ಪರಿಸರ ಸಂರಕ್ಷಣೆ ಪ್ರಬಂಧ | Parisara Samrakshana Prabandha in Kannada

ಪರಿಸರ ಎಂದರೇನು?

ನಮ್ಮ ಸುತ್ತ ಮುತ್ತದಲಿರುವ ಬೆಟ್ಟ-ಗುಡ್ಡ, ಗಿಡ – ಮರ,ಕಲ್ಲು – ಮಣ್ಣು ಮತ್ತು ಪ್ರಾಣಿ – ಪಕ್ಷಿ ಮುಂತಾದವು ಒಳಗೊಂಡ ವಾತಾವರಣಕ್ಕೆ ಪರಿಸರ ಎನ್ನುತ್ತಾರೆ. ಪರಿಸರ ಎಂದರೆ ” ಹಸಿರು ” ಎಂದರ್ಥ.

ಎಲ್ಲಾ ಪ್ರಾಣಿ ಪಕ್ಷಿಗಳು ಮತ್ತು ಮನುಷ್ಯರು ಎಲ್ಲಾ ಜೀವ ರಾಶಿಗಳು ಪರಿಸರ ಮೇಲೆ ಪ್ರಭಾವಿತವಾಗಿದ್ದಾವೆ.ಪರಿಸರವನ್ನು ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ನಾವು ಪರಿಸರ ವನ್ನು ಎಷ್ಟು ಕಾಪಾಡುತ್ತೇವೆಯೋ, ಪರಿಸರ ನಮ್ಮನ್ನು ಅಷ್ಟೇ ಕಾಪಾಡುತ್ತದೆ.

Parisara Samrakshana Prabandha in Kannada
Parisara Samrakshana Prabandha in Kannada

ಇತ್ತೇಚಿನ ದಿನಗಳಲ್ಲಿ ಪರಿಸರವನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟವಾಗಿದೆ. ಮನುಷ್ಯರು ತಂತ್ರಜ್ಞಾನದ ಸಲುವಾಗಿ ಪರಿಸರವನ್ನೇ ಹಾಳು ಮಾಡುತ್ತಿದರೆ.ಅದನ್ನು ತಡೆಗಟ್ಟಲು ನಾವು ಪರಿಸರ ಸಂರಕ್ಷಣೆ ಮಾಡುವುದು ತುಂಬಾ ಅವಶ್ಯಕತೆ ಇದೆ.

ಪರಿಸರ ಸಂರಕ್ಷಣೆ ಎಂದರೇನು? | Parisara Samrakshana Prabandha

ನಮ್ಮ ಸುತ್ತ ಮುತ್ತ ದಲ್ಲಿರುವ ಬೆಟ್ಟ – ಗುಡ್ಡ, ಮನೆ – ಮಠ ಮತ್ತು ಕಲ್ಲು – ಮಣ್ಣು ಮುಂತಾದವುಗಳನ್ನು ಯಾವುದೇ ರೀತಿ ಯಿಂದ ಹಾನಿಯೊಳಗಾಗದೆ ಸ್ವಚ್ಛತೆಯಿಂದ ಕಾಪಾ ಡುವುದಕ್ಕೆ ಪರಿಸರ ಸಂರಕ್ಷಣೆ ಎನ್ನುತ್ತಾರೆ. ಪ್ರತಿ ವರ್ಷ ಜುಲೈ 28 ರಂದು “ವಿಶ್ವ ಪರಿಸರ ದಿನಾಚರಣೆ ” ಆಚರಿಸಲಾಗುತ್ತದೆ.

ಪರಿಸರ ಸಂರಕ್ಷಣೆ( Parisara Samrakshana )ಮಾಡುವುದರಿಂದ ತುಂಬಾ ಉಪಯುಕ್ತವಿದೆ. ಅಂದರೆ ಪರಿಸರ ಸಂರಕ್ಷಣೆ ಮಾಡುವುದರಿಂದ ಮನುಷ್ಯರಿಗೆ, ಪ್ರಾಣಿ – ಪಕ್ಷಿಗಳಿಗೆ ಅಲ್ಲದೆ ಮುಂತಾದ ಜೀವರಾಶಿಗಳಿಗೆ ಗಾಳಿ,ನೀರು ಮತ್ತು ಆಹಾರ ಒಳ್ಳೆಯ ರೀತಿಯಲ್ಲಿ ಸಿಗುತ್ತವೆ. ನಾವು ಮತ್ತು ಜೀವರಾಶಿಗಳು ಅವುಗಳ ಲಾಭವನ್ನು ಪಡೆವುದರಿಂದ ಒಳ್ಳೆಯ ಆರೋಗ್ಯ ಮತ್ತು ಆಯುಷ ದೊರೆಯುತ್ತವೆ.

