Kannada Gadegalu with explanation in Kannada |ಗಾದೆ ಮಾತುಗಳು

Kannada gadegalu with kannada explanation | Kannada Proverbs in Kannada explanation | 5 ಗಾದೆ ಮಾತುಗಳು in kannada with kannada Explanation |

1. ದೇಶ ಸುತ್ತಬೇಕು, ಕೋಶ ಓದಬೇಕು – ಗಾದೆ ಮಾತು

ಗಾದೆ ಮಾತುಗಳು ಜಾನಪದ ಕಲಾಪ್ರಕಾರವಾಗಿದ್ದು, ಚಿಕ್ಕ ವಾಕ್ಯದಲ್ಲಿ ಅಪಾರ ಅರ್ಥವನ್ನು ಒಳಗೊಂಡಿರುತ್ತದೆ. ಆದ್ದರಿಂದ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯೇ ಗಾದೆಗಳಿಗೆ ಆನೆಯವಾಗುತ್ತದೆ.. ‘ ದೇಶ ಸುತ್ತಬೇಕು, ಕೋಶ ಓದಬೇಕು ‘ ಇದೊಂದು ಪ್ರಸಿದ್ಧವಾದ ಗಾದೆ, ದೇಶ ಸುತ್ತುವ ಮೂಲಕ ಲೋಕಜ್ಞಾಯನವನ್ನು ವ್ಯವಹಾರ ಜ್ಞಾನವನ್ನು ಗಳಿಸಿಕೊಳ್ಳಬೇಕು. ಕೋಶ ಅಂದರೆ ಪುಸ್ತಕವನ್ನು ಓದುವ ಮೂಲಕ ವಿಜ್ಞಾನ, ತಂತ್ರಜ್ಞಾನ, ಧಾರ್ಮಿಕ ಮುಂತಾದ ವಿಚಾರಗಳನ್ನು ಗ್ರಹಿಸಕೊಳ್ಳಬೇಕು. ಆಗ ಮಾತ್ರ ಪರಿಪೂರ್ಣ ಜ್ಞಾನಿ ಎನಿಸಿಕೊಳ್ಳಲು ಸಾಧ್ಯ ಎಂಬ. ಅರ್ಥವನ್ನು ಈ ಗಾದೆ ಹೊಮ್ಮಿಸುತ್ತದೆ. ಲೋಕಜ್ಞಾನವಿಲ್ಲದ ಬರೇ ಪುಸ್ತಕದ ಜ್ಞಾನ ಕೂಡ ಅಪೂರ್ಣವೇ ಸರಿ. ಅದು ಎಷ್ಟೋ ಬಾರಿ ಉಪಯೋಗಕ್ಕೆ ಬರುವುದಿಲ್ಲ ಎಂಬುವುದನ್ನು ‘ ಪುಸ್ತಕದ ಬದನೆಕಾಯಿ ಸಾರಿಗೆ ಬರುವುದಿಲ್ಲ ‘ ಎಂಬ ಗಾದೆ ಸೂಚಿಸುತ್ತದೆ.

