ಕನ್ನಡ ಸಂಧಿಗಳು | ಲೋಪ ಸಂಧಿ ಉದಾಹರಣೆಗಳು | Kannada Sandhigalu with Examples

 

Kannada Sandhigalu
ಕನ್ನಡ ಸಂಧಿಗಳು | Kannada Sandhigalu

ಸಂಧಿ ಎಂದರೇನು?

ಸಂಧಿಗಳು ಎಂದರ ಎರಡು ಅಕ್ಷರ ಕಲಾವಿಳಂಬವಿಲ್ಲದೆ ಕೂಡುವುದಕ್ಕೆ ಸಂಧಿ ಎನ್ನುತ್ತಾರೆ.

ಕನ್ನಡ ವ್ಯಾಕರಣ ಸಂಧಿಗಳಲ್ಲಿ ಎರಡು ವಿಧಗಳಿವೆ

  1. ಕನ್ನಡ ಸಂಧಿಗಳು
  2. ಸಂಸ್ಕೃತ ಸಂಧಿಗಳು

1. ಕನ್ನಡ ಸಂಧಿಗಳಲ್ಲಿ ಎರಡು ಪ್ರಕಾರಗಳು ಸಂಧಿಗಳು

  • ಸ್ವರ ಸಂಧಿ
  • ವ್ಯಂಜನ ಸಂಧಿ

ಸ್ವರ ಸಂಧಿ ಎಂದರೇನು?

ಸಂಧಿಯಾಗುವಾಗ ಸ್ವರದ ಮುಂದೆ ಸ್ವರ ಬಂದರೆ ಸ್ವರ ಸಂಧಿ ಎನ್ನುತ್ತಾರೆ.

ವ್ಯಂಜನ ಸಂಧಿ ಎಂದರೇನು?

ಸಂಧಿಯಾಗುವಾಗ ಸ್ವರದ ಮುಂದೆ ವ್ಯಂಜನ ಅಥವಾ ವ್ಯಂಜನದ ಮುಂದೆ ಸ್ವರ ಬಂದರೆ ವ್ಯಂಜನ ಸಂಧಿ ಎನ್ನುತ್ತಾರೆ.

ಕನ್ನಡ ಸಂಧಿಗಳು | kannada sandhigalu

ಕನ್ನಡ ಸಂಧಿಯಲ್ಲಿ ಮೂರು ವಿಧಗಳಿವೆ

  • ಲೋಪ ಸಂಧಿ
  • ಆಗಮ ಸಂಧಿ
  • ಆದೇಶ ಸಂಧಿ

1. ಲೋಪ ಸಂಧಿ

ಸಂಧಿ ಕಾರ್ಯ ನಡೆದಾಗ ಒಂದು ಅಕ್ಷರವು ಬಿಟ್ಟು ಹೋದರೆ ಲೋಪ ಸಂಧಿ ಎನ್ನುತ್ತಾರೆ.

ಲೋಪ ಸಂಧಿ ಉದಾಹರಣೆಗಳು

  • ನಾವು + ಎಲ್ಲಾ = ನಾವೆಲ್ಲ
  • ಬೇರೆ + ಒಂದು = ಬೇರೊಂದು
  • ಮಾತು + ಇಲ್ಲ = ಮಾತಿಲ್ಲ
  • ಮಾಡು + ಇಸು = ಮಾಡಿಸು

ಸಂಧಿಕಾರ್ಯ ಮಾಡಿದಾಗ ಅರ್ಥಕ್ಕೆ ಹಾನಿ ಬರಬಾರದು

2. ಆಗಮ ಸಂಧಿ

ಸಂಧಿ ಕಾರ್ಯ ಮಾಡಿದಾಗ ಒಂದು ಅಕ್ಷರವು ಹೊಸದಾಗಿ ಬಂದು ಸೇರುವುದನ್ನು ಆಗಮ ಸಂಧಿ ಎನ್ನುತ್ತಾರೆ.

* ಸಂಧಿಕಾರ್ಯ ಮಾಡಿದಾಗ ‘ಯ’ ಕಾರವು ಆಗಮವಾದರೆ ಅದು ‘ಯ ‘ ಕಾರಗಮ ಸಂಧಿಯಾಗುತ್ತದೆ

ಆಗಮ ಸಂಧಿ ಉದಾಹರಣೆಗಳು

  • ಕೆರೆ + ಅಲ್ಲಿ = ಕೆರೆಯಲ್ಲಿ
  • ಗಾಳಿ + ಅನ್ನು = ಗಾಳಿಯನ್ನು
  • ಮಳೆ + ಇಂದ = ಮಳೆಯಿಂದ
  • ಮೇ + ಇಸು = ಮೇಯಿಸು

