ಕನ್ನಡ ವರ್ಣಮಾಲೆ ಅಕ್ಷರಗಳು | Kannada Varnamale Chart | Download for Free

ನಮ್ಮ ಅಭಿಪ್ರಾಯವನ್ನು ಇತರರಿಗೆ ತಿಳಿಸುವುದ್ದಕ್ಕೆ ಮತ್ತು ಇತರರ ಅಭಿಪ್ರಾಯವನ್ನು ನಾವು ತಿಳಿಯುವ ಮಾಧ್ಯಮಕ್ಕೆ ಭಾಷೆ ಎಂದು ಹೆಸರು.

Kannada varnamale chart
Kannada varnamale chart


ಪ್ರಪಂಚದಲ್ಲಿ ಸಾವಿರಾರು ಭಾಷೆಗಳಿವೆ. ಅದರಲ್ಲಿ ನಾವು ಮಾತನಾಡುವ ಕನ್ನಡವು ಒಂದು ಪ್ರಮುಖ ಭಾಷೆಯಾಗಿದೆ.ಕನ್ನಡ ಭಾಷೆಗೆ ‘ಶ್ರಾವಣ’ ಮತ್ತು ‘ಚಾಕ್ಷುಷ’ ಎಂಬ ಎರಡು ರೂಪಗಳಿವೆ.

  1. ಧ್ವನಿಯ ಮೂಲಕ ಕಿವಿಗೆ ಕೇಳಿಸುವುದು – ಶ್ರಾವಣ
  2. ಬರಹದ ಮೂಲಕ ಕಣ್ಣಿಗೆ ಕಾಣಿಸುವುದು – ಚಾಕ್ಷುಷ

ನಾವು ಬರಹದ ಮೂಲಕ ಕನ್ನಡ ಭಾಷೆಯನ್ನು ತಿಳಿಯಬೇಕಾದರೆ ‘ಚಾಕ್ಷುಷ’ ರೂಪದಿಂದ ಲಿಪಿರೂಪದ ‘ವರ್ಣಮಾಲೆಯನ್ನು’ ಮೊದಲು ತಿಳಿಯಬೇಕು.

ಕನ್ನಡ ವರ್ಣಮಾಲೆ ಎಂದರೇನು? Swaragalu endarenu in kannada

ಒಂದು ಪದವು ಓದಬೇಕೆಂದರೆ ಅಥವಾ ಬರೆಯಬೇಕೆಂದರೆ ವರ್ಣಮಾಲೆಗಳು ಬೇಕೇ ಬೇಕು. “ವರ್ಣ ವೆಂದರೆ ಮೂಲರೂಪದಲ್ಲಿ ಅಕ್ಷರಗಳು ಸಂಕೇತ ವಾಗಿದ್ದು ನಮ್ಮ ಬಾಯಿನಿಂದ ಹೊರಬರುವ ಧ್ವನಿಯ ಲಿಖಿತ ರೂಪವಾಗಿದೆ ” ನಾವು ಭಾಷೆಯನ್ನು ಕಲೆಯಲು ಅಥವಾ ಬರೆಯಲು ವರ್ಣಮಾಲೆಗಳು ಹೆಚ್ಚು ಉಯುಕ್ತವಾಗುತ್ತವೆ.