ಓದು ಬರಹ ಬಾರದೆ, ಪುಸ್ತಕಗಳ ಜ್ಞಾನವಿಲ್ಲದೆ ಕೇವಲ ಲೋಕಜ್ಞಾನ ವ್ಯವಹಾರಿಕ ಜ್ಞಾನಗಳು ಒಮ್ಮಮ್ಮೆ ಉಪಯೋಗಕ್ಕೆ ಬಾರದೆ ನಿಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತವೆ. ಉದಾಹರಣೆ – ವ್ಯವಹಾರದಲ್ಲಿ ಲೋಕಜ್ಞಾನದಲ್ಲಿ ಬಹಳ ಜಾಣನಾದ ವ್ಯಕ್ತಿಗೆ ಬರವಣಿಗೆ ಬಾರದೆ ಇದ್ದರೆ ಆತನನ್ನು ಇತರರು ಮೋಸ ಮಾಡಬಹುದು. ಬರೇ ಪದವಿಯನ್ನು ಪಡೆದು ಕೊಂಡಾತ ಲೋಕಜ್ಞಾನಾವಿಲ್ಲದತನಿಗೆ ಒಬ್ಬ ಹೂ ಮಾರುವಕೆ ಮೋಸ ಮಾಡಬಹುದು. ಅದರಿಂದ ಜಗತ್ತಿನಲ್ಲಿ ಓಡಾಡಿ, ವ್ಯವವಹಾರಗಳಲ್ಲಿ ತೊಡಗಿ ಲೋಕಜ್ಞಾನವನ್ನು ಗಳಿಸಿಕೊಳ್ಳಬೇಕು ಎಂಬುವುದನ್ನು ನಿಮ್ಮ ಜಾನಪದರು ಬಹಳ ಚೊಕ್ಕವಾಗಿ ದೇಶ ಸುತ್ತಬೇಕು ಎಂದಿದ್ದಾರೆ. ದೇಶ ಸುತ್ತಬೇಕು ಎಂದಿದ್ದಾರೆ. ದೇಶ ಸುತ್ತಬೇಕು ಎಂದರೆ ಸುಮ್ಮನೆ ಅರ್ಥವಿಲ್ಲದೆ, ಅಳೆಯುವುದಲ್ಲ ದೇಶ ಸುತ್ತುವ ಮೂಲಕ ಅಧಿಕ ಜ್ಞಾನವನ್ನು ಸಂಪಾಧಿಸಿಕೊಳ್ಳಬೇಕು. ಹಾಗೆಯೇ ಕೋಶವನ್ನು ಓದುವ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂಬ ಸಂದೇಶವನ್ನು ಈ ಗಾದೆ ನೀಡುತ್ತದೆ.

2. ತಾಳಿದವನು ಬಾಳಿಯಾನು – ಗಾದೆ ಮಾತು

ಗಾದೆ ಮಾತುಗಳು ಅಲಂಕಾರ ಭಾಷೆಯಲ್ಲಿದ್ದು ನಿಗೂಢರ್ತಾವನ್ನು ಹೊಂದಿರುತ್ತದೆ. ಗಾದೆ ಜಾನಪದರ ಅನುಭವದ ನುಡಿಗಳಾಗಿದ್ದು ವೇದ ಸುಳ್ಳಾದರು ಗಾದೆ ಸುಳ್ಳಾಗದು, ತಾಳಿದವನು ಬಾಳಿಯಾನು ಎಂಬ ಗಾದೆ ಜನಪ್ರಿಯ ಗಾದೆಗಳಲ್ಲಿ ಒಂದು. ತಾಳ್ಮೆ, ಸಹನೆ ಎನ್ನುವುದು ನೆಮ್ಮದಿಯ ಬದುಕಿನ ಬುನಾದಿ. ಅದು ಮನುಷ್ಯರಲ್ಲಿ ಅಂತಾಗರ್ಥವಾಗಿದ್ದರೆ ಆತ ನೆಮ್ಮದಿಯಿಂದ ಬಾಳಬಲ್ಲ. ಯಾವುದೇ ಒಂದು ಕೆಲಸವನ್ನು ಮಾಡುವಾಗ, ಮಾಡಿದಾಗ ತಾಳ್ಮೆಯಿಂದ ಅದರ ಫಲವನ್ನು ಕಾಯಬೇಕೆ ಹೊರತು ತಾಳ್ಮೆಗೆಟ್ಟರೆ ಕೆಲಸ ಹಾಳು. ವಿದ್ಯಾರ್ಥಿಯಾದವನು ತನ್ನ ಓದಿನಲ್ಲಿ ಅರ್ಥವಾಗದ ವಿಷಯವನ್ನು ತಾಳ್ಮೆಯಿಂದ ನಿಧಾನವಾಗಿ ಓದಿ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿದರೆ ಅದರಲ್ಲಿ ಆತ ಯಶಶ್ವಿಯಾಗುತ್ತನೆ.

