ಮೂಲವ್ಯಾಧಿ ಎಂದರೇನು? | Piles in Kannada
ಮೂಲವ್ಯಾಧಿ ಎಂಬುವುದು ಗುರುದ್ವಾರದ ಕಾಲುವೆಯಲ್ಲಿ ಉಂಟಾಗುವ ಒಂದು ಸಾಮನ್ಯ ರೋಗ. ಗುರುದ್ವಾರದ ಕಾಲುವೆಯಲ್ಲಿ ಹಿಮೋರಾಯಿಡಲ್ ಕುಶನ ಒಳಗಿರುವ ರಕ್ತನಾಳಗಳು ಊದಿಕೊಂಡಾಗ, ತೊಡಗಿಕೊಂಡಾಗ ರಕ್ತಸ್ರಾವ ಉಂಟಾಗುವ ಜೊತೆಗೆ ಮಲವಿಸರ್ಜನೆ ಸಮಯದಲ್ಲಿ ಸಣ್ಣಗೆ ನೋವು ಕಾಡತೊಡಗುತ್ತದೆ. ಇದ್ದಕ್ಕೆ ಮೂಲವ್ಯಾಧಿ ಎಂದು ಕರೆಯುತ್ತಾರೆ.
ಮೂಲವ್ಯಾಧಿ ವಿಧಗಳು ಮತ್ತು ಹಂತಗಳು ಯಾವವು?
ಮೂಲವ್ಯಾಧಿ ಯಲ್ಲಿ ಎರಡು ವಿಧಗಳಿವೆ :- ಮಧ್ಯ ಹಿಮೋಡ್ರಾಯಿಡ್ಸ್ ಮತ್ತು ಆಂತರಿಕ ಹಿಮೋಡ್ರಾಯಿಡ್ಸ್. ರಕ್ತನಾಳಗಳು ಗಡುಸುಗೊಂಡಾಗ ಮತ್ತು ಸ್ಥಗಿತಗೊಂಡಾಗ ಮೂಲವ್ಯಾಧಿ ನೋವು ಕಾಣಿಸಿಕೊಳ್ಳುತ್ತದೆ. ಗರ್ಭಧಾರಣೆ ಉಂಟಾದ ಸಮಯದಲ್ಲಿ ಹಾರ್ಮೋನ್ ಮಟ್ಟ ಅಧಿಕವಾಗುವುದರಿಂದಾಗಿ ಮತ್ತು ಯುಟೆರೇಸ್ ಹಿಗ್ಗುವಿಕೆಯ ಯಾಂತ್ರಿಕ ಒತ್ತಡದಿಂದಾಗಿ ಮೂಲವ್ಯಾಧಿ ಉಂಟಾಗುತ್ತದೆ. ಈ ಕಾಯಿಲೆಯ ಬೆಳವಣಿಗೆಯ ಆಧಾರದಲ್ಲಿ ಮೂಲವ್ಯಾಧಿ ರೋಗವನ್ನು ಹಂತ 1 ರಿಂದ ಹಂತ 4 ಎಂದು ವಿಂಗಡಿಸಲಾಗುತ್ತದೆ.
ಮೂಲವ್ಯಾಧಿ ಉಂಟಾಗಲು ಕಾರಣವೇನು?
ಬಹುತೇಕ ಮಲವಿಸರ್ಜನೆ ಸಮಯದಲ್ಲಿ ಅಧಿಕ ಒತ್ತಡ ಹಾಕುವುದರಿಂದಾಗಿ ಮೂಲವ್ಯಾಧಿ ಉಂಟಾಗುತ್ತದೆ. ತ್ರೀವ ಮಲಬದ್ಧತೆ, ಗಡುಸಾದ ಮಲವಿಸರ್ಜನೆ, ಪದೇ ಪದೇ ಡಯೆರಿಯಾ, ದೇಹಿಕ ಚಟುವಟಿಕೆಯ ಕೊರತೆ, ಸ್ತುಲಕಾಯ, ಸದಾ ಕುಳಿತುಕೊಂಡಿರುವ ಜೀವನ ಶೈಲಿ, ಗರ್ಭಧಾರಣೆ ಮತ್ತು ಕೊಲೆಸಟ್ರೋಲ್ ಮುಂತಾದವು ಮೂಲವ್ಯಾಧಿಗೆ ಕಾರಣಗಳಾಗಿವೆ.