ಪ್ರಪಂಚದಲ್ಲಿ ನೂರಾರು ಭಾಷೆಗಳಿವೆ. ನಾವು ಭಾಷೆಗಳನ್ನು ಕಲಿಯ ಬೇಕೆಂದರೆ ನಮಗೆ ಮೊದಲು ವರ್ಣಮಾಲೆಗಳು ಗೊತ್ತಿರಬೇಕು. ವರ್ಣಮಾಲೆ ಗೊತ್ತಿದರೆ ಯಾವ ಭಾಷೆಗೆ ಅಥವಾ ಯಾವ ಪದಗಳಿಗೆ ವರ್ಣಮಾಲೆ ಬಳಸಬೇಕು ಎನ್ನುವುದು ಗೊತ್ತಾಗುತ್ತದೆ.
ವರ್ಣಮಾಲೆಗಳಲ್ಲಿ ಸ್ವರಗಳು , ವ್ಯಂಜನಗಳು ಮತ್ತು ಯೋಗವಾಹಕಗಳಿಂದ ಒಳಗೊಂಡಿರುತ್ತವೆ.
ಮೊದಲು ವರ್ಣಮಾಲೆಯಲ್ಲಿ ಎಷ್ಟು ವಿಧಗಳು ಎಂಬುವುದು ತಿಳಿಯಬೇಕಾಗಿದೆ.

ಕನ್ನಡ ವರ್ಣಮಾಲೆಯಲ್ಲಿ 3 ವಿಧಗಳು | Kannada Varnamale Types

Kannada varnamale -swaragalu, vyanjanagalu, yogavahagalu with examples

  • ಸ್ವರಗಳು (swaragalu)
  • ವ್ಯಂಜನಗಳು(vyanjanagalu)
  • ಯೋಗವಾಹಕಗಳು (yogavahagalu)

ಕನ್ನಡ ವರ್ಣಮಾಲೆಯನ್ನು ಹಂತ ಹಂತವಾಗಿ ಅಧ್ಯಯನವನ್ನು ಕಲಿಯಬೇಕು.

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ

ಕನ್ನಡ ವರ್ಣಮಾಲೆಗಳಲ್ಲಿ ಸ್ವರಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.

Related – 60+ ಸಮಾನಾರ್ಥಕ ಪದಗಳು | Kannada samanarthaka padagalu

ಸ್ವರಗಳು | Swaragalu

ಸ್ವತಂತ್ರವಾಗಿ ಸ್ಪಷ್ಟವಾಗಿ ಉಚ್ಚರಿಸಲ್ಪಡುವ ಅಕ್ಷರಮಾಲೆಯನ್ನು ಸ್ವರಗಳು ಎನ್ನುತ್ತಾರೆ. ಸ್ವರಗಳು 13 ಅಕ್ಷರ ಮಾಲೆಗಳು ಹೊಂದಿವೆ. ಅವುಗಳು ಯಾವೆಂದರೆ
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಕನ್ನಡ ವರ್ಣಮಾಲೆಗಳಲ್ಲಿ ಸ್ವರಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ

1.ಹೃಸ್ವ ಸ್ವರಗಳು(Hrasva swaragalu) :- ಒಂದೇ ಮಾತ್ರೆಯ ಕಾಲದಲ್ಲಿ ಉಚ್ಚಿರಿಸಲ್ಪಡುವ ಅಕ್ಷರಗಳಿಗೆ ಹೃಸ್ವಸ್ವರ ಎನ್ನುತ್ತಾರೆ.

Hrasva swaragalu ಉದಾ :-ಅ ಇ ಉ ಋ ಎ ಒ

2.ದೀರ್ಘ ಸ್ವರಗಳು(Deerga swaragalu) :- ಎರಡು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ದೀರ್ಘಸ್ವರಗಳು ಎನ್ನುತ್ತಾರೆ. ದೀರ್ಘ ಸ್ವರಗಳು ಉಚ್ಚರಿಸಲು ದೀರ್ಘವಾದ ಉಸಿರು ಬೇಕಾಗುತ್ತದೆ.
Deerga swaragalu ಉದಾ :- ಆ ಈ ಊ ಏ ಐ ಓ ಔ

3.ಪ್ಳುತ್ವ ಸ್ವರಗಳು(plutha swaragalu) :- ಮೂರು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಪ್ಲತ್ವಸ್ವರ ಎನ್ನುತ್ತಾರೆ. ಇದರ ಸ್ವರಗಳು ದೀರ್ಘವಾಗಿ ಹೇಳುವುದಕ್ಕೆ ಪ್ಲತ್ವಸ್ವರ ಎನ್ನುತ್ತಾರೆ.
Plutha swaragalu ಉದಾ :- ಅಪ್ಪಾ, ತಮ್ಮಾ

ವ್ಯಂಜನಗಳು | Vyanjanagalu in Kannada

ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳಿಗೆ ವ್ಯಂಜನಗಳು ಎನ್ನುತ್ತಾರೆ.

