ಸಂಕಷ್ಟಿ ಚತುರ್ಥಿ ಮಹತ್ವ| Sankashti Chaturthi 2022 in Kannada

ಸಂಕಷ್ಟಿ ಚತುರ್ಥಿ | Sankashti Chaturthi in Kannada

2022 ರ ಏಪ್ರಿಲ್ 19 ರಂದು ಮಂಗಳವಾರ ಸಂಕಷ್ಟಿ ಚತುರ್ಥಿಯನ್ನು ಆಚರಿಸಲಾಗುತ್ತದೆ. ವರ್ಷದಲ್ಲಿ ಮಂಗಳವಾರ ದಂದು ಸಂಕಷ್ಟಿ ಚತುರ್ಥಿ ಬರುವುದು ಒಂದೇ ಬಾರಿ. ಮಂಗಳವಾರ ಮತ್ತು ಶುಕ್ರವಾರ ಗಜಾನನ ಸಂಕಷ್ಟ ಚತುರ್ಥಿ ಬರುವುದು ತುಂಬಾ ಪವಿತ್ರ ದಿನವಾಗಿದೆ. ಈ ಎರಡು ದಿನದಂದು ಪ್ರತಿಯೊಬ್ಬರೂ ಗಜಾನನ ಸಂಕಷ್ಟ ಚತುರ್ಥಿಯನ್ನು ತಪ್ಪದೆ ಪೂಜಿಸುವವರು. ಈಗ ನಾವು ಸಂಕಷ್ಟ ಚತುರ್ಥಿ ವ್ರತದ ಉದ್ದೇಶ, ಮಹತ್ವ, ಪೂಜೆ ವಿಧಾನ ಮತ್ತು ಜಪ ಮಂತ್ರಗಳು ಏನು ಅಂತ ತಿಳಿದು ಕೊಳ್ಳೋಣ.

Sankashti Chaturthi 2022 in Kannada
sankashti chaturthi 2022

ಹಿಂದೂ ಪಂಚಾಂಗದ ಪ್ರಕಾರ ಯಾವುದೇ ಕೆಲಸ ಕಾರ್ಯ ಮಾಡುವ ಮುಂಚೆ ಗಣೇಶನಿಗೆ ಆರಾಧಿಸುತ್ತಾರೆ. ಸಂಕಷ್ಟ ಚತುರ್ಥಿ ಎಂದರೆ ಗಣೇಶನನ್ನು ಆರಾಧಿಸುವ ಅಥವಾ ಪೂಜಿಸುವ ವ್ರತವಾದ ದಿನವಾಗಿದೆ. ಈ ದಿನದಂದು ಪೂಜಿಸುವ ಪ್ರತಿಯೊಬ್ಬರೂ ಬಹಳ ಅಚ್ಚು ಕಟ್ಟಾಗಿ ಪೂಜೆ ಸಲ್ಲಿಸುತ್ತಾರೆ. ಅಲ್ಲದೆ ಉಪವಾಸ ಮತ್ತು ದಾನದಿಂದ ವ್ರತವನ್ನು ಕೊನೆಗೂಳ್ಳಿಸುತ್ತಾರೆ. ಈ ವರ್ಷದಲ್ಲಿ ಸಂಕಷ್ಟ ಚತುರ್ಥಿಯ ದಿನವನ್ನು 2022 ರ ಏಪ್ರಿಲ್ 19 ರಂದು ಮಂಗಳವಾರ ಕೃಷ್ಣ ಪಕ್ಷದ ಚತುರ್ಥಿ ತಿಥಿಯಲ್ಲಿ ಆಚರಿಸಲಾಗುವುದು. ಮಂಗಳವಾರ ದಂದು ಬಂದ ಸಂಕಷ್ಟ ಚತುರ್ಥಿಯನ್ನು ‘ಅಂಗಾರಕಿ ಸಂಕಷ್ಟ ‘ ಎಂದು ಹೇಳುತ್ತಾರೆ. ಮುಂಬರುವ ಸಂಕಷ್ಟ ಚತುರ್ಥಿಯನ್ನು ಮಹತ್ವವೇನೆಂದು ತಿಳಿಯೋಣ.