ಪರಿಸರ ಸಂರಕ್ಷಣೆ ಎಂದರೆ ಪರಿಸರದಲ್ಲಿ ಇರುವ ಗಿಡ, ಮರ,ಗುಡ್ಡ, ಬೆಟ್ಟ ಮತ್ತು ಕಾಡುಗಳು ಇವುಗಳನೆಲ್ಲ ಸಂರಕ್ಷಣೆ ಮಾಡುವುದೇ ಪರಿಸರ ಸಂರಕ್ಷಣೆಯಾಗಿದೆ.
ನಾವು ಎಷ್ಟು ಪರಿಸರವನ್ನು ಸಂರಕ್ಷಣೆ ಮಾಡತಿವೋ ಅಷ್ಟು ಪರಿಸರ ನಮ್ಮನ್ನು ಸಂರಕ್ಷಣೆ ಮಾಡುತ್ತದೆ.

ಇದನ್ನು ಓದಿಸ್ವಚ್ಛ ಭಾರತ ಅಭಿಯಾನ| Swachh Bharat Abhiyan Essay in Kannada PDF

ಪರಿಸರ ಸಂರಕ್ಷಣೆ ಮಾಡುವ ವಿಧಗಳು

1. ನೀರಿನ ಸಂರಕ್ಷಣೆ

ನೀರು ಎಲ್ಲಾ ಜೀವಿಗಳಿಗೆ ಅಗತ್ಯವಾದ ರುಚಿರಹಿತ ಮತ್ತು ವಾಸನ – ರಹಿತ ವಸ್ತು ಇದು ಭೂಮಿಯ ಮೇಲಮೈ ಶೇ.70 ಭಾಗಗಳಲ್ಲಿ ಕಂಡು ಬರುತ್ತದೆ. ಆದರೆ ಶುದ್ಧವಾದ ಕುಡಿಯಲು ಬಯಸಬಹುದಾದ ನೀರು ಕೇವಲ ಶೇ.3 ರಷ್ಟು ಮಾತ್ರವೆ ಲಭ್ಯವಿರುತ್ತದೆ. ಆದರಿಂದ ನಾವು ನೀರಿನ ಸಂರಕ್ಷಣೆ ಮಾಡುವುದು ಅವಶ್ಯಕತೆ ಇದೆ.

ನೀರಿನ ಸಂರಕ್ಷಣೆ ಮಾಡುವ ಸಲಹೆಗಳು

 • ಅನಗತ್ಯ ನೀರಿನ ಹರಿವು ತಡೆಯಿರಿ
 • ನೀರಿನ ಅನಾವಶ್ಯಕತೆ ದುರುಪಯೋಗವನ್ನು ನಿಲ್ಲಿಸಿರಿ.
 • ತೋಟಗಳಿಗೆ ನೀರನ್ನು ಒಂದು ನಿರ್ದಿಷ್ಟ ಕಾಲಮಿತಿಯಲ್ಲಿ ಹಾಯಿಸಿರಿ.
 • ಬಟ್ಟೆ ತೊಳೆಯುವ ಯಂತ್ರವನ್ನು ಸಂಪೂರ್ಣ ಮಿತಿಯಲ್ಲಿ ಬಳಸಿರಿ.
 • ಗಿಡಗಳಿಗೆ ಆದಷ್ಟು ತುಂತುರ ಹನಿಯ ನೀರಾವರಿ ಬಳಸಿ.
 • ಬಳಸಿದ ನೀರನ್ನು ವ್ಯಹಿಸದೆ, ತೋಟಗಳಿಗೆ ಹಾಯಿಸಿ ಮತ್ತು ಮರುಬಳಕೆ ಮಾಡಿರಿ.

