ವಾಟ್ಸಾಪ್ ಡೌನ್ಲೋಡ್ | ವಾಟ್ಸಾಪ್ ಅಕೌಂಟ್ ಕ್ರಿಯೇಟ್ ಮಾಡುವ ವಿಧಾನ

ವಾಟ್ಸಾಪ್ ಡೌನ್ಲೋಡ್ | ವಾಟ್ಸಾಪ್ ಅಕೌಂಟ್ ಕ್ರಿಯೇಟ್ ಮಾಡುವ ವಿಧಾನ

ವಾಟ್ಸಾಪ್ ಡೌನ್ಲೋಡ್ ಮಾಡುವ ವಿಧಾನ – ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಕಡೆ ಆಂಡ್ರಾಯ್ಡ್ ಮೊಬೈಲ್ ಇರುವುದು ಸಹಜವಾಗಿದೆ. ಜಗತ್ತಿನಲ್ಲಿ ವಾಟ್ಸಾಪ್ ಆಪ್ ಒಂದು ಇಂಟರ್ನೆಟ್ ಮೆಸ್ಸೆಂಜರ್ ಆಪ್ ಆಗಿದೆ. ವಾಟ್ಸಸ್ ಆಪ್ ಎಲ್ಲಾ ಆಪ್ ಗಳಿಂತ ಒಂದು ಸಂದೇಶ ಕಳಿಸುವ ಆಪ್ ಆಗಿದೆ. ಜನರು ಬೇರೆ ಆಪ್ ಗಳನ್ನು ಹೆಚ್ಚಾಗಿ ಬಳಸುತ್ತಾರೋ ಇಲ್ಲವೋ ಗೊತ್ತಿಲ್ಲ,ಆದ್ರೆ ವಾಟ್ಸಪ್ ಆಪ್ ನ್ನು ಜಗತ್ತಿನಲ್ಲಿ ಪ್ರತಿಯೊಬ್ಬರು ಬಳಸುತ್ತಾರೆ.

ಜಿಬಿ ವಾಟ್ಸಾಪ್ ಡೌನ್ಲೋಡ್
ಜಿಬಿ ವಾಟ್ಸಾಪ್ ಡೌನ್ಲೋಡ್

ಜಗತ್ತಿನಲ್ಲಿ ಪ್ರಸಿದ್ಧವಾದ ವಾಟ್ಸಾಪ್ ಆಪ್ ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರ್ಸ್ ನ್ನು ನೀಡುತ್ತಾ ಬಂದಿದೆ. ಜಗತ್ತಿನಲ್ಲಿ ಎಲ್ಲಾ ಆಪ್ ಗಳಿನಿಂತ ಹೆಚ್ಚು ರೇಟಿಂಗ್ ಹೊಂದಿರುವ ಆಪ್ ಎಂದರೆ ವಾಟ್ಸಾಪ್ ಆಗಿದೆ. ವಾಟ್ಸಾಪ್ ಆಪ್ ವು ಎಲ್ಲಾ ಭಾಷೆಗಳಲ್ಲಿ ಲಭ್ಯವಾಗಿದೆ. ಅಂದರೆ ಇಂಗ್ಲಿಷ್,ಕನ್ನಡ,ಹಿಂದಿ, ಮರಾಠಿ ಮುಂತಾದ ಭಾಷೆಗಳಲ್ಲಿ ಇರುತ್ತವೆ.

ಎಲ್ಲರ ಮೊಬೈಲ್ ನಲ್ಲಿ’ ವಾಟ್ಸಾಪ್ ‘ಹಸಿರು ಚಿತ್ರದಿಂದ ಕಂಗೊಳಿಸುತ್ತಿರುತ್ತದೆ. ವಾಟ್ಸಾಪ್ ಸಂದೇಶವನ್ನು ಜಗತ್ತಿನ ಮೂಲೆ ಮೂಲೆಗಳಿಗೂ ಕಳಿಸುವಂತಹ ಆಪ್ ಆಗಿದೆ. ನಿಮಗೆ ವಾಟ್ಸಾಪ್ ಯಾಪ್ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಕೆಳಗಡೆ ನೀಡಲಾಗಿದೆ.

