ಗಾದೆ ಮಾತುಗಳು | Kannada gadegalu with explanation | Kannada Proverbs

ಗಾದೆ ಮಾತುಗಳು | Kannada Proverbs

ಒನಪದ ಸಾಹಿತ್ಯದ ಉಳಿದೆಲ್ಲ ಪ್ರಕಾರಗಳಂತೆ ಕನ್ನಡ ಗಾದೆ ಮಾತುಗಳು (kannada gadhe mathugalu) ಒಂದು ವಿಶಿಷ್ಟ ಕಲಾ ವರ್ಗಕ್ಕೆ ಸೇರಿದ ಪ್ರಕಾರ, ಉಳಿದೆಲ್ಲ ಜನಪದ ಪ್ರಕಾರಗಳಿಗಿಂತಲೂ ಹೆಚ್ಚಿದು ಜನಪ್ರಿಯತೆಯಲ್ಲೂ ಜನಬಳಕೆಯಲ್ಲೂ ಸೇರಿ ಹೋಗಿರುವಂತಹದ್ದು. ಕನ್ನಡ ಗಾದೆಗಳು ಜನರ ಅನುಭವದ ಸಂದ್ರಾತೆಗೆ,ವಸ್ತು ವೈವಿಧ್ಯತೆಗೆ,ಸಂಸ್ಕೃತಿ ಸಂಪನ್ನತೆಗೆ ಸಾಕ್ಷಿಯಾಗಿವೆ.

ಕನ್ನಡ ಗಾದೆಗಳು (kannada gadegalu) ನಿಮ್ಮ ಬದುಕನ್ನು ಅವರಿಸಿ ಪ್ರಭಾವಿಸಿರುವುದು ಮಾತ್ರವಲ್ಲದೆ ನಿಮ್ಮ ಭಾಷೆಗೆ ಶಕ್ತಿಯನ್ನು ಸಂಪನ್ನತೆಯನ್ನು ತಂದುಕೊಟ್ಟಿದೆ. ಕನ್ನಡ ಗಾದೆಗಲಿಲ್ಲದ ನಿಮ್ಮ ಬದುಕನ್ನಾಗಲಿ ಭಾಷೆಯನ್ನಾಗಲಿ ಕಲ್ಪಿಸಿಕೊಳ್ಳುವುದೇ ಕಷ್ಟಸಾಧ್ಯ ಊಟ್ಟಕ್ಕೆ ಉಪ್ಪಿನಕಾಯಿ ವ್ಯಂಜಕವಾದರೆ,ಮಾತಿಗೆ ಕನ್ನಡ ಗಾದೆಗಳು ವ್ಯಂಜಕವಾಗುತ್ತದೆ.

ಕೆಲವರು ಮಾತನಾಡುವಾಗ ಪುಂಕಾನೂಪುನಕವಾಗಿ ಕನ್ನಡ ಗಾದೆಗಳ ಬಾನಬಿಡುತ್ತ ತಮ್ಮ ಮಾತಿನ ಸೊಗಸನ್ನು ಹೆಚ್ಚಿಸಿದರೆ, ಕನ್ನಡ ಗಾದೆಗಳನ್ನು ಸಮಯಕ್ಕೆ ಸರಿಯಾಗಿ ಬಳಸುವ ಶಕ್ತಿಇಲ್ಲದವರು ‘ಅದೇನೋ ಗಾದೆ ಹೇಳತಾರಲ್ಲ ಹಂಗಾಯ್ತು ‘ ಎನ್ನುವುದರ ಮೂಲಕ ಗಾದೆಯಿಲ್ಲದೇ ಸಮರ್ಥವಾಗಿ ಹೇಳಬೇಕಾದನ್ನು ಹೇಳಲು ಸಾಧ್ಯವಿಲ್ಲ ಎಂಬುವುದನ್ನೇ ಧೃಡ ಪಡಿಸಿರುತ್ತಾರೆ ಕಿರಿದರಲ್ಲಿ ಹಿರಿದಾದ ಅರ್ಥ ತುಂಬಿದ ಗಾದೆಗಳು ಸರ್ವಧರಣಿಯವಾಗಿ ಕಾಣಿಸಿಕೊಳ್ಳುತ್ತವೆ.” ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು “ಎಂಬ ಕನ್ನಡ ಗಾದೆಮಾತನ್ನು ಕನ್ನಡ ಗಾದೆಗಳಿಗೆ ಅನ್ವಯಿಸಬಹುದು.

