50+ ಸಂಕ್ರಾಂತಿ ಹಬ್ಬದ ಶುಭಾಶಯಗಳು |Kannada Makar Sankranti Wishes Images

ಎಲ್ಲರೂ ವರ್ಷದ ಮೊದಲ ಹಬ್ಬವೆಂದು ಸಂಕ್ರಾಂತಿ ಹಬ್ಬ ವನ್ನು ಆಚರಿಸುತ್ತಾರೆ. ಇದು ಕೆಲವು ರಾಜ್ಯಗಳಲ್ಲಿ ಆಚರಿಸುವ ಹಬ್ಬವಾಗಿದೆ. ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಸೂರ್ಯನು ತನ್ನ ಪಥನವನ್ನು ಬದಲಾಯಿಸುವ ದಿನವಾಗಿದೆ.ಈ ಹಬ್ಬವು ಮಕರ ಸಂಕ್ರಾಂತಿ ಎಂದು ಕರೆಯಲಾಗಿದೆ.

ಮಕರ ಸಂಕ್ರಾಂತಿ ಎಂದರೇನು?

ಮಕರ ವೆಂದರೆ ಹತ್ತನೇ ರಾಶಿ ಚಕ್ರ, ಮಕರ ಸಂಕ್ರಾಂತಿ ಎಂದರೆ ಬದಲಾವಣೆ. ಪ್ರತಿ ವರ್ಷ ಮೊದಲನೇ ತಿಂಗಳಲ್ಲಿ ಬರುವ ಹಬ್ಬವಾಗಿದೆ. ಈ ಹಬ್ಬವು ಪ್ರತಿ ವರ್ಷ ಜನವರಿ 14 ರಂದು ಬರುವ ಹಬ್ಬವಾಗಿದೆ. ಈ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಅಂದರೆ ಜನವರಿ 15 ರಂದು ಮಧ್ಯರಾತ್ರಿ 1:45 ಕ್ಕೆ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಆದರಿಂದ ಆ ದಿನವನ್ನು ಮಕರ ಸಂಕ್ರಮಣ ಎಂದು ಕರೆಯುತ್ತಾರೆ.

ಮಕರ ಸಂಕ್ರಾಂತಿ ಮಹತ್ವ

ಈ ದಿನ ಸೂರ್ಯನು ತನ್ನ ಚಲನೆಯ ಮಾರ್ಗವನ್ನು ದಕ್ಷಿಣಯಾಣದಿಂದ ಉತ್ತರಯಾಣ ಕ್ಕೆ ಬದಲಾಯಿಸಿದ ದಿನವಾಗಿದೆ. ಸಂಕ್ರಾಂತಿ ಸುಗ್ಗಿಯ ಕಾಲದಲ್ಲಿ ಬರುವ ಹಬ್ಬ. ರೈತರು ವರ್ಷವೆಲ್ಲಾ ಶ್ರಮಪ ಟ್ಟು ದುಡಿದು ಉತ್ತು, ಬಿತ್ತಿ ಬೆಳೆದ ದವಸಧಾನ್ಯಗಳನ್ನು ಒಕ್ಕನೆ ಮಾಡುತ್ತಾರೆ.ಸುಗ್ಗಿಯ ಹಿಗ್ಗು ಎಲ್ಲ ರೈತರಿಗೂ ಇರುತ್ತದೆ. ಹಬ್ಬದ ಹಿಂದಿನ ದಿನ ಅಂಕೋಲಾ, ಉತ್ತರಣೆ, ಮಾವು, ಹಲಸು, ನೇರಳೆ ಮುಂತಾದ ಸೊಪ್ಪುಗಳನ್ನು ತಂದು ದವಸ ಧಾನ್ಯದ ರಾಶಿ, ಮೆದೆ ಮತ್ತು ಮನೆಗಳಿಗೆ ಹಾಕುತ್ತಾರೆ.ಇದ್ದನ್ನು ‘ ಪತ್ರೆ ‘ ಹಾಕುವುದು ಎನ್ನುತ್ತಾರೆ. ಹಬ್ಬದ ದಿನ ಎಲ್ಲಾ ಜಾನುವಾರಗ ಳ ಮೈತೊಳೆಯುತ್ತಾರೆ.ವಿಶೇಷವಾಗಿ ದನಗಳಿಗೆ ಅಲಂಕಾರ ಮಾಡಿ ಮೆರವಣಿಗೆ ಮಾಡುತ್ತಾರೆ. ಸಂಜೆ ಕಿಚ್ಚು ಹಾಯಿಸುತ್ತಾರೆ.

