ಸ್ವಚ್ಛ ಭಾರತ ಅಭಿಯಾನ| Swachh Bharat Abhiyan Essay in Kannada PDF

ಸ್ವಚ್ಛ ಭಾರತ ಅಭಿಯಾನ | Swachh Bharath Abhiyan

ಭಾರತದಲ್ಲಿ ಸ್ವಚ್ಛ ಭಾರತ ಅಭಿಯಾನವು ಒಂದು ಒಳ್ಳೆಯ ಮತ್ತು ಮಹತ್ವದ ಯೋಜನೆಯಾಗಿದೆ. ಸ್ವಚ್ಛ ಭಾರತ ಅಭಿಯಾನವು ಒಂದು ಮಹಾತ್ಮ ಗಾಂಧೀಜಿ ಕಂಡ ಕನಸು ಆಗಿದೆ.

swachh bharat abhiyan prabandha in kannada
swachh bharat abhiyan prabandha in kannada

ಗಾಂಧೀಜಿ ಕಂಡ ಕನಸು ನನಸು ಆಗಲು ನರೇಂದ್ರ ಮೋದಿ ಅವರು ” ಸ್ವಚ್ಛ ಭಾರತ ಮಿಷನ್ ” ನನ್ನು ಸ್ಥಾಪಿಸಿದರು.
ಈ ಮಿಷನ್ ನಿನ ಮುಖ್ಯ ಉದ್ದೇಶವೇನೆಂದರೆ ಭಾರತದ ಎಲ್ಲಾ ರಾಜ್ಯದ ಪಟ್ಟಣದ ನಗರಗಳನ್ನು ಸ್ವಚ್ಛತೆ ಯಿಂದ ಇಡುವುದು. ಈ ಸ್ವಚ್ಛ ಭಾರತ ಮಿಷನ್ ವು ಭಾರತ ಸರ್ಕಾರದಿಂದ ಸ್ಥಾಪಿಸಲಾಗಿದೆ. ಈ ಮಿಷನ್ ನಿನ ಉದ್ದೇಶವನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ಸ್ವಚ್ಛ ಭಾರತ ಅಭಿಯಾನ ಪ್ರಾರಂಭ ಆಗಿದ್ದು ಯಾವಾಗ?

ಹಿಂದೆ ರಾಜಕೀಯ ಅಧಿಕಾರದಲ್ಲಿ ಯಾರು ಮಾಡದ ಕೆಲಸವನ್ನು ಮೋದಿಜಿಯವರು ತಮ್ಮ ರಾಜಕೀಯ ಅಧಿಕಾರದಲ್ಲಿ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಸ್ವಚ್ಛ ಭಾರತ ಅಭಿಯಾನವು ಗಾಂಧೀಜಿ ಕಂಡ ಕನಸು ಆಗಿದೆ.ಆದ ಕಾರಣ ಮೋದಿಜಿಯವರು ಸ್ವಚ್ಛ ಭಾರತ ಅಭಿಯಾನವನ್ನು ಗಾಂಧೀಜಿ ಹುಟ್ಟಿದ ದಿನಾಚರಣೆ ದಂದು ಅಂದರೆ 2 ಅಕ್ಟೋಬರ್ 2014 ರಂದು ಪ್ರಾರಂಭಿಸಿದರು.

ಈ ಸ್ವಚ್ಛ ಭಾರತ ಅಭಿಯಾನವನ್ನು ಮೋದಿಜಿಯವರು ದೆಹಲಿ ರಾಜಘಾಟನಲ್ಲಿ ಘೋಷಿಸಿದರು.
ಮೋದಿಜಿಯವರು ಘೋಷಣೆ ಮಾಡುವುದರ ಜೊತೆಗೆ ಅದರ ಉದ್ದೇಶವನ್ನು ಹೇಳುತ್ತಾ ಅಲ್ಲದೆ ಸ್ವಚ್ಛತೆ ಮಾಡುವ ಕಾರ್ಯ ದಲ್ಲಿ ಭಾಗಿಯಾಗಿ ಅಲ್ಲಿ ಸ್ವಚ್ಛತೆಯನ್ನು ಮಾಡಿದರು. ಇದನ್ನು ನೋಡಿ ಸುಮಾರು 3 ಲಕ್ಷ ಅಧಿಕ ಜನರು ಸ್ವಚ್ಛತೆ ಅಭಿಯಾನದಲ್ಲಿ ಭಾಗಿಯಾಗಿ ಪ್ರತಿಯೊಬ್ಬರಿಗೂ ಸಂದೇಶವನ್ನು ತೋರಿಸುತ್ತ ಸ್ವಚ್ಛಗೊಳಿಸಿದರು.