ಕನ್ನಡ ಗಾದೆ ಮಾತುಗಳು ನಿಮ್ಮ ಭಾಷೆಯ ಅವಿಭಾಜ್ಯ ಶಕ್ತಿಯಾಗಿರುವುದರಿಂದಲೇ ವಿದ್ಯಾರ್ಥಿಗಳ ಭಾಷೆ ಸಾಮರ್ಥ್ಯವನ್ನು ಪರೀಕ್ಷಿಸಲು ರಚನಾ ವಿಭಾಗದಲ್ಲಿ ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ (kannada gadegalu vistarane) ಬರೆಯುವ ಪ್ರಶ್ನೆಯನ್ನು ಅಳವಡಿಸಲಾಗಿತ್ತದೆ ಇದೊಂದು ಸದಾಶಿವುಳ್ಳ ಪರೀಕ್ಷೆ.

ಹಾಸಿಗೆ ಇದ್ದಷ್ಟು ಕಾಲು ಚಾಚು | Hasige idastu kalu chachu

hasige iddashtu kalu chachu in kannada
hasige iddashtu kalu chachu in kannada image

ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಕನ್ನಡ ಗಾದೆಗಳು, ‘ಮಿತಿಯನ್ನು ಅರಿತು ಬಾಳು’ ಎಂಬ ಉಪದೇಶವನ್ನು ನೀಡುತ್ತದೆ. ‘ಆಸೆಯೇ ದುಃಖಕ್ಕೆ ಕಾರಣ ‘ ಎನ್ನುವ ಮಾತು ” ಆಸೆಯೇ ಪ್ರಗತಿಗೆ ಮೂಲ ” ಎನ್ನುವ ಮಾತು ನಾವು ಕೇಳಿದ್ದೇವೆ. ಇವರಡೂ ಪರಸ್ಪರ ವಿರುದ್ಧವಾಗಿ ಕಂಡರೂ, ಈ ಎರಡನ್ನು ಹೊಂದಿಸಿ, ” ಆಸೆಯಿರಬೇಕು, ಆಸೆಗೆ ಮಿತಿಯಿರಬೇಕು ” ಎಂದು ಹೇಳಬಹುದು.ಯಾವುದೇ ಕೆಲಸಕ್ಕೆ ಕೈ ಹಾಕಬೇಕಾದರೂ ನಿಮ್ಮ ಶಕ್ತಿ ಸಾಮರ್ಥ್ಯ ಸೌಕರ್ಯಗಳನ್ನು ಗಮನಿಸಬೇಕು.ಶಕ್ತಿ ಮೀರಿ ಕೈ ಚಾಚುವುದಕ್ಕೆ ಹೋದರೆ ಅಥವಾ ಹಾಸಿಗೆಯನ್ನು ಮೀರಿ ಕಾಲು ಚಾಚಿದರೆ ಅಪಾಯ,ತೊಂದರೆ ತಪ್ಪಿದ್ದಲ್ಲ.

ಒಬ್ಬ ಬಡವ ತನ್ನ ಹೊಲ,ಗದ್ದೆ,ಮನೆ ಎಲ್ಲವನ್ನು ಮಾರಿ ಸಂಭ್ರಮದಿಂದ ತನ್ನ ಮಗಳ ಮದುವೆ ಮಾಡಲು ಸಿದ್ದನಿದ್ದ.ಅವನು ಹಿತ್ಯಶಿಯೊಬ್ಬರು ” ಹೀಗೆಲ್ಲಾ ಮಾಡಬೇಡ,ಇದ್ದಬದ್ದುದನ್ನೆಲ್ಲಾ ಮಾರಿ, ಮದುವೆ ಮಾಡಬೇಕ ನಿನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನೇ ಖರ್ಚುಮಾಡು.ಶಕ್ತಿಮೀರಿ ಖರ್ಚುಬೇಡ: “ಹಾಸಿಗೆ ಇದ್ದಷ್ಟು ಕಾಲು ಚಾಚು “ಎಂದು ಹಿತನುಡಿದನು.ಹಾಗೆಯೇ ನಡೆದ ಬಡವ ಮುಂದೆ ಜೀವನದಲ್ಲಿ ಕಷ್ಟಪಡಲಿಲ್ಲ.ಈ ಕನ್ನಡ ಗಾದೆ ಮಾತುಗಳು ಎಲ್ಲರಿಗೂ ಅನವಿಸುವಿದು.

ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ | uppigintha ruchi illa thayigintha bandhu illa

uppigintha ruchi illa thayigintha bandhu illa
uppigintha ruchi illa thayigintha bandhu illa image

ವಿದ್ಯಾವಂತರಿರಲಿ, ಅನಕ್ಷರಸ್ಥರಾಗಿರಲಿ ಕೆಲವು ಕನ್ನಡ ಗಾದೆ ಮಾತುಗಳು ಪ್ರತಿನಿತ್ಯ ಜನರ ಬಾಯಲ್ಲಿ ನಲಿದಾಡುತ್ತವೆ.ಅಂತಹ ಕನ್ನಡ ಗಾದೆಗಳು ಯಾವುದೂಯೆಂದರೆ ಉಪ್ಪಿಗಿಂತ ರುಚಿಯಿಲ್ಲ,ತಾಯಿಗಿಂತ ಬಂಧುವಿಲ್ಲ ಎಂಬ ಗಾದೆ ಮಾತುಗಳು(kannada gadhe mathugalu) ಒಂದು. ಕುಮಾರವ್ಯಾಸನು ಒಂದು ಕಡೆ ಬಂಧುಗಳ ದರ್ಶನ ಫಲವಾಲ್ ಸಂಸಾರ ತರುವಿಂಗೆ ಎಂದಿದ್ದಾನೆ.ಬಂಧುಗಳ ದರ್ಶನ ಎಂಬುವುದು ಬದುಕಿನಲ್ಲಿ ಒಂದು ಸಾರ್ಥಕ ಕ್ಷಣವೆಂಬುವುದು ಇದರ ತಾತ್ಪರ್ಯ. ಈ ಬಂಧುಗಳ ಲೆಲ್ಲಾ ಕಿರೀಟಪ್ರಾಯವಾಗಿ ಇರುವ ವ್ಯಕ್ತಿ ಎಂದರೆ ತಾಯಿ.

ತಾಯಿಯು ತನ್ನ ಮಕ್ಕಳನ್ನು ಪ್ರೀತಿಸುವ ಹಾಗೆ ಇತರ ಯಾವ ಬಂಧುಗಳೂ ಪ್ರೀತಿಯಿಸಲು ಸಾಧ್ಯವಿಲ್ಲ.ತಾಯಿ ತಾಯಿಯೇ. ತಾಯಿಯ ವಾತ್ಸಲ್ಯವನ್ನು ಅನುಭವಿಸುತ್ತಿರುವ ಪ್ರತಿಯೊಬ್ಬರಿಗೂ ಇದು ಮಾನವರಿಕೆಯಾಗುತ್ತಿರುವ ಅಂಶವಾಗಿದೆ. ಆದ್ದರಿಂದಲೇ ನಮ್ಮಲ್ಲಿ ಮಾತೃಧೇವೋಭವ ಎಂದಿರುವುದು.ಯಾವ ಪ್ರತಿಫಲವನ್ನೂ ಬಯಸದೆ ಮಕ್ಕಳನ್ನು ಪ್ರೀತಿಯಿಸಿ,ಮುದ್ದಿಸಿ,ಸಾಕಿ ,ಸಲಹಿ,ವಿದ್ಯಾವಂತರನ್ನಾಗಿ ಮಾಡಿ ಹರಸುವ ತಾಯಿಯನ್ನಲ್ಲದೆ ಇನ್ನು ಯಾರನ್ನು ತಾನೆ ದೇವರು ಎನ್ನಲಾದ್ಧಿತು? ಹೇಗೆ ಪ್ರತಿಯೊಂದು ಪದಾರ್ಥವು ರುಚಿಯನ್ನು ಪಡೆಯುವುದಕ್ಕೆ ಉಪ್ಪು ನೆರವಾಗುವುದೋ ಹಾಗೆ ಬದುಕಿನಲ್ಲಿ ಮಗುವಿಗೆ ತಾಯಿಯೇ ಸುಖಪ್ರದಳು.

ಈ ಗಾದೆ ವಾಕ್ಯದಲ್ಲಿರುವ ಎರಡು ವಾಕ್ಯಗಳು ಪರಸ್ಪರ ಪೂರಕವಾಗಿವೆ.ಎರಡೂ ಪ್ರತ್ಯೇಕ ಗಾದೆಗಳಾಗಬಲ್ಲವು. ವಾಸ್ತವ ಸತ್ಯವನ್ನು, ತಾಯಿಯ ಅಂತಕರಣವನ್ನು ಈ ಗಾದೆ ಚೆನ್ನಾಗಿ ನಿರೂಪಿಸುತ್ತಿಯಿದೆ. ಯಾವುದೇ ತಿಂಡಿ,ತಿನಿಸುಗಳನ್ನು ತಯಾರಿಸುವಾಗ ಅದಕ್ಕೆ ಉಪ್ಪು ಬೇಕೇ ಬೇಕು.ಅದಿಲ್ಲದಿದ್ದರೆ ಆ ತಿನಿಯಿಸು ತಿನ್ನಲಾಗುವುದಿಲ್ಲ.ಇಲ್ಲಿ ಉಪ್ಪಿಗೆ ಎಷ್ಟು ಮಹತ್ವವಿದೆಯೋ ಹಾಗೆಯೇ ತಾಯಿಗಿಂತ ಮಿಗಿಲಾಗಿ ಯಾರು ಬಂಧುವವಾಗಲಾರರು.