ಇದನ್ನು ಓದಿ – 50+ ಸಂಕ್ರಾಂತಿ ರಂಗೋಲಿ ಡಿಸೈನ್| Easy Rangoli Designs for Sankranti 2022

ಸಂಕ್ರಾಂತಿ ಹಬ್ಬವನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ಕರೆಯುತ್ತಾರೆ.

 • ಕರ್ನಾಟಕದಲ್ಲಿ – “ಮಕರ ಸಂಕ್ರಮಣ” ಎನ್ನುತ್ತಾರೆ.
 • ಆಂದ್ರಪ್ರದೇಶ ದಲ್ಲಿ– “ಭೋಗಿ” ಎನ್ನುತ್ತಾರೆ
 • ತಮಿನಾಡಿನಲ್ಲಿ – “ಪೊಂಗಲ್” ಎನ್ನುತ್ತಾರೆ.
 • ಕೇರಳದಲ್ಲಿ– “ಮಕ್ಕರವಿಳ್ಳಕ್ಕು” ಎನ್ನುತ್ತಾರೆ.
 • ಗುಜರಾತ್ನಲ್ಲಿ – “ಉತ್ತನಾರಾಯಣ” ವೆಂದು ಕರೆಯುತ್ತಾರೆ,
 • ಪಂಜಾಬ ನಲ್ಲಿ – “ಲೋಹರಿ” ಎಂದು ಕರೆಯುತ್ತಾರೆ.
 • ಅಸ್ಸಾಂ ನಲ್ಲಿ – “ಮಾಘ ಬಿಹು” ಎಂದು ಕರೆಯುತ್ತಾರೆ.

ಈ ಹಬ್ಬವನ್ನು ಸೂರ್ಯನು ಆಧರಿಸಿದ ಪಂಚಾಗದ ಲೆಕ್ಕಾಚಾರದ ಮೂಲಕ ನಿರ್ಧಾರಿಸಲಾಗುತ್ತದೆ. ಮಕರ ಸಂಕ್ರಮಣದಿಂದ ಋತುವಿನಲ್ಲಿ ಬದಲಾವಣೆ ಆಗುತ್ತದೆ. ಅಂದರೆ ಈ ದಿನದಂದು ಬರುವ ದಿನಗಳು, ಹೆಚ್ಚಾಗಿ ಹಗಲು ಇರುತ್ತದೆ ಮತ್ತು ಕತ್ತಲು ಕಡಿಮೆ ಆಗಿರುತ್ತದೆ.

ವಾಸ್ತವಿಕ ಅಥವಾ ಜ್ಯೋತಿಷ ಪ್ರಕಾರ ಸೂರ್ಯನ ಪುತ್ರ ಶನೇಶ್ವರ ಆಗಿದ್ದಾನೆ. ಮಕರ ರಾಶಿಯನ್ನು ಅಳುವವನು ಶನೇಶ್ವರ ಆಗಿದ್ದಾನೆ. ಮಕರ ಸಂಕ್ರಾಂತಿ ದಿನದಂದು ಸೂರ್ಯನು ತನ್ನ ಪುತ್ರನ ಬಳಿ ಹೋಗಲು ಪ್ರವೇಶಿಸುತ್ತಾನೆ. ಒಂದು ದಿನ ತಂದೆ ಮತ್ತು ಮಗನಾದ ಸೂರ್ಯ ಮತ್ತು ಶನೇಶ್ವರ ಇಬ್ಬರು ವಿರುದ್ಧವಾಗಿರುತ್ತಾರೆ. ಆದರೆ ಈ ಮಕರ ಸಂಕ್ರಮಣ ಸಂದರ್ಭದಲ್ಲಿ ತನ್ನ ಮಗನಾದ ಶನಿಯ ಬಳಿ ಸೂರ್ಯನು ಹೋಗುವುದಾಗಿ ಈ ಸಂದರ್ಭವು ಎಲ್ಲಾ ಮನುಷ್ಯರು ದ್ವೇಷ ಮತ್ತು ಜಗಳವನ್ನು ಬಿಟ್ಟು ಒಂದಾಗಿ ಎನ್ನುವ ಸಂದೇಶವನ್ನು ನೀಡಲಾಗುತ್ತದೆ.

