ಭಾರತದ ಗಣರಾಜ್ಯೋತ್ಸವ ಪ್ರಬಂಧ pdf | ಗಣರಾಜ್ಯೋತ್ಸವ ಇತಿಹಾಸ

gana rajyotsava in kannada

ಭಾರತದ ಗಣರಾಜ್ಯೋತ್ಸವ ಬಗ್ಗೆ ಮಾಹಿತಿ | Republic Day in Kannada 2022

ಭಾರತದ ಗಣರಾಜ್ಯೋತ್ಸವ ಬಗ್ಗೆ ಮಾಹಿತಿ – ಗಣ ಎಂದರೆ ಒಂದು ಗುಂಪು ಅಥವಾ ಒಗ್ಗಟ್ಟು. ಭಾರತವು ಒಗ್ಗಟ್ಟಿನಿಂದ ಸೇರಿ ಬ್ರಿಟಿಷರಿಂದ ಸ್ವತಂತ್ರ ಪಡೆದುಕೊಂಡರು. ಸ್ವತಂತ್ರ ಪಡೆದ ಬಳಿಕ ಭಾರತ ಸಂವಿಧಾನವು ಜಾರಿಗೋಳಿಸಿತು. ಜಾರಿಗೊಳಿಸಿದ ನಂತರ ಭಾರತವು ಸ್ವತಂತ್ರ ಗಣರಾಜ್ಯವೆಂದು ಜನವರಿ 26 1950 ರಲ್ಲಿ ಹೊರತುಪಡಿಸಿತು. ಆದ ಕಾರಣ ಪ್ರತಿವರ್ಷ ಜನವರಿ 26 ರಂದು ಭಾರತದಲ್ಲಿ ಗಣರಾಜ್ಯೋತ್ಸವ ದಿನವೆಂದು ಆಚರಿಸಲಾಗುತ್ತದೆ.

ಭಾರತದ ಗಣರಾಜ್ಯೋತ್ಸವ ದಿನ ಯಾವಾಗ ಆಚರಿಸಲಾಗುತ್ತದೆ.

ಭಾರತದಲ್ಲಿ ಗಣರಾಜ್ಯೋತ್ಸವ ದಿನವನ್ನು ಪ್ರತಿವರ್ಷ ಜನವರಿ 26 ರಂದು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಭಾರತದಲ್ಲಿ ಗಣರಾಜ್ಯೋತ್ಸವ ದಿನವನ್ನು ಒಂದು ರಾಷ್ಟ್ರೀಯ ಹಬ್ಬವೆಂದು ಆಚರಿಸಲಾಗುತ್ತದೆ. ಮತ್ತು ವಿವಿಧ ಶಾಲಾ ಕಾಲೇಜು ಮತ್ತು ಕಚೇರಿಗಳಲ್ಲಿ ಆಚರಿಸಲಾಗುತ್ತದೆ. ಮತ್ತು ಗಣರಾಜ್ಯೋತ್ಸವ ದಿನದ ಭಾಷಣಮಾಡುವುದು , ಪ್ರಬಂಧ ಬರೆಯುವುದರ ಮೂಲಕ ಆಚರಿಸಲಾಗುತ್ತದೆ.

ಗಣರಾಜ್ಯೋತ್ಸವದ ಇತಿಹಾಸ | Republic Day Essay in Kannada 2022

Republic Day Essay in Kannada 2022- ಭಾರತವು ಅನೇಕ ವರ್ಷಗಳಿಂದ ಬ್ರಿಟಿಷರ ಆಳ್ವಿಕೆಯಿಂದ ಇತ್ತು. ಬ್ರಿಟಿಷರು ಅನೇಕ ರೀತಿಯಲ್ಲಿ ಭಾರತೀಯರಿಗೆ ತೊಂದರೆ ನೀಡುತ್ತಿದ್ದರು. ಬ್ರಿಟಿಷರು ಭಾರತೀಯರನ್ನು ತಮ್ಮ ಕೈಯಳೂ ಕೆಲಸದವರು ಎಂದು ತಮ್ಮ ಹತೋಟಿಯಲ್ಲಿ ಇಟ್ಟುಕೊಂಡಿದ್ದರು. ಈ ನೋವನ್ನು ತಾಳಲಾರದೆ ಭಾರತೀಯರು ಎಲ್ಲರೂ ಸೇರಿ ಬ್ರಿಟಿಷರ ಜೊತೆಗೆ ಯುದ್ಧ ಮಾಡಲು ಸಿದ್ದರಾದರು. ಯುದ್ಧ ಮಾಡಿದ ಬಳಿಕ ಮಧ್ಯರಾತ್ರಿ ಭಾರತೀಯರಿಗೆ ಸ್ವತಂತ್ರ ಸಿಕ್ಕಿತ್ತು.