ವ್ಯಂಜನಗಳಲ್ಲಿ ಎರಡು ವಿಧಗಳು

  • ವರ್ಗಿಯ ವ್ಯಂಜನಗಳು
  • ಅವರ್ಗಿಯ ವ್ಯಂಜನಗಳು

1.ವರ್ಗಿಯ ವ್ಯಂಜನಗಳು | Vargiya Vyanjanagalu

ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವ ವ್ಯಂಜಾನಕ್ಷರಗಳಿಗೆ ವರ್ಗಿಯ ವ್ಯಂಜನಗಳು ಎನ್ನುತ್ತಾರೆ.
ಉದಾ :- ಕ ಖ ಗ ಘ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ

ವರ್ಗಿಯ ವ್ಯಂಜನಗಳಲ್ಲಿ 3 ವಿಧಗಳು | 3 types of Vargiya Vyanjanagalu

  • ಅಲ್ಪಪ್ರಾಣ
  • ಮಹಾಪ್ರಾಣ
  • ಅನುನಾಸಿಕಗಳು
  • ಅಲ್ಪಪ್ರಾಣ :- ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ವ್ಯಂಜನಗಳಿಗೆ ಅಲ್ಪಪ್ರಾಣ ಎನ್ನುತ್ತಾರೆ.
    ಉದಾ :- ಕ,ಚ,ಟ,ತ,ಪ
    ಗ,ಜ,ದ,ಡ,ಬ
  • ಮಹಾಪ್ರಾಣ :- ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ವ್ಯಂಜನಗಳಿಗೆ ಮಹಾಪ್ರಾಣ ಎನ್ನುತ್ತಾರೆ.
    ಉದಾ :- ಖ,ಛ,ಠ,ಥ,ಫ
    ಘ,ಝ,ಧ,ಢ,ಭ
  • ಅನುನಾಸಿಕಗಳು :- ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ ವ್ಯಂಜನಗಳಿಗೆ ಅನುನಾಸಿಕಗಳು ಎನ್ನುತ್ತಾರೆ.
    ಉದಾ :- ಗ್ನ,ಞ,ಣ,ನ,ಮ

2.ಅವರ್ಗಿಯ ವ್ಯಂಜನಗಳು | Avargiya Vyanjanagalu

ವರ್ಗಗಳನ್ನು ಮಾಡಲು ಸಾಧ್ಯವಿಲ್ಲದ ವ್ಯಂಜನಗಳಿಗೆ ಅವರ್ಗಿಯ ವ್ಯಂಜನಗಳು ಎನ್ನುತ್ತಾರೆ.
ಉದಾ :- ಯ ರ ಲ ವ ಶ ಷ ಸ ಹ ಳ

3 ಯೋಗವಾಹಕಗಳು | Yogavahagalu in Kannada

ಬೇರೆ ಅಕ್ಷರಗಳ ಸಹಯೋಗದಿಂದ ಉಚ್ಚರಿಸಲ್ಪಡುವ ವರ್ಣಗಳಿಗೆ ಅಥವಾ ಅಕ್ಷರಗಳಿಗೆ ಯೋಗವಾಹಕಗಳು ಎನ್ನುತ್ತಾರೆ. ಅವುಗಳು ಅನುಸ್ವರ (ಅಂ), ವಿಸರ್ಗ (ಅ:)

ಅನುಸ್ವರ :- ಯಾವುದೇ ಅಕ್ಷರವು ಅಥವಾ ಪದವು ಒಂದೇ ಬಿಂದುವನ್ನು ಹೊಂದರೆ.ಅವುಗಳನ್ನು ಅನುಸ್ವರ ಎನ್ನುವರು.
ಉದಾ :- ಕುಂಟ, ನೆಂಟರು