ಒಂದೇ ಬಾರಿಗೆ ಅರ್ಥವಾಗಲ್ಲಿಲ್ಲ ಎಂಬ ಕಾರಣಕ್ಕೆ ತಾಳ್ಮೆಗೆಟ್ಟ ಪುಸ್ತಕದ ಬಗ್ಗೆ ಬೇಸರಪಟ್ಟರೆ ಆತನ ವಿದ್ಯಭ್ಯಾಸ ಹಾಳಾಗುವುದರಲ್ಲಿ ಸಂದೇಹವೇ ಇಲ್ಲ. ಜೀವನದಲ್ಲಿ ಕಷ್ಟ ಸುಖಗಳು ಸಹಜವಾಗಿ ಬರುತ್ತವೆ. ಅವುಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಕಷ್ಟಗಳು ಮಳೆಯಂತೆ ನಮ್ಮ್ ಮೇಲೆ ಸುರಿದರು ತಾಳ್ಮೆ ಕಳೆದುಕೊಳ್ಳದೆ ಅವುಗಳ ಪರಿಹಾರಕ್ಕಾಗಿ ಪ್ರಯತ್ನಿಸಬೇಕೆ ಹೊರತು ತಾಳ್ಮೆಗಟ್ಟು ಬದುಕನ್ನೇ ಕಳೆದುಕೊಳ್ಳಬಾರದು. ಕತ್ತಲಾಯಿತು ಎಂದು ಕಣ್ಣಮುಚ್ಚಿದರು ನಕ್ಷತ್ರಗಳ ಬೆಳಕು ನಮ್ಮ ಪಾಲಿಗೆ ಇಲ್ಲವಾಗುತ್ತದೆ. ಇಂದು ಕತ್ತಲಾಗಿದೆ ನಾಳೆ ಬೆಳಗು ಬರುತ್ತದೆ ಎಂಬ ತಾಳ್ಮೆಯಿಂದ ಇರುವವನ ಪಾಲಿಗೆ ನಕ್ಷತ್ರಗಳ ಬೆಳಕು ಇದ್ದೆ ಇದೆ. ಇದನ್ನೇ ತಾಳಿದವನು ಬಾಳಿಯಾನು ಎಂಬ ಗಾದೆ ಧ್ವನಿಸುತ್ತದೆ. ಆದರೆ ತಾಳ್ಮೆ ಒಂದು ವ್ಯಸನವಾಗಬಾರದು. ತಾಳ್ಮೆಯ ಹೆಸರಲ್ಲಿ ಸೋಮಾರಿಗಳಗಬಾರದು ಅದು ಕೂಡ ಅಪಾಯವೇ

