ಕ್ರಿಸ್ಮಸ್ ಹಬ್ಬದ ಶುಭಾಶಯಗಳು | ಕ್ರಿಸ್ಮಸ್ ಹಬ್ಬದ ಇತಿಹಾಸ
ಕ್ರಿಸ್ಮಸ್ ಹಬ್ಬ ಎಂದರೆ ಏನು ?
ಕ್ರಿಸ್ಮಸ್ ಹಬ್ಬ ಪ್ರತಿ ವರ್ಷ ಕೊನೆಯ ತಿಂಗಳಾದ ಡಿಸೆಂಬರ್ 25 ರಂದು ಕರ್ತನಾದ ಯೇಸು ಕ್ರಿಸ್ತ್ ನ ಜನ್ಮದಿನವೆಂದು ಕ್ರಿಸ್ಮಸ್ ನ್ನು ಆಚರಿಸಲಾಗುತ್ತದೆ. ಕ್ರಿಸ್ಮಸ್ ಎಂದರೆ ಕ್ರಿಸ್ತ್ ಜನಿಸಿದ ದಿನವಾಗಿದೆ.
ಕ್ರಿಸ್ಮಸ್ ಹಬ್ಬ ದಿನವನ್ನು ಯಾವಾಗ ಆಚರಿಸುತ್ತಾರೆ ?
ಪ್ರತಿ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ 25 ರಂದು ಕ್ರಿಸ್ಮಸ್ ಹಬ್ಬ ದೇಶದಲ್ಲಿ ಎಲ್ಲರೂ ಆಚರಿಸುತ್ತಾರೆ. ಕ್ರಿಶ್ಚಿಯನ್ ಧರ್ಮದಲ್ಲಿ ಕ್ರಿಸ್ಮಸ್ ಹಬ್ಬವು ದೊಡ್ಡ ಹಬ್ಬವಾಗಿದೆ. ಇದು ದೊಡ್ಡ ಹಬ್ಬವೆಂದು ಸಂತೋಷದಿಂದ ಆಚರಿಸುತ್ತಾರೆ. ಈ ಹಬ್ಬದ ದಿನವೂ ಕರ್ತನಾದ ಯೇಸು ಕ್ರಿಸ್ತ್ ಜನಿಸಿದ ದಿನವಾಗಿದೆ. ಕ್ರಿಶ್ಚಿಯನ್ ಧರ್ಮದವರು ಯೇಸುವಿನನ್ನು ದೇವರೆಂದು ಕರೆಯುತ್ತಾರೆ ಮತ್ತು ಭಕ್ತಿಯಿಂದ ಪೂಜಿಸುತ್ತಾರೆ.
ಕ್ರಿಸ್ಮಸ್ ಹಬ್ಬ 12 ದಿನಗಳವರೆಗೆ ಆಚರಿಸುತ್ತಾರೆ, ಅಂದರೆ ಡಿಸೆಂಬರ್ 25 ರಿಂದ ಜನವರಿ 06 ರವರೆಗೆ ಆಚರಿಸುತ್ತಾರೆ. ಈ 12 ದಿನಗಳ ಕಾಲ ಆಚರಿಸುವ ಹಬ್ಬಕ್ಕೆ ” ಎಪಿಫನಿ ” ಎಂದು ಕರೆಯುತ್ತಾರೆ. ಕ್ರಿಸ್ಮಸ್ ಹಬ್ಬವು ದೊಡ್ಡ ಹಬ್ಬವೆಂದು ಬಹಳ ವಿಜೃಂಭಣೆಯಿಂದ ಹೊಸ ಉಡುಪುಗಳನ್ನು ತೊಟ್ಟು, ಚರ್ಚ್ ಗೆ ಹೋಗಿ ಮೇಣದ ಬತ್ತಿ ಬೆಳಗುವ ಮೂಲಕ ಕರ್ತನಾದ ಯೇಸುವಿಗೆ ತಲೆಬಾಗಿ ಪ್ರಾರ್ಥನೆ ಮಾಡುತ್ತಾರೆ. ಪ್ರಾರ್ಥನೆ ಮಾಡಿದ ಬಳಿಕ ಕ್ರಿಸ್ಮಸ್ ಹಾಡುಗಳನ್ನು ಹಾಡುತ್ತಾ, ಮಕ್ಕಳಿಗೆ ಚಾಕಲೇಟ್, ಕೇಕ್ ನ್ನು ಹಂಚುತ್ತಾ ಕ್ರಿಸ್ಮಸ್ ನ್ನು ಲವ ಲವಿಕೆಯಿಂದ ಆಚರಿಸುತ್ತಾರೆ.
