Bisibelebath Recipe in Kannada |ಬಿಸಿಬೇಳೆ ಬಾತ್

bisibelebath recipe


ಬೇಕಾಗುವ ಪದಾರ್ಥಗಳು

  • ಅರ್ಧ ಕೆ. ಜಿ. ಅಕ್ಕಿ
  • ಅರ್ಧ ಕೆ. ಜಿ ತೊಗರಿಬೇಳೆ
  • ಕಾಲು ಕೆ.ಜಿ ತುಪ್ಪ
  • ಒಣಮೆಣಶಿನಕಾಯಿ ಹತ್ತು
  • ಇಂಗು
  • ಮೆಂತ್ಯ (ಸಣ್ಣ ಚಮಚ)
  • ಹುಣಸೆಹಣ್ಣು, ಒಂದು ಗಿಟುಕು ಒಣ ಕೊಬ್ಬರಿ
  • ಅರಿಶಿಣಪುಡಿ
  • ದಾಲಚ್ಚಿನಿ, ಚಕ್ಕೆ ಎರಡು ಚೂರು
  • ಲವಂಗ
  • ಕಡಲೆಬೇಳೆ
  • ಒಂದು ಚಮಚ ಸಾಸಿವೆ, ಉಪ್ಪು 
  • ಕರಿಬೇವು, ಕೊತಂಬರಿಸೊಪ್ಪು
  • ಜೀರಿಗೆ, ಮೆಣಸು ಮತ್ತು ಗಸಗಸೆ.

ಮಾಡುವ ವಿಧಾನ


Step1:

ಒಂದು ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ ಒಲೆಯ ಮೇಲಿಡಿ. ನೀರು ಕುಡಿಯತೊಡಗಿದ ಮೇಲೆ ಶುದ್ಧಗೊಳಿಸಿದ ತೊಗರಿಬೇಳೆಯನ್ನು ಹಾಕಿ ಅದಕ್ಕೆ ಅರಿಶಿನ, ಸ್ವಲ್ಪ ತುಪ್ಪ  ಹಾಕಿ ತಟ್ಟೆ ಮುಚ್ಚಿ. 


Step2:

ತೊಗರಿಬೇಳೆ ಅರ್ಧ ಬೆಂದ ಮೇಲೆ ಅಕ್ಕಿಯನ್ನು ತೊಳೆದು ಹಾಕಿ ತಟ್ಟೆ ಮುಚ್ಚಿ.


Step3:

ನಿಂಬೆಕಾಯಿ ಗಾತ್ರದ ಹುಣಸೆಹಣ್ಣನ್ನು ನೀರಿನಲ್ಲಿ ನೆನೆಹಾಕಿ ಬಾಣಲೆಯನ್ನು ಇನೊಂದು ಒಲೆಯ ಮೇಲಿಟ್ಟು ಒಂದು ತೊಟ್ಟು ಎಣ್ಣೆ ಅಥವಾ ತುಪ್ಪ ಬಿಡಿ. ಒನಮೆಣಸಿನಕಾಯಿ, ಕೊತಂಬರಿಬೀಜ, ಡಾಲಚಿನ್ನಿ, ಚಕ್ಕೆ, ಜೀರಿಗೆ, ಮೆಣಸು, ಇಂಗು, ಗಸಗಸೆ, ಸಾಸಿವೆ, ಮೆಂತ್ಯ ಇವೆಲಾವನ್ನು ಬಾಣಲೆಯಲ್ಲಿ ಹಾಕಿ ಹುರಿದುಕೊಳ್ಳಿ. 

Step4:

ಅನಂತರ ಈ ಪುಡಿಯೇ ಬಿಸಿಬೇಳೆಬಾತ್ ತಯಾರಿಕೆಗೆ ಒದಗುತ್ತದೆ. ಬೆಯುತ್ತಿರುವ ಅಕ್ಕಿ ಬೇಳೆಗೆ ಬಿಸಿಬೇಳೆಬಾತಿನ ಪುಡಿ, ಉಪ್ಪು, ಹುಣಿಸೆಹಣ್ಣಿನ ತಿಳಿ, ಸ್ವಲ್ಪ ಹಾಕಿ ತಟ್ಟೆ ಮುಚ್ಚಿ ಅಕ್ಕಿ ಬೆಂದು ಅನ್ನವಾಗುತ್ತದೆ. 

Step5:

ಅನ್ನಕ್ಕೆ ಕರಿಬೇವು, ಸಾಸಿವೆ, ಒನಮೆನಸಿನಕಾಯಿ, ಇಂಗು ಇವುಗಳ ಒಗ್ಗರಣೆ ಹಾಕಿ ಕೆದಕಿ. ಇದೀಗ ಬಿಸಿಬೇಳೆಬಾತ್ ಸಿದ್ದ. ಇದರೊಂದಿಗೆ ಆಲೂಗಡ್ಡೆ ಚಿಪ್ಸ್ ತಿಂದರೆ ಹೆಚ್ಚು ರುಚಿಕರವಾಗಿರುತ್ತದೆ.

Also read: 7 Health Tips to Keep You Healthy in Kannada

Leave a Reply