ಸೋಂಪುಕಾಳು | Fennel Seeds in Kannada
ಸೋಂಪುಕಾಳು ಎಂದರೆ ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಸೋಂಪುಕಾಳು ಅಡುಗೆಯಲ್ಲಿ ಬಳಸುವ ಪದಾರ್ಥವಾಗಿದೆ. ಸೋಂಪುಕಾಳು ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಇದನ್ನು ಮೌತ್ ಫ್ರೆಶರ್ ಆಗಿ ಬಳಕೆ ಮಾಡುತ್ತೇವೆ.ಇದು ಒಂದು ಮಸಾಲಾ ಪದಾರ್ಥಗಳಲ್ಲಿ ಒಂದು. ಇದನ್ನು ಮನೆಯ ಔಷಧಿಯಂದು ಬಳಕೆ ಮಾಡುತ್ತೇವೆ.
ಸೋಂಪುಕಾಳು ಪ್ರತಿದಿನ 1 ರಿಂದ 2 ಚಮಚ ತಿನ್ನುವುದರಿಂದ ದೇಹಕ್ಕೆ ಬಹಳ ಪ್ರಯೋಜನವಿದೆ. ಸೋಂಪುಕಾಳು ನೋಡಲು ಸಣ್ಣ ಪದಾರ್ಥವಾಗಿರಬಹುದು,ಆದರೆ ದೊಡ್ಡ ಖಾಯಿಲೆಗಳಿಗೆ ಇದು ರಾಮಬಾನವಾಗಿದೆ. ಇದನ್ನು ನಾವು ಪ್ರತಿದಿನ ತಿನ್ನುವುದರಿಂದ ಏನು ಪ್ರಯೋಜನವಿದೆ ಎಂದು ತಿಳಿದಿಕೊಳ್ಳೋಣ.
ಸೋಂಪುಕಾಳು ಪ್ರಯೋಜನಗಳು | Fennel Seed Benefits in Kannada
ಮೌತ್ ಫ್ರೆಶರ್
ಸೋಂಪುಕಾಳು ಒಂದು ತಿನ್ನುವ ಪದಾರ್ಥ ವಾಗಿದೆ. ಕೆಲ ಜನರು ಬಾಯಿಯ ದುರ್ವಾಸನೆಯನ್ನು ಹೊಂದಿರುತ್ತಾರೆ. ಆದರಿಂದ ಅವರು ಮೌತ್ ಫ್ರೆ ಶರ್ ಆಗಿ ತಿನ್ನುತ್ತಾರೆ. ಇದನ್ನು ಪ್ರತಿದಿನ ನಾಲ್ಕೈಯ್ದು ಬಾರಿ ತಿನ್ನುವುದರಿಂದ ಬಾಯಿಯ ದುರ್ವಾಸನೆ ಹೋಗಲಾಡಿಸಬಹುದು. ಮತ್ತು ಬಾಯಿಯನ್ನು ದುರ್ವಾಸನೆ ಯಿಂದ ದೂರವಿರಬಹುದು.
ರಕ್ತದ ಒತ್ತಡ
ಸೋಂಪುಕಾಳು ತಿನ್ನುವುದರಿಂದ ರಕ್ತದೊತ್ತಡವನ್ನು ದೂರವಿಡಬಹುದು. ಕಾರಣ ಇದರಲ್ಲಿ ಇರುವ ನೈಟ್ರೇ ಟ್ ಮತ್ತು ಪೊಟ್ಟಸ್ಸಿಯಂ ಅಂಶವು ಸಮೃದ್ಧವಾಗಿರುತ್ತದೆ. ಮತ್ತು ಸೋಂಪು ಕಾಳು ತಿನ್ನುವುದರಿಂದ ಲಾಲಾರಸದಲ್ಲಿ ನೈ ಟ್ರೇಟ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ದೇಹದ ತೂಕ ಕಡಿಮೆ
ಸೋಂಪುಕಾಳು ತಿನ್ನುವುದಲ್ಲದೆ ಸೋಂಪುಕಾಳು ನೀರು ಕುಡಿಯುವುದರಿಂದ ಬಹಳ ಉಪಯುಕ್ತ ವಾಗಿದೆ. ಪ್ರತಿದಿನ ನೀವು ಸೋಂಪುಕಾಳು ನೀರು ಕುಡಿಯುವುದರಿಂದ ನಿಮ್ಮ ದೇಹದಲ್ಲಿನ ಕೊಬ್ಬಿನ ಅಂಶ, ವಿಟಮಿನ್ಸ್ ಮತ್ತು ಖಾನಿಜಾಂಶಗಳು ದೇಹದಲ್ಲಿ ಚೆನ್ನಾ ಗಿ ಉತ್ಪತಿಯಾಗುತ್ತವೆ.
ದೇಹದ ತೂಕ ಕಡಿಮೆ ಮಾಡಲು ನೀವು ಪ್ರತಿದಿನ ಒಂದು ಗ್ಲಾಸ್ ನೀರಿಗೆ ಒಂದು ಚಮಚ ಸೋಂಪುಕಾಳು ಹಾಕಿ ನೆನೆಸಿ, ಅದನ್ನು ಸೋಸಿ ಬೆಳಿಗ್ಗೆ ಮತ್ತು ಸಂಜೆ ಕುಡಿ ಯುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು.
