ಚಿಕನ್ ಬಿರಿಯಾನಿ | Chicken Biryani in Kannada
ಚಿಕನ್ ಬಿರಿಯಾನಿ ಬೇಕಾಗುವ ಪದಾರ್ಥಗಳು
ಚಿಕನ್ ಬಿರಿಯಾನಿ ಬೇಕಾಗುವ ಪದಾರ್ಥಗಳು ವಿವರ | Chicken Biryani items list in Kannada
- ಚಿಕನ್ 1 ಕೆ.ಜಿ
- ಬಾಸಮತಿ ಅಕ್ಕಿ 1 ಕೆ.ಜಿ
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಚಮಚ
- ಕೆಂಪು ಖಾರದ ಪುಡಿ 2 ಚಮಚ
- ಅರಶಿಣ ಪುಡಿ 1/2 ಚಮಚ
- ಗರಂ ಮಸಾಲಾ ಪುಡಿ
- ಚಿಕನ್ ಬಿರಿಯಾನಿ ಮಸಾಲಾ ಪುಡಿ
- 3-4 ಪುಲಾವ್ ಎಲೆ
- 4 ದಾಲಚಿನ್ನಿ
- 4 ಲವಂಗ
- 2-3 ಚಿಕ್ಕ ಈರುಳ್ಳಿ
- 2-3 ಚಿಕ್ಕ ಟೊಮೇಟೊ
- ಯೋಗಾರ್ಟ್(ಮೊಸರು)
- ಉಪ್ಪು
- ಎಣ್ಣೆ
- 1/2 ಎಸೆಂನ್ಸ್(colour)
- 3 ಮೀಡಿಯಂ ಗಾತ್ರದ ಆಲೂಗಡ್ಡೆ
ಚಿಕನ್ ಬಿರಿಯಾನಿ ಮಾಡುವ ವಿಧಾನ
ಚಿಕನ್ ಬಿರಿಯಾನಿ ಮಾಡುವ ವಿಧಾನ ವಿವರಗಳು | How to Make Chicken Biryani in Kannada step by step process
- ಚಿಕನ್ ಬಿರಿಯಾನಿ ಮಾಡಲು ಒಂದು ಪಾತ್ರೆಯಲ್ಲಿ ಚಿಕನ್, ಕೆಂಪು ಖಾರದ ಪುಡಿ, ಅರಶಿಣ ಪುಡಿ, ಗರಂ ಮಸಾಲಾ ಪುಡಿ, ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಗೂ ಉಪ್ಪು ಮೊಸರು ಬೆರೆಸಿ ನೆನೆಯಲು ಬಿಡಿ.
- ಒಂದು ತವದಲ್ಲಿ ಎಣ್ಣೆ, ಹೆಚ್ಚಿದ ಈರುಳ್ಳಿ ಹಾಕಿ ಕೆಂಪು ಆಗುವವರೆಗೂ ತಾಳಿಸಬೇಕು,ನಂತರ ಆ ಮಿಶ್ರಣವನ್ನು ಮಿಕ್ಸರ್ನಲ್ಲಿ ರುಬ್ಬಿಕೊಳ್ಳಬೇಕು.
- ಈಗ ಹೆಚ್ಚಿದ ಆಲೂಗಡ್ಡೆಯನ್ನು ಹುರಿದುಕೊಳ್ಳಬೇಕು, ನಂತರ ಹೆಚ್ಚಿದ ಟೊಮೇಟೊ ಹಾಗೂ ಯೋಗರ್ಟ್(ಮೊಸರು) ಎಣ್ಣೆ ಅಲ್ಲಿ ತಾಳಿಸಬೇಕು (ಮಿಶ್ರಣ).
- ನೆನೆಸಿದ ಚಿಕನ್ ಹಾಗೂ ಹುರಿದುಕೊಂಡ ಆಲೂಗಡ್ಡೆ ಪಿಸಸ್ ತಯಾರಿಸಿದ ಮಿಶ್ರಣಕೆ ಬೆರೆಸಬೇಕು.
- ಕುಕ್ಕರ್ ಅರ್ಧದಷ್ಟು ಬಾಸುಮತಿ ಅಕ್ಕಿಯನು ಹಾಕಿ, ಅದರಮೇಲೆ ಬೆರೆಸಿದ ಚಿಕನ್ ಮಿಶ್ರಣವನ್ನು ಹಾಕಿ ಮೇಲೆ ಪಾತ್ರೆಗೆ ತಕ್ಕಷ್ಟು ಬಾಸುಮತಿ ಅಕ್ಕಿಯನ್ನು ಹಾಕಬೇಕು,
- ತವದಲ್ಲಿ ಎಣ್ಣೆ,ದಾಲ್ಚಿನ್ನಿ, ಲವಂಗ್ ಎಲೆ ಹಾಕಿ ತಾಳಿಸಿ ಅಕ್ಕಿಯ ಮೇಲೆ ಹಾಕಿ ಬೆಯಲು ಇಡಬೇಕು.
ಇದನ್ನು ಓದಿ – 8 ವಿವಿಧ ತರಹದ Avalakki ತಿಂಡಿಗಳು