ಕ್ರಿಸ್ಮಸ್ ಹಬ್ಬ ದಿನದ ಬಗ್ಗೆ ತಿಳಿಯಬೇಕಾದ ಸಂಗತಿಗಳು
ಪ್ರಪಂಚದಲ್ಲಿ ಅನೇಕ ಹಬ್ಬಗಳನ್ನು ಆಚರಿಸುತ್ತಾರೆ. ಅವರ ಜಾತಿ, ಧರ್ಮಕ್ಕೆ ಸಂಬಂಧ ಪಟ್ಟ ಹಬ್ಬಗಳಿಗೆ ಆಚರಿಸುತ್ತಾರೆ. ಹಬ್ಬಗಳನ್ನು ಆಚರಿಸಲು ಕಾರಣವೇನೆಂದರೆ, ಒಬ್ಬರಿಗೊಬ್ಬರು ಪ್ರೀತಿ, ಪ್ರೇಮ, ಮಮತೆ ಮತ್ತು ಸ್ನೇಹ ಹಂಚಿಕೊಳ್ಳಲು ಆಚರಿಸುತ್ತಾರೆ. ಅಲ್ಲದೆ ಪರಸ್ಪರರಲ್ಲಿ ಏಕತೆಯನ್ನು ಕಾಪಾಡಿಕೊಳ್ಳುವುದರ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಕ್ರಿಸ್ಮಸ್ ಹಬ್ಬವು ಜಗತ್ತಿನಾದ್ಯಂತ ಎಲ್ಲರೂ ಆಚರಿಸುವ ಹಬ್ಬವಾಗಿದೆ.
ಹೆಚ್ಚಾಗಿ ಕ್ರಿಶ್ಚಿಯನ್ ರು ಅಚರಿಸುವ ಹಬ್ಬವಾಗಿದೆ. ಕ್ರಿಸ್ಮಸ್ ದಿನವನ್ನು ಕರ್ತನಾದ ಯೇಸು ಕ್ರಿಸ್ತ್ ನ ಹುಟ್ಟಿದ ದಿನವಾಗಿದೆ. ಕ್ರಿಶ್ಚಿಯನ್ ಧರ್ಮದವರು ಈ ಹಬ್ಬವನ್ನು ಅಚ್ಚುಕಟ್ಟಾಗಿ, ಸಂತೋಷದಿಂದ ಮತ್ತು ಮನೋಭಾವನೆಯಿಲ್ಲದೆ ಆಚರಿಸುತ್ತಾರೆ. ಕ್ರಿಸ್ಮಸ್ ಹಬ್ಬವು ಒಂದು ರಾಷ್ಟೀಯ ಹಬ್ಬವೆಂದು ಪ್ರೀತಿ, ಪ್ರೇಮ ಹಂಚುತ್ತಾ ಲವ ಲವಿಕೆಯಿಂದ ಆಚರಿಸುತ್ತಾರೆ. ಕ್ರಿಸ್ಮಸ್ ಹಬ್ಬದ ದಿನದಂದು ಎಲ್ಲಾ ಸರ್ಕಾರಿಕಚೇರಿಗಳಿಗೆ,ಶಾಲೆ – ಕಾಲೇಜುಗಳಿಗೆ ರಜೆ ಕೊಡಲಾಗುತ್ತದೆ. ಕ್ರಿಸ್ಮಸ್ ದಿನ ಆಚರಿಸುವ ಉದ್ದೇಶವೆನೆಂದರೆ ಮಕ್ಕಳಲ್ಲಿ, ದೊಡ್ಡವರಲ್ಲಿ, ಗುರು ಹಿರಿಯರಲ್ಲಿ ಮತ್ತು ದೇವರಗಳಲ್ಲಿ ಪ್ರೀತಿ ಮತ್ತು ನಂಬಿಕೆ ಕಾಪಾಡುಕೊಳ್ಳುವುದರ ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದಂದು ಚರ್ಚ್ ಗಳಲ್ಲಿ ಅನೇಕ ರೀತಿಯಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.
