ಮಾಸ್ತಿ ವೆಂಕಟೇಶ್ ಅಯ್ಯಂಗಾರ್ | Masti Venkatesha Iyengar Information in Kannada

Masti Venkatesha Iyengar
Masti Venkatesha Iyengar

ಮಾಸ್ತಿ ವೆಂಕಟೇಶ ಅಯ್ಯಂಗಾರ್ರವರ ಪರಿಚಯ | Masti Venkatesha Iyengar Details

Masti Venkatesha Iyengar Details – “ಮಾಸ್ತಿ ಕನ್ನಡದ ಆಸ್ತಿ “ಎಂದು ಪ್ರಸಿದ್ಧವಾದ ಮಾಸ್ತಿ ವೆಂಕಟೇಶರವರು ಒಬ್ಬ ಕವಿಯಾಗಿದ್ದಾರೆ. ಕವಿಗಳಲ್ಲಿ ಇವರೊಬ್ಬರೂ ಸಣ್ಣ ಕತೆಗಳ ಜನಕ ಎಂದು ಹೆಸರಾದವರು. ಇವರು ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಯಾಗಿದ್ದಾರೆ.

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಹುಟ್ಟಿದ್ದು 1891 ರ ಜೂನ್ 06 ರಂದು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹೊಂಗೇನಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲಮ್ಮ.

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ರವರ ಬಾಲ್ಯ ಮತ್ತು ಹರೆಯ ವಯಸ್ಸಿನ ಕ್ಷಣಗಳು

ಮಾಸ್ತಿಯವರು ಬ್ರಾಹ್ಮಣ ಬಡಕುಟುಂಬದಲ್ಲಿ ಜನಿಸಿದವರು. ಅವರು ವಿದ್ಯಾಭ್ಯಾಸ ಮಾಡುವ ಕಾಲದಲ್ಲಿ ಅವರ ಮನೆಯಲ್ಲಿ ಬಹಳ ಕಷ್ಟದ ಪರಸ್ಥಿತಿ ಇತ್ತು. ಮಾಸ್ತಿಯವರು ಬಾಲ್ಯದಲ್ಲಿ ಬಹಳ ಕಷ್ಟ ಪಟ್ಟು ಜೀವನ್ ನಡೆಸುತ್ತಿದರು. ಅವರು ತಮ್ಮ ಸಂಬಂಧಿಗಳ ಊರಿನಲ್ಲಿ ಓದುತ್ತಿದರು. ಅಷ್ಟು ಕಷ್ಟ ಕಾಲವಿದ್ದರೂ ಅವರು ಓದುವುದನ್ನು ಕಡಿಮೆ ಮಾಡುತ್ತಿರಲಿಲ್ಲ. ಅವರು ಎಲ್ಲಾ ವಿಷಯಗಳಲ್ಲಿ ಪ್ರಥಮ ಸ್ಥಾನ ಬರುತ್ತಿದ್ದರು. ಮಾಸ್ತಿಯವರು ಪ್ರೌಢಶಾಲೆಯನ್ನು ಮೈಸೂರಿನ ವೇಸ್ಲಿಯನ್ ಹೈ ಸ್ಕೂಲ್ ನಲ್ಲಿ ಮತ್ತು ಪದವಿಯನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಮತ್ತು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ ಇಂಗ್ಲಿಷ್ ಎಂ. ಎ ಮುಗಿಸಿದರು. ನಂತರ ಮಾಸ್ತಿಯವರು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಉಪಾಧ್ಯಯರಾಗಿದ್ದರು. ಆಮೇಲೆ ಸಿವಿಲ್ ಪರೀಕ್ಷೆ ಬರೆದು, ಪಾಸಾಗಿ ಮೈಸೂರ್ ಸರಕಾರದಲ್ಲಿ ಅಸಿಸ್ಟೆಂಟ್ ಕಮಿಷನರ್ ಕೆಲಸ ಮಾಡಿದರು.

Also Read Happy Basava Jayanthi 2021 Wishes, SMS, Messages, WhatsApp Status, Quotes, Images & Photos.

