ಕನ್ನಡ ವ್ಯಾಕರಣ ಸಮಾಸ ಎಂದರೇನು ಅದರ ವಿಧಗಳು PDF

ಕನ್ನಡ ವ್ಯಾಕರಣ ಸಮಾಸ ಎಂದರೇನು?

ಕನ್ನಡ ಸಮಾಸಗಳು – ಎರಡು ಅಥವಾ ಹೆಚ್ಚು ಪದಗಳು ಸೇರಿ ಒಂದು ಶಬ್ದವಾಗುವುದು ಸಮಾಸವೆನಿಸುತ್ತದೆ. ಸಮಾಸ ಪದವೆಂಬುದರ ಅರ್ಥ ‘ ಸಮಸ್ತಪ ದ ‘ ಎಂದು. ಎರಡು ಪದಗಳು ಅರ್ಥಕ್ಕನುಸಾರವಾಗಿ ಸೇರಿ ಇಲ್ಲಿ ವಿಶೇಷ ಅರ್ಥವನ್ನು ಸೂಚಿಸುತ್ತದೆ. ಸಮಸ್ತ ಪದವನ್ನು ಅರ್ಥಕ್ಕನುಸಾರವಾಗಿ ಬಿಡಿಸಿದರೆ ಅದನ್ನು ‘ ವಿಗ್ರಹ ವಾಕ್ಯ ‘ ವೆಂದು ಕರೆಯುತ್ತಾರೆ.ಪದಗಳು ಸೇರುವಾಗ ಅವುಗಳ ನಡುವಿನ ಪ್ರತ್ಯಯಗಳಾಗಲಿ, ವಿವರಣೆಯ ಮಾತುಗಳಗಲಿ ಬಿಟ್ಟು ಹೋಗುತ್ತವೆ.

ಕನ್ನಡ ವ್ಯಾಕರಣ ಸಮಾಸ ಎಂದರೇನು ಅದರ ವಿಧಗಳು PDF
ಕನ್ನಡ ವ್ಯಾಕರಣ ಸಮಾಸ ಎಂದರೇನು ಅದರ ವಿಧಗಳು PDF

ವಿಗ್ರಹವಾಕ್ಯದಲ್ಲಿ ಮೊದಲ ಪದವನ್ನು ಪೂರ್ವ ಪದವೆಂದು, ನಂತರದ ಪದವನ್ನು ಉತ್ತರ ಪದವೆಂದು ಕರೆಯುತ್ತಾರೆ

ಪೂರ್ವಪದ ಉತ್ತರಪದ ಸಮಾಸ
ಅರಸನ ಮನೆ ಅರಮನೆ
ಚಳಿಯ ಕಾಲ ಚಳಿಗಾಲ
ಮಳೆಯ ಕಾಲ ಮಳೆಗಾಲ
ಹಳೆಯ ಕನ್ನಡ ಹಳೆಗನ್ನಡ
ಹುರಿದ ಕಡಲೆ ಹುರಿಗಡಲೆ
ಕಾಲ ಹಿಂದು ಹಿಂಗಾಲು
ಕನ್ನಡ ವ್ಯಾಕರಣ ಸಮಾಸ

ಕನ್ನಡ ವ್ಯಾಕರಣ ಸಮಾಸ ಅದರ ಎಂಟು ವಿಧಗಳು.

1. ತತ್ಪುರುಷ ಸಮಾಸ

ಎರಡು ನಾಮಪದಗಳು ಸೇರಿ ಸಮಾ ಸವಾಗುವ ಉತ್ತರ ಪದದ ಅರ್ಥವು ಪ್ರಧಾನ ವಾದರೆ ಅದನ್ನು ತತಸ್ಪುರುಷ ಸಮಾಸ ವೇನ್ನುತ್ತೇವೆ.

