ದ.ರಾ.ಬೇಂದ್ರೆ ಜೀವನ ಚರಿತ್ರೆ | ಭಾವಗೀತೆಗಳು | ಕೃತಿಗಳು | Da ra Bendre Information in Kannada

ದ. ರಾ. ಬೇಂದ್ರೆಯವರ ಜೀವನದ ಚರಿತ್ರೆ | Da ra Bendre Biography

ರಾಮಚಂದ್ರ ಭಟ್ಟರು ಮತ್ತು ಅಂಬಿಕೆ( ಅಂಬವ್ವ ) ಇವರ ಪುತ್ರರಾಗಿ ದ. ರಾ. ಬೇಂದ್ರೆಯವರು ಧಾರವಾಡದಲ್ಲಿ 1896 ಜನವರಿ 31 ರಂದು ಜನಿಸಿದರು. ದ. ರಾ. ಬೇಂದ್ರೆಯವರು ಕಾವ್ಯ ನಾಮವು ” ಅಂಬಿಕನಾಯದತ್ತ “. ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ತಮ್ಮ ಕಾವ್ಯನಾಮ ಮತ್ತು ನಾಮಗಳಲ್ಲಿನ ತಮ್ಮ ತಂದೆ ತಾಯಿಯ ಮೇಲಿನ ಅಪಾರ ಪ್ರೀತಿಯನ್ನು ಸಾರಿ ಹೇಳುವಂತಹದ್ದಾಗಿದೆ.

ದ. ರಾ. ಬೇಂದ್ರೆ
ದ. ರಾ. ಬೇಂದ್ರೆ

ದ. ರಾ. ಬೇಂದ್ರೆಯವರು 1913 ರಲ್ಲಿ ಮೆಟ್ರಿಕ್ಯುಲಶನ್ ಮುಗಿಸಿದ ನಂತರ ಪುಣೆಗೆ ತೆರಳಿ 1918 ರಲ್ಲಿ ತಮ್ಮ ಬಿ. ಎ ಪದವಿಯನ್ನು ಪಡೆದರು. ಬಿ. ಎ ಯನ್ನು ಮಾಡಿದ ನಂತರ ಅಧ್ಯಾಪಕರಾಗಿ ಸೇವೆ ಸಲ್ಲಿಸಲು ಪ್ರಾಂಬಿಸಿದರು. 1919 ರಲ್ಲಿ ಲಕ್ಷ್ಮಿಬಾಯಿಯವರೊಂದಿಗೆ ದ. ರಾ. ಬೇಂದ್ರೆಯವರು ಮದುವೆಯಾದರು. ಮದುವೆಯೂ ಮಹೋತ್ಸವೂ ಹುಬ್ಬಳ್ಳಿಯಲ್ಲಿ ನಡೆಯಿತು. ನಂತರ 1935 ರಲ್ಲಿ ಎಂ. ಎ ಪಡೆದುಕೊಂಡು 1944 ರಿಂದ 1956 ರವರೆಗೆ ಸೊಲ್ಲಾಪುರದ ಡಿ. ಎ. ಎ ಕಾಲೇಜಿನಲ್ಲಿ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸಿದರು.

ದ. ರಾ. ಬೇಂದ್ರೆ ಆರಂಭಿಕ ಜೀವನ ಮತ್ತು ಸಾಧನೆಗಳು |

ದ. ರಾ. ಬೇಂದ್ರೆಯವರಿಗೆ ಸಾಹಿತ್ಯ ರಚನೆ ಅಂದರೆ ತುಂಬಾ ಪ್ರೀತಿ. ಅವರು ಕಾಲೇಜಿನಲ್ಲಿ ಓದುತ್ತಿದಾಗಲೇ ಅವರ ಮೊದಲ ಕವನವು ಪ್ರಭಾತ ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಇದೆ ದ. ರಾ. ಬೇಂದ್ರೆ ಯವರ ಮೊದಲ ಹೆಜ್ಜೆ. ನಂತರ ದಿನ ದಿನಕ್ಕೂ ಸಾಹಿತ್ಯದ ಮೇಲಿನ ಪ್ರೀತಿ ಅಕ್ಷಯವಾಗುತ್ತಲೇ ಇತ್ತು. ಬೇಂದ್ರೆಯವರು ಸಾಹಿತ್ಯ ಕ್ಷೇತ್ರದಲ್ಲಿ ತುಂಬಾ ಆಸಕ್ತಿಯುಳ್ಳವರು ಆಗಿದ್ದರು. ಇವರು ಸಾಹಿತ್ಯ ಕ್ಷೇತ್ರಗಳಲ್ಲಿ ಅಪಾರ ಮೆಚ್ಚುಗೆ ಹೊಂದಿದ್ದರು.