* ಸಂಧಿಕಾರ್ಯ ಮಾಡಿದಾಗ ‘ ವ ‘ ಕಾರವು ಆಗಮವಾದರೆ ಅದು ‘ ವ ‘ ಕಾರಗಮ ಸಂಧಿಯಾಗುತ್ತದೆ

ಆಗಮ ಸಂಧಿ ಉದಾಹರಣೆಗಳು

  • ಹಸು + ಅನ್ನು = ಹಸುವನ್ನು
  • ಗುರು + ಇಗೆ = ಗುರುವಿಗೆ
  • ಹೂ + ಇಂದ = ಹೂವಿಂದ
  • ಆ + ಓಲೆ = ಅವೋಲೆ

3. ಅದೇಶ ಸಂಧಿ

ಸಂಧಿಕಾರ್ಯ ನಡೆದಾಗ ಒಂದು ಅಕ್ಷರ ಹೋಗಿ ಮತ್ತೊಂದು ಅಕ್ಷರ ಬಂದರೆ ಅದು ಆದೇಶ ಸಂಧಿ ಎನ್ನುತ್ತಾರೆ. ಸಾಮಾನ್ಯವಾಗಿ ಕ ತ ಪ ವ್ಯಂಜನಗಳಿಗೆ ಗ ದ ಬ ವ್ಯಂಜನಗಳು ಅನುಕ್ರಮವಾಗಿ ಆದೇಶವಾಗುತ್ತವೆ.

ಆದೇಶ ಸಂಧಿ ಉದಾಹರಣೆಗಳು

  • ಹಳೆ + ಕನ್ನಡ = ಹಳೆಗನ್ನಡ
  • ಬೆಟ್ಟ + ತಾವರೆ = ಬೆಟ್ಟದಾವರೆ
  • ಕಣ್ + ಪನಿ = ಕಂಬನಿ

Also Read – 100+ ಕನ್ನಡ ಪದಗಳ ಅರ್ಥ | Kannada Padagalu Artha

ಸಂಸ್ಕೃತ ಸಂಧಿಗಳು

1. ಸವರ್ಣದೀರ್ಘ ಸಂಧಿ

ಒಂದೇ ಜಾತಿಯ ವರ್ಣಗಳು ಪರಸ್ಪರ ಪರವಾದಾಗ ಅದೇ ವರ್ಣವು ದೀರ್ಘವಾದರೆ ಸವರ್ಣದೀರ್ಘ ಸಂಧಿ ಎನ್ನುತ್ತಾರೆ.

ಸವರ್ಣದೀರ್ಘ ಸಂಧಿ ಉದಾಹರಣೆಗಳು

  • ದೇವ + ಆಲಯ = ದೇವಾಲಯ
  • ದೇವ + ಅಸುರ = ದೇವಾಸುರ
  • ರವಿ + ಇಂದ್ರ = ರವೀಂದ್ರ
  • ಗುರು + ಉಪದೇಶ = ಗುರೂಪದೇಶ

2. ಗುಣ ಸಂಧಿ

ಅ ಆ ಕಾರಗಳ ಮುಂದೆ ಇ ಈ ಕಾರವು ಬಂದಾಗ ‘ಏ ‘ ಕಾರವು ಉ ಊ ಕಾರವು ಬಂದಾಗ ‘ ಓ ‘ ಕಾರವು ಋ ಕಾರವು ಬಂದಾಗ ‘ ಆರ್ ‘ ಕಾರವು ಆದೇಶವಾಗಿ ಬರುವುದಕ್ಕೆ ಗುಣಸಂಧಿ ಎನ್ನುತ್ತಾರೆ.

ಗುಣ ಸಂಧಿ ಉದಾಹರಣೆಗಳು

  • ದೇವ + ಈಶ = ದೇವೇಶ
  • ಸೂರ್ಯ + ಉದಯ = ಸೂರ್ಯೋದಯ
  • ಮಹಾ + ಋಷಿ = ಮಹರ್ಷಿ

3. ವೃದ್ಧಿ ಸಂಧಿ

ಅ ಆ ಕಾರಗಳ ಮುಂದೆ ಏ ಐ ಕಾರವು ಬಂದಾಗ ‘ ಐ ‘ ಕಾರವು ಓ ಔ ಕಾರವು ಬಂದಾಗ ‘ ಔ ‘ ಕಾರವು ಅದೇಶವಾಗಿ ಬರುವುದಕ್ಕೆ ವೃದ್ಧಿ ಸಂಧಿ ಎನ್ನುತ್ತಾರೆ.

