ನಾಯಿ ಬಗ್ಗೆ ಮಾಹಿತಿ | ನಾಯಿಯ ತಳಿಗಳು| Dog Breed Names In Kannada

ನಾಯಿಯ ತಳಿಗಳು | Dog Breed Names In Kannada
ನಾಯಿಯ ತಳಿಗಳು | Dog Breed Names In Kannada

ನಾಯಿ ಬಗ್ಗೆ ಮಾಹಿತಿ | Dog Information in Kannada

ನಿಯತ್ತಿಗೆ ಹೆಸರುವಾಸಿಯಾಗಿರುವ ಪ್ರಾಣಿ ನಾಯಿ ಆಗಿದೆ.ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಪ್ರಾಣಿ ನಾಯಿ ಆಗಿದೆ. ‘ನಾಯಿ’ ಎಂದರೆ ಎಲ್ಲರಿಗೂ ಇಷ್ಟವಾದ ಪ್ರಾಣಿ ಆಗಿದೆ ಮತ್ತು ಎಲ್ಲರೂ ಸಾಕುವ ಪ್ರಾಣಿ ಆಗಿದೆ. ನಾಯಿಯನ್ನು ಸಾಕುವುದು ಬಾಯಿಯಲ್ಲಿ ಹೇಳಿದಷ್ಟು ಸುಲಭವಲ್ಲ.ನಾಯಿಯು ಒಂದು ತೋಳದ ಜಾತಿಗೆ ಸೇರಿದ ಪ್ರಾಣಿ ಆಗಿದೆ. ನಾಯಿ ಮತ್ತು ತೋಳ ನೋಡಲು ಒಂದೇ ರೀತಿಯಾಗಿ ಕಾಣುತ್ತವೆ. ಆದರೆ ಅವುಗಳ ಬೊಗಳಿಕೆ ಬೇರೆಯಾಗಿರುತ್ತವೆ. ನಾಯಿಯು ಸರಿಸುಮಾರು 14 ರಿಂದ 16 ವರ್ಷ ಬದುಕಬಲ್ಲ ಪ್ರಾಣಿಯಾಗಿದೆ.

ಮನುಷ್ಯರು ತಮ್ಮ ದುಃಖ – ಸುಖ, ನೋವು – ನಲಿವು ಮತ್ತು ಮಾನಸಿಕ ಒತ್ತಡವನ್ನು ನಾಯಿಯಗಳ ಪ್ರೀತಿಯಿಂದ ಕಳೆದುಕೊಳ್ಳುತ್ತಾರೆ. ಅವು ನಿಮ್ಮ ಜೊತೆಗೆ ಸೇರಿ ಖುಷಿ- ಖುಷಿಯಾಗಿ ಇರುತ್ತವೆ. ಬಾಯಿ ಇಲ್ಲದ ಪ್ರಾಣಿಗಳಿಗೂ ಸಹ ದುಃಖ, ನೋವು ಮತ್ತು ಒತ್ತಡಗಳು ಇರುತ್ತವೆ, ನಾವುಗಳು ಗಮನಿಸಿ ಅವುಗಳಿಗೆ ಚೆನ್ನಾಗಿ ನೋಡಿಕೊಳ್ಳಬೇಕು. ಸಾಕಿದವರ ಮನೆಯಲ್ಲಿ ನಾಯಿ ಒಂದು ಒಳ್ಳೆಯ ಸ್ನೇಹಿತ ಮತ್ತು ಮತ್ತು ಮನೆಯ ಯಜಮಾನ ಆಗಿರುತ್ತದೆ. ಮನೆಯಲ್ಲಿ ನಾಯಿ ಇದ್ದರೆ ಯಾವ ಮನೆಯ ಕಾವಲಿಗರಾರು ಬೇಕಾಗುವುದಿಲ್ಲ. ನಾಯಿಯೇ ಒಂದು ಮನೆಯ ಕಾವಲುಗಾರ ಆಗಿರುತ್ತದೆ.