ತತ್ಪುರುಷ ಸಮಾಸ ಉದಾಹರಣೆ

 • ಸಂಜೆಗೆಂಪು = ಸಂಜೆಯ + ಕೆಂಪು
 • ತಲೆನೋವು = ತಲೆಯಲ್ಲಿ + ನೋವು
 • ಬೆಟ್ಟದಾವರೆ = ಬೆಟ್ಟದ + ತಾವರೆ
 • ಕಣ್ಣೂಗರುಡ = ಕಣ್ಣಿನಿಂದ + ಕುರುಡ

2. ಕರ್ಮಧಾರಯ ಸಮಾಸ

ಪೂರ್ವೋತ್ತರ ಕ್ರಮವಾಗಿ ವಿಶೇಷಣ ವಿಶೇ ಷ್ಯಗಳಿಂದ ಕೂಡಿದ್ದು, ಉತ್ತರ ಪದದ ಅರ್ಥವು ಪ್ರಧಾನ ವಾಗಿದ್ದರೆ ಅದನ್ನು ಕರ್ಮಧಾರೆಯ ಸಮಾಸವೇನ್ನುತ್ತೇವೆ.

ಕರ್ಮಧಾರಯ ಸಮಾಸ ಉದಾಹರಣೆ

 • ಹಿರಿದು + ಮರ = ಹೆಮ್ಮರ
 • ಬಿಳಿದು + ಕೊಡೆ = ಬೆಳ್ಳಗೋಡೆ
 • ಕೆಂಪಾದ + ತಾವರೆ = ಕೇಂದಾವರೆ
 • ಕರಿದು + ಮೋಡ = ಕಾರ್ಮೋಡ

Also Read – ವಿರುದ್ದಾರ್ಥಕ ಪದಗಳು | Opposite Words in Kannada

3. ಕ್ರಿಯಾ ಸಮಾಸ

ಪೂರ್ವಪದದಲ್ಲಿ ದ್ವಿತೀಯಾ ವಿಭ ಕ್ತಿ ಯ ನಾಮಪದವಿದ್ದು, ಉತ್ತರ ಪದದಲ್ಲಿ ಕ್ರಿಯಾಪದ ಅಥವಾ ಕೃ ದಂತವಿದ್ದು ಸಮಾಸವಾದರೆ ಅದನ್ನು ಕ್ರಿಯಾ ಸಮಾಸವೆಂನ್ನುತ್ತೇವೆ.

ಕ್ರಿಯಾ ಸಮಾಸ ಉದಾಹರಣೆ

 • ವಿಷವನ್ನು + ಕಾರು = ವಿಷಕಾರು
 • ತಲೆಯನ್ನು + ಮುಟ್ಟು = ತಲೆಮುಟ್ಟು
 • ಕೈಯನ್ನು + ಹಿಡಿ = ಕೈಹಿಡಿ
 • ನೀರನ್ನು + ಉಣಿಸು = ನಿರುಣಿಸು

4. ದ್ವಂದ್ವಸಮಾಸ

ಎರಡು ಅಥವಾ ಅನೇಕ ಪದಗಳು ಸೇರಿ ಸಮಾಸ ವಾಗುವಲ್ಲಿ ಆ ಎಲ್ಲಾ ಪದಗಳು ಮುಖ್ಯ ವಾದರೆ ಅದು ದ್ವಂದ್ವ ಸಮಾಸವಾಗುತ್ತದೆ.

ದ್ವಂದ್ವಸಮಾಸ ಉದಾಹರಣೆ

 • ಗುಡುಗು + ಮಿಂಚು + ಸಿಡಿಲು = ಗುಡುಗುಮಿಂಚುಸಿಡಿಲುಗಳು
 • ಧನವೂ + ಧಾನ್ಯವು = ಧನಧಾನ್ಯಗಳು
 • ಗಿಡವು + ಮರವು + ಬಳ್ಳಿಯೊ = ಗಿಡಮರಬಳ್ಳಿಗಳು
 • ಕೃಷ್ಣನೂ + ಅರ್ಜುನನೂ = ಕೃಷ್ಣಾರ್ಜುನರು

Also Read – ಕನ್ನಡ ಸಂಧಿಗಳು | ಲೋಪ ಸಂಧಿ ಉದಾಹರಣೆಗಳು | Kannada Sandhigalu with Examples

5. ಗಮಕ ಸಮಾಸ

ಪೂರ್ವಪದದಲ್ಲಿ ಸರ್ವನಾಮ, ಕೃದಂತಗಳಿದ್ದು ಉತ್ತರದಲ್ಲಿ ನಾಮಪದ ಬಂದರೆ ಅದು ಗಮಕ ಸಮಾಸವೆನಿಸುತ್ತದೆ.