ನೀರಿನ ಸಂರಕ್ಷಣೆ ಮಾಡುವ ವಿಧಾನಗಳು

 • ಛಾವನಿ ನೀರಿನ ಮಳೆಕೊಯ್ಲು
 • ಮೇಲಮೈ ಹರಿವಿನ ಸಂಗ್ರಹ
 • ಬದುಗಳ ನಿರ್ಮಾಣ
 • ಒಡ್ದುಗಳ ರಚನೆ
 • ತೆರೆದ ಬಾವಿಗಳ ಮರುಪೂರ್ಣ
 • ಕೊಳವೆ ಬಾವಿಯ ಮರುಪೂರ್ಣ

2. ಅರಣ್ಯ ಸಂರಕ್ಷಣೆ

ಅರಣ್ಯ ಸಂರಕ್ಷಣೆ ಅತಿ ಮುಖ್ಯವಾದದು.ಅರಣ್ಯದಿಂದ ಬರುವ ಗಾಳಿ ಎಲ್ಲಾ ಜೀವರಾಶಿಗಳಿಗೆ ಮುಖ್ಯವಾಗಿದ್ದು. ಗಾಳಿ ಅಷ್ಟೇ ಅಲ್ಲದೆ ಗಿಡ ಮರಗಳನ್ನು ಸಂರಕ್ಷಣೆ ಮಾಡುವುದಕ್ಕೆ ಅರಣ್ಯ ಸಂರಕ್ಷಣೆ ಎನ್ನುತ್ತಾರೆ.

 • ಬೀಳಬಹುದಾದ ಮರ ಗಳನ್ನು ಗುರುತಿಸಿ ಅದನ್ನು ಕಡಿದು ಅದರ ಜಾಗದಲ್ಲಿ ಉಪಯೋಗಿಸಿ ಹೊಸ ಗಿಡಗಳನ್ನು ನೆಡಬೇಕು. ಅರಿಸಿದ ಗಿಡಗಲಿಲ್ಲದಿದ್ದರೆ ಅರಿಸಿದ ಬೀಜವನ್ನಾದರೂ ಬಿತ್ತಬೇಕು.
 • ಅರಣ್ಯದಲ್ಲಿ ವಾಸಿಸುವ ಪ್ರಾಣಿ ಪಕ್ಷಿಗಳ ಸಂರಕ್ಷಣೆ ಕೂಡಾ ಎಲ್ಲರ ಜವಾಬ್ದಾರಿ ಆಗಿದೆ.
 • ಕಾಡುಗಳಲ್ಲಿ ಸಸ್ಯಗಳು ಚೆನ್ನಾಗಿ ಬೆಳೆಯುವಂತೆ, ಸುರಕ್ಷಿತವಾಗಿ ಉಳಿಯುವಂತೆ ನೋಡಿಕೊಳ್ಳಬೇಕು.
 • ಕಾಡಗಿಚ್ಚು ಹರಡದಂತೆ, ಮರಗಳಿಗೆ ರೋಗಗಳು ತಗುಲದಂತೆ ಎಚ್ಚರ ವಹಿಸಬೇಕು.
 • ಹೊಸ ಸಸಿಯನ್ನು ಸರಿಯಾಗಿ ನೆಡುವುದು, ಗುಡ್ಡ ಬೆಟ್ಟ ಗಳಲ್ಲಿ ಅರಣ್ಯವನ್ನು ಹಬ್ಬಿಸಬೇಕು.
 • ದನ,ಕರ, ಆಡು ಮತ್ತು ಚಿಗರಿ ಇತ್ಯಾದಿ ಪ್ರಾಣಿಗಳು
  ಚಿಕ್ಕ ಗಿಡದ ಎಲೆಗಳನ್ನು ತಿನ್ನದೇ ಹಾಗೆ ಕಾಪಾಡಬೇಕು.
 • ದೊಡ್ಡ ಪ್ರಾಣಿಗಳು ಅಂದರೆ ಆನೆಗಳು ಗಿಡಗಳನ್ನು ತುಳಿದು ಹಾಳು ಮಾಡುವುದರಿಂದ ಗಿಡಗಳ ಸುತ್ತ ಮುತ್ತ ಬೇಲಿ ಹಾಕುವುದು ಉತ್ತಮ.

3. ಮಣ್ಣಿನ ಸಂರಕ್ಷಣೆ

ನದಿ, ಹಿಮನದಿ, ಮಾರುತ ಮತ್ತು ಸಮುದ್ರ ಅಲೆಗಳು ಮುಂತಾದವು ಫಲವತ್ತಾದ ಮಣ್ಣಿನ ಮೇಲ ಪದರವನ್ನು ಸವೆಸುತ್ತದೆ ಮತ್ತು ಫಲವತ್ತತೆಯನ್ನು ಕುಗ್ಗಿಸುತ್ತವೆ. ಮಣ್ಣಿನ ಸವೆತದ ನಿಯಂತ್ರಣ ಮತ್ತು ಫಲವತ್ತತೆಯನ್ನು ಕಾಪುಡುವುದಕ್ಕೆ ‘ಮಣ್ಣಿನ ಸಂರಕ್ಷಣೆ ‘ ಎನ್ನುತ್ತಾರೆ.