ಅಲ್ಲದೆ ಗಾಂಧೀಜಿಯವರು ಕಂಡ ಈ ಸ್ವಚ್ಛ ಭಾರತ ಅಭಿಯಾನವನ್ನು 2019 ರ ಒಳಗಡೆ ಈಡೇರಿಸಬೇಕು ಎಂದು ತಮ್ಮ ಭಾಷಣದಲ್ಲಿ ಘೋಷಿಸಿದರು.

Also Read – ಕ್ರಿಸ್ಮಸ್ ಹಬ್ಬದ ಶುಭಾಶಯಗಳು | ಕ್ರಿಸ್ಮಸ್ ಹಬ್ಬದ ಇತಿಹಾಸ

ಸ್ವಚ್ಛ ಭಾರತದ ಅಭಿಯಾನದ ಸಂಕೇತ

ಸ್ವಚ್ಛ ಭಾರತ ಅಭಿಯಾನವು ಒಂದು ಸಂಕೇತವನ್ನು ಹೊಂದಿದೆ. ಜಗತ್ತಿನಲ್ಲಿ ಪ್ರತಿಯೊಂದು ಸಂಸ್ಥೆ,ಅಭಿಯಾನ,ಸಂಘ ಮತ್ತು ಟ್ರಸ್ಟ್ ಗಳು ಅದರದೇ ಆದ ಸಂಕೇತ ಅಥವಾ ಲಾಂಛನವನ್ನು ಹೊಂದಿರುತ್ತವೆ. ಈ ಸಂಕೇತವನ್ನು ನೋಡುವುದರ ಮೂಲಕ ನಾವು ಅದರ ಬಗ್ಗೆ ತಿಳಿದುಕೊಳ್ಳಬಹುದು.ಈ ಸಂಕೇತರ ಹಿಂದೆ ಒಂದು ಅರ್ಥ ಪೂರ್ಣವಾದ ಮಾಹಿತಿ ಇರುತ್ತದೆ.

ಈ ಸ್ವಚ್ಛ ಭಾರತ ಅಭಿಯಾನದ ಸಂಕೇತ ವೇನೆಂದರೆ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡುವುದು ಆಗಿದೆ.
ಸ್ವಚ್ಛತೆ ಮಾಡುವುದನ್ನು ಎರಡು ಭಾಗಗಳನ್ನಾಗಿ ಮಾಡಲಾಗಿದೆ ಅಂದರೆ ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶ ಗಳಲ್ಲಿ ಸ್ವಚ್ಛತೆಯನ್ನು ಮಾಡುವುದು. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸ್ವಚ್ಛತೆ, ಚರಂಡಿ ಸ್ವಚ್ಛತೆ ಮತ್ತು ಶೌಚಾಲಯ ಸ್ವಚ್ಛತೆಯನ್ನು ನಿರ್ವಹಿಸಲಾಗುತ್ತದೆ.