ನಾಯಿಯ ನಡುವಳಿಕೆ

ನಾಯಿಗಳಿಗೆ ಮನುಷ್ಯನ ಭಾವನೆಗಳು ಮತ್ತು ಯೋಚನೆಗಳು ಗೊತ್ತಿರುತ್ತವೆ. ನೀವು ನಾಯಿಯನ್ನು ಒಂದು ಸಲ ಪ್ರೀತಿ ಮಾಡಿದರೆ, ಅವುಗಳು ನಿಮಗೆ ಮಕ್ಕಳ ಹಾಗೇ ಸಾಯುವವರೆಗೂ ಪ್ರೀತಿ ಮಾಡುತ್ತವೆ. ಅವು ನೀವು ಕಲಿಸಿದ ಗುಣಗಳನ್ನು ಸಾಯುವವರೆಗೂ ನೆನಪಿಟ್ಟುಕೊಂಡಿರುತ್ತವೆ. ನಾಯಿಯನ್ನು ನೋಡಿದರೆ ಎಲ್ಲರಿಗೂ ಖುಷಿ ಕೊಡುವ ಪ್ರಾಣಿಯಾಗಿದೆ. ನಾಯಿಯು ಮನೆಗೆ ಅಷ್ಟೇ ಕಾವಲುಗಾರು ಅಲ್ಲ, ಇದು ಇಡೀ ದೇಶಕ್ಕೆ ಕಾವಲುಗಾರು ಆಗಿದೆ.ನಾಯಿಗಳು ತುಂಬಾ ಮುದ್ದಾಗಿ, ಖುಷಿಯಾಗಿ ಮತ್ತು ಲವಲವಿಕೆಯಿಂದ ಕಾಣುವ ಪ್ರಾಣಿ ಆಗಿದೆ.

ಎಲ್ಲರೂ ಮನೆಯಲ್ಲಿ ನಾಯಿಗಳು ಇದ್ದೆ ಇರುತ್ತವೆ. ಅವುಗಳು ಯಜಮಾನದ ಕೈಯಲ್ಲಿ ಇರುತ್ತವೆ. ಮನೆಯಲ್ಲಿ ಇರುವ ಯಜಮಾನ ನು ನಾಯಿಗೆ ವಿವಿಧ ರೀತಿಯಲ್ಲಿ ಮಾತುಗಳನ್ನು ಮತ್ತು ನಡುವಳಿಕೆಗಳನ್ನು ಹೇಳಿಕೊಡುತ್ತಾನೆ. ಅವುಗಳು ಯಜಮಾನನ ಮಾತು ಅಚ್ಚು ಕಟ್ಟಾಗಿ ಪಾಲಿಸುತ್ತವೆ. ಮತ್ತು ಯಜಮಾನ ಹೇಳಿಕೊಟ್ಟ ಕೆಲಸ – ಕಾರ್ಯಗಳನ್ನು ಮಾಡುತ್ತವೆ. ಮತ್ತು ಯಜಮಾನನ್ನು ಬಿಟ್ಟು ಎಲ್ಲಿ ಕೂಡ ಇರುವುದಿಲ್ಲ. ಬೇವರು ಹೊಂದದೆ ಇರುವ ಪ್ರಾಣಿ ನಾಯಿ ಆಗಿದೆ. ಆಹಾರದ ಪದಾರ್ಥಗಳಲ್ಲಿ ನಾಯಿಗಳಿಗೆ ಹೆಚ್ಚಾಗಿ ಅನ್ನವನ್ನು ಹಾಕಬಾರದು, ಅನ್ನವನ್ನು ಹಾಕಿದರೆ ಅವುಗಳ ಬುದ್ದಿವಂತಿಕೆ ಕಡಿಮೆ ಆಗುತ್ತದೆ. ಅದರಿಂದ ಹೆಚ್ಚಾಗಿ ರೊಟ್ಟಿ, ರಾಗಿ ಗಂಜಿ ಮತ್ತು ಚಿಕನ್ ಹಾಕಬೇಕು. ಹಾಕುವುದರಿಂದ ಬುದ್ದಿವಂತಿಕೆ ಹೆಚ್ಚಾಗುತ್ತದೆ.

