ಕಿಂತ ಎರಡು ಬಾರಿ ಕರಿಯುವುದು ಉತ್ತಮ, ಎರಡು ಬಾರಿ ಕರಿದರೆ ಗೋಬಿ ಕ್ರಿಸ್ಪಿ ಆಗಿರುತ್ತವೆ.ನಂತರ ಒಂದು ಬಟ್ಟಲಿನಲ್ಲಿ ಮೂರು ಸ್ಪೂನ್ ಟೊಮೇಟೊ ಸಾಸ್, ಒಂದು ಸ್ಪೂನ್ ರೆಡ್ ಚಿಲ್ಲಿ ಸಾಸ್, ಒಂದು ಸ್ಪೂನ್ ಸೋಯಾ ಸಾಸ್ ಹಾಕಿ ತಯಾರಿಸಿಟ್ಟುಕೊಳ್ಳಬೇಕು.

ನಂತರ ಒಂದು ಕಡಾಯಿಯಲ್ಲಿ ಸ್ವಲ್ಪ ಎಣ್ಣೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಬೇಕು. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಕೆಂಪಗುವರೆಗೂ ಕಲಿಸಬೇಕು. ಆಮೇಲೆ ತಯಾರಿಸಿಕೊಂಡ ಸಾಸ್ ನ್ನು ಅದಕ್ಕೆ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಕರಿದ ಗೋಬಿಯನ್ನು ಅದಕ್ಕೆ ಹಾಕಿ ಜೋರಾದ ಹುರಿಯನ್ನು ಇಟ್ಟುಕೊಂಡು ಫ್ರೈ ಮಾಡಿಕೊಳ್ಳಬೇಕು, ಮಾಡಿದ ನಂತರ ಅದಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪು ಮೇಲೆ ಉದುರಿಸಬೇಕು. ನಂತರ ಒಂದು ತಟ್ಟೆಯಲ್ಲಿ ಗೋಬಿ ಮಂಚೂರಿ ಹಾಕಿ ಅದರ ಮೇಲೆ ಇನ್ನು ಸ್ವಲ್ಪ ಕೊತ್ತಂಬರಿ,ಈರುಳ್ಳಿ ಅಥವಾ ಎಲೆಕೊಸನ್ನು ಹಾಕಿಕೊಂಡು ತಿನ್ನದ್ರೆ ತುಂಬಾ ರುಚಿಯಾಗಿರುತ್ತದೆ.

Also Read – 8 Different variety of dosa recipe in kannada

Leave a Reply