ನಗರ ಪ್ರದೇಶಗಳಲ್ಲಿ ವಸತಿ,ನಗರ ಮತ್ತು ವ್ಯವಹಾರ ಸಚಿವಾಲಯದ ಅಡಿಯಲ್ಲಿ ನಿರ್ವಹಿಸಲಾಗುತ್ತದೆ. ಈ ಕಾರ್ಯಚರಣೆಯಲ್ಲಿ ವಿವಿಧ ರಾಯಭಾರಿ,ವಿವಿಧ NGO ಗಳು ಮತ್ತು ವಿವಿಧ ಅಧಿಕಾರಿಗಳು ಭಾರತದ ಸ್ವಚ್ಛ ಭಾರತದ ಅಭಿಯಾನದಲ್ಲಿ ಕೆಲಸದಲ್ಲಿ ತೊಡಗಿದ್ದಾರೆ. ಈ ಸಂಕೇತವನ್ನು ಗಾಂಧೀಜಿಯವರ ಕನ್ನಡಕದಲ್ಲಿ ಬರೆಯಲಾಗಿದೆ. ಅಂದ್ರೆ ಗಾಂಧೀಜಿಯವರು ತಮ್ಮ ಕನ್ನಡಕದಿಂದ ನೋಡುತ್ತಿದ್ದಾರೆ ಎಂದರ್ಥ. ಈ ಸ್ವಚ್ಛ ಭಾರತ ಅಭಿಯಾನವು ಒಂದು ವೇದ ವಾಕ್ಯವನ್ನು ಹೊಂದಿದೆ – ” ಒಂದು ಹೆಜ್ಜೆ ಸ್ವಚ್ಛತೆ ಕಡೆಗೆ “

Also Read – ತತ್ಸಮ ತದ್ಭವಗಳ ಪಟ್ಟಿ | Tatsama Tadbhava in Kannada list PDF

ಸ್ವಚ್ಛ ಭಾರತ ಅಭಿಯಾನವು ಯಾಕೆ ಬೇಕು?

ಸ್ವಚ್ಛ ಭಾರತ ಅಭಿಯಾನವು ಎಲ್ಲಾ ರಾಜ್ಯದ ನಗರ,ಪ್ರದೇಶಗಳು ಸ್ವಚ್ಛತೆಯನ್ನು ನೋಡುತ್ತದೆ.ಪ್ರತಿಯೊಂದು ರಾಜ್ಯದ ನಗರ,ಪ್ರದೇಶಗಳಲ್ಲಿ ಕೊಳಕನ್ನು ತೆಗೆದುಹಾಕಬೇಕು. ಆಯಾ ರಾಜ್ಯದ ಜನರು ನಗರ,ಪ್ರದೇಶಗಳನ್ನು ಸ್ವಚ್ಛತೆಯಿಂದ ಇಟ್ಟರೆ ದೇಶವನ್ನೇ ಸ್ವಚ್ಛತೆಯಿಂದ ಇಟ್ಟಂತೆ ಆಗುತ್ತದೆ. ಪ್ರತಿಯೊಬ್ಬರು ಸ್ವಚ್ಛ ಭಾರತ ಅಭಿಯಾನದಲ್ಲಿ ಭಾಗಿಯಾಗಬೇಕು. ಸ್ವಚ್ಛ ಭಾರತ ಅಭಿಯಾನದಿಂದ ನಮ್ಮ ನಗರ, ಪ್ರದೇಶಗಳನ್ನು ಸ್ವಚ್ಛದಿಂದ ಇಡಬಹುದು.

ಭಾರತದಲ್ಲಿ ಸುಮಾರು ಜನರು ಗ್ರಾಮೀಣ ಪ್ರದೇಶದಲ್ಲಿ ಜನಿಸುತ್ತಿದ್ದಾರೆ. ಗ್ರಾಮೀಣ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಅಂದರೆ ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ,ಕುಡಿಯುವ ನೀರು ಮತ್ತು ಶೌಚಾಲಯವು ಸರಿಯಾದ ವ್ಯವಸ್ಥೆ ಇರುವುದಿಲ್ಲ. ಇಲ್ಲದ ಕಾರಣ ಗ್ರಾಮೀಣ ಜನರು ಚರಂಡಿಯ ನೀರು ಮನೆಯ ಮುಂದೆ ಬಿಡುವುದು…ಬಿಡುವುದರಿಂದ ಸೊಳ್ಳೆಗಳು ಹೆಚ್ಚಾಗುತ್ತವೆ.