- ಜೀರ್ಣಕ್ಕೆ ಕಷ್ಟವಾಗುವಂತಹ ಆಹಾರಗಳ ಸೇವನೆ
- ಅತಿ ತಣಪು ಪದಾರ್ಥಗಳು
- ವಿರುದ್ಧ ಆಹಾರ
- ಆಜೀರ್ಣ ಉಂಟು ಮಾಡುವಂತಹ ಪದಾರ್ಥಗಳು
- ಕಡಿಮೆ ತಿನ್ನುವುದು
- ಅತಿಯಾದ ಮಾಂಸಹಾರ
- ಯಾವಾಗಲು ಹಿಟ್ಟಿನಿಂದ ಮಾಡಿದ ಪದಾರ್ಥಗಳನ್ನೇ ಅತಿಯಾಗಿ ಬಳಸುವುದು, ಹಾಲು ಮತ್ತು ಮೊಸರಿನ ವಿಕೃತಿಗಳಿಂದ ತಯಾರಾದ ಆಹಾರಗಳನ್ನು ಬಳಸುವುದು.
- ಸಂಕಿರ್ಣ ಆಹಾರಗಳನ್ನು ತಿನ್ನುವುದು.
- ವ್ಯಾಯಮವಿಲ್ಲದೆ ಕುಳಿತಲ್ಲಿಯೇ ಕುಳಿತು ಕೆಲಸ ಮಾಡುವುದು
- ಜಾಸ್ತಿ ಹೊತ್ತು ಕುಕ್ಕರಗಾಲಿನಲ್ಲಿ ಕುಳಿತುಕೊಳ್ಳುವುದು.
- ಗಟ್ಟಿಯಾದ ಆಸನಗಳ ಮೇಲೆ ಕುಳಿತುಕೊಳ್ಳುವುದು.
ಮೂಲವ್ಯಾಧಿ ರೋಗದ ಲಕ್ಷಣಗಳು ಯಾವವು? | Piles Symptoms in Kannada
ಮೂಲವ್ಯಾಧಿ ಸಮಸ್ಯೆಯಿಂದ ಬಳಳುತ್ತಿರುವ ರೋಗಿಗಳು ಸಾಮನ್ಯವಾಗಿ ರಕ್ತಸ್ರಾವ ಮತ್ತು ಮಲವಿಸರ್ಜನೆ ಬಳಿಕ ಹೋರಾಚಾಚುವಿಕೆಯಿಂದಾಗಿ ಗುರದ್ವಾ ರದಲ್ಲಿ ಉಂಟಾಗುವ ನೋವಿನ ಕುರಿತು ಬಳಲುತ್ತಾರೆ. ಟಾಯ್ಲೆಟ್ನಲ್ಲಿ ಕಂಡಂತೆ ಅಥವಾ ಒರೆಸಿಕೊಂಡಾಗ ಗೋಚರೀಸಿದಂತೆ ರಕ್ತಸ್ರಾವವು ಕಡುಗೆಂಪು ಬಣ್ಣದಲ್ಲಿ ಉಂಟಾಗುತ್ತದೆ.
- ಅಪಚನ
- ದುರ್ಬಲತೆ
- ಹೊಟ್ಟೆಯಲ್ಲಿ ಗಾಳಿ ತುಂಬುವಿಕೆ
- ಶರೀರ ಕೃಶತೆ
- ಅತಿಯಾದ ತೇಗು
- ತೊಡೆಗಳಲ್ಲಿ ನೋವು
- ಮಿನುಖಂಡ ನೋವು
- ಸೊಂಟ ಹಿಡಿದಂತಾಗುವುದು
- ಮಲಬದ್ಧತೆ
- ಹಿಕ್ಕೆಯಂತೆ ಮಲ ಪ್ರವೃತ್ತಿ
- ಕಡಿಮೆ, ಪದೇ ಪದೇ ಮಲ ಪ್ರವೃತ್ತಿ
- ಲೋಳೆ ಮಲ
- ಮಲಪ್ರವೃತ್ತಿ ನಂತರ ಉರಿ
- ಮಲಪ್ರವೃತ್ತಿ ಸಮಯದಲ್ಲಿ ನೋವು
- ಮಲದೊಂದಿಗೆ ರಕ್ತ
- ರಕ್ತ ಬೀಳುವುದು
- ಕೀವು ಸೋರುವುದು
- ಕುರು
ಮೂಲವ್ಯಾಧಿಗೆ ಮೊದಲ ಕಾರಣ ಮಲಬದ್ಧತೆ