 • ಮಣ್ಣಿನ ಸಂರಕ್ಷಣೆ ಮಾಡುವ ಸಲಹೆಗಳು
 • ಅರಣ್ಯ ಪೋಷಣೆ ಮತ್ತು ಮರು ಅರನಿಕರಣ
 • ಅತಿಯಾಗಿ ಮೇಯಿಸುವುದನ್ನು ನಿಯಂತ್ರಿಸುವುದು.
 • ಸಮೋನ್ನತಿ ಬೇಸಾಯ
 • ಚೆಕ್ ಡ್ಯಾಮಗಳ ನಿರ್ಮಾಣ
 • ಬದುಗಳ ನಿರ್ಮಾಣ
 • ಕೊರಕಲು ನಿಯಂತ್ರಣ ಮತ್ತು ಮೆಟ್ಟಲು ಪಂಕ್ತಿ ಬೇಸಾಯ

ಇದನ್ನು ಓದಿHealth Benefits in Kannada – ಟೊಮೆಟೊ, ಹೃದಯ, ನೆಗಡಿ, ಮದ್ಯ

ಪರಿಸರದ ಸಂರಕ್ಷಣೆ ಕಾಪಾಡಲು ಕೆಲವು ಸಲಹೆಗಳು

 • ಮರಗಿಡಗಳನ್ನು ಕತ್ತರಿಸುವುದನ್ನು ನಿಲ್ಲಿಸಬೇಕು.
 • ಪ್ಲಾಸ್ಟಿಕ್ ನ್ನು ಎಸೆಯುವುದು ಮತ್ತು ಸುಡುವುದು ನಿಲ್ಲಿಸಬೇಕು.
 • ಹೆಚ್ಚಾಗಿ ಕಾರ್ಖನೆಗಳನ್ನು ಸ್ಥಾಪಿಸುವುದು ಕಡಿಮೆ ಮಾಡಬೇಕು, ಸ್ಥಾಪಿಸುವುದರಿಂದ ರಾಸಾಯನಿಕ ಹೊಗೆಗಳು ಬರುತ್ತವೆ.
 • ಪೆಟ್ರೋಲ್,ಡೀಸೆಲ್ ವಾಹನಗಳು ಬಳಸುವುದಕ್ಕಿಂತ ಬ್ಯಾಟರಿ ವಾಹನಗಳು ಬಳಸುವುದು ಉತ್ತಮ.
 • ಎಲ್ಲಿ ಬೆಕ್ಕಾದಲ್ಲಿ ಕಸ ಮತ್ತು ತಾಜ್ಯಗಳನ್ನು ಎಸೆಯಬಾರದು.
 • ಕಟ್ಟಿಗೆಗಳನ್ನು ಸುಡುವುದು ಅಥವಾ ಸೀಮೆ ಎಣ್ಣೆಯನ್ನು ಬಳಸುವುದನ್ನು ಕಡಿಮೆ ಮಾಡಬೇಕು.
 • ಹೊಗೆ ಬರುವ ವಾಹನಗಳು ಬಳಸುವುದಕ್ಕಿಂತ ಕಾಲ್ನಂಡಿಗೆ ಇಂದ ಪಯಣಿಸುವುದು ಒಳ್ಳೆಯದು.

ಪರಿಸರ ಸಂರಕ್ಷಣೆಯ ವೇದ ವಾಕ್ಯಗಳು

 • ಕಾಡುಬೆಳಸಿ ನಾಡು ಉಳಿಸಿ
 • ಪ್ರಕೃತಿ ಮಾತೇ, ನಿಜವಾದ ಅನ್ನದಾತೆ
 • ಮನೆಗೊಂದು ಮರ, ಊರಿಗೊಂದು ವನ
 • ಅಳಿದರೆ ಕಾಡು, ಅಳುವುದು ನಾಡು
 • ಕಾಡಿದ್ದರೆ ನಾವಿಲ್ಲಿ, ಕಾಡಿಲ್ಲದೆ ನಾವೆಲ್ಲಿ?
 • ಕಾಡು ಬೆಳಸಿ, ಭೂ ತಾಪಮಾನ ಇಳಿಸಿ
 • ಹಸಿರೇ ಉಸಿರು
 • ಪರಿಸರವಿದ್ದರೆ ಸಂಸಾರ..ಇದೇ ಸೃಷ್ಟಿಯ ಸಾರ
 • ಕಡಿದರೆ ಮರ, ಬರುವುದು ಬರ