ಇದರಿಂದ ಗ್ರಾಮೀಣ ಜನರಿಗೆ ರೋಗ ಲಕ್ಷಣಗಳು ಮತ್ತು ಅನಾರೋಗ್ಯ ಉಂಟಾಗುತ್ತದೆ. ಮತ್ತು ನೀರಿನ ಸಮಸ್ಯೆಗಳನ್ನು ಎದರಿಸುತ್ತಾರೆ. ಹೆಚ್ಚಾಗಿ ಗ್ರಾಮೀಣ ಜನರು ಶೌಚಾಲಯದ ಸಮಸ್ಯೆವನ್ನು ಎದರಿಸುತ್ತಾರೆ. ಶೌಚಾಲಯದ ವ್ಯವಸ್ಥೆ ಸರಿಯಾಗಿ ಇಲ್ಲದೇ ಇರುವ ಕಾರಣ ಗ್ರಾಮಸ್ತರು ತಮ್ಮ ಊರಿನ ಹೊರಗಡೆ ಅಥವಾ ತಮ್ಮ ಹೊಲದಲ್ಲಿ ಹೋಗುತ್ತಾರೆ.

ಆದರಿಂದ ಗ್ರಾಮಸ್ತರ ಸಮಸ್ಯೆವನ್ನು ಪರಿಹರಿಸಲು ಸ್ವಚ್ಛ ಅಭಿಯಾನವು ಬಹಳ ಸಹಾಯ ಮಾಡುತ್ತದೆ.
ಸ್ವಚ್ಛ ಭಾರತ ಅಭಿಯಾನವು ಕೈಗೂಡಿ ಒಳ್ಳೆಯ ರೀತಿಯಲ್ಲಿ ಕೆಟ್ಟ ಪ್ರದೇಶವನ್ನು..ಸ್ವಚ್ಛ ಪ್ರದೇಶವನ್ನಾಗಿ ಮಾಡುತ್ತದೆ. ಸ್ವಚ್ಛ ಭಾರತ ಅಭಿಯಾನವು ಸ್ವಚ್ಛತೆ ಮಾಡುವುದರಿಂದ ಗ್ರಾಮೀಣ ಜನರಿಗೆ ಒಂದು ಒಳ್ಳೆಯ ಜೀವನವನ್ನು ಕೊಟ್ಟಂತೆ ಆಗುತ್ತದೆ. ಈ ಮೇಲಿನ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ” ಸ್ವಚ್ಛ ಭಾರತ ಅಭಿಯಾನವು ಬೇಕೇ ಬೇಕು ” ಎಂದು ಹೇಳಲಾಗುತ್ತದೆ.

ಸ್ವಚ್ಛ ಭಾರತ ಅಭಿಯಾನ ಮಹತ್ವ | Swachh Bharath Abhiyan Importance in Kannada

ಈ ಸ್ವಚ್ಛ ಭಾರತ ಅಭಿಯಾನವು ಕೆಟ್ಟ ಪ್ರದೇಶದಿಂದ ಸ್ವಚ್ಛ ಪ್ರದೇಶದವರೆಗೂ ಬದಲಾಯಿಸುವುದರ ಮಹತ್ವವಾಗಿದೆ. ಪ್ರತಿಯೊಬ್ಬರು ತಮ್ಮ ರಾಜ್ಯದ ನಗರ,ಪ್ರದೇಶಗಳ ಶೌಚಾಲಯನ್ನು,ನೀರಿನ ಸಮಸ್ಯೆ, ರಸ್ತೆಗಳು ಮತ್ತು ಚರಂಡಿಗಳ ಮೂಲಸೌಕರ್ಯ ಗಳನ್ನು ಸ್ವಚ್ಛತೆಯಿಂದ ಕಾಪಾಡುವುದು ಒಂದು ದೊಡ್ಡ ಮಹತ್ವವಾಗಿದೆ.

