1. ಬಲಿಷ್ಠ ದೇಹಕ್ಕೆ ಹಸಿರು ಟೊಮೆಟೊ
ಹಸಿರು ಟೊಮೆಟೊ ಕಾಯಿಯನ್ನು ಸೇವನೆ ಮಾಡುವುದರಿಂದ ದೇಹದ ಎಲಬು ಅಥವಾ ಮೂಳೆ ಗಳು ಗಟ್ಟಿಯಾಗಿ ಇರುತ್ತವೆ. ಹಸಿರು ಟೊಮೆಟೊ ಒಂದು ಒಳ್ಳೆಯ ಪೌಷ್ಟಿಕ ಸಸ್ಯ ಆಹಾರವಾಗಿದೆ. ನಾವು ಹೆಚ್ಚಾಗಿ ಸಸ್ಯಹಾರಿ ತಿನ್ನುವುದರಿಂದ ನಮ್ಮ ದೇಹವನ್ನು ಚೆನ್ನಾಗಿ ( ಬಲಿಷ್ಠವಾಗಿ ) ಇಟ್ಟುಕೊಳ್ಳಬಹುದು. ಹಸಿರು ಟೊಮೆಟೊ ದೇಹಕ್ಕೆ ಒಳ್ಳೆಯದು ಎಂಬ ಸಂಗತಿ ಅಮೇರಿಕದ ಸಂಶೋಧಕರ ಹೊಸ ಅಧ್ಯಯನದಿಂದ ತಿಳಿದು ಬಂದಿದೆ.
ದೇಹದ ಮಾಂಸಕಂಡಗಳನ್ನು ಬಲಿಷ್ಠವಾಗಿ ಬೆಳೆಸುವ ಗುಣ ಟೊಮೆಟೊದಲ್ಲಿ ನೈಸರ್ಗಿಕವಾಗಿರುತ್ತದೆ. ಆದರಿಂದ ದೇಹದ ಸಾಮರ್ಥ್ಯ ಕೂಡಾ ಹೆಚ್ಚಾಗುತ್ತದೆ. ಅಲ್ಲದೆ ರೋಗ ನಿರೋದಕ ಶಕ್ತಿಯು ವೃದ್ಧಿಯಾಗುತ್ತದೆ ಎಂದು ಅಧ್ಯಯನ ನಡೆಸಿದ ತಜ್ಞರು ಹೇಳಿದ್ದಾರೆ.
ಹಸಿರು ಟೊಮೆಟೊ ಕಾಯಿಯನ್ನು ಬಳಸಿದ ಆಹಾರವನ್ನು ಸೇವಿಸುವುದರಿಂದ ಮೂಳೆಗಳು ರಕ್ಷಣೆ ದೊರೆತಂತೆ ಆಗುತ್ತದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
2. ಹೃದಯ ಕಾಪಾಡುವ ಚಿಂತನೆ
ಧನಾತ್ಮಕ ಚಿಂತನೆಯಿಂದ ಹೃದಯ ವೈಫಲ್ಯದ ಸಂಭವನಿಯತೆಯನ್ನು ಕಡಿಮೆ ಮಾಡಬಹುದು ಎಂದು ಹೊಸ ಅಧ್ಯಯನವೊಂದು ಹೇಳಿದೆ.
ಮಧ್ಯ ವಯಸ್ಸಿನ ನಂತರ ಸಂಭವಿಸಬಹುದಾದ ಹೃದಯ ವೈಫಲ್ಯದಿಂದ ಅಕಾಲಿಕ ಮರಣ ಸಾಧ್ಯತೆ ಹೆಚ್ಚು. ಇಂತಹ ಅಪಾಯವನ್ನು ಒಳ್ಳೆಯ ಚಿಂತನೆ, ಸಹನಶೀಲತೆಯಿಂದ ಕಡಿಮೆ ಮಾಡಬಹುದು ಎಂದು ಅಮೇರಿಕದ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
ಸಿನಿಕತನಾದ ವ್ಯಕ್ತಿಗಳಿಗೆ ಹೋಲಿಸಿದರೆ ಧನಾತ್ಮಕ ಚಿಂತನೆ ಮಾಡುವವರಿಗೆ ಶೇ.73 ರಷ್ಟು ಪ್ರಮಾಣದಲ್ಲಿ ಹೃದಯ ವೈಫಲ್ಯ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಮಿಚಿಗನ್ ಹಾಗೂ ಹಾರ್ವ್ರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನ ಹೇಳಿದೆ.