ಮಾಸ್ತಿ ವೆಂಕಟೇಶ್ರವರು ಬರೆದ ಸಣ್ಣ ಕಥೆಗಳು | Masti Venkatesha iyengar Stories in Kannada

ರಂಗನ ಮದುವೆ ಮತ್ತು ಮಾತುಗಾರ ರಾಮ

ಮಾಸ್ತಿ ವೆಂಕಟೇಶ್ರವರು ಬರೆದ ಕಾವ್ಯ ಸಂಕಲನಗಳು

ಬರೆದ ಸಂಕಲನ ಮತ್ತು ವರ್ಷಯಾವುಗಳೆಂದರೆ.. ಬಿನ್ನಹ, ಮನವಿ ( 1922), ಅರುಣ ( 1924), ತಾವರೆ ( 1930), ಸಂಕ್ರಾಂತಿ ( 1969), ನವರಾತ್ರಿ ( 1944-1953), ಚೆಲುವು, ಸುನೀತ, ಮಲಾರ, ಶ್ರೀರಾಮ್ ಪಟ್ಟಾಭಿಷೇಕ

ಮಾಸ್ತಿ ವೆಂಕಟೇಶ್ ರವರು ಬರೆದ ಜೀವನ ಚರಿತ್ರೆ

ರವೀಂದ್ರನಾಥ ಠಾಕೂರ್ ( 1935), ಶ್ರೀರಾಮ್ ಕೃಷ್ಣ ( 1936 )

ಮಾಸ್ತಿ ವೆಂಕಟೇಶ್ ರವರು ಬರೆದ ಪ್ರಬಂಧಗಳು | Masti Venkatesha Iyengar Books

ಕನ್ನಡದ ಸೇವೆ ( 1930), ವಿಮರ್ಶೆ ( 1928- 1939), ಜನತೆಯ ಸಂಸ್ಕೃತಿ ( 1931) , ಜನಪದ ಸಾಹಿತ್ಯ ( 1937) , ಆರಂಭದ ಆಂಗ್ಲ ಸಾಹಿತ್ಯ ( 1979)

ಮಾಸ್ತಿ ವೆಂಕಟೇಶ್ ರವರು ಬರೆದ ನಾಟಕಗಳು

ಶಾಂತಾ, ಸಾವಿತ್ರಿ, ಉಷಾ ( 1923), ತಾಳಿಕೋಟಿ ( 1929), ಶಿವಛತ್ರ ಪತಿ ( 1932), ಯಶೋದಾರ ( 1933 ), ಕಾಕನಕೋಟೆ ( 1938), ಲಿಯರ್ ಮಹಾರಾಜ, ಚಂಡಮಾರುತ, ದ್ವಾದಶರಾತ್ರಿ, ಹ್ಯಾಂಮ್ಲೆಟ್, ಶಾಖೆಸ್ಪಿರ್ ದೃಶ್ಯಗಳು 1,2,3 ಪುರಂದರ ದಾಸ್, ಕನಕಣ್ಣ, ಕಾಳಿದಾಸ, ಬಾನುಲಿ ದೃಶ್ಯಗಳು

ಮಾಸ್ತಿ ವೆಂಕಟೇಶ್ ರವರು ಬರೆದ ಕಾದಂಬರಿಗಳು

ಚೆನ್ನಬಸವ ನಾಯಕ ( 1950), ಚಿಕ್ಕವಿರ ರಾಜೇಂದ್ರ ( 1956)

ಮಾಸ್ತಿ ವೆಂಕಟೇಶ್ ರವರ ದೊರೆತ ಪ್ರಶಸ್ತಿಗಳು

ಜ್ಞಾನಪೀಠ ಪ್ರಶಸ್ತಿ ( 1983), ಮೈಸೂರ್ ವಿಶ್ವ ವಿದ್ಯಾಲಯದ ಡಿ. ಲಿಟ್, ( 1977), ಕರ್ನಾಟಕ ವಿಶ್ವ ವಿದ್ಯಾಲಯದ ಡಿ. ಲಿಟ್ ( 1956), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ( 1968), ಕನ್ನಡ ಸಾಹಿತ್ಯ ಪರಿಷತ್ತಿನ ಅಧಕ್ಷ್ಯ ಪದವಿ ( 1953) ಮತ್ತು ದಕ್ಷಿಣ ಭಾರತದ ಸಾಹಿತ್ಯಗಳ ಸಂಮ್ಮೇಳನ ಅಧ್ಯಕ್ಷ ಪದವಿ ( 1946).

ಮಾಸ್ತಿ ವೆಂಕಟೇಶ್ ರವರ ತಂದೆ ಮತ್ತು ತಾಯಿ ಹೆಸರು| Masti Venkatesha Iyengar Parents Name in Kannada

ಇವರ ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲಮ್ಮ

Also Read – Hanuman Chalisa in Kannada | Read Hanuman chalisa lyrics in Kannada Pdf

Leave a Reply