ಕ್ರಿಸ್ಮಸ್ ಹಬ್ಬ ಇತಿಹಾಸ
ಕರ್ತನಾದ ಯೇಸು ಕ್ರಿಸ್ತ್ ಹುಟ್ಟಿದ ದಿನವನ್ನು ಕ್ರಿಸ್ಮಸ್ ದಿನವೆಂದು ಆಚರಿಸಲಾಗುತ್ತದೆ. ಇಲ್ಲಿ ವಾಸ್ತವದ ಪ್ರಕಾರ ಹೇಳಬೇಕೆಂದರೆ ಕೆಲವು ಯೇಸುವಿನ ಕಥೆಗಳಿವೆ. ಬೈಬಲ್ ಪ್ರಕಾರ ಕ್ರಿಸ್ತ್ ನ ಜನನದ ಸಮಯದಲ್ಲಿ ದೇವರು ಮನುಷ್ಯನನ್ನು ರಕ್ಷಿಸಲು ಮೆಸ್ಸಿಯನ್ ( ಯೇಸುವಿನ ) ರೂಪದಲ್ಲಿ ಬಂದು ನಿಮ್ಮೆಲ್ಲರ ನಡುವೆ ಜನಿಸಿದ್ದಾನೆ. ಮತ್ತೆ ದೇವರು ಕೊಟ್ಟ ಬಿರುದು ಎಂದು ಹೇಳಲಾಗುತ್ತದೆ.
ಕರ್ತನಾದ ಯೇಸು ಕ್ರಿಸ್ತ್ ನನ್ನು ” ಮೆಸ್ಸಿಹ್ ” ಎಂದು ಕರೆಯುಲಾಗುತ್ತದೆ. ಯೇಸುವಿನ ತಂದೆ ಜೋಸೆಫ್ ತಾಯಿ ಮೇರಿ. ಯೇಸು ಡಿಸೆಂಬರ್ 25 ರಂದು ಇಸ್ರೇಲ್ನಲ್ಲಿರುವ ಬೆತ್ಲೆಹೇಮ್ ಎಂಬ ಊರಲ್ಲಿ ಹುಟ್ಟಿದನು. ಇಹಲೋಕದಲ್ಲಿ ಯೇಸುವಿನ ತಂದೆ ಸಂತ ಜೋಸೆಫ್ ಒಬ್ಬ ಬಡಗಿ, ತಾಯಿ ಸಂತ ಮೇರಿ. ವಾಸ್ತವವಾಗಿ ಮೇಲಿಯೂ ಪವಿತ್ರಾತ್ಮ ವರದಿಂದ ಕರ್ತನಾದ ಯೇಸು ಕ್ರಿಸ್ತ್ ನನ್ನು ಗರ್ಭದಲ್ಲಿ ಹೊಂದಿ ಪರಿಶುದ್ಧ ಜೀವನ್ ನಡೆಸುತ್ತಾಳೆ.
ಯಾವುದೇ ದೇಹ ಸಂಪರ್ಕವಿಲ್ಲದೆ ದೇವರ ಅನುಗ್ರಹದಿಂದ, ಪವಿತ್ರತ್ಮದಿಂದ, ಮೇರಿಯೂ ಯೇಸುವಿಗೆ ಜನ್ಮ ನೀಡಿದ್ದಾಳೆ. ಯೇಸುವಿನ ತಂದೆ ತಾಯಿ ಜನಗಣತಿಯಲ್ಲಿ ಹೆಸರನ್ನು ನೋಂದಾಯಿಸಲು ರೋಮನ್ ಊರಿಗೆ ಹೋಗುತ್ತಾರೆ. ಅವರು ಹೊರಟಾಗ ಮಾರ್ಗ ಮಧ್ಯ ರಾತ್ರಿಯಾದ ಕಾರಣ ಅವರಿಗೆ ಮಾರ್ಗ ಮಧ್ಯದಲ್ಲಿ ಉಳಿಯಲು ಯಾವುದೇ ಸ್ಥಳ ಸಿಗವುದಿಲ್ಲ. ನಂತರ ಮಾರ್ಗದಲ್ಲಿ ಟಗರು ಕಾಯುವನ ಮನೆಯೊಂದನ್ನು ಕಾಣುತ್ತಾರೆ. ಆ ಪುಟ್ಟ ಗುಡಿಸಲಲ್ಲಿ ತಂಗಲು ಸ್ಥಳವನ್ನು ಕೇಳಿದಾಗ ಅವನು ಉಳಿಯಲು ಅವಕಾಶ ನೀಡುತ್ತಾನೆ. ನಂತರ ಬೆಳ್ಳಿಗೆಆಗುವಷ್ಟರಲ್ಲಿ ಮೇರಿಯು ಯೇಸುವಿಗೆ ಜನ್ಮ ನೀಡಿರುತ್ತಾಳೆ.