ಸಂಕಷ್ಟ ಚತುರ್ಥಿಯ ಮಹತ್ವ | Sankashti Chaturthi Importance in Kannada

ಈ ಬಾರಿ ಏಕದಂತ ಸಂಕಷ್ಟ ಚತುರ್ಥಿಯನ್ನು 2022 ರ ಏಪ್ರಿಲ್ 19 ರಂದು ಮಂಗಳವಾರ ವಿಶೇಷವಾಗಿ ಆಚರಿಸಲಾಗುತ್ತದೆ. ಮಂಗಳವಾರ ದಂದು ಸಂಕಷ್ಟ ಮಾಡುವುದರಿಂದ ವರ್ಷದಲ್ಲಿ ಬರುವ ಎಲ್ಲಾ ಸಂಕಷ್ಟ ಚತುರ್ಥಿ ಆಚರಣೆ ಮಾಡಿದ ಹಾಗೇ. ಮಂಗಳವಾರ ಚತುರ್ಥಿ ಮಾಡುವುದರಿಂದ ಮಂಗಳ ಗ್ರಹದಿಂದ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ. ಹೆಚ್ಚಾಗಿ ಮಹಿಳೆಯರು ಈ ವ್ರತವನ್ನು ಪಾಲಿಸುತ್ತಾರೆ ಮತ್ತು ಪೂಜಿಸುತ್ತಾರೆ. ಸಂಕಷ್ಟ ಚತುರ್ಥಿ ಮಾಡುವುದರಿಂದ ಕೆಲವು ಜನರಿಗೆ ಶುಭಕರ ಮತ್ತು ಅಶುಭಕರ ವಾಗಿರುತ್ತದೆ. ಸಂಕಷ್ಟ ಚತುರ್ಥಿ ಮಾಡುವವರು ಪೂಜ್ಯರ ಜೊತೆಗೆ ಅಥವಾ ಮಠದ ಸ್ವಾಮಿಗಳ ಜೋತೆಗೆ ಮಾಹಿತಿಯನ್ನು ಪಡೆದ ನಂತರ ಚತುರ್ಥಿಯ ವತ್ರವನ್ನು ಮಾಡುವುದು ಉತ್ತಮ. ಹಿಂದೂ ಪಂಚಾಂಗದ ಪ್ರಕಾರ ಸಂಕಷ್ಟ ಚತುರ್ಥಿ ಮಾಡುವುದರಿಂದ ಜೀವನದ ಎಲ್ಲಾ ಕಷ್ಟ, ಸಮಸ್ಯೆಗಳನ್ನು ದೂರು ಮಾಡುವುದು.

ಈ ಸಂಕಷ್ಟ ಚತುರ್ಥಿಯು ದೇಶದ ವಿವಿಧ ರಾಜ್ಯಗಳಲ್ಲಿ ಆಚರಿಸುವವರು ಮತ್ತು ವಿವಿಧ ರೀತಿಯಲ್ಲಿ ಕರೆಯುವರು.ಅಂದರೆ ಮಹಾರಾಷ್ಟ್ರದಲ್ಲಿ ‘ಭಿನ್ನ’ ಮತ್ತು ತಮಿಳನಾಡಿನಲ್ಲಿ ‘ ಸಂಕಷ್ಟ ಹರ ‘, ಎನ್ನುವರು.

ಸಂಕಷ್ಟ ಚತುರ್ಥಿಯ ವಿಶೇಷ | Sankashti Chaturthi 2022 in Kannada

ಪ್ರಾಚೀನ ಕಾಲದಿಂದಲೂ ಸಂಕಷ್ಟ ಚತುರ್ಥಿಯ ಮಹತ್ವವಿದೆ. ಈ ಸಂಕಷ್ಟ ಚತುರ್ಥಿಯ ದಿನ ದೃಢ ನಿಷ್ಠೆಯಿಂದ ಗಣೇಶನನ್ನು ಪ್ರಾರ್ಥಿಸಿದರೆ ಎಲ್ಲಾ ಕಷ್ಟಗಳು ದೂರ ಹೋಗುತ್ತವೆ.ಈ ದಿನದಂದು ಗಣೇಶನಿಗೆ ವಿವಿಧ ರೀತಿಯ ಹೂ ಮತ್ತು ಕರ್ಕಿಗಳಿಂದ ಅಲಂಕಾರ ಮಾಡುತ್ತಾರೆ. ಮಂಗಳವಾರ ಸಂಕಷ್ಟ ಚತುರ್ಥಿ ಶುಭಕರ ಎಂದು ಪ್ರತಿಯೊಬ್ಬರೂ ಮಾಡುತ್ತಾರೆ. ಈ ದಿನದಂದು ಮಾಡುವುದರಿಂದ ನಮ್ಮಲಿರುವ ಕೆಟ್ಟ, ಕಷ್ಟ ಮತ್ತು ಅಶುಭಕರ ಪ್ರಸಂಗಗಳು ದೂರುಹೋಗುತ್ತವೆ.