ಗರಿ, ನಾದಲಿಲೇ, ನಾಕುತಂತಿ. ಹೀಗೆ ಹಲವಾರು ಕವನ ಸಂಕಲನ. ಕೃತಿಗಳನ್ನು ಹೊರತಂದರು. ದ. ರಾ. ಬೇಂದ್ರೆ ಕವನ ಸಂಕಲನಗಳು, ಕೃತಿಗಳು ಕಂಪು ನಾಡಿನಾದ್ಯಂತ ಹರಡಿ ಎಲ್ಲರ ಬಾಯಲ್ಲೂ ದ. ರಾ. ಬೇಂದ್ರೆ ಮಾತುಗಳೇ ತುಂಬಿತ್ತು. ಕನ್ನಡದ ವರಕವಿಯಂದೇ ಪ್ರಸಿದ್ದಿ ಪಡೆದ ನಮ್ಮ ನಿಮ್ಮೆಲ್ಲರ ಪ್ರೀತಿಯ ಬೇಂದ್ರೆ ಅಜ್ಜಯ್ಯನಿಗೆ ರಾಶಿ ರಾಶಿ ಪ್ರಶಸ್ತಿ, ಪುರಸ್ಕಾರ, ಬಿರುದುಗಳು ದೊರೆತಿದ್ದು. ಅದರಲ್ಲಿ ಕೆಲವು ಮುಖ್ಯಗಳಾಗಿದ್ದವು

ಅವುಗಳು ಯಾವೆಂದರೆ, 1958 ರಲ್ಲಿ ಅರಳು ಮರಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮರಾಠಿಯಲ್ಲಿ ರಚಿಸಿದ ಕೃತಿ ‘ ಸಂವಾದ ‘ ಕ್ಕೆ ಕೇಳ್ಕರ್ ಬಹುಮಾನ. 1968 ರಲ್ಲಿ ‘ ಪದ್ಮಶ್ರೀ ‘ ಪ್ರಶಸ್ತಿ.1973 ರಲ್ಲಿ ‘ ನಾಕುತಂತಿ ‘ ಕೃತಿಗೆ ಜ್ಞಾನಪೀಠ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯ, ಮೈಸೂರ್ ವಿಶ್ವವಿದ್ಯಾಲಯ, ವಾರಾಣಸಿ ಹಾಗೂ ಕಾಶಿ ವಿದ್ಯಾಪೀಠದಿಂದ ಗೌರವ ಡಾಕ್ಟರೇಟ್ ಪದವಿ ಹೀಗೆ ಸಾಲು ಸಾಲು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

ದ. ರಾ. ಬೇಂದ್ರೆ ಎಲ್ಲಾ ಕವಿಗಳಿಗೆ, ಸಾಹಿತಿಗಳಿಗೆ ಸ್ಫೂರ್ತಿಯ ಚಿಲುಮೆ. ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸುವ ಕೀರ್ತಿ ದ. ರಾ. ಬೇಂದ್ರೆ ಸಲ್ಲುತ್ತದೆ. ಆದ್ದರಿಂದ ದ. ರಾ. ಬೇಂದ್ರೆ ಯವರನ್ನು ‘ಕನ್ನಡದ ಠಗೊರ ‘ ಎಂದು ಕರೆಯಲಾಗುತ್ತದೆ. ಇಂದಿಗೂ ಅಜ್ಜ ಬರೆದ ‘ ನೀ ಹಿಂಗ ನೋಡಬ್ಯಾಡ ನನ್ನ ‘ ಗೀತೆ ಎಲ್ಲರ ಕಣ್ಣಂಚನ್ನು ವದ್ದೆಯಾಗಿಸದೆ ಇರದು. ದ. ರಾ. ಬೇಂದ್ರೆ ಬರಹಗಳು, ಕವಿತೆಗಳು ಮನಸ್ಸಿನ ಕೈಗನ್ನಡಿಯೇ ಸರಿ. ಜನರ ಭಾವನೆಗಳು ತಾಳ್ಮೆ ಹೊಂದಿಕೊಂಡು ದುಃಖ, ನೋವುಗಳನ್ನು ಮರೆಸಿ ನಗುವನ್ನು ಉಕ್ಕಿಸುವಂತಹ ಅಜ್ಜನ ಕವಿತೆಗಳು ಸುಮದುರ, ಸುಂದರ