ವಿಸರ್ಗ :- ಯಾವುದೇ ಅಕ್ಷರವು ಅಥವಾ ಪದವು ಎರಡು ಬಿಂದುಗಳು ಹೊಂದರೆ ಅವುಗಳನ್ನು ವಿಸರ್ಗ ಎನ್ನುವರು.
ಉದಾ :- ದುಃಖ

Related – ಕನ್ನಡ ಸಂಧಿಗಳು | ಲೋಪ ಸಂಧಿ ಉದಾಹರಣೆಗಳು | Kannada Sandhigalu with Examples

ಗುಣಿತಾಕ್ಷರಗಳು

ಗುಣಿತಾಕ್ಷರಗಳು ಎಂದರೇನು?

ಯಾವುದೇ ವ್ಯಂಜನಗಳು ಸ್ವರಗಳ ಜೊತೆ ಸೇರುವುದರಿಂದ ಗುಣಿತಾಕ್ಷರಗಳು ಎನ್ನುವವರು. ಅಲ್ಲದೆ ಗುಣಿತಾಕ್ಷರಗಳಿಗೆ ಬಳ್ಳಿಗಳು ಎಂದು ಕರೆಯುತ್ತಾರೆ.
ಉದಾ :- ವ್ಯಂಜನ + ಸ್ವರ = ಗುಣಿತಾಕ್ಷರ
ಕ್ + ಅ = ಕ
ಕ್ + ಆ = ಕಾ
ಕ್ + ಇ = ಕಿ
ಕ್ + ಈ = ಕೀ
ಕ್ + ಉ = ಕು
ಕ್ + ಊ = ಕೂ
ಕ್ + ಋ = ಕೃ
ಕ್ + ಎ = ಕೆ
ಕ್ + ಏ = ಕೇ
ಕ್ + ಐ = ಕೈ
ಕ್ + ಒ = ಕೊ
ಕ್ + ಓ = ಕೋ
ಕ್ + ಔ = ಕೌ
ಮೊದಲು ‘ ಕ್ ‘ ವ್ಯಂಜನಕ್ಕೆ ಸ್ವರಗಳು ಸೇರಿಸುವ ಕ್ರಿಯೆಯು ಆರಂಭವಾಗುವುದರಿಂದ ‘ಕಾಗುಣಿತ’ ಎಂದು ಕರೆಯಲು ಕಾರಣವಾಯಿತು.
ನಾವು ವರ್ಣಮಾಲೆಯಲ್ಲಿ ಕಾಣುವ ವ್ಯಂಜನಾಕ್ಷರಗಳು ಸ್ವರಗಳೋಡನೆ ಕೂಡಿವೆ.
ಉದಾ :- ಕ = ಕ್ + ಅ
ಖ = ಖ್ +ಅ
ಗ = ಗ್ + ಅ
ಘ = ಘ + ಅ
ಅವರ್ಗಿಯ ವ್ಯಂಜನಗಳು ಸ್ವರಸಹಿತವಾಗಿವೆ.
ಯ = ಯ್ + ಅ
ರ = ರ್ + ಅ
ಲ = ಲ್ +ಅ
ವ = ವ್ + ಅ
25 ವರ್ಗಿಯ ವ್ಯಂಜನಗಳಿಗೂ 9 ಅವರ್ಗಿಯ ವ್ಯಂಜನಗಳಿಗೂ 13 ಸ್ವರಗಳು ಸೇರಿಸಿ ಹೊಸ ಅಕ್ಷರ ರೂಪಿಸಿಕೊಳ್ಳುತ್ತೇವೆ. ಇವೆ ಗುಣಿತಾಕ್ಷರಗಳು.

