ಬಂಗು ಅಥವಾ ಪಿಗಮೆಂಟೇಷನ್ ಸಮಸ್ಯೆಗೆ ಮನೆಮದ್ದು| Pigmentation Remedies in Kannada

ಮುಖದ ಬಂಗು ಸಮಸ್ಯೆಗೆ ಮನೆಮದ್ದು

ಮುಖದ ಮೇಲೆ ಕಾಣುವ ಕಪ್ಪು ಕೆಲೆಯ ಬಂಗು ಅಥವಾ ಪಿಗಮೆಂಟೇಷನ್ ಮಾಯಾವಾಗಿಸುವುದು ಹೇಗೆ?

ಇತ್ತೀಚಿನ ದಿನಗಳಲ್ಲಿ ಮುಖದ ಸೌಂದರ್ಯ ಕಾಪಾಡಿಕೊಳ್ಳುವುದು ಹೆಚ್ಚಾಗಿ ಮಹಿಳೆಯರಲ್ಲಿ ಕಂಡು ಬರತಾ ಇದೆ. ಈಗೀನ ಪರಿಸರ ಮಾಲಿನ್ಯದಿಂದ ಅನೇಕ ಜನರ ಮುಖದ ಸೌಂದರ್ಯವು ಹಾಳಾಗುತ್ತಾಯಿದೆ. ಆದರಿಂದ ಜನರು ಮುಖದ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಿದ್ದಾರೆ.ಮುಖದ ಸೌಂದರ್ಯ ಹಾಳು ಮಾಡುವುದರಲ್ಲಿ ಬಂಗು ಒಂದು.

ಬಂಗು ಬರಲು ಕಾರಣ
ಬಂಗು ಬರಲು ಕಾರಣ

ಬಂಗು ಬರಲು ಕಾರಣ

ಬಂಗು ಬರುವುದು ಪರಿಸರ ಮಾಲಿನ್ಯ ಅಥವಾ ಯಾವುದೇ ಹೊರಗಡೆ ಇಂದ ಬರುವ ಸಮಸ್ಯೆ ಅಲ್ಲ. ಇದು ನಮ್ಮ ದೇಹದಿಂದ ಬರುವ ಸಮಸ್ಯೆ. ನಮ್ಮ ಚರ್ಮದ ಮೇಲೆ ಮೇಲನಿನ್ ಹೆಚ್ಚಾಗುತ್ತಿದಂತೆ ಮುಖದ ಮೇಲೆ ಗುಳ್ಳೆ,ಪಿಗಮೆಂಟೇಷನ್ ಮತ್ತು ಬಂಗು ಹೆಚ್ಚಾಗುತ್ತದೆ.

ಬಂಗು ಹೆಚ್ಚಾಗಿ ಹಣೆಯ ಮೇಲೆ, ಕೆನ್ನೆಯ ಮೇಲೆ ಮತ್ತು ಮೂಗಿನ ಮೇಲೆ ಹೆಚ್ಚಾಗಿ ಕಾಣುತ್ತದೆ. ಇದು ಹೆಚ್ಚಾಗಿ ಮಹಿಳೆಯ 40-50 ಮಧ್ಯ ವಯಸ್ಕರಿಗೆ ಬರುತ್ತದೆ. ಬಂಗು ಬರಲು ಕಾರಣ, ನಮ್ಮ ದೇಹದಲ್ಲಿ ಹಾರ್ಮೋನ್ ಬದಲಾವಣೆ, ಹೆಚ್ಚಾಗಿ ಮುಖವನ್ನು ಬಿಸಿಲಿಗೆ ಒಡ್ದುವುದು ಮತ್ತು ಅನುವಂಶಿಕತೆ ( heredity). ಈ ಎಲ್ಲಾ ಸಮಸ್ಯೆಗಳಿಂದ ಬಂಗು ಹೇಗೆ ನಿವಾರಣೆ ಮಾಡಿಕೊಳ್ಳಬೇಕು ಮತ್ತು ಬಂಗನು ಹೇಗೆ ತಡೆಗಟ್ಟಿಕೊಳ್ಳವುದು ಅಂತ ಕೆಳಗಡೆ ತಿಳಿಯುತ್ತಾ ಬರೋಣ.