ವಾಟ್ಸಾಪ್ ಡೌನ್ಲೋಡ್ ಮಾಡುವುದು ಹೇಗೆ?

ವಾಟ್ಸಾಪ್ ಯಾಪ್ ಅನ್ನು ಡೌನ್ಲೋಡ್ ಮಾಡುವುದು ಹೇಗೆ?

  • ಮೊದಲನೆದಾಗಿ ನಿಮ್ಮ ಆಂಡ್ರಾಯ್ಡ್ ಮೊಬೈಲ್ ನಲ್ಲಿ ನೀವು ಇಂಟರ್ನೆಟ್ ಅನ್ನು ಹೊಂದಿರಬೇಕು.
  • ನಂತರ ನೀವು ಮೊಬೈಲ್ ನಲ್ಲಿ ಪ್ಲೇಯಸ್ಟೋರ್ ಯಾಪ್ ಗೆ ಹೋಗಿ ಅಲ್ಲಿ ಸರ್ಚ್ ಬಟನ್ ಮೇಲೆ ಒತ್ತಬೇಕು.
  • ಒತ್ತಿದ ಮೇಲೆ ಮೊಬೈಲ್ ನ ಕೀಬೋರ್ಡ್ ನಲ್ಲಿ ವಾಟ್ಸಾಪ್ ಅಂತ ಟೈಪ್ ಮಾಡಬೇಕು.
  • ಟೈಪ್ ಮಾಡಿದ ತಕ್ಷಣ ವಾಟ್ಸಪ್ ಯಾಪ್ ಐಕಾನ್ ಕಾಣುತ್ತದೆ, ಅದರ ಮೇಲೆ ಒತ್ತಿ ಹಸಿರಿನಿಂದ ಕಾಣುವ ಇನ್ಸ್ಟಾಲ್ ಬಟನ್ ಮೇಲೆ ಒತ್ತಬೇಕು. ಆಗ ವಾಟ್ಸಾಪ್ ಯಾಪ್ ಡೌನ್ಲೋಡ್ ಆಗಿರುತ್ತದೆ.
  • ಆಮೇಲೆ ಓಪನ್ ಬಟನ್ ಅನ್ನು ಒತ್ತಿ ವಾಟ್ಸಾಪ್ ಯಾಪ್ ಅನ್ನು ಓಪನ್ ಮಾಡಬಹುದು.