ಭಾರತೀಯರಿಗೆ 1947 ಆಗಸ್ಟ್ 15 ರಂದು ಸ್ವತಂತ್ರ ಸಿಕ್ಕ ದಿನವೆಂದು ಖುಷಿಯಾಯಿತು. ಭಾರತ ಸ್ವತಂತ್ರವಾದ ಬಳಿಕ ಡಾ. ಅಂಬೇಡ್ಕರ್ ರವರ ನೇತೃತವದಲ್ಲಿ ಆಗಸ್ಟ್ 29 ರಂದು ಕರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು. ನವೆಂಬರ್ 4 1947 ರಂದು ಈ ಸಮಿತಿಯ ಸಂವಿಧಾನದ ಕರಡು ಪ್ರತಿಯನ್ನು ಶಾಸನಸಭೆಯಲ್ಲಿ ಮಂಡಿಸಿತು. ಈ ಸಂವಿಧಾನದ ಕರಡು ಪ್ರತಿಯಲ್ಲಿ ಇರುವ ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳನ್ನು ಸರಿಪಡಿಸಿದ ನಂತರ ಸಂವಿಧಾನವನ್ನು 1950 ಜನವರಿ 26 ರಂದು ಜಾರಿಗೋಳಿಸಿತು.

ಭಾರತದ ಸ್ವಾತಂತ್ರ ಚಳುವಳಿಯಲ್ಲಿ ಜನವರಿ 26, 1929 ರಂದು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯದ ಧ್ಯೆಯವನ್ನು ಹಾಕಿಕೊಂಡಿತ್ತು. ಲಾಹೋರ್ ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡು ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ನಿರ್ಧಾರ ಮಾಡಲಾಗುತ್ತದೆ. ಇದೇ ಕಾರಣಕ್ಕಾಗಿ ಸ್ವಾತಂತ್ರ ನಂತರ ಭಾರತದ ಸಂವಿಧಾನವನ್ನು ಈ ದಿನದಂದು ಜಾರಿಗೊಳಿಸಲಾಗುತ್ತದೆ.

Also Read – Hanuman Chalisa in Kannada | Read Hanuman chalisa lyrics in Kannada Pdf

ಭಾರತದ ಗಣರಾಜ್ಯೋತ್ಸವ ಭಾಷಣ | Republic Day Speech in Kannada 2022

ಗಣರಾಜ್ಯೋತ್ಸವ ಮಕ್ಕಳ ಭಾಷಣ – ಎಲ್ಲರಿಗೂ ಶುಭೋದಯ, ವೇದಿಕೆ ಮೇಲೆ ಆಸಿನವಾಗಿರುವ ನನ್ನ ಆತ್ಮೀಯ ಗುರು ಹಿರಿಯರು, ಶಿಕ್ಷಕ ಶಿಕ್ಷಕಿಯರಿಗೆ, ಮತ್ತು ನನ್ನ ಮುದ್ದು ಮಕ್ಕಳೇ.. ಇವತ್ತು ನಾನು ಗಣರಾಜ್ಯೋತ್ಸವ ದಿನದಂದು ಭಾಷಣ ಮಾಡಲು ಕಾರಣವೇನೆಂದರೆ.. ಇವತ್ತು ಗಣರಾಜ್ಯೋತ್ಸತವ ದಿನವಾಗಿದೆ. ಇಂದು ನಮ್ಮ ದೇಶಕ್ಕೆ ಸಂವಿಧಾನವು ಜಾರಿಗೆ ಬಂದ ದಿನವಾಗಿದೆ. ವರ್ಷದಲ್ಲಿ ಮೊದಲ ರಾಷ್ಟ್ರೀಯ ಹಬ್ಬ ಭಾರತದ ಗಣರಾಜ್ಯೋತ್ಸವ ದಿನವಾಗಿದೆ.

ಭಾರತದಲ್ಲಿ ಗಣರಾಜ್ಯೋತ್ಸತವ ದಿನವೂ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಭಾರತದ ಪ್ರತಿಯೊಬ್ಬ ಪ್ರಜೆಗೂ ಗಣರಾಜ್ಯೋತ್ಸವ ದಿನ ಆಚರಣೆ ಮಾಡುವುದು ಕರ್ತವ್ಯವಾಗಿದೆ. ನಮಗೆ ಸ್ವಾತಂತ್ರ ಸಿಗಲು ಅನೇಕ ಮಹಾನ ವ್ಯಕ್ತಿಗಳು ಹೋರಾಟ ಮಾಡಿದರು. ದೇಶದ ಎಲ್ಲಾ ರಾಜ್ಯಗಳಲ್ಲಿ, ಶಾಲಾ – ಕಾಲೇಜುಗಳಲ್ಲಿ ಮತ್ತು ವಿವಿಧ ಇಲಾಖೆಗಳಲ್ಲಿ ಆಚರಿಸಲಾಗುತ್ತದೆ. ಈ ಎರಡು ಮಾತುಗಳನ್ನು ಮಾತನಾಡಲು ಅವಕಾಶಕೊಟ್ಟ ನಮ್ಮ ಗಣ್ಯರಿಗೆ ವಂದನೆಗಳು ಕೋರುತ್ತಾ ನನ್ನ ಗಣರಾಜ್ಯೋತ್ಸವ ದಿನದ ಭಾಷಣ ಮುಗಿಸುತ್ತೇನೆ. ಜೈ ಹಿಂದ ಜೈ ಕರ್ನಾಟಕ ಮಾತೇ!