ಸಂಯುಕ್ತಾಕ್ಷರಗಳು | Sayuktakshar

ಸಂಯುಕ್ತಾಕ್ಷರಗಳು ಎಂದರೇನು? | Sayuktakshar meaning in Kannada

ಎರಡು ಅಥವಾ ಹೆಚ್ಚು ವ್ಯಂಜನಗಳು ಕಾಲ ವಿಳಂಬವಿಲ್ಲದೆ ಕುಡಿದಾಗ ಸಂಯುಕ್ತಾಕ್ಷರಗಳು ಎನ್ನುವರು.
ಉದಾ :- ಕನ್ನಡ, ಅಣ್ಣ, ವಸ್ತ್ರ – ಈ ಪದಗಳನ್ನು ನೋಡಿ. ಅಡಿಗೆರೆ ಹಾಕಿರುವ ಅಕ್ಷರಗಳಲ್ಲಿ ವ್ಯಂಜನಗಳು ಸೇರಿರುವುದನ್ನು ಗಮನಿಸಿ.
ನ್ನ = ನ್ +ನ್ + ಅ
ಣ್ಣ = ಣ್ + ಣ್ + ಅ
ಸ್ತ್ರ = ಸ್ + ತ್ + ಅ.
ಇದರಲ್ಲಿ ಸಜಾತಿ ಮತ್ತು ವಿಜಾತಿ ಸಂಯುಕ್ತಾಕ್ಷರಗಳು ಎಂದು ಎರಡು ವಿಧಗಳಿವೆ.

ಸಜಾತಿ ಸಂಯುಕ್ತಾಕ್ಷರಗಳು

ಒಂದು ವ್ಯಂಜಾನಕ್ಷರಕ್ಕೆ ಅದೇ ವ್ಯಂಜಾನಕ್ಷರ ಸೇರಿ ಆಗುವ ಅಕ್ಷರವು ‘ಸಜಾತಿ ಸಂಯುಕ್ತಾಕ್ಷರ’ ಎನ್ನುತ್ತಾರೆ. ಇದನ್ನು ‘ ದ್ವಿತ್ವ ‘ ಎಂದು ಕರೆಯುತ್ತಾರೆ.
ಉದಾ :- ಅಕ್ಕ ಕ್ +ಕ್ +ಅ
ಅಜ್ಜ ಜ್ + ಜ್ + ಅ
ಹುತ್ತ ತ್ + ತ್ + ಅ
ಅಮ್ಮ ಮ್ + ಮ್ + ಅ

ವಿಜಾತಿ ಸಂಯುಕ್ತಾಕ್ಷರಗಳು

ಒಂದು ವ್ಯಂಜಾನಕ್ಷರಕ್ಕೆ ಬೇರೆಯ ಒಂದು ಅಥವಾ ಅದಕ್ಕಿಂತ ಹೆಚ್ಚು ವ್ಯಂಜಾನಕ್ಷರಗಳು ಸೇರಿ ಆಗುವ ಅಕ್ಷರವು ‘ ವಿಜಾತಿ ಸಂಯುಕ್ತಾಕ್ಷರ’ ಎಂದು ಕರೆಯುತ್ತಾರೆ.
ಉದಾ :- ಅಕ್ಷರ ಕ್+ಷ್+ಅ ಕ್ಷ
ಭಕ್ತಿ ಭ್+ಕ್+ಇ ಕ್ತಿ
ಶಾಸ್ತ್ರ ಸ್+ತ್+ರ್+ಅ ಸ್ತ್ರ
ಆಪ್ತ ಆ+ಪ್+ತ್+ಅ ಪ್ತ

Get Kannada varnamale chart for free from our telegram channel and share this ಕನ್ನಡ ವರ್ಣಮಾಲೆ ಅಕ್ಷರಗಳು blog to your friends so it will be helpful for them to learn kannada.

Also Read – ತತ್ಸಮ ತದ್ಭವಗಳ ಪಟ್ಟಿ | Tatsama Tadbhava in Kannada list PDF

Leave a Reply