ಇದನ್ನು ಓದಿBlack Grapes Health tips in kannada | ಕಪ್ಪು ದ್ರಾಕ್ಷಿ ಆರೋಗ್ಯ ಪ್ರಯೋಜನಗಳು

ವಾಟ್ಸಾಪ್ ಅಕೌಂಟ್ ಕ್ರಿಯೇಟ್ ಮಾಡುವ ವಿಧಾನ

ವಾಟ್ಸಾಪ್ ಅಕೌಂಟ್ ಕ್ರಿಯೇಟ್ ಮಾಡುವ ವಿಧಾನ

  • ಡೌನ್ಲೋಡ್ ಮಾಡಿದ ವಾಟ್ಸಾಪ್ ನ್ನು ಓಪನ್ ಮಾಡಿದ ಮೇಲೆ ಒಂದು ” agree and continue “ ಪೇಜ್ ಬರುತ್ತದೆ. ಆ ಪೇಜ್ ನಲ್ಲಿ agree and continue ಬಟನ್ ಅನ್ನು ಒತ್ತಿ.
  • ಒತ್ತಿದ ತಕ್ಷಣ ನೆಕ್ಸ್ಟ್ ಪೇಜ್ ಹೋಗಿ ನಿಮ್ಮ ಮೊಬೈಲ್ ನಂಬರ್ ಅನ್ನು ಹಾಕಬೇಕು. ಹಾಕಿದ ಮೇಲೆ ಆ ಪೇಜ್ ಮತ್ತೆ verifying your phone number ಅಂತ ಕೇಳುತ್ತೆ, ಆಗ ನಿಮ್ಮ ಮೊಬೈಲ್ ನಂಬರ ಸರಿಯಾಗಿದೆ ಅಂತ ಹೇಳಿದ ಮೇಲೆ ನೀವು next ಬಟನ್ ಅನ್ನು ಒತ್ತಬೇಕು.
  • ಒತ್ತಿದ ಮೇಲೆ ನಿಮ್ಮ ಮೊಬೈಲ್ ನಂಬರ್ ಗೆ 6 ಸಂಖ್ಯೆಗಳ OTP ಬರುತ್ತದೆ. ಆ OTP ನಂಬರ್ ನೆಕ್ಸ್ಟ್ ಪೇಜ್ ನಲ್ಲಿ
    ಹಾಕಬೇಕು.
  • ನಂತರ ನೆಕ್ಸ್ಟ್ ಪೇಜ್ ನಲ್ಲಿ media and photos ಅಂತ ಕೇಳುತ್ತೆ, ಅವುಕ್ಕೆ ನೀವು allow ಅಂತ ಒತ್ತಬೇಕು.
  • ನಂತರ ನಿಮ್ಮ ಸಂದೇಶಗಳು ಗೂಗಲ್ ಡ್ರೈವ್ ನಲ್ಲಿ ಅಪ್ಲೋಡ್ ಮಾಡಬೇಕಂದರೆ ನೀವು Give permission ಅಂತ ಒತ್ತಬೇಕು. ನಮಗೆ ಗೂಗಲ್ ಡ್ರೈವ್ ನಲ್ಲಿ ಅಪ್ಲೋಡ್ ಮಾಡಬಾರದು ಅಂದ್ರೆ ನಾವು skip ಬಟನ್ ಅನ್ನು ಒತ್ತಬೇಕು.
  • ಆಮೇಲೆ profile info ಅಂತ ಪೇಜ್ ಬರುತ್ತೆ ಆ ಪೇಜ್ ನಲ್ಲಿ ನೀವು ನಿಮ್ಮ ಹೆಸರು ಹಾಕಬೇಕು. ಮತ್ತೆ ಮೇಲೆ ಇರುವ ಕ್ಯಾಮೆರಾ ಪಿಕ್ಚರ್ ಅನ್ನು ಟಚ್ ಮಾಡಿ ನಿಮಗೆ ಇಷ್ಟವಾದ ಫೋಟೋವನ್ನು ಹಾಕಬಹುದು.
  • ನಂತರ ನೆಕ್ಸ್ಟ್ ಪೇಜ್ ಗೆ ಹೋಗಿ ಮೂಲೆಯಲ್ಲಿ ಹಸಿರಿನಿಂದ ಕಾಣುವ ಕಾಂಟ್ಯಾಕ್ಟ್ಸ್ ಬಟನ್ ಅನ್ನು ಒತ್ತಿದರೆ,ನಿಮ್ಮ ಮೊಬೈಲ್ ನಲ್ಲಿ ಇರುವ ಎಲ್ಲಾ ಕಾಂಟ್ಯಾಕ್ಟ್ಸ್ ಗಳು ಬರುತ್ತವೆ.
  • ಆಮೇಲೆ ನಿಮಗೆ ಬೇಕಾದವರ ಕಾಂಟಾಕ್ಟ್ ಅನ್ನು ಸೆಲೆಕ್ಟ್ ಮಾಡಿ ಸಂದೇಶವನ್ನು ಕಳುಹಿಸಬಹುದು. ಸಂದೇಶವನ್ನು ಅಕ್ಷರ ಬರವಣಿಗೆ ಯಲ್ಲಿ ಮತ್ತು ಭಾವಚಿತ್ರ ಗಳಲ್ಲಿ ಕೂಡಾ ಕಳಿಸಬಹುದು.

ವಾಟ್ಸಾಪ್ ಯಾಪ್ ಪೇಜ್ ನಲ್ಲಿ 3 ಭಾಗಗಳು ಇರುತ್ತವೆ.

