ಮನೆಯ ಮುಂದೆ ರಂಗೋಲಿ ಬಿಡಿಸುವುದು ಪ್ರಾಚೀನ ಕಾಲದಿಂದ ಬಂದ ಪದ್ದತಿ ಆಗಿದೆ. ಮನೆಯ ಮುಂದೆ ರಂಗೋಲಿ ಹಾಕುವುದು ಶುಭಕರ ಸಂಗತಿ. ಸೂರ್ಯನು ಉದಯಿಸುವ ಮುಂಚೆ ಮಹಿಳೆಯರು ಬೇಗನೆ ಎದ್ದು ಕಸ ಗುಡಿಸಿ,ನೀರು ಹಾಕಿ,ಹೊಸ್ತಿಲಿಗೆ ಅರಿಶಿನ – ಕುಂಕುಮ ಮತ್ತು ರಂಗೋಲಿ ಹಾಕುವುದರಿಂದ ಮನೆಯ ನೋಟ ನೋಡಲು ಸುಖಕರ ಆಗಿರುತ್ತದೆ.ಮನೆಯ ಮುಂದೆ ಸಗಣಿ ಸಾರಿಸಿ,ರಂಗೋಲಿ ಹಾಕುವುದರಿಂದ ಮನೆ ಇನ್ನಷ್ಟು ಚೆನ್ನಾಗಿ ಕಾಣುತ್ತದೆ.
ರಂಗೋಲಿ ಎಂದರೇನು ?
ರಂಗೋಲಿ ಎಂದರೆ ನೆಲದ ಮೇಲೆ ಬಿಡಿಸುವ ಒಂದು ಬಗೆಯ ಚಿತ್ರ. ಇಲ್ಲಿ ರಂಗ ಎಂದರೆ ” ಕೃಷ್ಣ ” ಎಂದು,ಮತ್ತು ಒಲಿ ಎಂದರೆ “ಆನಂದಿಸು” ಎಂದರ್ಥ. ಮಹಿಳೆಯರು ಮನೆಯ ಮುಂದೆ ರಂಗೋಲಿ ಹಾಕುವುದರಿಂದ ಭಗವಂತನನ್ನು ಆನಂದಿಸುವುದು ಮತ್ತು ಅನುಗ್ರಹಿಸುವುದು ಎಂಬ ಅರ್ಥವಾಗಿದೆ. ಮಹಿಳೆಯರು ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಭವಂತನಿಗೆ ಭಿನ್ನ – ಭಿನ್ನ ರೂಪದಲ್ಲಿ ರಂಗೋಲಿ ಚಿತ್ರವನ್ನು ಬಿಡಿಸುತ್ತಾರೆ. ಪ್ರತಿದಿನ ಮಹಿಳೆಯರು ಆಯಾ ಭವಂತನ ದಿನದಂದು ಆಯಾ ಭಗವಂತನ ರಂಗೋಲಿ ಹಾಕುತ್ತಾರೆ. ಅಂದರೆ ದೇವಿ ದಿನದಂದು ಪದ್ಮ ಚಿತ್ರದ ರಂಗೋಲಿ ಹಾಕುತ್ತಾರೆ. ಮತ್ತು ಸೂರ್ಯನಿಗೆ ಸ್ವಸ್ತಿಕ,ವೃತ್ತಕಾರ ಮತ್ತು ಚಕ್ರ ಹಾಕುತ್ತಾರೆ. ರಂಗೋಲಿ ಅಷ್ಟೇ ಹಾಕುವುದಲ್ಲದೆ ಅದಕ್ಕೆ ಬಣ್ಣ ಕೊಡುವರು.
ರಂಗೋಲಿಯ ಮಹತ್ವ
ರಂಗೋಲಿ ಎಂದರೆ ವಿವಿಧ ಚಿತ್ರಗಳನ್ನು ಬಿಡಿಸುವುದು ಮತ್ತು ವಿವಿಧ ಬಣ್ಣಗಳನ್ನು ಕೊಡುವುದು ಎಂದರ್ಥ. ರಂಗೋಲಿ ಹಾಕುವುದರಿಂದ ಹಬ್ಬಗಳ ಆಚರಣೆ ಬಹಳ ವಿಜೃಂಭಣೆಯಿಂದ ಆಗುತ್ತದೆ ಎಂಬ ನಂಬಿಕೆ. ಯಾವುದೇ ಹಬ್ಬವಿರಲಿ, ಆ ಹಬ್ಬದ ರಂಗೋಲಿ ಚಿತ್ರಗಳನ್ನು ಹಾಕುವುದು ತುಂಬಾ ಕುತೂಹಲಕಾರಿ. ರಂಗೋಲಿಯನ್ನು ಹಬ್ಬಳಗಲ್ಲಿ ಅಷ್ಟೇ ಹಾಕುವುದಲ್ಲದೆ ವಿವಿಧ ಸಂಸ್ಕೃತಿಕ,ಧಾರ್ಮಿಕ,ವಿವಾಹ ಹಾಗೂ ಮುಂತಾದ ಕಾರ್ಯಕ್ರಮಗಳಲ್ಲಿ ಹಾಕುವುದರಿಂದ ಕಾರ್ಯಕ್ರಮಗಳು ಉಲ್ಲಾಸ ಉತ್ಸಾಹದಿಂದ ಪೂರ್ಣಗೋಳುತ್ತವೆ.
ರಂಗೋಲಿ ಹಾಕುವುದರ ಉದ್ದೇಶವೇನೆಂದರೆ ಮನೆಯ ಅಂಗಳ ತುಂಬಾ ಚೆನ್ನಾಗಿ ಕಾಣುತ್ತದೆ ಮತ್ತು ಶುಭಕರ ಪ್ರಸಂಗವಾಗಿರುತ್ತದೆ.
50+ ಸಂಕ್ರಾಂತಿ ರಂಗೋಲಿ ಡಿಸೈನ್| Easy Rangoli Designs for Sankranti 2022
ಈ ಕೆಳಗಡೆ ನೀಡಿರುವ 50 ಕ್ಕೂ ಹೆಚ್ಚು ಸಿಂಪಲ ರಂಗೋಲಿ ಡಿಸೈನ ಚಿತ್ರಗಳನ್ನು ನಿಮ್ಮ ಮನೆಯ ಅಂಗಳ ಮೇಲೆ ವಿವಿಧ ಹಬ್ಬಗಳಲ್ಲಿ ಬಿಡಿಸುವುದರಿಂದ ಮನೆಯ ನೋಟವು ಬಹಳ ಆನಂದವಾಗಿ ಕಾಣಿಸುತ್ತದೆ.