ಹಾಗೇ ಎಲ್ಲಾ ಮನುಷ್ಯರು ಜಗಳ, ದ್ವೇಷ ಮತ್ತು ಅಸೂಯೆಯನ್ನು ಬಿಟ್ಟು ಎಲ್ಲರ ಜೊತೆ ನಗು ನಗುತ್ತಾ ಇರಬೇಕು. ಅಲ್ಲದೆ ಎಲ್ಲರ ಮನಸ್ಸನ್ನು ಗೆಲುತ್ತಾ ಮತ್ತು ಪ್ರೀತಿ ವಿಶ್ವಾಸ ಅವಕಾಶವನ್ನು ಹೊತ್ತು ಮಕರ ಸಂಕ್ರಮಣ ಹಬ್ಬವನ್ನು ಎಲ್ಲರೂ ಖುಷಿಯಿಂದ ಆಚರಿಸುತ್ತೇವೆ.

ಮಕರ ಸಂಕ್ರಮಣ ಹಬ್ಬದ ವಿಶೇಷತೆ

ಹಬ್ಬ ಬಂತೆಂದರೆ ಮನೆಯಲ್ಲಿ ಎಲ್ಲರಿಗೂ ಸಂತೋಷ, ಸಡಗರ. ಮನೆಬಾಗಿಲನ್ನು ಮಾವಿನ ತಳಿರುತೋರಣಗಳಿಂದ ಅಲಂಕರಿಸುವುದು, ಮನೆಗೆ ಸುಣ್ಣಬಣ್ಣ ಹಚ್ಚುವುದು, ರಂಗವಲ್ಲಿಯಿಂದ ಮನೆಯನ್ನು ಅಲಂಕರಿಸುವುದು ಹಬ್ಬದ ಕುರುಹು. ಹೊಸಬಟ್ಟೆ ಧರಿಸುವುದು, ವಿಶೇಷ ಅಡುಗೆ ಮಾಡಿಕೊಂಡು ಊಟ ಮಾಡುವುದು ಈ ಹಬ್ಬದ ವಿಶೇಷತೆ ಆಗಿದೆ. ಒಂದೊಂದು ಹಬ್ಬದಲ್ಲೂ ವಿಶಿಷ್ಟವಾದ ಪೂಜೆ ಪುಸ್ಕಾರಗಳು ಇರುತ್ತವೆ. ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ.