  1. ವಾಟ್ಸಾಪ್ ಚಾಟ್ ಚಾಟ್ ಇತಿಹಾಸ
  2. ವಾಟ್ಸಾಪ್ ಸ್ಟೇಟಸ್
  3. ವಾಟ್ಸಾಪ್ ಕಾಲ್ ಅಂಡ್ ವಿಡಿಯೋ ಕಾಲ್

ವಾಟ್ಸಾಪ್ ನಲ್ಲಿ ಫೋಟೋಸ್, ಕಾಂಟಾಕ್ಟ್ ಮತ್ತು ಫೈಲ್ ಗಳನ್ನು ಕಲೆಸುವುದು ಹೇಗೆ?

ವಾಟ್ಸಾಪ್ ಯಾಪ್ ಗೆ ಹೋಗಿ ನಿಮಗೆ ಇಷ್ಟವಾದವರ ವಾಟ್ಸಾಪ್ ಕಾಂಟಾಕ್ಟ್ ಅನ್ನು ಓಪನ್ ಮಾಡಿರಿ.ನಂತರ ಕೆಳಗಡೆ message ಎಂದು ಕಾಣುವ ಬಾಕ್ಸ್ ನಲ್ಲಿ ಒಂದು ಪಿನ್ನಿನ ಹಾಗೆ ಮತ್ತು ಕ್ಯಾಮೆರಾ ಚಿತ್ರವು ಕಾಣುತ್ತದೆ. ನೀವು ಫೋಟೋಸ್ ಕಳಿಸ ಬೇಕೆಂದರೆ, ಪಿನ್ನಿನ ಬಟನ ಮೇಲೆ ಒತ್ತಬೇಕು. ಒತ್ತಿದ ಮೇಲೆ 7 ಐಕಾನ್ಸ್ ಗಳು ಕಾಣುತ್ತವೆ. ಐಕಾನ್ಸ್ ಗಳು ಒಂದೊಂದು ರೀತಿಯಾದ ಸಂದೇಶ ಕಳಿಸುವ ಮಹತ್ವ ಹೊಂದಿರುತ್ತದೆ.

  • ಪಿಂಕ ಬಣ್ಣದಿಂದ ಕಾಣುವ ಐಕಾನ್ ನಿಂದ ಫೋಟೋಸ್ ಕಳಿಸುವುದು, ಮತ್ತು ವಿಡಿಯೋಸ್ ಗಳನ್ನು ಕಳಿಸುವುದು.
  • ರೇಡ್ ಬಣ್ಣದಿಂದ ಕಾಣುವ ಐಕಾನ್ ನಿಂದ ಸದ್ಯದಲ್ಲಿಯೇ ಫೋಟೋವನ್ನು ತೆಗೆದು ಕಳಿಸುವುದು,
  • ನೀಲಿ ಬಣ್ಣದಿಂದ ಕಾಣುವ ಐಕಾನ್ ನಿಂದ ಮುಖ್ಯವಾದ ಫೈಲ್ ಗಳನ್ನು ಅಥವಾ ಫೋಟೋಸ್ ಗಳನ್ನು ಕಳಿಸುವುದು.
  • ಕೇಸರಿ ಬಣ್ಣದಿಂದ ಕಾಣುವ ಐಕಾನ್ ನಿಂದ ಧ್ವನಿಯ ಸಂದೇಶವನ್ನು ಕಳಿಸುವುದು.
  • ತಿಳಿ ಹಸಿರಿನಿಂದ ಕಾಣುವ ಐಕಾನ್ ನಿಂದ ಹಣವನ್ನು ಇನ್ನೊಬ್ಬರಿಗೆ ಪಾವತಿಸುವುದು.
  • ಹಸಿರಿನಿಂದ ಕಾಣುವ ಐಕಾನ್ ನಿಂದ ರಸ್ತೆಯ ಮಾರ್ಗವನ್ನು ಹುಡುಕುವುದು.
  • ಮತ್ತು ತಿಳಿ ನೀಲಿ ಬಣ್ಣದಿಂದ ಕಾಣುವ ಐಕಾನ್ ನಿಂದ ಮೊಬೈಲ್ ನಲ್ಲಿ ಇರುವ ಕಾಂಟ್ಯಾಕ್ಟ್ಸ್ ಗಳನ್ನು ಕಳಿಸುವುದು.

ಇದನ್ನು ಓದಿ7 Health Tips to Keep You Healthy in Kannada

Leave a Comment