ನಾಯಿಗಳ ಆಸಕ್ತಿಯುಳ್ಳ ಸಂಗತಿಗಳು

ನಾಯಿಯ ಮೂಗು ಮೂರು ಪಟ್ಟು ಶಕ್ತಿಶಾಲಿ ಆಗಿರುತ್ತದೆ. ಅವುಗಳು ವಾಸನೆ ಕಂಡು ಹಿಡಿಯುವುದರಲ್ಲಿ ತುಂಬಾ ಬುದ್ದಿಶಾಲಿ ಆಗಿರುತ್ತವೆ ಮತ್ತು ಕಳ್ಳರನ್ನು ಹಿಡಿಯುವುದರಲ್ಲಿ ಮತ್ತು ಸ್ಫೋಟಕಗಳ ಬಾಂಬ್ ಗಳನ್ನು ಕಂಡು ಹಿಡಿಯುವುದರಲ್ಲಿ ಜಾಣತೆಯುಳ್ಳವು. ಅದಷ್ಟೇ ಅಲ್ಲದೆ ಅವುಗಳು ವೇಗವಾಗಿ ಓಡುವುದರಲ್ಲಿ ಶಕ್ತಿಶಾಲಿ. ಅದರಿಂದ ನಾಯಿಗಳನ್ನು ಹೆಚ್ಚಾಗಿ ಮನೆಯಲ್ಲಿ, ಪೊಲೀಸ್ ಇಲಾಖೆಯಲ್ಲಿ ಮತ್ತು ದೇಶದ ಯುದ್ಧದಲ್ಲಿ ಸಾಕುತ್ತಾರೆ. ನಾಯಿಯನ್ನು ದೇಶದ ರಕ್ಷಣೆಗಾಗಿ ಸಾಕುತ್ತಾರೆ. ಹೀಗೆ ಈ ಎಲ್ಲಾ ಗುಣಗಳನ್ನು ಹೊಂದಿರುವ ನಾಯಿಯನ್ನು ಎಲ್ಲರೂ ಹೆಚ್ಚಾಗಿ ಪ್ರೀತಿಸುತ್ತಾರೆ.

ಮನುಷ್ಯರಲ್ಲಿ ಹೇಗೆ ಬೇರೆ ಬೇರೆ ಜಾತಿಗಳು ಇರುತ್ತವೆವೋ, ಹಾಗೇ ನಾಯಿಗಳಲ್ಲಿ ಬೇರೆ ಬೇರೆ ರೀತಿಯಾದ ಜಾತಿಗಳು ಇರುತ್ತವೆ. ಅವುಗಳು ಯಾವುಗಳು ಅಂತ ತಿಳಿದುಕೊಳ್ಳೋಣ.

ನಾಯಿಯ ಬಗ್ಗೆ ಕಾಳಜಿವಹಿಸಬೇಕು

ನಾಯಿಗಳು ಅಂದ ಮೇಲೆ ಪ್ರೀತಿ ಅಷ್ಟೇ ತೋರಿಸುವುದಲ್ಲ, ಹೆಚ್ಚಾಗಿ ಅದರ ಬಗ್ಗೆ ಕಾಳಜಿವಹಿಸಬೇಕು. ಕಾಳಜಿವಹಿಸುವುದರಿಂದ ನಾಯಿಯನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು. ನಾವು ಮೊದಲನೇದಾಗಿ ಯಾವ ನಾಯಿಯನ್ನು ತರುತ್ತೇವೆ ಎಂದು ಅರಿವಿರಬೇಕು. ಅದರ ಜೊತೆಗೆ ನಮ್ಮ ಮನೆಯ ವಾತಾವರಣಕ್ಕೆ ಹೊಂದಿಕೊಂಳ್ಳುವಂತಿರಬೇಕು. ನಾಯಿಗಳಿಗೆ ನಿತ್ಯ ವಾಕಿಂಗ್ ಮತ್ತು ವ್ಯಾಯಾಮ ಮಾಡಿಸಬೇಕು. ಒಂದು ವೇಳೆ ದೊಡ್ಡ ತಳಿಯ ನಾಯಿಗಳನ್ನು ತಂದು ವ್ಯಾಯಾಮ ಮಾಡಿಸದೇ ಹಾಗೇ ಬಿಟ್ಟರೆ ಅರೋಗ್ಯ ಹಾಗೂ ಅವುಗಳ ವರ್ತನೆಯಲ್ಲಿ ಸಾಕಷ್ಟು ಬದಲಾವಣೆಗಲಾಗುತ್ತವೆ. ನಾಯಿಗಳಿಗೆ ಸರಿಯಾದ ಸಮಯದಲ್ಲಿ ಆಹಾರವನ್ನು ಮತ್ತು ನೀರನ್ನು ಕೊಡಬೇಕು. ನಾಯಿಗಳಿಗೆ ವಾಸಿಸಲು ಯೋಗ್ಯವಾದ ಸ್ಥಳವಿರಬೇಕು. ನಾಯಿಯ ಮುಂದೆ ಯಾವುದೇ ರೀತಿಯಾದ ರಬ್ಬರ್ ಅಂತಹ ವಸ್ತುಗಳನ್ನು ಇಡುವುದು ಉತ್ತಮವಲ್ಲ.