ನಗರ,ಪ್ರದೇಶವನ್ನು ಸ್ವಚ್ಛತೆ ಇಡುವುದಲ್ಲದೆ, ಶಾಲಾ – ಕಾಲೇಜುಗಳಲ್ಲಿ ಮೈದಾನ, ಶೌಚಾಲಯವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುವುದು ಕರ್ತವ್ಯವಾಗಿದೆ.ಈ ಅಭಿಯಾನದಲ್ಲಿ ಸುಮಾರು 70,000 ಕೋಟಿಗಳಷ್ಟು ಹೂಡಿಕೆಯನ್ನು ಅಂದಾಜಿಸಲಾಗಿದೆ.

ಈ ಅಭಿಯಾನದ ಮೂಲ ಮಹತ್ವವೇನೆಂದರೆ ಎಲ್ಲರೂ ಒಗ್ಗಟ್ಟಾಗಿ ಸೇರಿ ಸ್ವಚ್ಛತೆಯಲ್ಲಿ ಭಾಗಿಯಾಗುವುದು ಬಹಳ ಅವಶ್ಯಕತೆ ಆಗಿದೆ. ಈ ಅಭಿಯಾನವನ್ನು ಯಶಸ್ವಿಗೊಳಿಸಲು ಅನೇಕ ಮಹಾನ ವ್ಯಕ್ತಿಗಳು ಮತ್ತು ಜನರು ಇದರಲ್ಲಿ ಭಾಗಿಯಾಗಿದ್ದಾರೆ.ಎಲ್ಲರೂ ಗಾಂಧೀಜಿ ಕಂಡ ಕನಸನ್ನು ನನಸು ಮಾಡಲು ಸಿದ್ದರಾಗಿದ್ದಾರೆ.

Also Read – 100+ ಕನ್ನಡ ಪದಗಳ ಅರ್ಥ | Kannada Padagalu Artha

ಸ್ವಚ್ಛ ಭಾರತ ಅಭಿಯಾನದ ಯೋಜನೆಗಳು | Swachh Bharath Abhiyan Projects in Kannada

ಸ್ವಚ್ಛ ಭಾರತ ಅಭಿಯಾನವು ಸ್ವಚ್ಛತೆಮಾಡುವುದರ ಜೊತೆಗೆ ಕೆಲವು ಯೋಜನೆಗಳನ್ನು ಕೈಗೊಂಡಿವೆ. ಈ ಯೋಜನೆಗಳ ಮೂಲಕ ಅಭಿಯಾನವು ಕರ್ತವ್ಯ ನಿಭಾಯಿಸುತ್ತಿದೆ. ಕೆಳಗಡೆ ಕೆಲವು ಯೋಜನೆಗಳನ್ನು ನೀಡಲಾಗಿದೆ.

  • ಶೌಚಾಲಯಗಳನ್ನು ನಿರ್ಮಿಸಲು
    ಮತ್ತು ಬಳಸಲು ಜನರಿಗೆ ಅರಿವು ಮೂಡಿಸಲು
  • ಬಿದಿ ರಸ್ತೆಗಳನ್ನು ಸ್ವಚ್ಛತೆಯಿಂದ ಕಾಪಾಡುವುದು
  • ತ್ಯಾಜ್ಯಾ ನಿರ್ವಾಹಣೆ
  • ಸ್ಯಾನಿಟರಿ ನ್ಯಾಪಿಕ್ಕಿನಗಳ ಸಂಗ್ರಹ
  • ಬೀದಿ ವ್ಯಾಪಾರಿಗಳಿಗೆ ಕಸದ ಪೆಟ್ಟಿಗೆ
  • ಲ್ಯಾಂಡ್ ಫಿಲಗಾಗಿ ಮಾರ್ಗಸೂಚಿಗಳು

English Short Summery

Swachh Bharath Abhiyan or Swatchh Bharat Mission, or Clean India Mission is a country-wide campaign that was initiated by the BJP Government of India in 2014 under the leadership of Modi to eliminate open defecation and improve solid waste management.

Also Read – ಮಾಸ್ತಿ ವೆಂಕಟೇಶ್ ಅಯ್ಯಂಗಾರ್ | Masti Venkatesha Iyengar Information in Kannada

Leave a Comment