ಮಲಬದ್ದತೆ ಗುರುತರವಾದ ವೈದ್ಯಕೀಯ ಸಮಸ್ಯೆ. ಆದರೆ ಇಂದಿನ ಆಧುನಿಕ ವೈದ್ಯಕೀಯ ಚಿಕಿತ್ಸಾ ವಿಧಾನ ಅದೊಂದು ಸಮಸ್ಯೆಯಿಂದೆ ಪರಿಗಣಿಸಿಲ್ಲವೆಂಬುವುದು ಬೇಸರದ ಸಂಗತಿ. ಯಾವ ವೈದ್ಯರು ನಿಮ್ಮನ್ನು ದಿನಕ್ಕೊಂದು ಬಾರಿಯಾದರೂ ಮಲ ಪ್ರವೃತ್ತಿಯಾಗಿರುವ ಬಗ್ಗೆ ವಿಚಾರಿಸುವುದಿಲ್ಲ. ತಿಂದ ಆಹಾರದ ಮಲರೂಪದ ಭಾಗ 24 ಗಂಟೆಯೊಳಗೆ ನಿಮ್ಮ ದೇಹದಿಂದ ಹೊರಹೋಗಬೇಕು. ಇಲ್ಲವೆಂದರೆ ಆದು ನೂರಾರು ತೊಂದರೆಗಳಿಗೆ ನಾಂದಿ. ಅವೆಂದರೆ ಪೈಲ್ಸ್, ಪಿಸ್ತುಲ, ಫಿಶೇರ್ ಮುಂತಾದವು. ಕೆಲವೊಮ್ಮೆ ಕ್ಯಾನ್ಸರ್ ಕೂಡಾ ಆಗಬಹುದು. ಇವೆಲ್ಲಕ್ಕೂ ಮೊದಲು ಹೊಟ್ಟೆಯಲ್ಲಿ ಗಾಳಿ ತುಂಬುವುದು. ಕೆಟ್ಟ ಹುಸು, ಸುಸ್ತಾಗುವುದು, ನಿದ್ರಾಹೀನತೆ ಮತ್ತು ಖಿನ್ನತೆ ಕಾಣಿಸಿಕೊಳ್ಳಬಹುದು.
ಮಲ ಬದ್ಧತೆಯೆಂದರೆ ಕರುಳುಗಳು ಪರಿಚಲನೆ ಸರಿಯಿಲ್ಲದಿರುವಿಕೆ. ಇದು ಒಬ್ಬೊಬ್ಬರಲ್ಲಿ ಒಂದೊಂದು ರೀತಿ. ಕೆಲವರಿಗೆ ದಿನಕ್ಕೊಂದು ಬಾರಿ. ಆದರೆ ಕೆಲವರಿಗೆ ದಿನಕ್ಕೆ 2-3 ಬಾರಿ, ಕೆಲವರಲ್ಲಿ ವಾರಕ್ಕೆ 2-3 ಬಾರಿ ಮಾತ್ರ. ಶೇ. 50 ರಷ್ಟು ಬಾರಿ ಮಲಪ್ರವರ್ತನೆ ಸರಿಯಾಗಿಲ್ಲವೆಂಬಂತಹ ಅನಿಸುವಿಕೆ. ದಿನಕ್ಕೆ ಒಂದು ಬಾರಿಯಾದರೂ ಮಲಪ್ರವರ್ತನೆ ಆಗದಿರುವುದು, ಆಗುತ್ತಿದ್ದರೆ ನೀವು ಮಲಬದ್ದತೆಯಿಂದ ನರಳುತ್ತಿದ್ದೀರಿ ಎಂದರ್ಥ.
ಸಾಮಾನ್ಯವಾಗಿ ಕರುಳಿನ ಚಲನೆಯಿಂದ ಆಹಾರದ ಮಲರೂಪ ಶರೀರದಿಂದ ಹೊರಹಾಕಲಾಪಡುತ್ತೆ. ಆ ಮಲರೂಪದಲ್ಲಿರುವ ಪದಾರ್ಥಗಳಿಂದ ಶರೀರಕ್ಕೆ ಅವಶ್ಯವಿರುವ ನೀರು ಮತ್ತು ಲವನಗಳು ದೊಡ್ಡ ಕರುಳಿನಲ್ಲಿ ಹಿರಲ್ಪಡುತ್ತವೆ. ಕರುಳಿನ ಚಲನಾ ಸಾಮರ್ಥ್ಯ ಕುಗ್ಗಿದ್ದಾಗ ಅತಿ ಹೆಚ್ಚು ನೀರು ಕರುಳಿನಲ್ಲಿ ಹಿರಲ್ಪಟ್ಟು ಮಲ ಅತಿಗಟ್ಟಿಯಾಗುತ್ತದೆ. ಕೆಲವೊಮ್ಮೆ ಕಿಬ್ಬುಹೊಟ್ಟೆಯ ಮಾಂಸಖಂಡಗಳು ಕುಗ್ಗಿದ ಸಾಮರ್ಥ್ಯದಿಂದಲೂ ಕರುಳು ಸರಿಯಾಗಿ ಚಲಿಸದು. ಇದರಿಂದ ಮಲ ಕರುಳಿನಲ್ಲಿ ಹರಿದು ಬಂದರು ಗುದ ಬಾಗದಲ್ಲಿ ನಿಂತು ಬಿಡುವುದರಿಂದ ಮಲ ಪ್ರವೃತ್ತಿ ಸರಿಯಾಗುವುದು.