ಕನ್ನಡ ನಾಡಿನ ವರಕವಿ, ಸಾಹಿತ್ಯ ಪರ್ವತ ದ. ರಾ. ಬೇಂದ್ರೆ ಯವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕದ ತಾರೆಯಾಗಿ, ಕನ್ನಡಂಬೆಯ ಸಿರಿಯನ್ನು ಹೆಚ್ಚಿಸಿದ ದ. ರಾ. ಬೇಂದ್ರೆ ನೆನಪಿನೊಂದಿಗೆ, ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ ಸೇವೆ ಮನಪೂರ್ವಕವಾಗಿ ಸ್ಮರಿಸುತ್ತ ಅವರ ಕನಸಿನಂತೆ ಕನ್ನಡ ಡಿಂ ಡಿಂಮವನ್ನು ವಿಶ್ವದ ಮೂಲೆ ಮೂಲೆಗಳಿಗೆ ತಲುಪಿಸೋಣ.

ಇದನ್ನು ಓದಿ – ಮಾಸ್ತಿ ವೆಂಕಟೇಶ್ ಅಯ್ಯಂಗಾರ್ | Masti Venkatesha Iyengar Information in Kannada

ದ. ರಾ. ಬೇಂದ್ರೆ ಕವನ ಸಂಕಲನಗಳು | Da ra Bendre Poems

 • ಕೃಷ್ಣ ಕುಮಾರಿ
 • ಗರಿ
 • ಮೂರ್ತಿ
 • ಕಾಮಕಸ್ತೂರಿ
 • ಸಖೀಗೀತ
 • ಉಯ್ಯಾಲೆ
 • ನಾದಲೀಲೆ
 • ಮೇಘದೂತ
 • ಹಾಡು-ಪಾಡು
 • ಗಂಗಾವತರಣ
 • ಅರಳು-ಮರಳು
 • ವಿನಯ
 • ನಾಕುತಂತಿ
 • ಹೃದಯ ಸಮುದ್ರ ಮರ್ಯಾದ
 • ಒಲವೆ ನನ್ನ ಬದುಕು
 • ಚೈತನ್ಯದ ಪೂಜೆ
 • ಮುಗಿಲಮಲ್ಲಿಗೆ
 • ತಾಲೆಕ್ಕಣಿ
 • ಕೆತುದೌತಿ
 • ಪ್ರತಿಬಿಂಬಗಳು

ದ. ರಾ. ಬೇಂದ್ರೆ ನಾಟಕ | Da ra Bendre Plays

 • ತಿರುಕನ ಪಿಡುಗು
 • ಉದ್ದಾರ
 • ನಗೆಯ ಹುಗೆ
 • ಹುಚ್ಚಾಟಗಳು
 • ಹೊಸ ಸಂಸಾರ ಮತ್ತು ಇತರ ನಾಟಕಗಳು

ದ. ರಾ. ಬೇಂದ್ರೆ ಸಂಪಾದನೆ

 • ನನ್ನದಉ ಈ ಕನ್ನಡ ಹಾಡು
 • ಹಕ್ಕಿ ಹಾರುತಿದೆ
 • ಚಂದ್ರಹಾಶ ಹೊಸಗನ್ನಡ ಕಾವ್ಯಶ್ರೀ ಕನಕದಾಸ ಚತುಶಿತ ಮನೋತ್ಸವ