ನಾಯಿಯ ತಳಿಗಳು | Dog Breed Names In Kannada

 1. ಸೈಬೇರಿಯನ್ ಹಸ್ಕಿ
 2. ಜರ್ಮನ್ ಶಾಫಡ್
 3. ಮುಧೋಳ
 4. ಪಗ್
 5. ಡೊಬೆರ್ಮಣ್ಣ
 6. ಲಾಬ್ರಾಡೋರ್
 7. ಪೋಡ್ಲೇ
 8. ಬಾಕ್ಸರ್
 9. ಬುಲ್ ನಾಯಿ
 10. ಸಯಿಂಟ್ ಬೆರ್ನೆರ್ಡ್
 11. ಮಾಲತೇಸೇ
 12. ಬ್ಲಡ್ ಹೌಡ್
 13. ಬೀಗ್ಲೆ
 14. ಬಿಚೋನ್ ಫ್ರಿಸ್
 15. ಬೆಲ್ಗಿಯನ್ ಮಾಲಿನೋಯ್ಸ್
 16. ರಥೊಡೆಶಿಯನ್ ರಿಡ್ಜ್ ಬ್ಯಾಕ್
 17. ವೆಯಿಮರಾನೆರ್
 18. ಬ್ರಿಟ್ಟನಿ
 19. ವೆಸ್ಟ್ ಹೈಲ್ಯಾಂಡ್ ವೈಟ್ ಟೆರೇರ್
 20. ನ್ಯೂ ಫೌಂಡಲ್ಯಾಂಡ್
 21. ಕಾಕರ್ ಸ್ಪನಿಲ್
 22. ಪೋಮೆರಿಯನ್
 23. ಬೆರ್ನಿಸ್ ಮೌಟೈನ್ ಡಾಗ್
 24. ಇಂಗ್ಲೀಷ್ ಸ್ಪ್ರಿಂಗರ್ ಸ್ಪನಿಲ್

ನಾಯಿಯ ಗುಣಗಳು | Dog Characteristics in Kannada

1. ನಾಯಿಯು ಬುದ್ದಿವಂತಿಕೆಯುಳ್ಳ ಪ್ರಾಣಿ ಆಗಿದೆ.

2. ನಾಯಿಗಳಿಗೆ ಪ್ರಾಮಾಣಿಕತೆ, ಕರುಣೆ, ಅನುಕಂಪ ಮತ್ತು ಶಿಸ್ತು ಮೊದಲಾದ ಗುಣಗಳು ಇರುತ್ತವೆ.

3. ನಾಯಿಯು ಮಕ್ಕಳ ಸ್ನೇಹಿ ಆಗಿದೆ.

4. ನಾಯಿಯು ಅಕ್ಕರೆಯುಳ್ಳ, ಮಮತೆಯುಳ್ಳ ಪ್ರಾಣಿಯಾಗಿದೆ.

5. ನಾಯಿಯು ಮನೆ ಮತ್ತು ದೇಶ ಕಾಯುವ ಗುಣಗಳನ್ನು ಹೊಂದಿದೆ.

Also Read – ಸ್ವಚ್ಛ ಭಾರತ ಅಭಿಯಾನ| Swachh Bharat Abhiyan Essay in Kannada PDF

Leave a Reply