3. ಹಣ್ಣಕಿಂತ ಗುಣ ಮುಖ್ಯ – ಗಾದೆ ಮಾತು

ಗಾದೆ ಮಾತುಗಳು ಜಾನಪದರ ಅನುಭವದ ನುಡಿಗಳಾಗಿದ್ದು ಜಾನಪದ ವೇದ ಎನಿಸಿಕೊಳ್ಳುತ್ತವೆ, ಆದ್ದರಿಂದಲೇ ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಗಾದೆ ಮಾತು ಕೂಡ ಪ್ರಚಲಿತದಲ್ಲಿದೆ, ‘ ಹಣಕ್ಕಿಂತ ಗುಣ ಮುಖ್ಯ ‘ ಎಂಬುವುದು ಪ್ರಸಿದ್ಧವಾದ ಗಾದೆಯಾಗಿದೆ. ” ದುಡ್ಡೇ ದೊಡ್ಡಪ್ಪ ” ಹಣ ಎಂದರೆ ಹೆಣಾನು ಬಾಯಿ ಬಿಡುತ್ತೆ ‘ ಎಂಬ ಗಾದೆ ಮಾತುಗಳು ಹಣದ ಪ್ರಾಮುಖ್ಯತೆಯನ್ನು ಸಾರುತ್ತದೆ. ಆದರೂ ಹಣಕ್ಕಿಂತ ಗುಣವೇ ಮುಖ್ಯ. ಹಣವಂತನಾದವನು ಗುಣವಂತನಾದರೆ ಆತ ಅತ್ಯುತ್ತಮ ವ್ಯಕ್ತಿಯಾಗುತ್ತಾನೆ. ಗುಣಕ್ಕೆ ಪ್ರಾಮುಖ್ಯತೆ ನೀಡದೆ ಕೇವಲ ಹಣ ಸಂಪಾದನೆಯನ್ನು ಮಾತ್ರ ಗುರಿಯಾಗಿಸಿಕೊಂಡು ದುರಹಂಕಾರದಿಂದ, ದುಷ್ಟತನದಿಂದ ಬದುಕಿದರೆ ಅವನ ಸಾವಿನಲ್ಲೂ ಜನ ಅವನನ್ನು ಶಪಿಸುತ್ತಾರೆ. ಅದರಿಂದ ಹಣವಂತನಾಗಿಲ್ಲದಿದ್ರೂ ಪರವಾಗಿಲ್ಲ ಉತ್ತಮ ಗುಣವಂತನಾಗಿರಬೇಕು. ನಾಲ್ಕು ಜನರಿಗೆ ಉಪಾಯಕಾರಿಯಾಗಿ ಬಾಳಬೇಕು. ಸಿದ್ದಯ್ಯ ಪುರಾಣಿಕರು ಹೇಳುವಂತೆ’ ಜಗವೆಲ್ಲ ನಗುತಿರಲು ಜಗದಳವು ನನಗಿರಲಿ ಜಗವೆಲ್ಲ ನಕ್ಕು ನಾನೊಬ್ಬನತ್ತರೆ ಜಗವೆನ್ನಾ ಎತ್ತಿಕೊಳ್ಳದೆ ‘ ಎಂಬ ಭಾವದಿಂದ ಬದುಕಿದ ಉತ್ತಮ ಗುಣವಂತರನ್ನು, ಸಾಧಕರನ್ನು ಸಾಹಿತ್ಯ, ಇತಿಹಾಸಗಳು ಬರೆದಿಡುತ್ತವೆ. ಅಂಥವರು ಅಮೂರ್ತರಾಗಿಯೂ ಮೂರ್ತಿರಾಗಿ ಉಳಿಯುತ್ತಾರೆ. ಉದಾಹರಣೆ -ಬುದ್ಧ ಆತ ಬರೇ ರಾಜನಾಗಿದ್ದು ರಾಜ್ಯಭಾರ ಮಾಡಿದ್ದರೆ ಆತನನ್ನು ಜನ ಮರೆತು ಬಿಡುತ್ತಿದ್ದರು, ಜನರಿಗಾಗಿ ದುಡಿದ ಆತ ಜನುಮದಲ್ಲಿ ಶಾಶ್ವತವಾಗಿ ಉಳಿದ, ಅದರಿಂದ ಹಣ ಶ್ರೀಮಂತಿಕೆಗಿಂತ ಗುಣವೇ ಮುಖ್ಯ, ಹಣವಿಲ್ಲದೆ ಜೀವನ ನಡೆಯದು

ನಿಜ ಅದು ಒಳ್ಳೆಯ ಮಾರ್ಗದಲ್ಲಿ ಸಂಪಾದಿಸಿದ ಹಣವಾಗಿರಬೇಕು, ನಾಲ್ಕು ಜನರಿಗೂ ಉಪಾಯಕಾರಿಯಾಗಿರಬೇಕು. ಅಂತಹ ಗುಣವಂತನಾದ ಮನುಷ್ಯ ಸ್ವರ್ಗವನ್ನು ಹೊಂಡುತ್ತಾನೆ ಎಂಬ ನಂಬಿಕೆಯು ನಿಮ್ಮಲಿದೆ. ಹಣವನ್ನು ಎಷ್ಟೇ ಸಂಪಾದಿಸಿದರು ಸಾವಿನ ನಂತರ ಅದು ನಮ್ಮೊಂದಿಗೆ ಬರಲಾರದು ಆಗ ನಮ್ಮೊಂದಿಗೆ ಬರುವುದು ನಾವು ಮಾಡಿದ ಪಾಪಪುಣ್ಯಗಳ ಗಂಟು ಮಾತ್ರ, ಸಾವಿನ ನಂತರದ ಮನುಷ್ಯ ದೇಹಕ್ಕೆ ಯಾವ ಬೆಲೆಯೂ ಇಲ್ಲ ಎಂಬುವುದನ್ನು ಅಲ್ಲಮ ಪ್ರಭುಗಳು ತಮ್ಮ ವಚನಗಳಲ್ಲಿ ಹೀಗೆ ಹೇಳುತ್ತಾರೆ. ಬೇಡನೊಂದು ಮೊಲವನ್ನು ಹಿಡಿದು ಕೊಂದು ಮಾರಾಟ ಮಾಡಿದರು ಸಹ ಅದಕ್ಕೆ ಸಲ್ಲುವ ಬೆಲೆಯನ್ನು ಕೊಟ್ಟು ಕೊಂಡು ಕೊಳ್ಳುತ್ತಾರೆ. ಆದ್ರೆ ರಾಜನ ಹೆಣ ಎಂದರು ಯಾರು ಒಂದರೆಗಳಿಗೆ ಇಟ್ಟುಕೊಳ್ಳುವುದಿಲ್ಲ. ಅದರಿಂದ ಹಣ್ಣಕಿಂತ ಗುಣವೇ ಮುಖ್ಯ ಎಂಬುವುದನ್ನು ಅರಿತು ಬದುಕಬೇಕು.