ಈ ಹಬ್ಬದ ದಿನದಂದು ಎಲ್ಲರೂ ಎಳ್ಳುಬೆಲ್ಲ ಹಂಚುವುದು ಸಂಕ್ರಾಂತಿ ಹಬ್ಬದ ವೈಶಿಷ್ಟ ಆಗಿದೆ. ದೊಡ್ಡವರು, ಮಕ್ಕಳು ಹೊಸಬಟ್ಟೆ ತೊಟ್ಟು ಮನೆ ಮನೆಗೆ ತೆರಳಿ ‘ ಎಳ್ಳು ಬೆಲ್ಲ ‘ ಹಂಚುತ್ತಾರೆ. ಎಳ್ಳು ಬೆಲ್ಲದ ಜೊತೆಗೆ ಕಡಲೆಬೀಜ, ಹುರಿಗಡಲೆ, ಕೊಬ್ಬರಿ ಚೂರು, ಸಕ್ಕರೆ ಅಚ್ಚು ಬೆರಸಿ ಕಬ್ಬಿನ ಜೊತೆ ಹಂಚುತ್ತಾರೆ. ‘ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡುವ ‘ ಎಂಬ ನಾಣ್ಣುಡಿಯಿದೆ. ಅಂದರೆ ಇಡೀ ವರ್ಷದಲ್ಲಿ ಆಕಸ್ಮಿತವಾಗಿ ಯಾವುದೊ ಕಾರಣಕ್ಕೆ ಮನಸ್ತಾಪ ಇಲ್ಲವೆ ವೈಮನಸು ಉಂಟಾಗಿದ್ದರೆ ಅದನ್ನು ಮರೆತು ಮತ್ತೆ ಸ್ನೇಹಿತರಾಗಿ ಬಾಳೋಣ ಎಂಬುವುದು ಈ ನಾಣ್ಣುಡಿಯ ಅರ್ಥವಾಗಿದೆ.
ಇಂತಹ ಹಬ್ಬಗಳು ಗೆಳೆಯರ ಭೇಟಿಗೆ, ಬಂದು ಬಳಗದವರ ಸಮಾಗಮಕ್ಕೆ, ಒಳ್ಳೊಳ್ಳೆ ತಿಂಡಿ ತಿನಿಸು, ಊಟಗಳಿಗೆ ಸದವಕಾಶವನ್ನು ಕಲ್ಪಿಸಿಕೊಡುತ್ತವೆ. ಅಲ್ಲದೆ ಸಂಸ್ಕೃತಿಯನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುತ್ತವೆ. ಜನರಲ್ಲಿ ಸೌಹಾರ್ದತೆ,ಸಹಕಾರ,ಪರಸ್ಪರ, ನಂಬಿಕೆ, ವಿಶ್ವಾಸ ಮುಂತಾದ ಮಾನವೀಯ ಗುಣಗಳು ಬೆಳೆಯಲು ಹಬ್ಬಗಳು ಸಹಕಾರಿಯಾಗಿವೆ.

ಇದನ್ನು ಓದಿ – 50+ ಸಂಕ್ರಾಂತಿ ರಂಗೋಲಿ ಡಿಸೈನ್| Easy Rangoli Designs for Sankranti 2022

20+ಸಂಕ್ರಾಂತಿ ಹಬ್ಬದ ಶುಭಾಶಯಗಳು

Download All ಸಂಕ್ರಾಂತಿ ಹಬ್ಬದ ಶುಭಾಶಯಗಳು Images from our telegram Group

join our telegram channel dinapatrike

1 “ನಿಮಗೇ ಮತ್ತು ನಿಮ್ಮ ಕುಟುಂಬದವರಿಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು…

Happy Makar Sankranti Images in Kannada
Happy Makar Sankranti Images in Kannada

2ಮಕರ ಸಂಕ್ರಾಂತಿ ಎಲ್ಲರ ಬದುಕಿನಲ್ಲೂ ಸುಖ, ನೆಮ್ಮದಿ ಕರುಣಿಸಲಿ

3ಈ ಸಂಕ್ರಾಂತಿ ಹಬ್ಬದಂದು ನಿಮ್ಮ ಆಸೆಗಳೆಲ್ಲ ಉಕ್ಕಿ ಹರಿಯಲಿ

4ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ. ನಿಮಗೂ ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

ಸಂಕ್ರಾಂತಿ ಹಬ್ಬದ ಶುಭಾಶಯಗಳು
ಸಂಕ್ರಾಂತಿ ಹಬ್ಬದ ಶುಭಾಶಯಗಳು

5ನಿಮ್ಮ ಜೀವನ ಎಲ್ಲಾ ಕಷ್ಟ, ದುಃಖಗಳನ್ನು ಮಕರ ಸಂಕ್ರಾಂತಿಯ ಪ್ರಭೆ ಸುಡಲಿ. ಸುಖ, ಶಾಂತಿ ನಿಮ್ಮ ಮನೆಯಲ್ಲಿ ನೆಲೆಗೊಳ್ಳಲಿ. ಎಲ್ಲರಿಗೂ ಹಬ್ಬದ ಶುಭಾಶಯಗಳು

