Kannada Jokes- Boyfriend, Girlfriend Jokes 2021

Best funny Kannada Boyfriend Girlfriend Jokes 2021

Kannada Jokes- Boyfriend, Girlfriend Jokes


1. 

ಹುಡುಗ ಪದೇ ಪದೇ ಕನ್ನಡಿ ನೋಡ್ತಿದಾನೆ ಅಂದ್ರೆ ?

ಒಂದೋ ಅವನಿಗೆ ಪ್ರೀತಿಯಾಗಿದೆ ಅಥವಾ ಅವನು ‌‌‌‍‪GYM‬ ಗೆ ಹೋಗೋಕೆ ಶುರು ಮಾಡಿದಾನೆ ಎಂದರ್ಥ…!!!

ಆದ್ರೆ  

ಹುಡುಗಿ ಕನ್ನಡಿ ನೋಡ್ತಾವ್ಳೆ ಅಂದ್ರೆ ?

ಯಾರೋ ಅಮಾಯಕ ಬಲಿ ಆಗ್ತಾವ್ನೆ ಎಂದರ್ಥ.



2.

ಹೆಣ್ಣಿನ ಕಡೆಯವರು : ನಮ್ಮ ಹುಡುಗಿ ಒಪ್ಪಿಗೆ ಆದಳೆ.?

ಗಂಡಿನ ಕಡೆಯವರು : ನಮಗೆ ಒಪ್ಪಗೆ.

ಹೆ.ಕ : ನಾವು 1ಕೆಜಿ ಚಿನ್ನ,1ಕಾರು,10ಲಕ್ಷ ಹಣ ಕೂಡ್ತೀವಿ. ಇನ್ನೂ ಏನಾದರು ಬೇಕಾ.?

ಗ.ಕ : ಅಯ್ಯೋ! ಅವೆಲ್ಲ ಏನು ಬೇಡ. ನಮ್ಮತ್ರ ಇರೋ 50 ಲಕ್ಷ ಬದಲಿಸಿ ಕೂಟ್ರೆ ಸಾಕು.


3.

ತನ್ನ ಲವರ್ ಜೊತೆ ಚಾಟ್ ಮಾಡುತ್ತಿದ್ದ ಹುಡುಗ…

ಹುಡುಗ😎: ಪ್ರಿಯೆ ಮಲಗಿದ್ದರೆ  ಕನಸುಗಳನ್ನು ಕಳುಹಿಸು,

ಎಚ್ಚರಿದ್ರೆ ನನ್ನೊಂದಿಗೆ ಕಳೆದ ಸವಿ ನೆನಪುಗಳ ಕಳುಹಿಸು

ನಗುತ್ತಿದ್ದರೇ ಖುಷಿ ಕಳುಹಿಸು.

ಅಳುತ್ತಿದ್ದರೇ ಕಣ್ಣೀರು ಕಳುಹಿಸು.

ಹುಡುಗಿ 🙎🏻reply: ಅರೇ.. ಬಾಡ್ಯಾ ಬಾಂಡೇ ತಿಕ್ಕತೇನಿ.  ಮುಸುರಿ ನೀರ ಕಳಿಸ್ಲೇನ್.🍴🍽

ಪಾಪಾ ಹುಡುಗ‌ offline..


4.

ಬಾಯ್ ಫ್ರೆಂಡ್: ಸಾರಿ ಕಣೇ.. ನಾನು ನಿನ್ನನ್ನು ಮದುಗೆ ಆಗಕ್ಕಾಗಲ್ಲಾ..

ಗರ್ಲ್ ಫ್ರೆಂಡ್ : ಒಹ್ ಗಾಡ್..ಯಾಕೆ?

ಬಾಯ್ ಫ್ರೆಂಡ್: ಮನೆಯಲ್ಲಿ ಒಪ್ತಾ ಇಲ್ಲಾ..

ಗರ್ಲ್ ಫ್ರೆಂಡ್ : ನಿನ್ನ ಮನೇಲೀ ಯಾರ್ಯಾರು ಇದ್ದಾರೆ?

ಬಾಯ್ ಫ್ರೆಂಡ್: ಹೆಂಡತಿ, ಮೂರು ಮಕ್ಕಳು..


5.

ಹುಡುಗ  : ಐ ಲವ್  ಯು ..

ಹುಡಗಿ  : ಸೂರತ್   ನೋಡಿದೀಯ  ?

ಹುಡುಗ  : ಇಲ್ಲ ವಂದ್ ಸಾರಿ ಅಹೇಮದಬಾದ್ ನೋಡಿದೀನಿ ..


6.

ಗೆಳತಿ: ನೀವು ನನ್ನ ತಾಯಿಗೆ

ಇಷ್ಟವಾದಿರಿ 🙂

ಪಪ್ಪು  .. ಹುಚ್ಚಿ ಅದೆಲ್ಲ ಗೊತ್ತಿಲ್ಲ , ನಾನು, ನೀನ್ನೇ  ಮದುವೆಯಾಗೋದ ನಿಮ್ಮಮ್ಮಂಗೆ  ಕ್ಷಮಿಸಲು ಹೇಳು..


ಇದನ್ನು ಒಧಿ – ಗುಳ್ಳೆಗಳನ್ನು ತಡೆಯಲು ಮನೆಮದ್ದುಗಳು|Get rid of pimples with home remedies

Leave a Reply