4. ಬೆಳೆಯುವ ಸಿರಿ ಮೊಳಕೆಯಲ್ಲಿ – ಗಾದೆ ಮಾತು

ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತೊಂದಿದೆ. ಗಾದೆ ಮಾತುಗಳು ಅನುಭವದ ನುಡಿಮುತ್ತುಗಳು. ಇದು ಜನರ ಅನುಭವದ ಸಾರ. ಒಂದು ಸಸ್ಯ ಅಥವಾ ವ್ಯಕ್ತಿಯ ಭವಿಷ್ಯವನ್ನು ಅದರ ಆರಂಬಧ ಹಂತದಲ್ಲೇ ಗುರುತಿಸಬಹುದು. ಇದೇ ಈ ಗಾದೆಯ ಸಾರ ಡಾ. ಬೀ. ಆರ್. ಅಂಬೇಡ್ಕರ್ ಇಂದು ಸಂವಿಧಾನ ಶಿಲ್ಪಿ, ಆಧುನಿಕ ಮನು ಎಂದೆಲ್ಲಾ ಖ್ಯಾತರಾಗಿದ್ದಾರೆ. ಇವರು ಈ ಹಂತವನ್ನು ಯಶಸ್ವಿಯಾಗಿ ತಲುಪುವರೆಬುವುದು ಅವರ ಬಾಲ್ಯದಲ್ಲಿಯೇ ಪ್ರಕಟ ಗೊಂಡಿತ್ತು. ಅಂಬೇಡ್ಕರ್ ಶಾಲೆಯಲ್ಲಿ ಓದುವಾಗಲೇ ಅನೇಕ ಕಹಿ ಘಟನೆಗಳನ್ನು ಎದುರಿಸಿದರು. ಸಮಾಜದಲ್ಲಿ ಕಡೆಗಣಿಸಲ್ಪಟ್ಟವರಾದ ಕಾರಣ ಅವರನ್ನು ವಿರೋಧಿಸಿದರು. ಅವರು ಅಸ್ಪುರಷ್ಯರೆಂಬ ಕಾರಣಕ್ಕೆ ಅವರಿಗೆ ಕುಡಿಯಲು ನೀರನ್ನು ಸಹ ಕೊಡುತ್ತಿರಲಿಲ್ಲ. ಅವರನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಆದನ್ನು ಅಂಬೇಡ್ಕರ್ ಆಗಲೇ ಪ್ರತಿಭಟಸಿದರು.

ತಮ್ಮವರಿಗೆ ಸಮಾನ ಸ್ಥಾನಮಾನಗಳನ್ನು ದೊರೆಕಿಸಿಕೊಡುವಲ್ಲಿ ಶ್ರಮಿಸಿದರು. ಹೀಗೆ ಬಾಲ್ಯದಲ್ಲಿನ ಅನ್ಯಾಯಗಳನ್ನು ಪ್ರತಿಭಟಿಸುವ ಮನೋಭಾವ ಅವರು ಮುಂದೆ ಸಮಾಜ ಸುಧಾರಕರಾಗುವರು ಎಂಬುವುದನ್ನು ಸೂಚಿಸುತಿತ್ತು. ಈ ಗಾದೆಯ ಇನ್ನೊಂದು ಮುಖ್ಯ ಅಂಶವೆಂದರೆ ಬಾಲ್ಯದಲ್ಲಿಯೇ ವ್ಯಕ್ತಿಯನ್ನು ತಿದ್ದಿದರೆ ಅವರನ್ನು ಸರಿಯಾದ ವ್ಯಕ್ತಿಯನ್ನಾಗಿ ರೂಪಿಸಲು ಸಾಧ್ಯ ಎಂಬುವುದಾಗಿದೆ. ಅಂದರೆ ಮಕ್ಕಳಿಗೆ ಈಗಿನಿಂದಲೇ ನ್ಯಾಯ, ನೀತಿ, ಧರ್ಮ, ಶಿಸ್ತು, ಸತ್ಯ ನುಡಿಯುವುದು ಮುಂತಾದ ಒಳ್ಳೆಯ ಗುಣಗಳನ್ನು ಕಲಿಸಬೇಕು. ಇದರಿಂದ ಮುಂದೆ ಅವರು ಸಮಾಜಕ್ಕೆ ಕಂಟಕರಾಗದೆ ಶಿಸ್ತಿನ ಸಿಪಾಯಿಗಳಗುತ್ತಾರೆ.

5. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೊಯ್ತು – ಗಾದೆ ಮಾತು

ಮಾತು ಒಮ್ಮೆ ನುಡಿದರೆ ಮುಗಿಯಿತು ಮತ್ತೆ ಮರಳಿ ವಾಪಸ್ಸು ಪಡೆಯಲಾಗುವುದಿಲ್ಲ. ಮಾತು ಆಡಿದರೆ ಹೊಯ್ತು, ಮುತ್ತು ಒಡೆದರೆ ಹೊಯ್ತು ಈ ಗಾದೆ ಕೇಳುತಿದ್ದಂತೆ ಅಡಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು ಎಂಬ ಗಾದೆಯ ನೆನಪು ಆಗುತ್ತದೆ. ಈ ಎರಡು ಗಾದೆ ಮಾತುಗಳು ನಮ್ಮ ನುಡಿ ಮತ್ತು ನಡೆಯ ಬಗ್ಗೆ ಎಚ್ಚರಿಕೆಯನ್ನು ನೀಡುತ್ತವೆ. ನಾವು ಮಾತನಾಡುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕೆಂದು ತಿಳಿಸುವುದು ಈ ಗಾದೆಯ ಉದ್ದೇಶವಾಗಿದೆ. ನಾವು ಬದುಕಿನಲ್ಲಿ ತಪ್ಪು ಲೆಕ್ಕಾಚಾರ ಹಾಕಿ ಹಣವನ್ನು ಕಳೆದುಕೊಳ್ಳಬಹುದು. ಆದರೆ ಒಮ್ಮೆ ಆಡಿದ ಮಾತನ್ನು ಹಿಂದಕ್ಕೆ ಪಡೆಯಲು ಸಾಧ್ಯವೆ ಇಲ್ಲ.

ಅದರಲ್ಲೂ ಕೆಟ್ಟ ಮಾತುಗಳನ್ನಾಡಿದರೆ ಅದರಲ್ಲೂ ಕೆಟ್ಟ ಮಾತುಗಳನ್ನಾಡಿದರೆ ಅದನ್ನು ಕೇಳಿಸಿಕೊಂಡವರು ಬದುಕಿರುವ ತನಕ ಮರೆಯಲಾರರು. ಎಷ್ಟು ಜನ ಆಡಬಾರದ ಮತಗಳನ್ನಾಡಿ ಕ್ಷಮಿಸಿ ಎಂದು ಹೇಳುವುದುಂಟು. ತಪ್ಪು ಮಾಡಿ ಕ್ಷಮೆ ಕೋರಿಕೊಳ್ಳುವುದಕ್ಕಿಂತ ತಪ್ಪನ್ನೇ ಮಾಡದಿದ್ದರೆ ಹೆಚ್ಚು ಗೌರವವಲ್ಲವೇ? ಮುತ್ತು ಒಂದು ಬೆಳೆಯುಳ್ಳ ರತ್ನ ಇದು ಒಡೆದರೆ ಅಪಾರ ನಷ್ಟವಾಗುವುದಲ್ಲದೆ ಒಡೆದು ಹೋದ ಮುತ್ತಿನಿಂದ ಮತ್ತೊಂದು ಮುತ್ತನ್ನು ತಯಾರಿಸಲಗುವುದಿಲ್ಲ. ಇದರಂತೆ ಎಚ್ಚರಿಕೆ ತಪ್ಪಿ ಮಾತನಾಡಿದ ಮಾತಿನಿಂದ ಉಂಟಾಗುವ ಪ್ರಭಾವವನ್ನು ನಾವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

Also Read – ಗಾದೆ ಮಾತುಗಳು | Kannada gadegalu with explanation | Kannada Proverbs

Leave a Reply