ಹೊಟ್ಟೆಯ ಜೀರ್ಣಕ್ರಿಯೆ
ಪ್ರತಿದಿನ ಊಟದ ನಂತರ ಸೋಂಪುಕಾಳು ತಿನ್ನುವುದರಿಂದ ಹೊಟ್ಟೆಯ
ಜೀರ್ಣಕ್ರಿಯೆ ಸರಳವಾಗುತ್ತದೆ. ಆಜೀರ್ಣ ಸಮಸ್ಯೆಯಿಂದ ಬಳಲುವರು ಸೋಂಪುಕಾಳು ತಿನ್ನುವುದು ತುಂಬಾ ಒಳ್ಳೆಯದು.
ಕಣ್ಣಿಗೆ ಒಳ್ಳೆಯದು
ಅನೇಕ ಧೂಳುಗಳಿಂದ ಕಣ್ಣಿಗೆ ತೊಂದರೆ ಉಂಟಾಗಿರುತ್ತದೆ. ಆದರಿಂದ ಸೋಂಪುಕಾಳು ರಾತ್ರಿ ಯಿಡಿ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ನೆನೆಸಿದ ನೀರಿನಿಂದ ಕಣ್ಣುಗಳು ತೊಳೆ ಯುವುದರಿಂದ ಕಣ್ಣಿನ ತೊಂದರೆಗಳು ಕಡಿಮೆಯಾಗುತ್ತದೆ. ಮತ್ತು ಕಣ್ಣಿನ ದೃಷ್ಟಿ ಹೆಚ್ಚಾಗುತ್ತದೆ.
ಅಸ್ತಮಾ ಮತ್ತು ಉಸಿರಾಟದ ತೊಂದರೆ
ಸೋಂಪುಕಾಳುಗಳಲ್ಲಿ ಹೆಚ್ಚಾಗಿ ಕಬ್ಬಿಣನಂಶ ಮತ್ತು ಖಾನಿಜನಂಶ ಇರುವುದರಿಂದ ಅಸ್ತಮಾ ಕಡಿಮೆ ಆಗುತ್ತದೆ. ಮತ್ತು ಈ ಸಣ್ಣ ಕಾಳುಗಳು ತಿನ್ನುವುದರಿಂದ ಉಸಿರಾಟದ ಸಮಸ್ಯೆವನ್ನು ಹೋಗಲಾಡಿಸಬಹುದು.
ರಕ್ತ ಶುದ್ದಿಕರಣ
ಹೆಚ್ಚಾಗಿ ಎಣ್ಣೆ ಮತ್ತು ಫೈಬರ್ ಅಂಶ ಹೊಂದಿರುವ ಸೋಂಪುಕಾಳು ರಕ್ತ ಶುದ್ದಿಕರಣ ಮಾಡುವುದರಲ್ಲಿ ತುಂಬಾ ಉಪಯೋಗವಾಗಿದೆ. ರಕ್ತ ಶುದ್ದಿಕರಣ ಮಾಡುವುದಲ್ಲದೆ ಅದರ ಜೊತೆಗೆ ರಕ್ತದಲ್ಲಿ ಇರುವ ಕೆಟ್ಟ ಜೀವಾನಗಳನ್ನು ಹೊರಹಾಕಲು ಹೆಚ್ಚು ಉಪಯುಕ್ತವಾಗಿದೆ.
ಚರ್ಮದ ಹೊಳಪು
ಸೋಂಪುಕಾಳು ತಿನ್ನುವುದರಿಂದ ದೇಹಕ್ಕೆ ಮುಂತಾದ ವಿಟಮಿನ್ಸ್ ಮತ್ತು ಮಿನೆರಲ್ಸ್ ದೊರೆಯುತ್ತದೆ. ದೊರೆಯುವುದರ ಮೂಲಕ ಮುಖದ ಕಾಂತಿ ಮತ್ತು ಚರ್ಮದ ಹೊಳಪು ಹೆಚ್ಚಾಗುತ್ತದೆ.
ಕೂದಲಿನ ಬೆಳವಣಿಗೆ
ಐದಾರು ಚಿಕ್ಕ ಚಮಚದಷ್ಟು ಸೋಂಪುಕಾಳು ಗಳನ್ನು ಒಂದು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಕುದಿಸಿದ ನಂತರ ಸ್ವಲ್ಪ ಆರಲು ಬಿಡಿ. ಆರಿದ ನಂತರ ಆ ನೀರನ್ನು ಕೂದಲಿನ ಬುಡಕ್ಕೆ ಹಚ್ಚುತ್ತಿ ದ್ದರೆ ಕೂದಲು ಉದುರುವುದು ಕಡಿಮೆ ಆಗುತ್ತದೆ.
ಮುಟ್ಟಿನ ನೋವು ನೀವಾರಿಸುತ್ತದೆ
ಮುಟ್ಟಿನ ಸಮಯದಲ್ಲಿ ಸೋಂಪುಕಾಳುಗಳನ್ನು ನೀರಿನಲ್ಲಿ ಹಾಕಿ ಕುದಿಸಿ ಕುಡಿಯುವುದರಿಂದ ಹೊಟ್ಟೆನೋವು ಮತ್ತು ಮುಟ್ಟಿನ ನೋವಿನ ತೊಂದರೆಗಳನ್ನು ನಿವಾರಣೆ ಮಾಡಲಾಗುತ್ತದೆ.
FAQ on Fennel seeds in Kannada
Ans – ಸೋಂಪುಕಾಳು
Ans- Fennel seeds in Kannada is known as Saunf( ಸೋಂಪು) or Bade Saunf.