ಇಷ್ಟೇ ಅಲ್ಲದೆ ನಮ್ಮ ಜೀವನದ ಶೈಲಿಯಲ್ಲಿ ಉಂಟಾಗುವ ಬದಲಾವಣೆಗಳಿಂದಲೂ ಮಲಬದ್ದತೆ ಯಾಗಬಹುದು. ಅವುಗಳಲ್ಲಿ ಕೆಲವು ಹೀಗಿದೆ. ಅತಿ ನೀರು ಕುಡಿಯುವುದು, ಅತಿ ಕಡಿಮೆ ಜಿಡ್ಡು ಸೇವನೆ, ನಾರಿನಂಷಾ ಇರದಂತಹ ಆಹಾರ ಪದಾರ್ಥಗಳು, ಶಾರೀರಿಕ ಶ್ರಮ ಇಲ್ಲದಿರುವುದು ಒಂದು ಬಾರಿ ತಿಂದ ಆಹಾರ ಜೀರ್ಣವಾಗುವ ಮೊದಲೇ ಮತ್ತೊಮ್ಮೆ ಸೇವನೆ, ಅತಿಯಾದ ಖಾರ, ಕಾಳುಗಳು ಮತ್ತು ಗಡ್ಡೆಗಳ ಸೇವನೆ, ಕ್ರಮವಿರದ ಜೀವನಶೈಲಿ, ಅತಿ ಹೆಚ್ಚು ಪ್ರಯಾಣ, ಅತಿಯಾಗಿ ಹಾಲು ಮೊಸರುಗಳ ಸೇವನೆ, ಮಲ ಪ್ರವೃತ್ತಿಯಾಗಿ ಅದನ್ನು ತಡೆಯುವುದು, ಅತಿ ಒತ್ತಡವಿರುವ ಜೀವನಶೈಲಿ, ಕ್ಯಾಲ್ಸಿಯಂ ಮತ್ತು ಆಲೂಮಿನಿಯಂ ಇರುವ ಗ್ಯಾಸ್ ನಿವಾರಕ ಔಷಧಗಳು, ನೋವು ನಿವಾರಕ ಔಷಧಗಳು ಮುಂತಾದವು.
ಮೂಲವ್ಯಾಧಿ ರೋಗ ಲಕ್ಷಣಗಳಿಗೆ ಮನೆ ಮದ್ದುಗಳು
ಹೆಚ್ಚಾಗಿ ದವಸ – ಧಾನ್ಯ ತಿನ್ನುವುದು
ಮೂಲವ್ಯಾಧಿ ಇರುವ ರೋಗಿಯು ಹೆಚ್ಚಾಗಿ ದವಸ – ಧಾನ್ಯ ತಿನ್ನಬೇಕು. ಇವುಗಳನ್ನು ಇನ್ನುವುದರಿಂದ ಫೈಬರ್ ಮತ್ತು ಕಬ್ಬಿಣನಂಶ ದೇಹಕ್ಕೆ ಸಮೃದ್ಧವಾಗಿ ತಲುಪುತ್ತದೆ. ಇವುಗಳನ್ನು ತಿನ್ನುವುದರಿಂದ ಮಲವಿಸರ್ಜನೆ ಸಲೀಸಾಗಿ ಆಗುತ್ತದೆ. ಮತ್ತು ಮಲ ವಿಸರ್ಜನೆ ಜಾಗದಲ್ಲಿ ನೋವು ಕಡಿಮೆ ಆಗುತ್ತದೆ.