3. ಅಕಾಲಿಕ ನೆಗಡಿಗೆ ಶೀಘ್ರ ಔಷಧ
ಇದ್ದಕ್ಕಿಂದಂತೆ ಮೂಗಿನಲ್ಲಿ ಸೊರ ಸೊರ ಎಂದು ಹನಿಯ ತೊಡಗುತ್ತದೆ. ಇಂತಹ ಸಮಸ್ಯೆ ಸಾಮಾನ್ಯವಾಗುತ್ತಿತು ಸಮರ್ಪಕ ಚಿಕಿತ್ಸೆಯಿಲ್ಲದೇ ಅಸಂಖ್ಯಾತರು ಇದರ ಉಪಶಮನಕ್ಕೆ ಹೇನಾಗಡುತ್ತಿದ್ದಾರೆ. ಅತ್ಯಂತ ಸೂಕ್ಷ್ಮವಾಗುವ ಇಂತಹ ರೋಗಿಗಳಿಗೆ ಬಹುಬೇಗ ಅದಕ್ಕೆ ಕಾರಣವಾಗುವ ಸೋಂಕು ದಾಳಿ ಮಾಡುತ್ತದೆ. ಇದ್ದಕ್ಕೆ ಶೀಘ್ರದಲ್ಲಿ ವೈದ್ಯಕೀಯ ಔಷಧವನ್ನು ಬಿಡುಗಡೆ ಮಾಡುವುದಾಗಿ ಅಮೇರಿಕದ ಸಂಶೋಧಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನೆಗಡಿ ಯಾವಾಗ ಕಾಡುತ್ತದೆ ಎಂದು ನಿರೀಕ್ಷೆಯನ್ನು ಮಾಡಲಾಗದೆ ರೋಗಿಗಳು ಪರದಾಡುತ್ತಾರೆ. ಸಾಮಾನ್ಯವಾಗಿ ಅವರಿಗೆ ಮಲಿನಗೊಂಡ ವಾಯು, ಭಾವನಾತ್ಮಕ ಏರಿಳಿತಗಳು, ಕರಿದ ಮಸಾಲೆ ವಾಸನೆ, ಸುಗಂಧ, ಅಗರಬತ್ತಿ – ಧೂಪದ ಸಾಮಿಪ್ಯಾ ಕೂಡಾ ನೆಗಡಿಗೆ ಕಾರಣವಾಗಬಹುದು.ಇದನ್ನು ಹೊರತಾಗಿಯೂ ಕೆಲವೊಮ್ಮೆ ಮೂಗಿನಲ್ಲಿ ನೀರಿನಂತೆ ಸೊರತೋಡಗುತ್ತದೆ. ಇದ್ದಕ್ಕೆ ಸೂಕ್ತ ಮದ್ದನ್ನು ಆವಿಷ್ಕಾರಿಸಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
4. ಮದ್ಯ ಕುಡಿಯದಿರುವುದೇ ಕ್ಷೇಮ
ಪುರುಷರಿಗೆ ಹೋಲಿಸಿದರೆ ಮದ್ಯ ಸೇವನೆ ಮಹಿಳೆಯರಿಗೆ ಹೆಚ್ಚಿನ ಅರೋಗ್ಯ ಸಂಬಂಧಿ ತೊಂದರೆಗಳನ್ನು ಉಂಟುಮಾಡುತ್ತದೆ ಎಂದು ಚೀನಾ ಸಂಶೋಧಕರು ಹೇಳಿದ್ದಾರೆ.
ಕಡಿಮೆ ಆಲ್ಕೋಹಾಲ್ ಅಂಶ ಇರುವ ವೈನ್ ಹಾಗೂ ವೊಡಕಾ ಮಹಿಳೆಯರ ಮೆಚ್ಚಿನ ಪಾನೀಯ ಎಂದು ಭಾವಿಸಲಗುತ್ತಿದೆ. ಏನೇ ಕುಡಿದರೂ ಅದರ ಪರಿಣಾಮ ಮಾತ್ರ ಒಂದೇ.
ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚು ತೊಂದರೆಯಾಗುತ್ತದೆ. ಆಧುನಿಕ ಜೀವನ ಶೈಲಿಯಲ್ಲಿ ಗಂಡು – ಹೆಣ್ಣಿನ ಭೇದವಿಲ್ಲದೆ, ಪಾನಗೋಷ್ಟಿಯಲ್ಲಿ ಭಾಗವಹಿಸುವುದು ಸಾಮಾನ್ಯ.
ಯಾವಾಗ ಮಹಿಳೆ ಹೆಚ್ಚು ಕುಡಿಯುತ್ತಾಳೋ, ಆಗ ಆಕೆಗೆ ಅರೋಗ್ಯ ಸಮಸ್ಯೆಗಳು ಕಾಣಿಸುತ್ತವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
Also Read – Black Grapes Health tips in kannada | ಕಪ್ಪು ದ್ರಾಕ್ಷಿ ಆರೋಗ್ಯ ಪ್ರಯೋಜನಗಳು