ಗಮಕ ಸಮಾಸ ಉದಾಹರಣೆ

 • ಅವಳು + ಹುಡುಗಿ = ಆಹುಡುಗಿ
 • ತೂಗುವುದು + ತೊಟ್ಟಿಲು = ತೂಗುದೊಟ್ಟಿಲು

6. ಅಂಶಿ ಸಮಾಸ

ಪೂರ್ವಪದವು ಅಂಶವಾಚ ಕವಾಗಿಯೂ ಉತ್ತರ ಪದವು ಅಂಶಿ ವಾಚಕವಾಗಿಯೂ ಇದ್ದು, ಪೂರ್ವ ಪದ ದ ಅರ್ಥವು ಪ್ರದಾನವಾಗಿರುವ ಸಮಾಸಕ್ಕೆ ಅಂಶಿ ಸಮಾಸ ಎನ್ನುತ್ತಾರೆ.

Also Read – ಕನ್ನಡ ಒಗಟುಗಳು ಮತ್ತು ಉತ್ತರಗಳು | Ogatugalu in Kannada with Answer

ಅಂಶಿ ಸಮಾಸ ಉದಾಹರಣೆ

 • ಕಾಲ + ಮುಂದೆ = ಮುಂಗಾಲು
 • ಕೈ + ಅಡಿ = ಅಂಗೈ
 • ರಾತ್ರಿಯ + ನಡು = ನಡುರಾತ್ರಿ
 • ತಲೆಯ + ಮುಂದು = ಮುಂದಲೆ
 • ಬೆರಳಿನ + ತುದಿ = ತುದಿಬೆರೆಳು

7. ಬಹುವ್ರಿಹಿ ಸಮಾಸ

ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಸಾವಾದಾಗ ಬೇರೊಂದು ಪದದ / ಅನ್ಯಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹು ವ್ರಿ ಹಿ ಸಮಾಸ ಎನ್ನುತ್ತಾರೆ.

ಬಹುವ್ರಿಹಿ ಸಮಾಸ ಉದಾಹರಣೆ

 • ಮೂರು + ಕಣ್ಣು + ಉಳ್ಳವನು = ಮುಕ್ಕಣ್ಣ
 • ಶಾಂತಿಯ + ಖನಿಯಾಗಿರುವನು + ಯಾವನೋ = ಶಾಂತಿಖನಿ
 • ಹಣೆಯಲ್ಲಿ + ಕಣ್ಣು + ಉಳ್ಳವನು = ಹಣೆಗಣ್ಣ
 • ಪಂಕದಲ್ಲಿ + ಜನಿಸಿದ್ದು + ಯಾವುದೊ = ಪಂಕಜ
 • ಸಹಸ್ರ + ಅಕ್ಷಿಗಳು + ಯಾರಿಗೊ = ಸಹಸ್ರಾಕ್ಷ

8. ದ್ವಿಗು ಸಮಾಸ

ಪೂರ್ವ ಪದವು ಸಂ ಖ್ಯಾ ವಾಚಕವಾಗಿದ್ದು ಉತ್ತರಪದದಲ್ಲಿರುವ ನಾಮ ಪದ ದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ ಎನ್ನುತ್ತಾರೆ.

ದ್ವಿಗು ಸಮಾಸ ಉದಾಹರಣೆ

 • ಒಂದು + ಕಣ್ಣು = ಒಕ್ಕಣ್ಣು
 • ಎರಡು + ಬಗೆ = ಇಬ್ಬಗೆ
 • ಸಪ್ತ + ಸ್ವರ = ಸಪ್ತಸ್ವರ
 • ಮೂರು + ಮಡಿ = ಮುಮ್ಮಡಿ
 • ಒಂದು + ಕಟ್ಟು = ಒಗ್ಗಟ್ಟು

Kannada samasagalu is commonly known as ಕನ್ನಡ ಸಮಾಸಗಳು in Kannada these are the part of Kannada grammar that is widely asked in various Karnataka government exams like FDA, SDA, and other competitive exams. So we made a detailed article on Kannada samasagalu that will help job aspirants to succeed in their goals. You can get Kannada samasagalu PDF from our Telegram Channel.

Also Read – 100+ ಕನ್ನಡ ಪದಗಳ ಅರ್ಥ | Kannada Padagalu Artha

Leave a Reply