ಇದನ್ನು ಓದಿಭಾರತದ ಗಣರಾಜ್ಯೋತ್ಸವ ಪ್ರಬಂಧ pdf | ಗಣರಾಜ್ಯೋತ್ಸವ ಇತಿಹಾಸ

ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ | Parisara Samrakshana Vidyarthi Pathara

ಪರಿಸರ ಸಂರಕ್ಷಣೆ ಮಾಡುವುದು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಸಂರಕ್ಷಣೆ ಮಾಡುವುದು ಕರ್ತವ್ಯಾಗಿದೆ. “ಇಂದಿನ ಮಕ್ಕಳೇ,ನಾಳಿನ ಪ್ರಜೆಗಳೇ “ ಎಂದು ಕರೆಯುತ್ತಾರೆ. ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಪ್ರತಿಯೊಬ್ಬರು ಅರಿತವರಾಗಿರುತ್ತಾರೆ.

ಪರಿಸರ ಸಂರಕ್ಷಣೆ ಮಹತ್ವದ ಬಗ್ಗೆ ಶಾಲೆಯಲ್ಲಿ ಗುರುಗಳು ಮಕ್ಕಳಿಗೆ ಹೇಳಿಕೊಡುತ್ತಾರೆ. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯವಾಗಿರುತ್ತದೆ.

ವಿಶ್ವ ಪರಿಸರ ಸಂರಕ್ಷಣೆ ದಿನದಂದು ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಾರೆ.ಅಂದರೆ

 • ವಿದ್ಯಾರ್ಥಿಗಳನ್ನು ಶಿಕ್ಷಕರ ವೇಷದಲ್ಲಿ ಉಡುಪಗಳನ್ನು ಹಾಕಿ, ಪರಿಸರ ಸಂರಕ್ಷಣೆ ಮಹತ್ವದ ಬಗ್ಗೆ ಪಾಠ ಹೇಳಿಕೊಡುವುದು.
 • ಶಾಲೆಯಲ್ಲಿ ವಿದ್ಯಾರ್ಥಿಗಳು ಗಿಡ- ಮರ ನೆಡುವುದರ ಮೂಲಕ ಪರಿಸರ ಸಂರಕ್ಷಣೆ ಅರಿವು ಮೂಡಿಸುವುದು.
 • ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಭಾವಚಿತ್ರಗಳನ್ನು ಬಿಡಿಸಿ, ಅದರ ಮೂಲಕ ಅರಿವು ಮೂಡಿಸುತ್ತ ಊರಿನ ಎಲ್ಲಾ ನಗರಗಳಲ್ಲಿ ಪ್ರಚಾರ ಮಾಡುತ್ತಾ ಹೋಗುತ್ತಾರೆ.
 • ಶಾಲೆಯಲ್ಲಿ ಗುರುಗಳು ವಿದ್ಯಾರ್ಥಿಗಳಿಗೆ ಕನ್ನಡ ಪ್ರಬಂಧ ಬರೆಯುವುದರ ಮೂಲಕ ಅಥವಾ ಭಾಷಣ ಮಾಡುವುದರ ಮೂಲಕ ಪರಿಸರ ಸಂರಕ್ಷಣೆ ಮಹತ್ವವನ್ನು ತಿಳಿಸುತ್ತಾರೆ.
 • ಶಾಲೆಗಳಿಗೆ ಪರಿಸರ ಪ್ರೇಮಿಗಳಾದ ಮಹಾತ್ಮರನ್ನು ಕರೆಸಿ, ಅವರನ್ನು ಮಕ್ಕಳ ಜೊತೆ ಪರಿಸರದ ಸಂಭಾಷಣೆ ಅಥವಾ ಚರ್ಚೆ ಮಾಡಲು ಬಿಡುತ್ತಾರೆ. ಹೀಗೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ಪರಿಸರದ ಮನೋಭಾವ ದೊರೆಯುತ್ತದೆ. ನಾವು ಪರಿಸರ ಸಂರಕ್ಷಣೆ ಮಾಡಬೇಕು ಎಂದು ಉಲ್ಲಾಸ್ ಹುರಿದುಂಬುತ್ತದೆ.

ಇದನ್ನು ಓದಿ100+ ಕನ್ನಡ ಪದಗಳ ಅರ್ಥ | Kannada Padagalu Artha

Leave a Reply