ಈ ದಿನದಂದು ಪೂಜಿಸುವರು ಮಕ್ಕಳ ಧೀರ್ಘಯುಷ್ಯಕ್ಕಾಗಿ ಉಪವಾಸ ವತ್ರವನ್ನು ಮಾಡುವವರು. ಕೆಲವು ಜನರು ದೇವಸ್ಥಾನಗಳಿಗೆ ಭೇಟಿ ನೀಡಿ, ಅರ್ಚಕರಿಂದ ವಿವಿಧ ರೀತಿಯಲ್ಲಿ ಪೂಜೆಗಳನ್ನು, ಹೋಮಗಳನ್ನು ಮತ್ತು ಅಭಿಷೇಕ್ ಗಳನ್ನು ಮಾಡಿಸುತ್ತಾರೆ. ನಿಮಗೆ ಇಷ್ಟವಾದ ಗಣೇಶನ ಮಂತ್ರಗಳನ್ನು ಪಠಿಸುವುದರಿಂದ, ನಿಮಗೆ ಗಣೇಶನು ಆಶೀರ್ವಾದಿಸುವವನು.

ಸಂಕಷ್ಟ ಚತುರ್ಥಿಯ ಪೂಜೆ ವಿಧಾನ

ಹೇಗೆ ಬೇರೆ ದೇವರ ಪೂಜೆಸಲ್ಲಿಸಲು ಬೇಗ ಏಳುತ್ತಿರೋ, ಹಾಗೇ ಸಂಕಷ್ಟ ಚತುರ್ಥಿ ದಿನದಂದು ಸೂರ್ಯನು ಉದಯಿಸುವ ಮುಂಚೆ ಎದ್ದು ಮನೆಯನೆಲ್ಲಾ ತೊಳೆದು, ತಲೆ ಸ್ನಾನ ಮಾಡಬೇಕು. ಸ್ನಾನ ಮಾಡಿದ ನಂತರ ಎಲ್ಲವನ್ನೂ ಮಡಿ ಮಾಡಿಕೊಳ್ಳಬೇಕು. ಗಜಾನನ ಪೂಜಿಸುವವರು ಪೂರ್ವಕ್ಕೆ ಅಥವಾ ಉತ್ತರಕ್ಕೆ ದಿಕ್ಕಿನಲ್ಲಿ ಕುಳಿತು ಕೊಂಡು ಪೂಜೆ ಸಲ್ಲಿಸಬೇಕು. ಪೂಜೆ ವೇಳೆ ಯಾರ ಜೊತೆಗೂ ಮಾತನಾಡದೆ ಗಜಾನನ ಜಪ ತಪವನ್ನು ಸ್ಮರಿಸುತ್ತ ಪೂಜೆ ಮಾಡಬೇಕು. ಪೂಜೆ ವೇಳೆ ಗಣೇಶನಿಗೆ ಪ್ರಿಯವಾದ ಕನಕಲಿ ಹೂ ಮತ್ತು ಕರ್ಕಿಯಿಂದ ಪೂಜೆ ಮಾಡಬೇಕು ಮತ್ತು ಮೋದಕವನ್ನು ಪ್ರಸಾದ ಮಾಡಬೇಕು.

ಬೆಳಿಗ್ಗೆಯಿಂದ ಉಪವಾಸ ಮಾಡಿದವರು ಗಜಾನನನಿಗೆ ಪೂಜೆ ಮಾಡುವುದಲ್ಲದೆ, ರಾತ್ರಿ ಚತುರ್ಥಿಯ ಮೂಹರ್ತದಲ್ಲಿ ಚಂದ್ರನಿಗೂ ಪೂಜೆ ಸಲ್ಲಿಸಬೇಕು. ಎಲ್ಲಾ ಚತುರ್ಥಿಯ ಪೂಜೆಗಳು ಮುಗಿದ ಮೇಲೆ ಚಂದ್ರನಿಗೆ ಮತ್ತು ಗಜಾನನಿಗೆ ಕೈ ಮುಗಿಯುವುದರ ಮೂಲಕ ಮತ್ತು ಬೇರೆಯವರಿಗೆ ದಾನ ಮಾಡುವುದರಿಂದ ವತ್ರವನ್ನು ಪೂರ್ಣಗೊಳಿಸಬೇಕು.ನಂತರ ದೇವರ ಪ್ರಸಾದವನ್ನು ಸ್ವೀಕರಿಸಿ ಉಪವಾಸವನ್ನು ಬಿಡಬೇಕು.

Also Read – Kanakadhara Stotram Lyrics in Kannada – ಕನಕಧಾರ ಸ್ತೋತ್ರಂ

Leave a Reply