ಕೂತು ಉಂಡರೆ, ಕುಡಿಕೆ ಹೊನ್ನು ಸಾಲದು

Kuthu undare Kudi ke honu saladu
Kuthu undare Kudi ke honu saladu image

ಸೋಮಾರಿಗಳಗಿರುವುದೇ ದಾರಿದ್ರ್ಯಕ್ಕೆ ಅವಕಾಶ ಮಾಡಿಕೊಟ್ಟಂತೆ : ಅಲಸ್ಯವೇ ಬಡತನಕ್ಕೆ ಎನ್ನುವುದನ್ನು ” ಕೂತು ಉಂಡರೆ, ಕುಡಿಕೆ ಹೊನ್ನು ಸಾಲದು ” ಎಂಬ ಕನ್ನಡ ಗಾದೆ ಮಾತುಗಳು ಸಮರ್ಥಿಸುತ್ತದೆ.
ಹಿರಿಯರು ಮಾಡಿಟ್ಟ ಅಸ್ತಿ ಇದೆ,ಹಣವಿದೆ ಎಂದು ಯಾವ ಕೆಲಸವನ್ನು ಮಾಡದೆ ಸುಖೋಪಾಭೋಗದಲ್ಲಿ ತೊಡಗಿದರೆ ಅಸ್ತಿ,ಹಣ ಬಹಳ ಬೇಗ ಕರಗಿ ಹೋಗುತ್ತದೆ.ಹಣವನ್ನು ಹಾಳು ಮಾಡಲು ಹಲವು ಮಾರ್ಗಗಳಿವೆ.ಹಾಗೆ ಹಾಳು ಮಾಡುವವನಿಗೆ ದಾರಿತಪ್ಪಿಸಲು ಸಿಹಿಗೆ ನೊಣಗಳು ಮುತ್ತುವಂತೆ ಹಲವರು ಸ್ನೇಹಿತರಗುತ್ತಾರೆ.

ಅವನೊಂದಿಗೆ ಅವರು ಸುಖಿಸುತ್ತಾರೆ ವೆಚ್ಚಮಾಡಲು ಅವನಲ್ಲಿ ಕಾಸಿಲ್ಲದಂತಾದಾಗ ಅವರೆಲ್ಲರೂ ಕಣ್ಮರೆಯಾಗುತ್ತಾರೆ.ಸಿರಿವಂತ ಭೀಕಾರಿಯಾಗಿರುತ್ತಾನೆ.ಹಣವು ” ಹತ್ತು ನಿನ್ನಿಂದ – ಮತ್ತೆ ನನ್ನಿಂದ ” – ಎನ್ನುವಂತೆ. ಕಣಕಣದಂತೆ ವಿದ್ಯೆಯನ್ನು ಹಣವನ್ನು ಕ್ಷಣಕ್ಷಣವು ಗಳಿಸಬೇಕೆಂದು ಸುಭಾಷಿತದಲ್ಲಿದೆ.ಕೂಡಿಟ್ಟ ಹೋನ್ನನ್ನು ಕರಗಿಸುವ ಬದಲು ಅದಕ್ಕೆ ಮತ್ತಷ್ಟುನ್ನು ಸೇರಿಸಲು ಪ್ರಯತ್ನಿಸ ಬೇಕು. ಸೋಮಾರಿಯಾಗದೆ ದುಡಿಮೆಯ ಯಾವುದಾದರು ಒಂದು ದಾರಿಯನ್ನು ಕಂಡು ಕೊಳ್ಳಬೇಕು.ಆ ಮೂಲಕ ಸ್ವಹಿತ – ಪರಹಿತ ಹಾಗೂ ದೇಶದ ಹಿತವನ್ನು ಕಾಣಬೇಕು ಎಂದು ಈ ಕನ್ನಡ ಗಾದೆಯ ಮಾತುಗಳು ಎಚ್ಚರಿಸುತ್ತದೆ.

Also Read – 60+ ಸಮಾನಾರ್ಥಕ ಪದಗಳು | Kannada samanarthaka padagalu

Leave a Reply