ಭಾರತದ ಗಣರಾಜ್ಯೋತ್ಸತವ ದಿನದ ಮಹತ್ವ

ಎಲ್ಲರಿಗೂ ಭಾರತವು ಸ್ವಾತಂತ್ರ ದೇಶವೆಂದು ಗೊತ್ತಿರುತ್ತದೆ. ಸಣ್ಣವರಿಂದ ಹಿಡಿದು ದೊಡ್ಡವರಿಗೂ ಗೊತ್ತಿರುವ ವಿಷಯವಾಗಿದೆ. 1947 ಒಂದು ಬಂಗಾರದ ವರ್ಷವಾಗಿದೆ. ಭಾರತದಲ್ಲಿ ಗಣರಾಜ್ಯೋತ್ಸವ ದಿನವನ್ನು ಮೂಲೆ ಮೂಲೆ ಗಳಲ್ಲಿ ಆಚರಿಸಲಾಗುತ್ತದೆ. ಅಂದಿನ ದಿನ ಎಲ್ಲರೂ ಶಾಂತಿ ದಿನ ಎಂದು ಆಚರಿಸುತ್ತಾರೆ. ಅಂದಿನ ದಿನ ಎಲ್ಲರೂ ಬಿಳಿ ಬಟ್ಟೆ ಧರಿಸಿ ಶಾಂತಿ ಯಿಂದ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತದೆ.

ಗಣರಾಜ್ಯೋತ್ಸವ ದಿನವನ್ನು ದೆಹಲಿಯಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೆಹಲಿಯಲ್ಲಿ, ರಾಜಪಾತನಿಂದ ಇಂಡಿಯಾ ಗೆಟಗೆ ಹೋಗುವ ಸೂರ್ಯನು ಪ್ರಕಾಶಿಸುವ ಕಿರಣಗಳೊಂದಿಗೆ ಆಕರ್ಷಣೆಯುಳ್ಳ ಮೆರವಣಿಗೆಯನ್ನು ನಡೆಸಲಾಗುತ್ತದೆ. ಈ ದಿನದಂದು ಹಲವು ನೌಕಪಡೆ, ಯುದ್ಧ ಸೇನೆ, ವಾಯು ಪಡೆ ಈ ಎಲ್ಲಾ ಕ್ಷೇತ್ರಗಳು ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ.

ಇದರೊಂದಿಗೆ ಈ ದಿನ ಪ್ರಧಾನ ಮಂತ್ರಿ ಅಮರ್ ಜವಾನ್ ಜ್ಯೋತಿಗೆ ಮಾಲಾರ್ಪಣೆ ಮಾಡುತ್ತಾರೆ. ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸುತ್ತಾರೆ. ರಾಷ್ಟ್ರಪತಿ ತನ್ನ ಭದ್ರತಾ ಪಡೆ ಮತ್ತು ಹಲವು ಕುದುರೆಗಳಿಂದ ಅಲಂಕರೀಸಲ್ಪಟ್ಟ ಗಾಡಿಯಲ್ಲಿ ಕುಳಿತು ಇಂಡಿಯಾ ಗೆಟಗೆ ಬರುತ್ತಾರೆ. ಅಲ್ಲಿ ಪ್ರಧಾನ ರಾಷ್ಟ್ರಪತಿಯನ್ನು ಸ್ವಾಗಿಸುತ್ತಾರೆ. ಮತ್ತು ವಿವಿಧ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಚರಿಸುತ್ತಾರೆ. ವಿವಿಧ ಗಣ್ಯರು ಗಣರಾಜ್ಯೋತ್ಸವ ದಿನದ ಭಾಷಣ ಮಾಡುತ್ತಾರೆ. ಮತ್ತು ಸಿಹಿ ತಿಂಡಿ ತಿನಿಸುಗಳನ್ನು ಹಂಚುತ್ತಾ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಾರೆ.

You can get Republic Day Speech in Kannada pdf from our Telegram Channel, Make sure you join our telegram community to get Republic Day Essay in Kannada Pdf and Republic Day Speech in Kannada Pdf for free.

Also Read – ಕ್ರಿಸ್ಮಸ್ ಹಬ್ಬದ ಶುಭಾಶಯಗಳು | ಕ್ರಿಸ್ಮಸ್ ಹಬ್ಬದ ಇತಿಹಾಸ

Leave a Reply