ಮಕರ ಸಂಕ್ರಾಂತಿ ಶುಭಾಶಯಗಳು
ಮಕರ ಸಂಕ್ರಾಂತಿ ಶುಭಾಶಯಗಳು

6ಈ ಮಕರ ಸಂಕ್ರಾಂತಿ ನಿಮಗೆ ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ಸಂಪತ್ತನ್ನು ಕರುಣಿಸಲಿ. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

7ಮಕರ ಸಂಕ್ರಾಂತಿ ನಿಮ್ಮ ಬದುಕಿನಲ್ಲಿ ಖುಷಿಯ ಪ್ರಭೆಯನ್ನು ಮೂಡಿಸಲಿ. ನಿಮ್ಮ ಕನಸುಗಳು ಸಾಕಾರಗೊಳ್ಳಲಿ. ಗಾಳಿಪಟದಂತೆ ನಿಮ್ಮ ಸಾಧನೆಯೂ ಎತ್ತರಕ್ಕೇರಲಿ. ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

Image designs for Sankranti
Image designs for Sankranti

8ಸೂರ್ಯನು ನಿಮಗೆ, ನಿಮ್ಮ ಮನೆಗೆ ಸುಖ ಸಮೃದ್ಧಿಯ ಕಿರಣಗಳನ್ನು ಬೀರಲಿ. ಎಲ್ಲರಿಗೂ ಹಬ್ಬದ ಹಾರ್ದಿಕ ಶುಭಾಶಯಗಳು

9ಸುಗ್ಗಿಯ ಹಬ್ಬವು ಇಲ್ಲಿದೆ ಮತ್ತು ಈ ಸಂದರ್ಭವು ನಿಮ್ಮ ಜೀವನಕ್ಕೆ ವೈಭವ ಮತ್ತು ಒಳ್ಳೆಯತನವನ್ನು ತರಲಿ ಎಂದು ನಾನು ಬಯಸುತ್ತೇನೆ…. ಸಂಕ್ರಾಂತಿ ಹಬ್ಬದ ಶುಭಾಶಯಗಳುHappy Makar sankranti 2022

Sankranti Images
Sankranti Images

10ಮಕರ ಸಂಕ್ರಾಂತಿಯ ಗಾಳಿಪಟಗಳಂತೆಯೇ ನೀವು ಹೊಸ ಎತ್ತರವನ್ನು ಮುಟ್ಟಬೇಕೆಂದು ನಾನು ಬಯಸುತ್ತೇನೆ… .. ಮುಂದೆ ನಿಮಗೆ ಯಶಸ್ವಿ ವರ್ಷ ಶುಭಾಶಯಗಳು…. ಹ್ಯಾಪಿ ಮಕರ ಸಂಕ್ರಾಂತಿ.

Happy Makar Sankranti Quotes in Kannada
Happy Makar Sankranti Quotes in Kannada

11ಆಕಾಶವನ್ನು ಚುಚ್ಚುವ ವರ್ಣರಂಜಿತ ಗಾಳಿಪಟಗಳಂತೆ ನೀವು ಯಾವಾಗಲೂ ಮೇಲೇರುತ್ತೀರಿ ಎಂದು ನಾನು ಭಾವಿಸುತ್ತೇನೆ. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

Sankranti Habbada Shubhashegalu
Sankranti Habbada Shubhashegalu

12ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ. ಕಳೆದ ವರ್ಷದ ಎಲ್ಲಾ ಕಹಿಗಳನ್ನು ಮರೆತು ಸಿಹಿಯಾದ ಮಾತುಗಳ ಮೂಲಕ ಬಾಂಧವ್ಯವನ್ನು ವೃದ್ಧಿಸೋಣ. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

13ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ನೆಮ್ಮದಿಯ ಬಾಳು ನಿಮ್ಮದಾಗಲಿ.Happy Makar sankranti 2022