ವೃದ್ಧಿ ಸಂಧಿ ಉದಾಹರಣೆಗಳು

  • ಏಕ + ಏಕ = ಏಕ್ಯೆಕ
  • ವನ + ಔಷಧ = ವನೌಷಧ
  • ಶಿವ + ಐಕ್ಯ = ಶಿವೈಕ್ಯ
  • ಮಹಾ + ಔನ್ನತ್ಯ = ಮಹೌನ್ನತ್ಯ

4. ಯಣ್ ಸಂಧಿ

ಸ್ವರದ ಮುಂದೆ ಸ್ವರ ಪರವಾದಾಗ ಯ್ ವ್ ರ್ ಎಂಬ ಅಕ್ಷರಗಳು ಅದೇಶ ವಾಗುವುದಕ್ಕೆ ಯಣ್ ಸಂಧಿ ಎನ್ನುತ್ತಾರೆ.

ಯಣ್ ಸಂಧಿ ಉದಾಹರಣೆಗಳು

  • ಇತಿ + ಆದಿ = ಇತ್ಯಾದಿ
  • ಗತಿ + ಅಂತರ = ಗತ್ಯಂತರ
  • ಅಧಿ + ಆತ್ಮ = ಅಧ್ಯಾತ್ಮ
  • ಮನು + ಅಂತರ = ಮನವಂತರ

5. ಶುಚ್ಚತ್ವ ಸಂಧಿ

ಪೂರ್ವಪದದ ಕೊನೆಯಲ್ಲಿ ಸಕರವಾಗಲಿ ತವರ್ಗವಾಗಲಿ ಇದ್ದೂ ಉತ್ತರ ಪದದ ಮೊದಲಲ್ಲಿ ಕ್ರಮವಾಗಿ ಶ ಕಾರವಾಗಲಿ ಚವರ್ಗಾವಗಲಿ ಬಂದು ಶ ಕಾರ, ಚ ಕಾರಗಳು ಆದೇಶವಾಗಿ ಬರುತ್ತವೆ. ಅವುಗಳನ್ನು ಶುಚ್ಚುತ್ವ ಸಂಧಿ ಎನ್ನುತ್ತಾರೆ.

ಶುಚ್ಚತ್ವ ಸಂಧಿ ಉದಾಹರಣೆಗಳು

  • ಮನಸ್ + ಶುದ್ದಿ = ಮನಶುದ್ಧಿ
  • ಯಶಸ್ + ಚಂದ್ರ = ಯಶಶ್ಚಂದ್ರ

6. ಜಸ್ಟ್ವ ಸಂಧಿ

ಪೂರ್ವಪದದ ಕೊನೆಯಲ್ಲಿರುವ ವರ್ಗದ ಪ್ರಥಮ ಅಕ್ಷರಗಳಿಗೆ ಯಾವ ವರ್ಣ ಎದುರಾದರು ಅದೇ ವರ್ಗದ ಮೂರನೇ ಅಕ್ಷರ ಅದೇಶವಾಗಿ ಬರುವುದಕ್ಕೆ ಜಸತ್ವ ಸಂಧಿ ಎನ್ನುತ್ತಾರೆ.

ಜಸ್ಟ್ವ ಸಂಧಿ ಉದಾಹರಣೆಗಳು

  • ವಾಕ್ + ಈಶ = ವಾಗೀಷ
  • ಸತ್ + ಆನಂದ = ಸದಾನಂದ
  • ಚಿತ್ + ಆನಂದ = ಚಿದಾನಂದ
  • ಷಟ್ + ಆನನ = ಷಡಾನನ

7. ಅನುನಾಸಿಕ ಸಂಧಿ

ಪೂರ್ವಪದದ ಕೊನೆಯಲ್ಲಿ ಆಯಾ ವರ್ಗದ ಪ್ರಥಮ ಅಕ್ಷರಗಳೂ ಇದ್ದೂ, ಅವುಗಳಿಗೆ ಅನುನಾಸಿಕ ಅಕ್ಷರಗಳು ಪರವಾದರೆ ಅದು ಅನುನಾಸಿಕ ಸಂಧಿ ಎನ್ನುತ್ತಾರೆ.

ಅನುನಾಸಿಕ ಸಂಧಿ  ಉದಾಹರಣೆಗಳು

  • ಸತ್ + ಮಾನ = ಸನ್ಮಾನ
  • ಚಿತ್ + ಮಯ = ಚಿನ್ಮಯ
  • ತತ್ + ಮಯ = ತನ್ಮಯ

Kannada Sandhigalu with Examples helps you to know about kannada grammar. These Kannada Sandhigalu can useful as they are being asked in various government competitive exams. You can get Kannada Sandhigalu with Examples pdf from our Telegram channel

Also Read – 60+ ಸಮಾನಾರ್ಥಕ ಪದಗಳು | Kannada samanarthaka padagalu

Leave a Reply