Also Read – Best dark circle removal home remedies in kannada-ಡಾರ್ಕ್ ಸರ್ಕಲ್

ಮುಖದ ಬಂಗು ಸಮಸ್ಯೆಗೆ ಪರಿಹಾರ

1 ವಾರದಲ್ಲಿ 2-3 ಬಾರಿ ಪಪಾಯಿ ಹಣ್ಣಿನ ಸಿಪ್ಪೆಯನ್ನು ಮುಖದ ಮೇಲೆ ಆಗಿರುವ ಬಂಗಿನ ಸುತ್ತ 10-15 ನಿಮಿಷಗಳ ಕಾಲ ಉಜ್ಜಬೇಕು. ಉಜ್ಜಿದ ನಂತರ ಅರ್ಧ ಗಂಟೆ ಬಿಟ್ಟು ಮುಖವನ್ನು ತಣ್ಣೀರಿನಿಂದ ತೊಳೆಯಬೇಕು.

2 ಒಂದು ಚಮಚ ಆಪಲ್ ಸೈಡರ್ ಜೊತೆಗೆ 2 ಚಮಚ ನೀರನ್ನು ಬೆರೆಸಿ ಕಪ್ಪು ಕಲೆ ಆಗಿರುವ ಜಾಗಕ್ಕೆ ಹಚ್ಚಿ ಉಜ್ಜಬೇಕು.ಕಾರಣ ಆಪಲ್ ಸೈಡರ ಆಪಲ್ ಸೈಡರ್ ನಲ್ಲಿ ಬೀಟಾ ಕೇರೋಟಿನ್ ಅಂಶ ಇರುವುದರಿಂದ ಬಂಗು ಬೇಗ ನಿವಾರಣೆ ಆಗುತ್ತದೆ.

3 ಒಂದು ಹೋಳು ನಿಂಬೆಹಣ್ಣಿನ ರಸವನ್ನು ಮುಖಕ್ಕೆ 10 -15 ನಿಮಿಷದವರೆಗೆ ಮಸಾಜ್ ಮಾಡವುದರಿಂದ ಬಂಗು ಕಡಿಮೆ ಮಾಡಿಕೊಳ್ಳಬಹುದು. ಕಾರಣ ನಿಂಬೆಹಣ್ಣಿನ ದಲ್ಲಿರುವ ಸಿಟ್ರಿಕ್ ಆಸಿಡ್ ಅಂಶವು ಕಪ್ಪು ಕಲೆಯ ವಿರುದ್ಧ ಹೋರಾಡುತ್ತದೆ.

4 ಅಲೋವೆರಾ ಒಂದು ನೈಸರ್ಗಿಕ ಮನೆ ಮದ್ದು ಔಷಧಿ. ಇದನ್ನು ಬಳಸುವುದರಿಂದ ಅನೇಕ ಚರ್ಮದ ಸಮಸ್ಯೆಗಳು ನಿವಾರಣೆ ಆಗಿವೆ. ಇಲ್ಲಿ ಒಂದು ಸ್ವಲ್ಪ ಅಲೋವೆರಾ ಜೆಲ್ಲನ್ನು ಕಪ್ಪು ಕಲೆಯ ಭಾಗಕ್ಕೆ ಚೆನ್ನಾಗಿ 10 -15 ನಿಮಿಷ ಕಾಲ ಉಜ್ಜುವುದರಿಂದ ಬಂಗು ಮಾಯವಾಗಿಸಬಹುದು.ಕಾರಣ ಅಲೋವೆರಾ ದಲ್ಲಿರುವ ಅಂಟಿಯೋಕ್ಸಿದಂಟ್ಸ್ ಬಂಗಿನ ವಿರುದ್ಧ ಹೋರಾಡುತ್ತವೆ.

5 ಹಸಿ ಹಾಲು ಕೂಡಾ ಒಂದು ಮನೆ ಔಷಧಿ. ಹಸಿ ಹಾಲು ಕುಡಿಯುವುದರಿಂದ ಮತ್ತು ಚರ್ಮಕ್ಕೆ ಹಚ್ಚುವುದರಿಂದ ದೇಹದ ಸಮಸ್ಯೆಗಳು ಕಡಿಮೆ ಆಗುತ್ತವೆ. ಹಸಿ ಹಾಲು ಮುಖದ ಮೇಲೆ ಇರುವ ಕಪ್ಪು ಕಲೆಯನ್ನು ತೊಗಲಿಸುತ್ತದೆ.ಕಾರಣ ಹಾಲಿನಲ್ಲಿ ಲಾಕ್ಟಿಕ್ ಆಸಿಡ್ ಅಂಶವು ಇರುತ್ತದೆ.

Also Read – ಬೇಸಿಗೆ ಕಾಲದಲ್ಲಿ ಮುಖದ ಹೊಳಪನ್ನು ಕಾಪಾಡುವುದು ಹೇಗೆ?|Summer Skin tips

Leave a Reply