Happy Makar sankranti 2022
Happy Makar sankranti 2022

14ಬೆಳಗುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತೋಷ, ಸಮೃದ್ಧಿ, ಸುಖ-ಶಾಂತಿಯನ್ನು ಕರುಣಿಸಲಿ. ಉದಯರವಿಯ ಬೆಳಕಿನ ಚಿಲುಮೆಯಂತೆ ನಿಮ್ಮ ಬಾಳು ಸಮೃದ್ಧಿಸಲಿ.ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

15ಸಂಕ್ರಾಂತಿಯ ಬೆಂಕಿಯ ಕಿಡಿ ನಿಮ್ಮ ಬದುಕಿನ ಎಲ್ಲಾ ಕಹಿ ಘಟನೆಗಳನ್ನು ಸುಟ್ಟು, ನಿಮ್ಮ ಬಾಳಿನಲ್ಲಿ ಸಂತೋಷ ಮತ್ತು ಸುಖವನ್ನು ನೀಡಲಿ.Happy Makar sankranti 2022

Sankranti Wishes in Kannada
Sankranti Wishes in Kannada

16ಕಬ್ಬಿನ ಸಿಹಿ, ಎಳ್ಳು ಬೆಲ್ಲದ ರುಚಿ, ಸಿಹಿ ಗೆಣಸು, ಕಡಲೆಯ ಸಾರದಂಥ ಜೀವನ ನಿಮ್ಮದಾಗಲಿ. ಸಂಕ್ರಾಂತಿಯ ಸಮೃದ್ಧ ಬೆಳೆಯಂತೆ ನಿಮ್ಮ ಬಾಳು ಸಹ ಸಮೃದ್ಧವಾಗಿರಲಿ. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

Sankranti Wishes in Kannada Images
Sankranti Wishes in Kannada Images

17ಸಂಕ್ರಾಂತಿ ಹಬ್ಬದ ಶುಭಾಶಯಗಳು! ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ..

Kannada Sankranti Wishes Images
Kannada Sankranti Wishes Images

18ಎಳ್ಳು ಬೆಲ್ಲವ ತಿನ್ನಿಸುತ, ಕಬ್ಬು ಬಾಳೆಯ ನೀಡುತ, ಒಳ್ಳೆಯ ಮಾತುಗಳ ಆಡುತ, ಸಂಕ್ರಾಂತಿ ಶುಭಾಶಯವ ನಾ ಕೋರುವೆ!

Kannada Sankranti Wishes Images

19ಮನಸ್ಸಿನಲ್ಲಿ ಹರುಷ ತುಂಬಿರಲಿ, ಜೀವನದ ಪ್ರಯಾಣದಲ್ಲಿ ಉತ್ಸಾಹವಿರಲಿ, ನಿಮ್ಮ ಕನಸುಗಳೆಲ್ಲವೂ ನನಸಾಗಲಿ ವರ್ಷದ ಮೊದಲ ಸಂಕ್ರಾಂತಿ ಹಬ್ಬದ ಶುಭಾಶಯಗಳು..

 Kannada Makar Sankranti Wishes Images
Kannada Makar Sankranti Wishes Images

20ಎಳ್ಳಂತೆ ಶುದ್ಧವಾಗಿರಲಿ ನಿಮ್ಮ ಜೀವನ, ಬೆಲ್ಲದಂತೆ ಸಿಹಿಯಾಗಿರಲಿ ನಿಮ್ಮ ಮಾತು, ಸಂಕ್ರಾಂತಿಯ ಶುಭಾಶಯಗಳು!

 Kannada Makar Sankranti Wishes Images
Kannada Makar Sankranti Wishes Images

Download All images from our telegram Channel

join our telegram channel dinapatrike

Makar Sankranti is Special festival in Hindu Religion, which is celebrated in India on January 14. Makar Sankranti Habba is a harvesting festival that is celebrated across India though in different names. Makar Sankranti marks the end of winter as well as the beginning of longer days on account of the sun’s northward journey, this period is also known as Uttarayan on this account and is considered to be very auspicious. The harvest festival is both a religious as well as seasonal observance, and is dedicated to Lord Surya, the Sun God, and marks the sun’s transit into Makara (Capricorn) Rashi (zodiac sign).

Leave a Reply