ಗೊಂಬೆಯಂತಹ ಕಾಣುವ ಸಂತಾಕ್ಲಾಸ್ ಯಾರು?
ಕ್ರಿಸ್ಮಸ್ ಹಬ್ಬದಲ್ಲಿ ಜೋರಾಗಿ ಕಾಣುವುದೇನೆಂದರೆ ಸಂತಾಕ್ಲಾಸ್. ಸಂತಾಕ್ಲಾಸ್ ಗಾಗಿ ಮಕ್ಕಳು ಕಾಯುತ್ತ ಇರುತ್ತಾರೆ. ಸಂತಾ ನಿಕೋಲಸ ಎಂದು ಸಂತಾಕ್ಲಾಸ್ ಅವರ ನಿಜವಾದ ಹೆಸರು. ಇವರು ಯೇಸುವಿನ ಮರಣದ ಬಳಿಕ ಮೈರಾದಲ್ಲಿ ಜನಿಸಿದರು. ಇವರು ಯೇಸುವಿನ ಅಪಾರ ಭಕ್ತನಾಗಿದ್ದರು. ಸಂತಾ ತುಂಬಾ ಕರುಣಾಮಯಿ, ಹೃದಯವುಳ್ಳ, ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಸಹಾಯ ಮಾಡಿದವನು. ಸಂತಾಕ್ಲಾಸ್ ಯೇಸುವಿನ ಹುಟ್ಟಿದ ದಿನದಂದು ರಾತ್ರಿಯಿಡಿ ಮಕ್ಕಳಿಗೆ ಉಡುಗೊರೆಗಳನ್ನು ಹಂಚುತ್ತಿದ್ದರು. ಸಂತಾಕ್ಲಾಸ್ ನನ್ನು ನೋಡಲು ಎಲ್ಲಾ ಮಕ್ಕಳು ಕುಣಿದು ಕುಪ್ಪಳಿಸುತ್ತಾರೆ. ಸಂತಾಕ್ಲಾಸ್ ನ ನಗುಮುಖ, ಖುಷಿಯನ್ನು ಹಂಚುವ ಸ್ವಭಾವ ಹಾಗೂ ಅವನ ಕೆಂಪು ಬಿಳಿ ರಂಗಿನ ಬಟ್ಟೆ ಎಂತವರನ್ನಾದರೂ ಸೆಳೆಯುತ್ತದೆ.
ಹಚ್ಚ ಹಸಿರಿನಿಂದ ಕೂಡಿರುವ ಕ್ರಿಸ್ಮಸ್ ಗಿಡ ಯಾಕೆ ಬೇಕು?
ಕ್ರಿಸ್ಮಸ್ ಹಬ್ಬದ ದಿನದಂದು ಕ್ರಿಸ್ಮಸ್ ಗಿಡಕ್ಕೆ ವಿಶೇಷವಾಗಿ ಅಲಂಕಾರ ಮಾಡುತ್ತಾರೆ. ಕ್ರಿಸ್ಮಸ್ ಗಿಡಕ್ಕೆ ಎಷ್ಟು ಅಲಂಕಾರ ಮಾಡ್ತೀವೋ ಅಷ್ಟು ಕ್ರಿಸ್ಮಸ್ ಹಬ್ಬವು ಜೋರಾಗಿ ಇರುತ್ತೆ. ಕ್ರಿಸ್ಮಸ್ ಅಲಂಕಾರವು ಒಂದೊಂದು ಚರ್ಚ್ ಗಳಲ್ಲಿ ಒಂದೊಂದು ರೀತಿಯಲ್ಲಿ ಅಲಂಕಾರ ಮಾಡಿರುತ್ತಾರೆ. ಕ್ರಿಸ್ಮಸ್ ಗಿಡವು ಎತ್ತರವಾಗಿ, ಮೃದುವಾದ ಎಲೆ ಮತ್ತು ಹಚ್ಚಹಸೀರಿನಿಂದ ಒಳಗೊಂಡಿರುತ್ತದೆ. ಕ್ರಿಸ್ಮಸ್ ಗಿಡಕ್ಕೆ ಹಲವು ರೀತಿಯ ದೀಪಗಳಿಂದ ಮತ್ತು ಇತರ ಅಲಂಕೃತವಾದ ವಸ್ತುಗಳಿಂದ ಅಲಂಕಾರ ಮಾಡಲಾಗುತ್ತದೆ.
Also Read – Happy Basava Jayanthi 2021 Wishes, SMS, Messages, WhatsApp Status, Quotes, Images & Photos.