ದ. ರಾ. ಬೇಂದ್ರೆ ಅನುವಾದ | Da ra Bendre Translation

 • ಉಪನಿಷತ್ ರಹಸ್ಯ
 • ಭಾರತೀಯ ನವಜನ್ಮೆ
 • ಗುರು ಗೋವಿಂದ ಸಿಂಗ್
 • ನೂರೊಂದು ಕವವ
 • ಕಬೀರ ವಚನಾವಳಿ

ದ ರಾ ಬೇಂದ್ರೆ ಭಾವಗೀತೆಗಳು | Da ra Bendre Lyrics

 • ಯಾಕೋ ಕಾಣೆ ರುದ್ರ ವೀಣೆ
 • ಭೂಮಿತಾಯಿಯ ಚೊಚ್ಚಿಲ ಮಗ
 • ಶ್ರಾವಣಾ ಬಂತು
 • ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವ
 • ನೀ ಹೀಂಗ ನೋಡಬ್ಯಾಡ ನನ್ನ
 • ಅನಂತ ಪ್ರಣಯ (ಉತ್ತರಧ್ರುವದಿಂ, ದಕ್ಷಿಣಧ್ರುವಕೂ)
 • ಬಾರೊ ಸಾಧನಕೇರಿಗೆ
 • ಇಳಿದು ಬಾ ತಾಯೆ ಇಳಿದು ಬಾ..
 • ನಾರೀ ನಿನ್ನ ಮಾರೀ ಮ್ಯಾಗ
 • ಭೃಂಗದ ಬೆನ್ನೇರಿ…
 • ಯುಗ ಯುಗಾದಿ ಕಳೆದರೂ
 • ನಾನು ಬಡವಿ ಆತ ಬಡವ
 • ಯಾರಿಗೂ ಹೇಳೋಣು ಬ್ಯಾಡ
 • ಅಂತರಂಗದ ಮೃದಂಗ
 • ಬೆಳಗು (ಮೂಡಲ ಮನೆಯಾ ಮುತ್ತಿನ ನೀರಿನ)
 • ನಾಕು ತಂತಿ
 • ಬಂಗಾರ ನೀರ ಕಡಲಾಚೆಗೀಚೆಗಿದೆ
 • ಗಮ ಗಮಾ ಗಮ್ಮಾಡಿಸ್ತಾವ ಮಲ್ಲಿಗಿ
 • ಕುರುಡು ಕಾಂಚಾಣ ಕುಣಿಯುತ್ತಲಿತ್ತು!

ದ. ರಾ. ಬೇಂದ್ರೆ ಜನಪ್ರಿಯ ಸಂಸ್ಕೃತಿ

1972 ರಲ್ಲಿ ಚಲನಚಿತ್ರ ನಿರ್ದೇಶಕ ಮತ್ತು ನಾಟಕಕಾರ ಗಿರೀಶ್ ಕಾರ್ನಾಡ್ ಅವರು ದ.ರಾ.ಬೇಂದ್ರೆ ಅವರ ಜೀವನ ಮತ್ತು ಕೆಲಸದ ಕುರಿತು ಕನ್ನಡ ಸಾಕ್ಷ್ಯಚಿತ್ರವನ್ನು ಮಾಡಿದರು.

ದ.ರಾ.ಬೇಂದ್ರೆ ಪ್ರಶಸ್ತಿಗಳು | Da ra Bendre Awards

 • ಜ್ಞಾನಪೀಠ ಪ್ರಶಸ್ತಿ – 1974 (ನಾಕು ತಂತಿ ಕವನ ಸಂಕಲನಕ್ಕಾಗಿ)
 • ಪದ್ಮಶ್ರೀ – 1968
 • ಸಾಹಿತ್ಯ ಅಕಾಡೆಮಿ ಪ್ರಶಸ್ತಿ – 1958
 • ಕೇಳ್ಕರ್ ಪ್ರಶಸ್ತಿ – 1965
 • ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ – 1968

ಇದನ್ನು ಓದಿ – ಬಸವಣ್ಣ ವಚನಗಳು ಮತ್ತು ಅರ್ಥ | Basavanna Vachanagalu in Kannada with Explanation

1. Dara bendre birthplace?

Ans – Dara bendre was born in Dharwad on 1896 January 31.

Leave a Reply