ಕನ್ನಡ ಒಗಟುಗಳು ಮತ್ತು ಉತ್ತರಗಳು | Ogatugalu in Kannada with Answer

ಕನ್ನಡ ಒಗಟುಗಳು ಎಂದರೇನು? | Ogatugalu in Kannada Meaning?

ಕನ್ನಡ ಒಗಟುಗಳು(Ogatugalu) ಒಂಟು, ಒಡಪು,ಒಡಚು,ಒಡಗಡೆ ಮುಂತಾದ ಹೆಸರಿನಲ್ಲಿ ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ ಒಗಟುಗಳುಗೆ ” riddles ” ಎಂದು ಹೇಳುತ್ತಾರೆ. ಕನ್ನಡ ಒಗಟುಗಳ ಉತ್ತರ ಅಷ್ಟು ಸುಲಭವಾಗಿ ಹೇಳಲಾ ಗುವುದಿಲ್ಲ. ಒಗಟುಗಳು ಮತ್ತು ಉತ್ತರಗಳು ಹೇಳುಬೇಕೆನಂದರೆ ಬಹಳ ವಿಚಾರವಾಗಿ ಮತ್ತು ಬುದ್ದಿ ಚುರುಕುತನದಿಂದ ಹೇಳಬೇಕಾಗುತ್ತದೆ.

Ogatugalu in Kannada with Answer
Ogatugalu in Kannada with Answer

20+ ಕನ್ನಡ ಒಗಟುಗಳು ಮತ್ತು ಉತ್ತರಗಳು ಕೆಳಗೆ ನೀಡಲಾಗಿದೆ | Ogatugalu in Kannada with Answer

1. ಅಜ್ಜಿಯ ಸೀರೆ ಮಡಚೋಕೆ ಆಗಲ್ಲ, ಅಜ್ಜನ ರೊಕ್ಕ ಎಣಿಸೋಕೆ ಆಗಲ್ಲ – ಮೋಡ, ನಕ್ಷತ್ರ

2. ಗಿರಗಿರ ತಿರುಗುತ್ತೆ, ಸುಸ್ತಾಗಿ ಬೀಳುತ್ತೆ – ಬುಗುರಿ

3. ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ. – ಬದನೇಕಾಯಿ

4. ಸಾಗರ ಪುತ್ರ, ಸಾರಿನ ಮಿತ್ರ – ಉಪ್ಪು

5. ಗುಡುಗು, ಗುಡುಗಿದರೆ ಸಾವಿರ ನಯನಗಳು ಅರಳುವುದು – ನವಿಲು

6. ಲಟಪಟ ಲೇಡಿಗೆ ಒಂದೇ ಕಣ್ಣು – ಸೂಜಿ

7. ಹಸಿರು ಕೋಲಿಗೆ ಮುತ್ತಿನ ತುರಾಯಿ – ಜೋಳದ ತೆನೆ

8. ಕಡ್ಲೆ ಕಾಳಷ್ಟು ಹಿಂಡಿ 32 ಮನೆ ಸಾರಿಸಿ ಬಚ್ಚಲ ಪಾಲು ಆಗುತ್ತೆ – ಹಲ್ಲುಪುಡಿ

9. ಕೆಂಪು ಕುದುರೆ ಮೇಲೆ ಒಬ್ಬ ಏರುತ್ತಾನೆ, ಒಬ್ಬ ಇಳಿಯುತ್ತಾನೆ – ರೊಟ್ಟಿ, ದೋಸೆ

10. ಚಿಪ್ಪುಂಟು ಅಮೆಯಲ್ಲ, ಜುಟ್ಟುನಂಟು ಪೂಜಾರಿಯಲ್ಲ.ಮೂರು ಕಣ್ಣುನಂಟು ಹರನಲ್ಲ, ಹಾಗಾದರೆ ನಾನು ಯಾರು? – ತೆಂಗಿನಕಾಯಿ

ಇದನ್ನು ಓದಿ – 100+ ಕನ್ನಡ ಪದಗಳ ಅರ್ಥ | Kannada Padagalu Artha

11. ಕರಿ ಗುಡ್ಡಬಿಳಿ ನೀರು ಅದ್ರಾಗೆ ಕುಂತವಳೇ ಚಂಪರಾಣಿ – ಗಡಿಗೆ ಮಜ್ಜಿಗೆ

12. ಅಪ್ಪಗಿಂತ ಮಗನೇ ಮೊದಲು ಹುಟ್ಟುತ್ತಾನೆ – ಹೋಗೆ

13. ಅಗಲವಾದ ಮಾಳಿಗೆಗೆ ಒಂದೇ ಕಂಬ – ಛತ್ರಿ

14. ಬಿಳಿ ತೊಟ್ಟಿಯಲ್ಲಿ ಕಪ್ಪು ದ್ರಾಕ್ಷಿ – ಕಣ್ಣು

15. ಎರಡು ಗವಿಗಳಿಗೆ ಒಂದೇ ಗೋಡೆ – ಮೂಗು

16. ಹಸಿರು ಮರದಲ್ಲಿ ಮೊಸರು ಚೆಲ್ಲಿದೆ – ಮಲ್ಲಿಗೆ

17. ಐದು ಮನೆಗೆ ಒಂದೇ ಅಂಗಳ – ಅಂಗ್ಯ

18. ಚಿಕ್ಕ ಮನೆಗೆ ಚಿನ್ನದ ಬೀಗ – ಮೂಗುತಿ

19. ಹಗ್ಗ ಹಾಸಿದೆ, ಹಸು ಮಲಗಿದೆ – ಕುಂಬಳಕಾಯಿ

20. ಹತ್ತಾರು ಮಕ್ಕಳ ತಂದೆ ಅದಕ್ಕೆ ತಲೆಯ ಮೇಲೆ ಜುಟ್ಟು – ಹುಂಜ

ಇದನ್ನು ಓದಿ – Kannada Gadegalu with explanation in Kannada |ಗಾದೆ ಮಾತುಗಳು

21. ಹೋದರು ಇರುತ್ತೆ ಬಂದರೂ ಕಾಡುತ್ತೆ.ಇದು ಏನು – ನೆನಪು

22. ನೀಲಿ ಸಾಗರದಲ್ಲಿ ಬೆಳ್ಳನೇ ಮೀನುಗಳು ನಾನ್ಯಾರು – ತಾರೆಗಳು

23. ಬಿಡಿಸಿದರೆ ಹೂವು, ಮಡಚಿದರೆ ಮೊಗ್ಗು – ಛತ್ರಿ

24. ಕೂಗಿದರೆ ರಾವಣ, ಹಾರಿದರೆ ಹನುಮಂತ, ಕೂತರೆ ಮುಸಿ – ಕಪ್ಪೆ

25. ಮುಳ್ಳುಗಳಿವೆ ಅಪಾಯವಿಲ್ಲ, ಸಂಖ್ಯೆಗಳಿವೆ ಲೆಕ್ಕದ ಪುಸ್ತಕವಲ್ಲ, ಗಂಟೆ ಹೊಡೆಯುತ್ತದೆ, ದೇವಾಲಯವಲ್ಲ. – ಗಡಿಯಾರ

Basically, Riddles in Kannada are known as Ogatugalu. They are generally puzzling questions that pose in the form of problems to be guessed or to be solved. These Ogatugalu in Kannada are asked in various competitive government exams, So we made a list of 20+ Kannada ogatugalu with answers. You can get this 20+ Kannada ogatugalu Pdf from our Telegram Channel

Also Read – 60+ ಸಮಾನಾರ್ಥಕ ಪದಗಳು | Kannada samanarthaka padagalu

Leave a Reply