ಹಣ್ಣು – ಹಂಪಲು ಸೇವನೆ
ಹಣ್ಣು – ಹಂಪಲು ಹೆಚ್ಚಾಗಿ ಆಂಟಿ ಆಕ್ಸಿಡೆಂಟ್ಸ್, ವಿಟಮಿನ್ಸ್, ಮಿನೆರಲ್ಸ್ ಮತ್ತು ಕಾರಬೋಹೈದ್ರಾಟ್ಸ್ ಅಂಶವು ಹೊಂದಿರುವತ್ತವೆ, ಆದ ಕಾರಣ ಇವುಗಳನ್ನು ತಿನ್ನುವುದರಿಂದ ಜೀರ್ಣಕ್ಕೆ ಮತ್ತು ಅಜಿರ್ನಕ್ಕೆ ಉಂಟಾಗಿರುವ ಸಮಸ್ಯೆ ಮತ್ತು ಗುದನಾಳದಲ್ಲಿ ರಕ್ತ ಸ್ರಾವ ಸಮಸ್ಯೆ ಕಡಿಮೆ ಮಾಡಬಹುದು.
ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು
ಯಾವುದೇ ರೋಗ ಖಾಯಿಲೆಗೆ ನೀರು ಒಂದು ಮನೆ ಮದ್ದು ಔಷಧಿಯಾಗಿದೆ. ಹೆಚ್ಚಾಗಿ ನೀರು ಕುಡಿಯುವುದು ಅಗತ್ಯವಾಗಿದೆ ಮತ್ತು ನಮ್ಮ ದೇಹವನ್ನು ಹೈಡ್ರೈಟ್ ಆಗಿ ಇಟ್ಟುಕೊಳ್ಳಬಹುದು.ಅದರಿಂದ ನಾವು ನೀರು ಕುಡಿಯುವುದರಿಂದ ಮಲವು ಸರಳವಾಗಿ ಆಗುವುದು ಮತ್ತು ಮಲ ವಿಸರ್ಜನೆ ನೋವಿನಿಂದ ದೂರವಿರುವಿರಿ.
ಅಲೋವೆರಾ ಜೆಲ್ ನ್ನು ಹಚ್ಚುವುದು
ಅಲೋವೆರಾ ಕೂಡಾ ಒಂದು ಮನೆ ಮದ್ದು ಔಷಧಿ. ಇದನ್ನು ಹಚ್ಚುವುದರಿಂದ ದೇಹದಲ್ಲಿ ಇರುವ ಚರ್ಮದ ಸಮಸ್ಯೆ ಬೇಗ ನಿವಾರಣೆ ಆಗುತ್ತದೆ. ಇದೆ ಅಷ್ಟೇ ಅಲ್ಲ ನೋವು, ತುರಿಕೆ ಮತ್ತು ಉರಿಯುತ ಜಾಗದಲ್ಲಿ ಹಚ್ಚುವುದು ಉತ್ತಮ. ಮೂಲವ್ಯಾಧಿ ರೋಗಿಯು ತಮ್ಮ ಗುದನಾಳದಲಲ್ಲಿ ಕಾಡುವ ತುರಿಕೆ, ಉರಿಯುತ ಮತ್ತು ರಕ್ತ ಸ್ರಾವ ಜಾಗಕ್ಕೆ ಹಚ್ಚುವುದರಿಂದ ಬೇಗ ವಾಸಿ ಮಾಡಿಕೊಳ್ಳಬಹುದು.
ಈರುಳ್ಳಿ ಸೇವಿಸುವುದು
ಈರುಳ್ಳಿ ಎಲ್ಲರಿಗೂ ಇಷ್ಟವಾದ ಪದಾರ್ಥವಾಗಿದೆ. ಯಾವ ಅಡುಗೆ ಮಾಡಿದರು ಈರುಳ್ಳಿ ಇದ್ದರೆ ಮಾತ್ರ ಅಡುಗೆ ಸ್ವಾದ ಆಗಿರುತ್ತದೆ. ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು ತುಪ್ಪದಲ್ಲಿ ಉರಿದು ಅನ್ನಕ್ಕೆ ಹಾಕಿ ಕಳಸಿಕೊಂಡು ತಿನ್ನುವುದರಿಂದ ಮೂಲವ್ಯಾಧಿ ಸಮಸ್ಯೆಯು ಬೇಗ ನಿವಾರಣೆ ಆಗುತ್ತದೆ.
ಇದನ್ನು ಓದಿ – ಬಂಗು ಅಥವಾ ಪಿಗಮೆಂಟೇಷನ್ ಸಮಸ್ಯೆಗೆ ಮನೆಮದ್ದು| Pigmentation Remedies in Kannada